ಭಾರತ-ಪಾಕ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ ಹೇಳಿದ್ದೇನು?

news18
Updated:September 23, 2018, 2:41 PM IST
ಭಾರತ-ಪಾಕ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ ಹೇಳಿದ್ದೇನು?
  • Advertorial
  • Last Updated: September 23, 2018, 2:41 PM IST
  • Share this:
ನ್ಯೂಸ್ 18 ಕನ್ನಡ

ದುಬೈನಲ್ಲಿ ನಡೆಯುತ್ತಿರುವ 14ನೇ ಏಷ್ಯಾ ಕಪ್​​​​ ಕ್ರೀಡಾ ಕೂಟದ ಲೀಗ್ ಹಂತದ ಪಂದ್ಯದಲ್ಲಿ ಇತ್ತೀಚೆಗಷ್ಟೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಮಧ್ಯೆ ಕಳೆದ ಎರಡು ದಿನಗಳಿಂದ ಪಂದ್ಯ ಆರಂಭಕ್ಕೂ ಮುನ್ನ ಪಾಕ್ ಅಭಿಮಾನಿಯೊಬ್ಬ ಭಾರತದ ರಾಷ್ಟ್ರಗೀತೆ ಹಾಡುತ್ತಿರುಯವ ವಿಡಿಯೋ ಸಾಮಾಜಾಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 


ಪಾಕಿಸ್ತಾನ ದೇಶದ ಯುವಕ ಆದಿಲ್ ತಾಜ್ ಎಂಬವರು ಭಾರತದ ರಾಷ್ಟ್ರಗೀತೆ ಹಾಡಿದ್ದು, ಈ ಬಗ್ಗೆ ಸ್ವತಃ ಆದಿಲ್ ಅವರೆ ಮಾತನಾಡಿದ್ದಾರೆ. 'ಬಾಲಿವುಡ್​ನ 'ಕಬಿ ಖುಷಿ ಕಬಿ ಗಂ' ಸಿನಿಮಾದಲ್ಲಿ ನಾನು ಮೊದಲ ಬಾರಿ ಭಾರತದ ರಾಷ್ಟ್ರಗೀತೆಯನ್ನು ಕೇಳಿದ್ದು. ಆಗ ನನಗೆ ರೋಮಾಂಚನವಾಗಿತ್ತು. ಇದು ಉಭಯ ದೇಶಗಳ ನಡುವಣ ಶಾಂತಿಗಾಗಿ ನನ್ನ ಸಣ್ಣ ಪ್ರಯತ್ನ. ಹೀಗಾಗಿ ಭಾರತ-ಪಾಕ್ ಎದುರಾದಾಗ ಭಾರತದ ರಾಷ್ಟ್ರಗೀತೆ ಹಾಡಿಗೆ ದನಿಗೂಡಿಸಿದೆ' ಎಂದು ಆದಿಲ್ ಹೇಳಿಕೊಂಡಿದ್ದಾರೆ. ಇನ್ನು ಇಂದು ನಡೆಯಲಿರುವ ಪಂದ್ಯದಲ್ಲೂ ಭಾರತದ ರಾಷ್ಟ್ರಗೀತೆ ಹಾಡುವೆ ಎಂದಿದ್ದಾರೆ.
First published:September 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ