Viral Video: ಅಬ್ಬಾ ಡೈನೋಸಾರ್ ಕಂಡಿವೆ ಅಂತೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್

ಬ್ಯುಟೆಂಗೆಬೀಡೆನ್ ಎಂಬುವರು ತಮ್ಮ ಟ್ವೀಟರ್‍ನಲ್ಲಿ ಡೈನೋಸಾರ್ ಮರಿಗಳ ಗುಂಪೊಂದು ಸಮುದ್ರದ ತಟದಲ್ಲಿ ಓಡು ಹೋಗುತ್ತಿರುವ ದೃಶ್ಯ ಹಾಕಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನೀವು ಡೈನೋಸಾರ್ (Dinosaur) ಫಿಲ್ಮ್ ನೋಡಿದೀರಾ. ಈಗ ಅವು ಇದ್ರೆ ಹೇಗಪ್ಪಾ ಅಂತಾ ಯೋಚನೆ ಮಾಡಿದೀರಾ. ಮಾಡೀದ್ರೆ ಈಗ ಅದು ನಿಜವಾಗಬಹುದು. ಅರೆ ಇವರೆನಪ್ಪಾ ಹೀಗೆ ಹೇಳ್ತಾಯಿದಾರಲ್ಲಾ. ನಿಜವಾಗ್ಲು ಡೈನೋಸಾರ್ ಬಂದ್ವಾ ಅಂದ್ರಾ. ಹೌದು ಈಗ ಬೇಬಿ ಡೈನೋಸಾರ್‍ಗಳ (Baby Dinosaur) ಓಡುವ ಆ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಬ್ಯುಟೆಂಗೆಬೀಡೆನ್ (Buitengebieden) ಎಂಬುವರು ತಮ್ಮ ಟ್ವೀಟರ್‍ನಲ್ಲಿ (Twitter) ಡೈನೋಸಾರ್ ಮರಿಗಳ ಗುಂಪೊಂದು (Group) ಸಮುದ್ರದ ತಟದಲ್ಲಿ (Beach) ಓಡು ಹೋಗುತ್ತಿರುವ ದೃಶ್ಯ ಹಾಕಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗುತ್ತಿದೆ.

ಡೈನೋಸಾರ್ ಪ್ರಾಣಿಗೆ ಹೋಲುತ್ತದೆ ಈ ಪ್ರಾಣಿ
ಅರೆ ಇದೆನಪ್ಪ ಇಲ್ಲಿವರೆಗೆ ಡೈನೋಸಾರ್ ಅಂತ ಹೇಳುತ್ತಿದ್ದ ಇವರು ಈಗ ಡೈನೋಸಾರ್ ಪ್ರಾಣಿಗೆ ಹೋಲುವಂತೆ ಇದೆ ಅಂತಾರೆ. ಹೌದು ಬ್ಯುಟೆಂಗೆಬೀಡೆನ್ ಅವರು ಟ್ವೀಟರ್‍ನಲ್ಲಿ ಹಾಕಿರುವ ಆ ವಿಡಿಯೋದಲ್ಲಿರುವ ಪ್ರಾಣಿಗಳು ಮೊದಲಿಗೆ ಡೈನೋಸಾರ್ ಗಳಂತೆ ಕಾಣುತ್ತವೆ. ಉದ್ದನೇಯ ಕುತ್ತಿಗೆ ಹೊಂದಿರುವ ಡೈನೋಸಾರ್ ಜಾತೀಯ ಡೈನೋಸಾರ್ ಗಳಂತೆ ಕಾಣುತ್ತವೆ. ಆದ್ರೆ ಅಸಲಿಗೆ ಆ ಪ್ರಾಣಿ ಡೈನೋಸಾರ್ ಅಲ್ಲಾ.

ಬೆಚ್ಚಿ ಬೀಳಿಸಿದ ಈ 14 ಸೆಕೆಂಡ್ ವಿಡಿಯೋ
ಕೇವಲ್ 14 ಸೆಕೆಂಡ್ ಒಳಗೊಂಡ ಈ ದೃಶ್ಯ ಇಡೀ ಇಂಟರನೆಟ್ ಸಾಮರಾಜ್ಯವನ್ನೆ ಬೆಚ್ಚಿ ಬೀಳಿಸಿದೆ. ಇನ್ನು ಟ್ವೀಟರ್ ಬಳಕೆದಾರರು ಈ ದೃಷ್ಯ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಡೈನೋಸಾರ್ ಅಲ್ಲ ಅಂದ್ರು ಕೆಲವರು
ಇನ್ನು ಟ್ವೀಟರ್‍ನಲ್ಲಿ ಬ್ಯುಟೆಂಗೆಬೀಡೆನ್ ಹಾಕಿರುವ ಪೊಸ್ಟ್‍ಗೆ ಕೆಲವರು ಕಮೆಂಟ್ ಮಾಡಿ ಡೈನೋಸಾರ್ ಗಳು ಅಲ್ಲ ಎಂದು ತಿಳಿಸಿದ್ದಾರೆ. ಪ್ರಾಣಿಗಳು ಓಡುತ್ತಿರುವ ಜಾಗವನ್ನು ಗಮನಿಸಿ ಆ ಪ್ರದೇಶದಲ್ಲಿ ಡೈನೋಸಾರ್ ಹೋಲುವಂತ ಪ್ರಾಣಿಗಳು ಇವೆ ಎಂದು ಕಮೆಂಟ್ ಮಾಡಿದ್ದಾರೆ.

ಕೋಟಿಮುಂಡಿ ಎಂಬ ಪ್ರಾಣಿ
ಇಡೀ ಅಂತರ ಜಾಲವನ್ನೆ ಬೆಚ್ಚಿ ಬೀಳಿಸಿದ ಈ ಪ್ರಾಣಿಗಳ ಗುಂಪನ್ನು ಪ್ರೋಸಿಯೋನೆಡ್ ಕುಟುಂಬ ಇವು ಡೈನೋಸಾರ್ ಮರಿಗಳು ಅಲ್ಲಾ ಎಂದು ತಿಳಿಸಿದ್ದಾರೆ. ಕೋಟಿಮುಂಡಿ ಎಂಬ ಪ್ರಾಣಿಗಳು ಇವು ಎಂದು ಹೇಳಿ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: Dinosaur eggs: ಮಧ್ಯಪ್ರದೇಶದಲ್ಲಿ ಪತ್ತೆಯಾಗಿದೆ ಅಪರೂಪದ ಡೈನೋಸಾರ್ ಮೊಟ್ಟೆಗಳು; ಹೇಗಿವೆ ಗೊತ್ತಾ?

ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಈ ಸಸ್ತನಿಗಳು
ಹೌದು ಕೋಟಿಮುಂಡಿ ಎಂಬ ಸಸ್ತನಿಗಳು ದಕ್ಷಿಣ ಅಮೇರಿಕಾ , ಮಧ್ಯ ಅಮೇರಿಕಾ ಮೆಕ್ಸಿಕೋ ಮತ್ತು ನೈರುತ್ಯ ಯುನೈಟೆಡ್ ಸ್ಟೇಟ್ಸ್ ಗಳಲ್ಲಿ ಇವು ಕಂಡುಬರುತ್ತವೆ. ಬ್ರೇಜಿಲ್ ನ ಟುಪಿನ್ ಎಂಬ ಭಾಷೆಯಿಂದ ಬಂದ ಕೋಟಿಮುಂಡಿ ಹೆಸರಿನ ಈ ಪದದ ಅರ್ಥ ಒಂಟಿ ಕೋಟಿ ಎಂಬ ಅರ್ಥ ನೀಡುತ್ತದೆ ಎಂದು ಟ್ವೀಟರ್ ನ ಡಿಸ್ಕ್ರಿಪ್ಷನ್‍ನಲ್ಲಿ ಪ್ರೋಸಿಯೋನೆಡ್ ಕುಟುಂಬ ತಿಳಿಸಿದೆ.

9.8 ಮಿಲಿಯನ್ ಜನ ನೋಡಿದ ಈ ದೃಶ್ಯ
ಇನ್ನೇನು ಅಂತರಜಾಲ ಬೆಚ್ಚಿಬೀಳಿಸಿರುವ ಈ ದೃಶ್ಯವನ್ನು 9.8 ಮಿಲಿಯನ್‍ಕ್ಕೂ ಹೆಚ್ಚು ವಿವರ್ಸ್‍ನ್ನು ಈ ಪೋಸ್ಟ್ ಪಡೆದುಕೊಂಡಿದೆ. ಅಷ್ಟೆ ಅಲ್ಲದೆ 47 ಸಾವಿರ ಜನ ಲೈಕ್ ಮಾಡಿದ್ದಾರೆ.

ಜರಾಸಿಕ್ ಪಾರ್ಕ್ ಮೂವಿ ನೆನಪಿಸಿದ ಈ ದೃಶ್ಯ
ಹೌದು ಪ್ರೋಸಿಯೋನೆಡ್ ಕುಟುಂಬ ಹೇಳಿದ ಹಾಗೆ ಈ ಪ್ರಾಣಿ ಡೈನೋಸಾರ್ ಅಲ್ಲಾ. ಆದ್ರೆ ನನ್ನ 9 ಷರ್ವದ ಮಗ ಈ ವಿಡಿಯೋ ಗಂಭೀರವಾಗಿ ನೋಡುವುದನ್ನು ಗಮನಿಸಿದ್ರೆ ಜರಾಸಿಕ್ ಪಾರ್ಕ ಮೂವಿ ನೋಡುತ್ತಿದ್ದಾನೆ ಅನುಸಿತು ಎಂದು ಅವರು ಟ್ವೀಟರ್‍ನಲ್ಲಿ ಬರೆದಿದ್ದಾರೆ.

ಇದನ್ನು ಓದಿ: Cockroaches: ಮನೆಯೊಳಗೆ 100 ಜಿರಳೆ ಇಟ್ಕೊಂಡ್ರೆ ಮನೆ ಮಾಲೀಕರಿಗೆ ಬಂಪರ್!

ದೊಡ್ಡ ಬೆಕ್ಕಿನ ದೇಹದ ಆಕಾರ ಹೊಂದಿವೆ ಈ ಪ್ರಾಣಿಗಳು
ನಿಜವಾಗಲು ಡೈನೋಸಾರ್ ಆಕಾರ ಹೊಂದಿರುವಂತೆ ಕಾಣುವ ಈ ಪ್ರಾಣಿಗಳು ಮನೆಯಲ್ಲಿ ಸಾಕಿದ ಬೆಕ್ಕಿನ ಹಾಗೆ ದೇಹವನ್ನು ಹೊಂದಿವೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಕೋಟಿಸ್ ಗಾತ್ರವು 17 ರಿಂದ 27 ಇಂಚು ಉದ್ದ ಇರುತ್ತದೆ. ಮತ್ತು ಎತ್ತರ 12 ಇಂಚು ಹಾಗೂ 2 ರಿಂದ 8 ಕೆಜಿವರೆಗೆ ವೇಟ್ ಇರುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬ್ಯುಟೆಂಗೆಬೀಡೆನ್ ಟ್ವೀಟರ್‍ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಮಾಡಿದ್ದು, ಹಿಂದೆ ಕಂಡ ಜರಾಸಿಕ್ ಪಾರ್ಕ್ ಮೂವಿ ನೆನಪಿಸಿದ್ದು ಮಾತ್ರ ಸತ್ಯ.
Published by:Ashwini Prabhu
First published: