Miracle Light: ಅಜ್ಮೇರ್‌ನಲ್ಲಿನ ಷರೀಫ್ ದರ್ಗಾದ ಮೇಲೆ ಮೀನಿನಾಕಾರದ ಬೆಳಕು; ಏನಿದು ಪವಾಡ?

miracle fish shaped light: ದರ್ಗಾದ ತುತ್ತತುದಿಯಿಂದ ಅನತಿ ದೂರದಲ್ಲಿ ಬೆಳಕು ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪವಾಡವೆಂದು ಹೇಳುತ್ತಿದ್ದಾರೆ.

ವೈರಲ್​​ ಆಗಿರುವ ಫೋಟೋ

ವೈರಲ್​​ ಆಗಿರುವ ಫೋಟೋ

 • Share this:
  Ajmer dargah: ಅಜ್ಮೇರ್‌ನಲ್ಲಿರುವ ಷರೀಫ್ ದರ್ಗಾ ಅಥವಾ ಹಜರತ್ ಖ್ವಾಜಾ ಘರಿಬ್ ನವಾಜ್ ದರ್ಗಾದ ತುತ್ತತುದಿಯಿಂದ ಅನತಿ ದೂರದಲ್ಲಿ ಬೆಳಕು ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪವಾಡವೆಂದು ಹೇಳುತ್ತಿದ್ದಾರೆ. ಸೆಪ್ಟೆಂಬರ್ 18 ರಂದು (ಶನಿವಾರ) ಈ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಇದು ಭಾನುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಜ್ಮೇರ್ ಮೂಲದ ಫೇಸ್‍ಬುಕ್ ಬಳಕೆದಾರ 'ಬಾಜಿಗರ್ ಭಾಯಿ' ಭಾನುವಾರ ಬೆಳಿಗ್ಗೆ 19 ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಅದನ್ನು ಸೂಕ್ಷ್ಮವಾಗಿ ವೀಕ್ಷಿಸುವಂತೆ ಹೇಳಿದನು. ಈ ಪೋಸ್ಟ್ ಅನ್ನು 13,000 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ ಮತ್ತು ಇದನ್ನು ಸುಮಾರು 4,500 ಬಳಕೆದಾರರು ಇಷ್ಟಪಟ್ಟಿದ್ದಾರೆ.

  ಫೇಸ್‍ಬುಕ್‍ನಲ್ಲಿ ಈ ವೀಡಿಯೊವನ್ನು ಜಾಲೋರ್ ಮೂಲದ ಬಳಕೆದಾರ ಆಚಾರ್ಯ ಗುಲ್‍ಶಾದ್ ಅವರು ಭಾನುವಾರ ಸಂಜೆ ಬಾಜಿಗರ್‍ನ ಅದೇ ಶೀರ್ಷಿಕೆಯೊಂದಿಗೆ ಮರು-ಹಂಚಿಕೊಂಡಿದ್ದಾರೆ,. ಗುಲ್ಶಾದ್ ಅವರ ಪೋಸ್ಟ್ 5,000 ಕ್ಕಿಂತ ಹೆಚ್ಚು ಶೇರ್ ಆಗಿದ್ದು ಮತ್ತು 1,000 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

  ಸೋಮವಾರ ಬೆಳಿಗ್ಗೆ, ಇನ್ನೊಬ್ಬ ಫೇಸ್‍ಬುಕ್ ಬಳಕೆದಾರ, ಜಾವೀದ್ ಜಾವೀದ್ ಖಾನ್, ಎಂಬಾತ ಕೆಟಿಎನ್ ನ್ಯೂಸ್ ಕ್ಲಿಪ್ ಅಪ್‍ಲೋಡ್ ಮಾಡಿದ್ದಾರೆ. "ಮೀನಿನಂತಹ ಆಕಾರದ ಬೆಳಕು ಖ್ವಾಜಾ ಸಹಬ್‍ನ ಗುಂಬಜ್‍ಗೆ ಪ್ರವೇಶಿಸುತ್ತಿದೆ" ಎಂದು ಕೆಟಿಎನ್ ನ್ಯೂಸ್ ನಿರೂಪಕ ಈ ವಿದ್ಯಮಾನವನ್ನು "ಪವಾಡಸದೃಶ" ದೃಶ್ಯ ಎಂದು ಹೇಳಿದ್ದಾರೆ. ಜಾವೀದ್ ಅವರ ವಿಡಿಯೋ 32,000 ಶೇರ್ ಆಗಿದ್ದು ಮತ್ತು 9,000ಕ್ಕೂ ಹೆಚ್ಚು ಲೈಕ್‍ಗಳನ್ನು ಕಂಡಿದೆ.

  ಪ್ರತಿ ಫೇಸ್‍ಬುಕ್ ಕಾಮೆಂಟ್ ವಿಭಾಗಗಳಲ್ಲಿ ಹಲವಾರು ಬಳಕೆದಾರರು ಬಾಜಿಗರ್, ಆಚಾರ್ಯ ಮತ್ತು ಜಾವೀದ್ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಮತ್ತು ವೀಡಿಯೊವನ್ನು ಎಡಿಟ್ ಮಾಡಿ ಹರಿಬಿಟ್ಟು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಉಲ್ಲೇಖಿಸಿದರೆ, ಬಹುಪಾಲು ಕಾಮೆಂಟ್‍ದಾರರು "ಪವಾಡ" ಎಂದು ಕಮೆಂಟ್ ಮಾಡಿದ್ದಾರೆ.

  ಇದನ್ನೂ ಓದಿ: ಇದಪ್ಪಾ ಫ್ರೆಂಡ್​​ಶಿಪ್​​ ಅಂದ್ರೆ.. ಗೆಳೆಯನನ್ನು ಎಳೆದು ಕರೆ ತಂದು ಲಸಿಕೆ ಹಾಕಿಸಿದ ಕಾಮಿಡಿ ವಿಡಿಯೋ ವೈರಲ್!

  ಫ್ಯಾಕ್ಟ್ ಚೆಕ್
  ವೀಡಿಯೊದಲ್ಲಿ ಸೆರೆಹಿಡಿಯಲಾದ ವಿದ್ಯಮಾನವು ಪವಾಡಕ್ಕಿಂತ ಹೆಚ್ಚು ಭೌತಶಾಸ್ತ್ರಕ್ಕೆ ಸಂಬಂಧಿಸಿದುದಾಗಿದೆ. ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯು ಬೆಳಕಿನ ವಕ್ರೀಭವನವನ್ನು ಸೆರೆಹಿಡಿದಿದ್ದಾರೆ. ವೀಡಿಯೊದಲ್ಲಿ ಮಳೆಯ ತುಂತುರು ಹನಿಗಳನ್ನು ಕಾಣಬಹುದು.

  ವಕ್ರೀಭವನವು ಬೆಳಕಿನ ದಿಕ್ಕನ್ನು ಬದಲಿಸಿದಾಗ ಅಥವಾ ಬಾಗಿದಾಗ, ಮಾಧ್ಯಮದ ಬದಲಾವಣೆಯಿಂದಾಗಿ ಅಥವಾ ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹಾದುಹೋಗುವುದರಿಂದ, ಅಂದರೆ ಗಾಳಿಯಿಂದ ನೀರಿಗೆ ಅಥವಾ ಪ್ರತಿಕ್ರಮದಲ್ಲಿ ಅಥವಾ ಗಾಳಿಯ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಈ ರೀತಿ ಗೋಚರವಾಗಿದೆ.

  ವೈರಲ್ ವೀಡಿಯೋದ ದ್ವಿತೀಯಾರ್ಧವನ್ನು ಸೂಕ್ಷ್ಮವಾಗಿ ಗಮನಿಸಿದರೆ ದರ್ಗಾದ ಬಿಳಿ ಗುಮ್ಮಟದ ಮೇಲೆ ಪ್ರಕಾಶಮಾನವಾದ ಮೀನಿನ ಆಕಾರದ ಬೆಳಕು ಮಾತ್ರ ಕಾಣಿಸುತ್ತದೆ. ಆದರೆ ಗುಮ್ಮಟ ಹಾಗೂ ಸುತ್ತಮುತ್ತಲಿನ ಕಟ್ಟಡಗಳು ಮತ್ತು ಬೀದಿ ದೀಪಗಳಲ್ಲೂ ಬೆಳಕಿನ ವಕ್ರೀಭವನವು ಸಹ ಸಂಭವಿಸುತ್ತದೆ. ಇದು ಕ್ಯಾಮಾರದ ಕಣ್ಣಿನಲ್ಲಿ ಇದೇ ರೀತಿಯಾಗಿ ಗೋಚರಿಸುತ್ತದೆ.
  First published: