ನಾವು ಈ ಚಿಕ್ಕ ಮಕ್ಕಳು ಮನೆಯಲ್ಲಿ ಅಥವಾ ಪಾರ್ಕ್ ನಲ್ಲಿ (Park) ತಮ್ಮ ಆಟಿಕೆಗಳನ್ನು (Toys) ತೆಗೆದುಕೊಂಡು ಅದರಲ್ಲಿ ಮಣ್ಣು ತುಂಬಿಸಿಕೊಂಡು ಆಟವಾಡುವ ದೃಶ್ಯಗಳನ್ನು ಪ್ರತಿದಿನ ನೋಡುತ್ತಲೇ ಇರುತ್ತೇವೆ. ಮಣ್ಣಿನಲ್ಲಿ (Soil) ಮತ್ತು ನೀರಿನಲ್ಲಿ ಆಡುವುದು ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ ಅಂತಾನೆ ಹೇಳಬಹುದು. ನಾವು ದೊಡ್ಡವರು ಆ ಮಕ್ಕಳಿಗೆ ಮಣ್ಣಿನಲ್ಲಿ ಆಟವಾಡಬಾರದು, ಧೂಳಿನಲ್ಲಿ ಆಟವಾಡಬಾರದು ಅಂತೆಲ್ಲಾ ಹೇಳುತ್ತಿರುತ್ತೇವೆ, ಆದರೆ ಆ ಮಕ್ಕಳ ಮುಗ್ದ ಮನಸ್ಸಿಗೆ ಅದ್ಯಾವುದೂ ಸಹ ಅರ್ಥವಾಗುವುದಿಲ್ಲ. ಆ ಮಕ್ಕಳ ಮುಗ್ಧತೆಯನ್ನು ನೋಡುವುದೇ ಒಂದು ಚೆಂದ ಅಂತ ಹೇಳಬಹುದು.
ಹೀಗೆ ಮಕ್ಕಳು ಮುಗ್ದತೆಯಿಂದ ಮಣ್ಣಿನಲ್ಲಿ ಆಟವಾಡಿಕೊಂಡಿರುವ ಅನೇಕ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೋಡಿರುತ್ತೇವೆ.
ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ನೋಡಿ. ಇತ್ತೀಚಿನ ವೀಡಿಯೋವು ಮಕ್ಕಳು ಎಷ್ಟು ಪರಿಶುದ್ಧ ಮನಸ್ಸಿನವರು ಅಂತ ತೋರಿಸಿದೆ.
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಯಿತು. ತಕ್ಷಣ ಅದು ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಇದು 1 ಮಿಲಿಯನ್ ವೀಕ್ಷಣೆಗಳನ್ನು ಸಹ ಗಳಿಸಿತು.
ಕೋಳಿಗೆ ಸಹಾಯ ಮಾಡುವ ಪುಟ್ಟ ಮಗುವಿನ ವೀಡಿಯೋ ಈಗ ವೈರಲ್
42 ಸೆಕೆಂಡಿನ ವೀಡಿಯೋದಲ್ಲಿ, ಸಣ್ಣ ಮಗುವೊಂದು ಫಾರ್ಮ್ ಪಕ್ಕದಲ್ಲಿ ನಿಂತಿರುವ ಕೋಳಿಯ ಹತ್ತಿರ ಹೋಗುವುದನ್ನು ವೀಡಿಯೋದ ಆರಂಭದಲ್ಲಿ ನಾವು ಕಾಣಬಹುದು.
ನಂತರ ಆ ಚಿಕ್ಕ ಹುಡುಗ ಎಚ್ಚರಿಕೆಯಿಂದ ಆ ಕೋಳಿಯನ್ನು ಎತ್ತಿಕೊಂಡು ತನ್ನ ಸಣ್ಣ ಬೈಕಿಗೆ ಜೋಡಿಸಿರುವ ಆಟಿಕೆ ಟ್ರಕ್ ನಲ್ಲಿ ಕೂರಿಸುತ್ತಾನೆ. ಮಗುವು ಕೋಳಿಯನ್ನು ತನ್ನ ಮನೆ ಕಡೆಗೆ ಜಾಗರೂಕತೆಯಿಂದ ಕರೆದುಕೊಂಡು ಹೋಗುವುದನ್ನು ನಾವು ಇಲ್ಲಿ ನೋಡಬಹುದು.
ತನ್ನ ಆಟಿಕೆ ಟ್ರಕ್ ನಲ್ಲಿ ಆ ಕೋಳಿಯನ್ನು ಕೂರಿಸಿಕೊಂಡು ಹೋಗುವಾಗ, ಮುದ್ದಾದ ಪುಟ್ಟ ಮಗು ಕೋಳಿ ಚೆನ್ನಾಗಿ ಕುಳಿತಿದೆಯೆ ಅಂತ ಪದೇ ಪದೇ ಹಿಂದಕ್ಕೆ ತಿರುಗಿ ನೋಡುತ್ತಿದ್ದನು.
ಇದನ್ನೂ ಓದಿ: Viral News: ಪುಟ್ಟ ಪುಟ್ಟ ಬಂಡೆಗಳಲ್ಲಿ 390 ಮಿಲಿಯನ್ ವರ್ಷಗಳಷ್ಟು ಹಳೆಯ ಸಾಗರದ ನೀರು ಪತ್ತೆ?
ಇವರಿಬ್ಬರೊಂದಿಗೆ ಅಲ್ಲಿ ಒಂದು ಮುದ್ದಾದ ಬಿಳಿ ಬಾತುಕೋಳಿ ಸಹ ಅವರೊಟ್ಟಿಗೆ ಪಕ್ಕದಲ್ಲಿಯೇ ನಡೆದುಕೊಂಡು ಹೋಗುವುದನ್ನು ಸಹ ನಾವು ನೋಡಬಹುದು.
In a world where you can be anything, be kind.. 😊
🎥 IG: bebecampeiro pic.twitter.com/KcesUS1rt0
— Buitengebieden (@buitengebieden) December 5, 2022
ಮುಗ್ಧ ವೀಡಿಯೋವನ್ನ ತುಂಬಾನೇ ಇಷ್ಟಪಟ್ಟ ನೆಟ್ಟಿಗರು
ಅಂತರ್ಜಾಲದಲ್ಲಿ ಜನರು ಈ ಮೂರು ಸಣ್ಣ ಜೀವಿಗಳನ್ನು ತುಂಬಾನೇ ಇಷ್ಟಪಟ್ಟರು. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಬಾತುಕೋಳಿ ಅವುಗಳೊಂದಿಗೆ ಹೇಗೆ ನಡೆದುಕೊಂಡು ಹೋಗಿದೆ ನೋಡಿ.. ನನಗೆ ತುಂಬಾನೇ ಇಷ್ಟವಾಯಿತು" ಎಂದು ಬರೆದರೆ, ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು “ಫಾರ್ಮ್ ಪ್ರಾಣಿಗಳು ಯಾವಾಗಲೂ ಅಷ್ಟು ಚೆನ್ನಾಗಿ ವರ್ತಿಸುವುದಿಲ್ಲ” ಎಂದು ಹೇಳಿದರು.
"ನಾನು ಇದುವರೆಗೆ ಯಾವುದೇ ಹುಂಜವು ಇಷ್ಟು ಚೆನ್ನಾಗಿ ಎತ್ತಿಕೊಳ್ಳಲು ಮತ್ತು ಆಟಿಕೆ ಟ್ರಕ್ ನಲ್ಲಿ ಇಷ್ಟೊಂದು ಆರಾಮಾಗಿ ಸವಾರಿ ಮಾಡಿದ್ದು ನೋಡೆಯೇ ಇಲ್ಲ" ಎಂದು ಮೂರನೆಯ ಬಳಕೆದಾರರು ಹೇಳಿದರು.
ತನ್ನ ಬೈಕಿಗೆ ಕಟ್ಟಿಕೊಂಡ ಆಟಿಕೆ ಟ್ರಕ್ ಮೇಲೆ ಕೂರಿಸಿಕೊಂಡ ಕೋಳಿಗೆ ಯಾವುದೇ ರೀತಿಯ ತೊಂದರೆಗಳಾಗುತ್ತಿಲ್ಲವಲ್ಲ ಎಂಬುದನ್ನು ಪದೇ ಪದೇ ಖಚಿತಪಡಿಸಿಕೊಳ್ಳುವ ರೀತಿ ಅತ್ಯಂತ ಸುಂದರವಾಗಿದೆ ಎಂದು ಇನ್ನೊಬ್ಬ ನೆಟ್ಟಿಗರು ಪ್ರತಿಕ್ರಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ