Viral Video: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದು, ಹರಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಇದೇ ರೀತಿ, ದೆಹಲಿಯಲ್ಲಿ ನಯಾಗರಾ ಫಾಲ್ಸ್ ಪತ್ತೆಯಾಗಿದೆ. ಅಯ್ಯೋ ನಯಾಗರಾ ಫಾಲ್ಸ್ ಇರುವುದು ಕೆನಡಾ- ಅಮೆರಿಕ ಮಧ್ಯೆ, ಇಲ್ಲಿ ಹೇಗೆ ಕಾಣಿಸುತ್ತೆ ಅಂತೀರಾ..? ದೆಹಲಿಯ ಫ್ಲೈಓವರ್ನಲ್ಲಿ ಮಳೆನೀರು ಭಾರಿ ಪ್ರಮಾಣದಲ್ಲಿ ಹರಿಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ರಾಷ್ಟ್ರ ರಾಜಧಾನಿ ತನ್ನದೇ ಆದ ನಯಾಗರಾ ಜಲಪಾತವನ್ನು ಪಡೆದುಕೊಂಡಿದೆ ಎಂದು ನೆಟ್ಟಿಗರು ಕಾಮೆಂಟ್ಗಳನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನೂ ಶೇರ್ ಮಾಡಿದ್ದಾರೆ.
ಇನ್ನು, ದೆಹಲಿ ಮಳೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವುಗಳಲ್ಲಿ ದೆಹಲಿ ಫ್ಲೈಓವರ್ ಅನ್ನು ಒಳಗೊಂಡಿರುವ ಒಂದು ಆಸಕ್ತಿದಾಯಕ ವಿಡಿಯೋ ಇದೆ. ಕಾರಿನ ಒಳಭಾಗದಿಂದ ಚಿತ್ರೀಕರಿಸಲಾಗಿರುವ ವಿಡಿಯೋ ಕ್ಲಿಪ್ ಓವರ್ಹೆಡ್ ಸೇತುವೆಯ ಮೇಲೆ ನೀರು ಹೆಚ್ಚು ಹರಿಯುತ್ತಿರುವುದನ್ನು ತೋರಿಸುತ್ತದೆ.
#ದೆಹಲಿ ಯ ವಾಟರ್ಫಾಲ್ ಸಿಟಿಗೆ ಸುಸ್ವಾಗತ #ದೆಹಲಿ ರೈನ್ಸ್'' ಎಂದು ಟ್ವಿಟ್ಟರ್ ವಿಡಿಯೋಗೆ ಕ್ಯಾಪ್ಷನ್ ಹಾಕಲಾಗಿದೆ.
ಈ ವೈರಲ್ ವಿಡಿಯೋವನ್ನು ಇಲ್ಲಿ ನೋಡಿ..
Welcome to the #WaterfallCity of #Delhi #DelhiRains pic.twitter.com/ZQtYbwvFB6
— Sanjay Raina (@sanjayraina) August 31, 2021
ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 33 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಒಬ್ಬ ಬಳಕೆದಾರರು, "ದೆಹಲಿ ಮೈ ಬನೇಗಾ ನಯಾಗರಾ ಫಾಲ್ಸ್... ಉಸ್ಕಿ ಯೇ ಪೆಹ್ಲಿ ಝಲಕ್ ಹೈ'' ಅಂದರೆ ನಯಾಗರಾ ಜಲಪಾತವನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ... ಇದು ಅದರ ಮೊದಲ ನೋಟ ಎಂದು ಟ್ವೀಟ್ ಮಾಡಿದ್ದಾರೆ. ''ಓ.. ಇದು ಜಲಪಾತವೇ ಸರಿ'' ಎಂಬಂತೆಯೂ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಮಧ್ಯೆ, ಐಎಂಡಿ ಅಧಿಕಾರಿಯೊಬ್ಬರು, ತಡರಾತ್ರಿಯವರೆಗೆ ಮಳೆಯಾಗುವ ಸಾಧ್ಯತೆಯಿದೆ. ನಂತರ ತೀವ್ರತೆ ಕಡಿಮೆಯಾಗುತ್ತದೆ. ಸೆಪ್ಟೆಂಬರ್ 7ರಿಂದ ಮತ್ತೊಂದು ಹಂತದ ಮಳೆಯಾಗುವ ಸಾಧ್ಯತೆಯಿದೆ" ಎಂದು ಮುನ್ಸೂಚನೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ