ಪಿಜ್ಜಾ, ಬರ್ಗರ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಫಾಸ್ಟ್ ಫುಡ್ (Fast Food) ಮತ್ತು ಜಂಕ್ ಫುಡ್ ಯುಗದಲ್ಲಿ ಸಾಂಪ್ರದಾಯಿಕ ಆಹಾರಗಳು ಕಳೆದು ಹೋಗುತ್ತಾ ಇದೆ. ಅನ್ನೋದು ಬೇಸರದ ಸಂಗತಿ. ಯಾವುದೂ ಕೂಡ ಅತಿಯಾಗಬಾರದು. ಪಿಜ್ಜಾ ಇಷ್ಟ ಇದ್ರೂ ಕೂಡ ಜಾಸ್ತಿಯಾಗಿ ತಿಂದ್ರೆ ಆರೋಗ್ಯ ಕೆಡುತ್ತದೆ. ಇವೆಲ್ಲಾ ವಿಷಯಗಳು ಜನರಿಗೆ ಗೊತ್ತಿದ್ರೂ ಕೂಡ ಮುಗಿಬಿದ್ದು ಈ ಫುಡ್ಗಳ ಮೊರೆ ಹೋಗುತ್ತಾರೆ. ಅನೇಕರಿಗೆ ನಾನಾ ರೀತಿಯ ಆಹಾರ ಪದಾರ್ಥಗಳು (Food Items) ತುಂಬಾ ಇಷ್ಟ ಇರುತ್ತದೆ. ಅನೇಕ ಜನರು ವಿವಿಧ ರೀತಿಯ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ ಮತ್ತು ಹೊಸದನ್ನು ಪ್ರಯತ್ನಿಸುತ್ತಾರೆ. ಆದ್ದರಿಂದಲೇ ಅವರನ್ನು ‘ಆಹಾರ ಪ್ರಿಯರು’ (Foodies) ಎಂದು ಕರೆಯುತ್ತಾರೆ.
ಆಹಾರದ ಬಗ್ಗೆ ಹುಚ್ಚರಾಗಿರುವ ಅನೇಕ ಜನರನ್ನು ನೀವು ಸುಲಭವಾಗಿ ಕಾಣಬಹುದು. ಆಹಾರ ಪದಾರ್ಥಗಳು ಮತ್ತು ಪಾಕವಿಧಾನಗಳ ಅನೇಕ ಫೋಟೋಗಳು ಮತ್ತುವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಬರುತ್ತಿವೆ. ಇಂತಹ ಫೋಟೋ ವಿಡಿಯೋಗಳನ್ನು ನೆಟ್ಟಿಗರು ಕೂಡ ಮೆಚ್ಚಿಕೊಂಡಿದ್ದಾರೆ. ಈ ರೀತಿಯಾಗಿ, ಪಿಜ್ಜಾವನ್ನು ನೋಡಬಹುದಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆದ ವಿಡಿಯೋ ನೋಡ್ತಾ ಇದ್ರೆ ಬಾಯಲ್ಲಿ ನೀರೂರುವುದಂತೂ ಪಕ್ಕಾ!
ಇದನ್ನೂ ಓದಿ: ಆಗಿನ ಕಾಲದ ಮಾಂಸದ ಅಂಗಡಿಗಳು ಹೇಗಿತ್ತು ಗೊತ್ತಾ? ನಂಬಲಾಗದ ವಿಚಿತ್ರ ವಿಷಯಗಳಿವು
ಸದ್ಯ ವೈರಲ್ ಆಗಿರುವ ವಿಡಿಯೋದ ಆರಂಭದಲ್ಲಿ ಪಿಜ್ಜಾ ಸ್ಲೈಸ್ ಕಾಣಿಸಿಕೊಂಡಿದೆ. ಆದರೆ ವಿಡಿಯೋವನ್ನು ಮತ್ತಷ್ಟು ನೋಡಿದ ನಂತರ, ಅದರಲ್ಲಿ ಅರ್ಧದಷ್ಟು ಪಿಜ್ಜಾ ಮತ್ತು ಉಳಿದರ್ದ ಪೇಂಟಿಂಗ್ ಎಂದು ನೀವು ನೋಡುತ್ತೀರಿ. ಇದು ನಿಜವಾದ ಪಿಜ್ಜಾದಂತೆ ಕಾಣುತ್ತದೆ. ಆದರೆ ಆ ಪೇಂಟಿಂಗ್ ಎಷ್ಟು ಚೆನ್ನಾಗಿ ಮೂಡಿಬಂದಿದೆ ಎಂದರೆ ಅದು ಪೇಂಟಿಂಗ್ ಅಲ್ಲ ನಿಜವಾದ ಪಿಜ್ಜಾ ಎಂದು ಅನಿಸುತ್ತದೆ.
ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದರಲ್ಲಿ ಪಿಜ್ಜಾಗೆ ಏನೇಲ್ಲಾ ಹಾಕುತ್ತಾರೆಯೋ ಪ್ರತಿಯೊಂದು ಸೇಮ್ ಟು ಸೇಮ್ ಹಾಗೆಯೇ ಇದೆ. ಟೊಮೇಟೋ, ಈರುಳ್ಳಿ ಹೀಗೆ ಪ್ರತಿಯೊಂದು ಇಂಚು ಇಂಚನ್ನು ಸೂಕ್ಷ್ಮವಾಗಿ ಯಾವ ರೀತಿಯಾಗಿ ಚಿತ್ರ ಮತ್ತು ಅದಕ್ಕೆ ತಕ್ಕನಾಗಿ ಬಣ್ಣವನ್ನು ಹಚ್ಚಿದ್ದಾರೆ ಎಂದು ನೀವೇ ವಿಡಿಯೋದಲ್ಲಿ ಕಾಣಬಹುದಾಗಿದೆ.
ನಿದಾನವಾಗಿಯೇ ಈ ಪೇಂಟಿಂಗ್ ಮಾಡಿದ್ದಾರೆ. ಆದರೆ ಟೈಮ್ ಲ್ಯಾಪ್ಸಿಂಗ್ನಲ್ಲಿ ಎಡಿಟ್ ಮಾಡಿದ್ದಾರೆ. ಏತನ್ಮಧ್ಯೆ, ಅಂತಹ ಚಮತ್ಕಾರಿ ಮತ್ತು ಸುಂದರವಾದ, ಸೃಜನಶೀಲ ಪೇಂಟಿಂಗ್‌ಗಳ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆಹಾರದಿಂದ ಚಿತ್ರಕಲೆಗೆ, ಗೌರ್ಮೆಟ್‌ಗಳು ಇದನ್ನು ಇಷ್ಟಪಡುತ್ತಿದ್ದಾರೆ. ಅಂತಹ ಫೋಟೋಗಳು ಮತ್ತು ವಿಡಿಯೋಗಳು ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್ಗಳನ್ನು ಪಡೆಯುತ್ತವೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಎಲ್ಲರ ಗಮನ ಸೆಳೆದಿದೆ.
ನೀವೂ ಕೂಡ ಇಂತಹದ್ದೇ ಚಿತ್ರ ಬರೆದು, ಬಣ್ಣ ಹಚ್ಚಲು ಪ್ರಯತ್ನಿಸಿ. ಯಾವ ರೀತಿಯಾಗಿ ಬರುತ್ತೆ ಅಂತ ನೀವೇ ಒಮ್ಮೆ ನೋಡಿ ಮತ್ತು ನಿಮ್ಮವರಿಗೆಲ್ಲಾ ತೋರಿಸಿ, ಸಂತೋಷವನ್ನು ಆಷರಿಸಿ. ಈ ವೈರಲ್ ಪಿಜ್ಜಾ ಅಂತೂ ನೋಡೋಕೆ ಸೂಪರ್ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ