• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಅಜ್ಜಿಗೆ ಓಟಿಟಿ ಆ್ಯಪ್​ ಬಗ್ಗೆ ಹೇಳಿಕೊಟ್ಟ ಮೊಮ್ಮಗ, ಕ್ಯೂಟ್ ​ವಿಡಿಯೋ ಸಿಕ್ಕಾಪಟ್ಟೆ ವೈರಲ್​!

Viral Video: ಅಜ್ಜಿಗೆ ಓಟಿಟಿ ಆ್ಯಪ್​ ಬಗ್ಗೆ ಹೇಳಿಕೊಟ್ಟ ಮೊಮ್ಮಗ, ಕ್ಯೂಟ್ ​ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ವೈರಲ್​ ಆದ ಅಜ್ಜಿ ಮತ್ತು ಮಗ

ವೈರಲ್​ ಆದ ಅಜ್ಜಿ ಮತ್ತು ಮಗ

ಇತ್ತೀಚಿನ ಅಜ್ಜಿಯಂದಿರು ಸಹ ಈಗಿನ ಜನರೇಶನ್​ಗೆ ಬದಲಾಗಿದ್ದಾರೆ ಎನ್ನಬಹುದು. ಏಕೆಂದರೆ ಇಲ್ಲೊಂದು ಅಜ್ಜಿ ಮತ್ತು ಮೊಮ್ಮಗನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ತನ್ನ ಅಜ್ಜಿಗೆ ಮೊಮ್ಮಗ ಸ್ಮಾರ್ಟ್​​ಟಿವಿಯಲ್ಲಿ ಓಟಿಟಿ ಪ್ಲಾಟ್​ಫಾರ್ಮ್​ಗಳನ್ನು ಬಳಕೆ ಮಾಡುವುದು ಹೇಗೆ ಎಂದು ಹೇಳಿಕೊಂಡುವುದನ್ನು ನೋಡಬಹುದು.

ಮುಂದೆ ಓದಿ ...
  • Share this:

    ಸ್ಮಾರ್ಟ್​​ಟಿವಿಗಳು (SmartTv) ಇತ್ತೀಚೆಗೆ ಎಲ್ಲರ ಮನೆಯಲ್ಲಿಯೂ ಇದೆ. ಇದಕ್ಕೆ ಕಾರಣ ಈ ಡಿವೈಸ್​ಗಳು ಹೊಂದಿರುವಂತಹ ಫೀಚರ್​ ಅಂತಾನೇ ಹೇಳ್ಬಹುದು. ಹಿಂದೆಲ್ಲಾ ಟೆಲಿವಿಷನ್​ಗಳನ್ನು ಹೆಚ್ಚಾಗಿ ನ್ಯೂಸ್​ ಚಾನೆಲ್​, ಸಿನೆಮಾ, ಧಾರಾವಾಹಿಗಳನ್ನು ನೋಡಲು ಬಳಸುತ್ತದ್ದರು. ಆದರೆ ಸ್ಮಾರ್ಟ್​ಟಿವಿಗಳು ಬಂದ ನಂತರ ಓಟಿಟಿ ಪ್ಲಾಟ್​ಫಾರ್ಮ್​ಗಳು (OTT Platforms) ಬಹಳಷ್ಟು ಬೆಳವಣಿಗೆಯನ್ನು ಕಂಡಿದೆ. ಈಗಿನ ಸ್ಮಾರ್ಟ್​​ಟಿವಿಗಳು ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ತರಗತಿಗಳನ್ನು ಣಿಡುತ್ತವೆ. ನಾವೆಲ್ಲರೂ ನಮ್ಮ ಕುಟುಂಬದಲ್ಲಿ ಒಬ್ಬ ಹಿರಿಯ ಸದಸ್ಯರನ್ನು ಹೊಂದಿರುತ್ತೇವೆ, ಅವರು ಸರಳವಾದ ಸಾಧನಗಳನ್ನು ಬಳಕೆ ಮಾಡಲು ಬಯಸಿದಾಗ ಯಾವಾಗಲೂ ನಮ್ಮ ಸಹಾಯವನ್ನು ಕೇಳುತ್ತಾರೆ. ಹೆಚ್ಚಾಗಿ ಫೋನ್‌ನಲ್ಲಿ ಕಾಲ್ ಮಾಡಲು ಅಥವಾ ಟಿವಿಯಲ್ಲಿ ಚಾನೆಲ್ (TV Channel)​ ಬದಲಾವಣೆ ಮಾಡಲು ಸಹಾಯವನ್ನು ಪಡೆಯುತ್ತಾರೆ.


    ಇತ್ತೀಚಿನ ಅಜ್ಜಿಯಂದಿರು ಸಹ ಈಗಿನ ಜನರೇಶನ್​ಗೆ ಬದಲಾಗಿದ್ದಾರೆ ಎನ್ನಬಹುದು. ಏಕೆಂದರೆ ಇಲ್ಲೊಂದು ಅಜ್ಜಿ ಮತ್ತು ಮೊಮ್ಮಗನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ತನ್ನ ಅಜ್ಜಿಗೆ ಮೊಮ್ಮಗ ಸ್ಮಾರ್ಟ್​​ಟಿವಿಯಲ್ಲಿ ಓಟಿಟಿ ಪ್ಲಾಟ್​ಫಾರ್ಮ್​ಗಳನ್ನು ಬಳಕೆ ಮಾಡುವುದು ಹೇಗೆ ಎಂದು ಹೇಳಿಕೊಂಡುವುದನ್ನು ನೋಡಬಹುದು.


    ತನ್ನ ಅಜ್ಜಿಗೆ ಓಟಿಟಿ ಬಗ್ಗೆ ಮಾಹಿತಿ ನೀಡಿದ ಯುವಕ


    ಸಾಮಾನ್ಯವಾಗಿ ಇತ್ತೀಚೆಗೆ ಮೊಬೈಲ್​ಗಿಂತ ಹೆಚ್ಚಾಗಿ ಸ್ಮಾರ್ಟ್​ಟಿವಿಗಳಲ್ಲೇ ಓಟಿಟಿ ಪ್ಲಾಟ್​​ಫಾರ್ಮ್​ಗಳನ್ನು ಬಳಕೆ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಇಲ್ಲಿ ಕೆಲವರಿಗೆ ಈ ಪ್ಲಾಟ್​ಫಾರ್ಮ್​ಗಳನ್ನು ಬಳಸುವುದು ಹೇಗೆ ಎಂದು ಗೊತ್ತಿರುವುದಿಲ್ಲ. ಅದರಲ್ಲು ವಯಸ್ಸಾದವರಿಗಂತೂ ಇತ್ತೀಚಿನ ಕಾಲಮಾನದ ಡಿವೈಸ್​ಗಳನ್ನು ಬಳಸುವುದೇ ಕಷ್ಟವಾಗಿಬಿಟ್ಟಿದೆ. ಆದರೆ ಕೆಲವೊಂದು ಬಾರಿ ಅವರು ಸಹ ನಮ್ಮಂತೆಯೇ ಕೇಳಿ ಕಲಿತುಕೊಳ್ಳುತ್ತಾರೆ.


    ಇದನ್ನೂ ಓದಿ: ವ್ಯಾಲೆಂಟೈನ್ಸ್ ದಿನದಂದು ನಿಮ್ಮ ಸಂಗಾತಿಗೆ ಈ ಡಿವೈಸ್​ಗಳನ್ನು ಗಿಫ್ಟ್ ಮಾಡಿ!


    ಇಲ್ಲೊಂದು ಅಜ್ಜಿ ಮತ್ತು ಯುವಕನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್​ ಆಗಿದೆ. ಇಲ್ಲಿ ಯುವಕ ತನ್ನ ಅಜ್ಜಿಗೆ ಸ್ಮಾರ್ಟ್​​ಟಿವಿಯಲ್ಲಿ ಓಟಿಟಿ ಪ್ಲಾಟ್​ಫಾರ್ಮ್​ಗಳನ್ನು ಬಳಕೆ ಮಾಡುವುದು ಹೇಗೆ ಎಂದು ಹೇಳಿಕೊಡುವ ವಿಡಿಯೋವನ್ನು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಯುವಕ ಯಾವೆಲ್ಲಾ ಓಟಿಟಿ ಪ್ಲಾಟ್​​ಫಾರ್ಮಗಳನ್ನು ಹೇಗೆ ಓಪನ್ ಮಾಡಬೇಕು, ಹೇಗೆಲ್ಲಾ ಬಳಸ್ಬೇಕು ಎಂದು ಹೇಳುವಾಗ, ಗಮನಕೊಟ್ಟು ನೋಡುತ್ತಿರುವ ಅಜ್ಜಿಯ ಮುಗ್ಧತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಗೆದ್ದಿದೆ ಎಂದು ಹೇಳ್ಬಹುದು.


    ಈ ವಿಡಿಯೋದಲ್ಲಿ ಏನಿದೆ? 


    ಇನ್ನು ಈ ವಿಡಿಯೋದಲ್ಲಿ ನೋಡವುದಾದರೆ, ಸ್ಮಾರ್ಟ್‌ಟಿವಿಯಲ್ಲಿ ಓಟಿಟಿ ಆ್ಯಪ್​ಗಳನ್ನು ಓಪನ್ ಮಾಡಿರುವ ಯುವಕ, ಈ ಆ್ಯಪ್​ಗಳನ್ನು ಹೇಗೆ ಪತ್ತೆ ಮಾಡುವುದು?, ಹಾಗೆಯೇ ಈ ಟಿವಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಓಟಿಟಿ ಪ್ಲಾಟ್​ಫಾರ್ಮ್​ಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅಜ್ಜಿಗೆ ವಿವರಿಸಿದ್ದಾನೆ. ಹಾಗೆಯೇ ಅಮೆಜಾನ್, ಪ್ರೈಮ್, ನೆಟ್‌ಫ್ಲಿಕ್ಸ್ ಬಗ್ಗೆ ವಿವರಿಸಿ ಇವು ಒಂದಕ್ಕೊಂದು ಯಾವುದೇ ಸಂಬಂಧ ಹೊಂದಿಲ್ಲ ಸಹ ಹೇಳಿದ್ದಾನೆ.



    ಇದಾದ ನಂತರ ಈ ಸ್ಮಾರ್ಟ್‌ಟಿವಿಯಲ್ಲಿ ಪ್ರೈಮ್ ವಿಡಿಯೋ ಹಾಗೂ ನೆಟ್‌ಫ್ಲಿಕ್ಸ್ ಕೂಡ ಇದೆ ಎಂದು ಹೇಳುವ ಯುವಕ ಆ ಆ್ಯಪ್​ಗಳು ಎಲ್ಲಿವೆ ಎಂದು ಪತ್ತೆ ಮಾಡಲು ಅಜ್ಜಿಗೆ ಸೂಚಿಸುತ್ತಾನೆ. ಅದರಂತೆ ಅಜ್ಜಿ ಓಟಿಟಿ ಆ್ಯಪ್​ಗಳನ್ನು ಪತ್ತೆ ಮಾಡಲು ರಿಮೋಟ್​ ಮೂಲಕ ಸ್ಕ್ರಾಲ್ ಮಾಡುತ್ತಾರೆ. ಹಾಗೆಯೇ ಅದನ್ನು ಯಾವ ರೀತಿ ಓಪನ್‌ ಮಾಡಬಹುದು ಎಂಬುದನ್ನೂ ಸಹ ಕಲಿತುಕೊಳ್ಳುತ್ತಾರೆ.


    ಇನ್ನು ಈ ಪೋಸ್ಟ್‌ 5 ದಶಲಕ್ಷಕ್ಕೂ ಹೆಚ್ಚು ಟ್ಇಡರ್​ನಲ್ಲಿ ವೀಕ್ಷಣೆಗಳನ್ನು ಪಡೆದಿದ್ದು, 288,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.




    ನೋಡುಗರ ಪ್ರತಿಕ್ರಿಯೆ ಹೇಗಿದೆ?


    ಈ ವಿಡಿಯೋವನ್ನು ನೋಡಿದ ಜನರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು ತಮ್ಮ ತಾಯಿ ಹಾಗೂ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ.


    ಹಾಗೆಯೇ ನನ್ನ ತಾಯಿಯನ್ನು ನೋಡಿದಾಗಲೆಲ್ಲಾ ಫೋನ್‌ನಲ್ಲಿ ನಾನು ಸಹಾಯ ಮಾಡುತ್ತಿದ್ದೇನೆ ಎಂದು ಬಳಕೆದಾರರೊಬ್ಬರು ಕಮೆಂಟ್​ ಮಾಡಿದ್ದಾರೆ.


    ಹಾಗೆಯೇ ಈ ರೀತಿಯಲ್ಲಿ ನನ್ನ ತಂದೆಗೆ ಹೇಳಿಕೊಡಬೇಕು. ಅದರಲ್ಲೂ ಯೂಟ್ಯೂಬ್‌ ಟಿವಿ ಅಂದರೆ ಏನು ಎಂದು ಅವರಿಗೆ ವಿವರಿಸಲು ಪ್ರಯತ್ನಿಸಿದಾಗ, ಅದನ್ನು ಅವರು ಗ್ರಹಿಸಲು ಸಾಧ್ಯವಾಗಲಿಲ್ಲ. ಅವರು ಕೇಬಲ್‌ ಸಂಪರ್ಕದ ಮೂಲಕ ಟಿವಿ ವೀಕ್ಷಣೆ ಮಾಡುತ್ತಿದ್ದು, ಈ ಆ್ಯಪ್​ಗಳಿಂದ ಗೊಂದಲಕ್ಕೆ ಒಳಗಾದರು ಎಂದು ಬರೆದಿದ್ದಾರೆ.

    Published by:Prajwal B
    First published: