ಈಗಂತೂ ಜನರು ತಮ್ಮ ಹೊಟ್ಟೆಪಾಡಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ ಅಂತ ನಾವು ಈ ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿರುವ ವೀಡಿಯೋದಲ್ಲಿ ನೋಡುತ್ತಿದ್ದೇವೆ. ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಅನೇಕರು ಈ ನಗರ ಪ್ರದೇಶಗಳಲ್ಲಿರುವ ಕಂಪನಿಗಳಲ್ಲಿನ (Company) ತಮ್ಮ ಕೆಲಸವನ್ನು ಕಳೆದುಕೊಂಡು ಒಂದು ಹೊತ್ತಿನ ಅನ್ನಕ್ಕೂ (Rice) ಸಹ ಪರದಾಡುವಂತಹ ಪರಿಸ್ಥಿತಿ ಬಂದೊದಗಿತ್ತು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಹಾಗಾಗಿ ಅನೇಕರು ಕೆಲಸಕ್ಕಾಗಿ ಮತ್ತೆ ಅಲೆದಾಡುವ ಮತ್ತು ಪರದಾಡುವ ಸಂಕಷ್ಟ ಮತ್ತೊಮ್ಮೆ ಅನುಭವಿಸಬಾರದು ಅಂತ ತಮ್ಮ ಸ್ವಂತ ಕೆಲಸಗಳನ್ನು ಶುರು ಮಾಡಿ ಕೊಂಡಿದ್ದಾರೆ ಅಂತ ಹೇಳಬಹುದು. ಎಷ್ಟೋ ವೀಡಿಯೋಗಳಲ್ಲಿ ಜನರು ತಮಗೆ ಬರುವಂತಹ ಅಡುಗೆಗಳನ್ನು ಮಾಡಿಕೊಂಡು ಹೋಗಿ ಈ ರಸ್ತೆ ಬದಿಗಳಲ್ಲಿ ಮಾರಾಟ ಮಾಡುವುದರಿಂದ ಬಂದ ಗಳಿಕೆಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಅಂತ ಹೇಳಬಹುದು.
ಈಗ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ನೋಡಿ. ಹೌದು.. ಇಂಟರ್ನೆಟ್ ಎಲ್ಲಾ ರೀತಿಯ ಅದ್ಭುತ ವಿಷಯಗಳಿಂದ ತುಂಬಿದೆ. ಪ್ರತಿದಿನ, ಮನರಂಜನೆ, ವಿನೋದ ಮತ್ತು ಮಾಹಿತಿಯುಕ್ತವಾದ ವಿಭಿನ್ನ ಸುದ್ದಿ ವರದಿಗಳನ್ನು ನಾವು ನೋಡುತ್ತೇವೆ. ನೀವು ಆಹಾರ ಪ್ರಿಯರಾಗಿದ್ದರೆ, ಈ ವೀಡಿಯೋವನ್ನು ನೀವು ತುಂಬಾನೇ ಇಷ್ಟಪಡುತ್ತೀರಿ. ಅದರಿಂದ ಸ್ಪೂರ್ತಿಯನ್ನು ಸಹ ಪಡೆಯುತ್ತೀರಿ ಅಂತ ಹೇಳಬಹುದು.
ಆಲೂ ಟಿಕ್ಕಿ ಚಾಟ್ ಮಾರಾಟ ಮಾಡುತ್ತಿದ್ದಾರೆ ಈ ಪಂಜಾಬ್ ಹುಡುಗಿ
ಇತ್ತೀಚೆಗೆ, ಪಂಜಾಬ್ ನ ರೆಸ್ಟೋರೆಂಟ್ ನಲ್ಲಿ ಹುಡುಗಿಯೊಬ್ಬಳು ಆಲೂ ಟಿಕ್ಕಿ ಚಾಟ್ ಮಾರಾಟ ಮಾಡುತ್ತಿರುವ ವೀಡಿಯೋವನ್ನು ನಾವು ನೋಡಿದ್ದೇವೆ. ಆಹಾರವು ಖಂಡಿತವಾಗಿಯೂ ನಮ್ಮ ಗಮನವನ್ನು ಸೆಳೆದರೂ, ಹುಡುಗಿ ತನು ಮಾಡುತ್ತಿರುವ ಕೆಲಸಕ್ಕೆ ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದಳು. ನೆಟ್ಟಿಗರನ್ನು ಸಹ ಆಕರ್ಷಿಸಿದಳು ಅಂತ ಹೇಳಬಹುದು.
View this post on Instagram
9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಈ ವೀಡಿಯೋ
ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದಾಗಿನಿಂದಲೂ, ಇದು 9.8 ಮಿಲಿಯನ್ ವೀಕ್ಷಣೆಗಳು, 19 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳು ಮತ್ತು ಸಾವಿರಾರು ಕಾಮೆಂಟ್ ಗಳನ್ನು ಗಳಿಸಿದೆ. ಅನೇಕ ಜನರು ಈ ಯುವತಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ತುಂಬಾನೇ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Turtle Story: ಈ ಆಮೆಯ ವಯಸ್ಸನ್ನು ಕೇಳಿದ್ರೇ ಪಕ್ಕಾ ಶಾಕ್ ಆಗ್ತೀರಾ!
"ನಾನು ಕ್ಯಾಲಿಯಲ್ಲಿ ಹುಟ್ಟಿ ಬೆಳೆದದ್ದು, ಆದರೆ ಈ ಆಲೂ ಟಿಕ್ಕಿಗೆ ಬೇರೆ ಯಾವುದೂ ಸಾಟಿಯಿಲ್ಲ. ಅವಳು ತುಂಬಾ ಸಮಯದಿಂದ ಅಲ್ಲಿಯೇ ಇದ್ದಾಳೆ! ನಾನು ಯುಎಸ್ಎಯಲ್ಲಿ ಆಲೂ ಟಿಕ್ಕಿಗಳನ್ನು ನೋಡಿದಾಗಲೆಲ್ಲಾ, ಇವುಗಳಿಗೆ ಹೋಲಿಸಿದರೆ ಅವು ಏನೂ ಅಲ್ಲ ಎಂದು ನಾನು ಯಾವಾಗಲೂ ಉಲ್ಲೇಖಿಸುತ್ತೇನೆ. ಅವರು ಮೊದಲಿಗೆ ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು. ಅವರು ತಮ್ಮ ಹೊಟೇಲ್ ಅನ್ನು ಅನೇಕ ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಇದನ್ನು ನೋಡಲು ತುಂಬಾ ಸಂತೋಷವಾಗಿದೆ, ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.
"ಅವಳು ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ನಾನು ಅವರ ಅಂಗಡಿಯಲ್ಲಿ ಆಲೂ ಟಿಕ್ಕಿ ತಿನ್ನುತ್ತಿದ್ದೇನೆ. ಅವಳು ಪಂಜಾಬ್ ನ ಮೋಗಾ ನಗರದಲ್ಲಿ ತನ್ನ ತಂದೆಗೆ ಸಹಾಯ ಮಾಡುತ್ತಿದ್ದಾಳೆ" ಎಂದು ಇನ್ನೊಬ್ಬರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ