ಇಂದು ಎಲ್ಲೆಲ್ಲೂ ATMಗಳಿವೆ. ಬಿರು ಬಿಸಿಲಿನಲ್ಲಿ ನಡೆದು ಬಂದವರು ಎಟಿಎಂ ರೂಂ ಒಳಗೆ ಕಾಲಿಡುತ್ತಿದ್ದಂತೆ ಎಸಿಯ ತಣ್ಣನೆಯ ಅನುಭವ ನಮಗೆ ಹಿತ ನೀಡುತ್ತೆ. ಇನ್ನು ಪ್ರೇಮಿಗಳು ಎಂಟಿಎಂ ಒಳಗೆ ರೊಮ್ಯಾನ್ಸ್ ಮಾಡುವ ವಿಡಿಯೋಗಳು ಕೆಲ ವರ್ಷಗಳ ಹಿಂದೆ ಸುದ್ದಿಯಾಗಿದ್ದವು. ಈಗ ಸಿಸಿಟಿವಿ ಕ್ಯಾಮರಾ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಈಗ ಪ್ರೇಮಿಗಳ ರೊಮ್ಯಾನ್ಸ್ಗೆ ಎಟಿಎಂ ರೂಂಗಳು ಒಳ್ಳೆಯ ಸ್ಪಾಟ್ ಅಲ್ಲ. ಆದರೆ ಡ್ಯಾನ್ಸ್ ಮಾಡಲು ಒಳ್ಳೆಯ ಸ್ಥಳವೇ ಎಂಬ ಅನುಮಾನ ಈಗ ಶುರುವಾಗಿದೆ. ಹುಡುಗಿಯೊಬ್ಬಳು ಎಟಿಎಂನಲ್ಲಿ ಹಣ ತೆಗೆಯಲು ಬಂದಾಗ ಕ್ಯಾಮರಾ ಇದೆ ಎಂಬುವುದು ಗೊತ್ತಾಗದೇ ಮನಸೋ ಇಚ್ಛೆ ಡ್ಯಾನ್ಸ್ ಮಾಡಿದ್ದಾಳೆ. ಹಣ ಬರುವ ಸಣ್ಣ ಗ್ಯಾಪ್ನಲ್ಲಿ ಆಕೆ ಹಾಕಿರುವ ಸ್ಟೆಪ್ ನೋಡಿದ್ರೆ ಎಂಥವರೂ ಬಿದ್ದು ಬಿದ್ದು ನಗಬೇಕು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ನೆಟ್ಟಿಗರು ವಿಡಿಯೋವನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಣ ತೆಗೆಯುವಾಗ ಎಟಿಎಂ ಒಳಗೆ ಹುಡುಗಿ ಸೂಪರ್ ಆಗಿ ಡ್ಯಾನ್ಸ್ ಮಾಡಿರುವುದು ಎಲ್ಲರಿಗೂ ಮಜಾ ನೀಡುತ್ತಿದೆ. ಈ ವೀಡಿಯೊ ತಕ್ಷಣವೇ ವೈರಲ್ ಆಗಿತ್ತು ಮತ್ತು ಅದನ್ನು ಅಪ್ಲೋಡ್ ಮಾಡಿದಾಗಿನಿಂದ ಲಕ್ಷ ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.
ಹುಡುಗಿ ಸಂತೋಷದಿಂದ ನೃತ್ಯ ಮಾಡುವ ವಿಡಿಯೋವನ್ನು 'ಘಂಟಾ' ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. "ಖುಷಿ ದೇಖ್ ರಹೇ ಹೋ ಸಂಬಳ ಕಿ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಅಪ್ಲೋಡ್ ಮಾಡಿದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಎಟಿಎಂ ಬೂತ್ ಒಳಗೆ ಕಪ್ಪು ಟಾಪ್ ಮತ್ತು ಕಪ್ಪು ಮಾಸ್ಕ್ ಧರಿಸಿರುವ ಹುಡುಗಿಯೊಬ್ಬಳು ಹಣವನ್ನು ತೆಗೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವಳು ಎಟಿಎಂ ಯಂತ್ರವನ್ನು ಬಳಸಲು ಆರಂಭಿಸಿದಂತೆ ಸೂಪರ್ ಸ್ಟೆಪ್ ಹಾಕಿದ್ದಾಳೆ. ವಿಡಿಯೋದ ಕೊನೆಯಲ್ಲಿ, ಅವಳು ಹಣವನ್ನು ಹಿಂಪಡೆದ ನಂತರ, ಎಟಿಎಂ ಯಂತ್ರಕ್ಕೆ. ಈ ವೀಡಿಯೋವನ್ನು ಕೇವಲ ಒಂದು ದಿನದ ಹಿಂದೆ ಅಪ್ಲೋಡ್ ಮಾಡಲಾಗಿದೆ ಮತ್ತು ಇನ್ಸ್ಟಾಗ್ರಾಮ್ನಲ್ಲಿ 28 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಮೂರು ಲಕ್ಷ ಲೈಕ್ಗಳನ್ನು ಹೊಂದಿದೆ.
ವಧು ಸ್ವೀಟ್ ತಿನ್ನಿಸಿದರೂ ತಿನ್ನದ ವರ
ಸಾಮಾಜಿಕ ಜಾಲತಾಣದಲ್ಲಿ (Social Media)ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ(Viral Video). ಅವುಗಳಲ್ಲಿ ಕೆಲವು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಕೋಪಗೊಂಡ ಅಥವಾ ತರಲೆ ಮಾಡಿದ ಕೆಲವು ಸನ್ನಿವೇಶಗಳು ನಮಗೆ ಖುಷಿ ನೀಡುತ್ತದೆ. ಇನ್ನು ಮದುವೆಗಳಲ್ಲಿ(Wedding) ವಧು -ವರರ ಮುಖದಲ್ಲಿ ನೀವು ಸಂತೋಷವನ್ನು ಕಂಡಿರುತ್ತೀರ. ಅದು ಅವರ ಬದುಕಿನ ಅದ್ಭುತ ಕ್ಷಣಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಆದರೆ ಎಲ್ಲವೂ ಹಾಗೆಯೆ ಇರುವುದಿಲ್ಲ. ಒಮ್ಮೊಮ್ಮೆ ವಧು ತನ್ನವರನ್ನು ಬಿಟ್ಟು ಹೋಗಬೇಕೆಂಬ ನೋವಿನಲ್ಲಿರುತ್ತಾಳೆ. ಹಾಗೆಯೇ ವರನಿಗೂ ಕೂಡ ಯಾವುದಾದರೂ ವಿಚಾರಕ್ಕೆ ಕೋಪ ಬಂದಿರಬಹುದು. ಇಂಥಹದೆ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಮದುವೆಯು ಉಳಿಯಲು ಅಗತ್ಯವಾದ ಅಂಶಗಳಲ್ಲಿ ಗೌರವವು ಒಂದು. ಗೌರವವಿಲ್ಲದೆ ಇದ್ದಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಹಾಳಾಗುತ್ತದೆ. ಇದು ಮುಮದಿನ ದಿನಗಳಲ್ಲಿ ತೊಂದರೆಗೆ ಕಾರಣವಾಗುತ್ತದೆ. ಪ್ರತಿ ದಿನ, ಮುರಿದುಬಿದ್ದ ಮದುವೆಗಳು ಅಥವಾ ಮದುವೆಗಳನ್ನು ನಿಲ್ಲಿಸುವ ಕಥೆಗಳನ್ನು ನಾವು ಕೇಳುತ್ತೇವೆ. ಕಾರಣಗಳು ವಿಭಿನ್ನವಾಗಿರಬಹುದು, ಆದರೆ ಅಂತ್ಯವು ಒಂದೇ ಆಗಿರುತ್ತದೆ. ಈಗ ವೈರಲ್ ಆಗಿರುವ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ