Manike Mage Hithe Song: ವೈರಲ್​ ಆಗುತ್ತಿದೆ ಈ ಗಗನಸಖಿ ಮಾಡಿದ ಡ್ಯಾನ್ಸ್ ವಿಡಿಯೋ..!

ಮನಿಕೆ ಮಗೆ ಹಿತೆ ಎಷ್ಟರ ಮಟ್ಟಿಗೆ ಹಿಟ್​ ಆಗಿದೆ ಎಂದರೆ, ಇಂಡಿಗೋ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುವ ಯುವತಿಯೊಬ್ಬರು ಖಾಲಿಯಿರುವ ವಿಮಾನದಲ್ಲಿ ‘ಮನಿಕೆ ಮಗೆ ಹಿತೆ’ ಹಾಡಿಗೆ ಡ್ಯಾನ್ಸ್ ಮಾಡಿದ್ದು, ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಗಗನಸಖಿ ವಿಡಿಯೋ ವೈರಲ್​

ಗಗನಸಖಿ ವಿಡಿಯೋ ವೈರಲ್​

  • Share this:
ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತಹ ಮತ್ತು ಬಹುತೇಕ ಯುವಕರನ್ನು ಆಕರ್ಷಿಸಿದ ಹಾಡು ಎಂದರೆ ಅದು ‘ಮನಿಕೆ ಮಗೆ ಹಿತೆ’ (Manike Mage Hithe) ಎಂದರೆ ಅತಿಶಯೋಕ್ತಿಯಲ್ಲ.ಈಗ ಎಲ್ಲ ವೇದಿಕೆಗಳಲ್ಲೂ ಸಹ ಈ ಹಾಡು ಸುಳಿದಾಡುತ್ತಿರುವುದು ಮತ್ತು ಅನೇಕರು ಇದನ್ನು ಕೇಳಿ ಮೆಚ್ಚಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀಲಂಕಾ ಮೂಲದ ಗಾಯಕಿ ಯೋಹಾನಿ ಡಿಸಿಲ್ವಾರನ್ನು (yohani de silva) ಪ್ರಶಂಸೆ ಮಾಡುತ್ತಿರುವುದು ಸಹ ನಾವು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.ಈ ಹಾಡು ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿದ್ದು, ಇನ್​ಸ್ಟಾಗ್ರಾಂನಲ್ಲಿ ವಿಶೇಷವಾಗಿ ಈ ಹಾಡು ಹೆಚ್ಚು ಜನಪ್ರಿಯವಾಗಿದೆ. ಈ ಹಾಡು ಕೇಳಿದವರು ಒಂದೆರಡು ಹೆಜ್ಜೆ ಹಾಕಿ ಡ್ಯಾನ್ಸ್ ಮಾಡುವುದಂತೂ ಖಂಡಿತ. ಅದರಲ್ಲೂ ಫೇಸ್​ಬುಕ್​, ಇನ್​ಸ್ಟಾ ರೀಲ್​ಗಳಲ್ಲಿ ಹೆಚ್ಚಾಗಿ ಈ ಹಾಡೇ ಕೇಳಲು ಹಾಗೂ ನೋಡಲು ಸಿಗುತ್ತಿದೆ.

ಮನಿಕೆ ಮಗೆ ಹಿತೆ  ಹಾಡು ಎಷ್ಟರ ಮಟ್ಟಿಗೆ ಹಿಟ್​ ಆಗಿದೆ ಎಂದರೆ, ಇಂಡಿಗೋ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುವ ಯುವತಿಯೊಬ್ಬರು ಖಾಲಿಯಿರುವ ವಿಮಾನದಲ್ಲಿ ‘ಮನಿಕೆ ಮಗೆ ಹಿತೆ’ ಹಾಡಿಗೆ ಡ್ಯಾನ್ಸ್ ಮಾಡಿದ್ದು, ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಈಗಾಗಲೇ ಸುಮಾರು 13 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ.




ಗಗನಸಖಿ ತನ್ನ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು, ವಿಮಾನ ನಿಲ್ಲಿಸಿದ್ದ ಸಮಯದಲ್ಲಿ ಖಾಲಿಯಿರುವ ವಿಮಾನದಲ್ಲಿ ‘ಮನಿಕೆ ಮಗೆ ಹಿತೆ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಸಹದ್ಯೋಗಿಯೊಬ್ಬರು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ: Thalavii in OTT: ಒಂದೇ ದಿನ ಒಟಿಟಿ ಜತೆಗೆ ಚಿತ್ರಮಂದಿರಗಳಲ್ಲೂ ರಿಲೀಸ್​ ಆಗಲಿದೆ ತಲೈವಿ ಸಿನಿಮಾ

ವಿಡಿಯೋದಲ್ಲಿ ಆಯಾತ್ ಎಂಬ ಗಗನಸಖಿ ಡ್ಯಾನ್ಸ್ ನೋಡಿ ತುಂಬಾ ನೆಟ್ಟಿಗರು ಇಷ್ಟಪಟ್ಟಿದ್ದಾರೆ. "ತುಂಬಾ ಸಮಯದವರೆಗೆ ವಿಮಾನ ನಿಲ್ದಾಣದಲ್ಲಿ ವಿಮಾನ ನಿಂತಿದೆ, ಸಿಬ್ಬಂದಿಗಳು ಸ್ವಲ್ಪ ಡ್ಯಾನ್ಸ್ ಸಹ ಮಾಡಬಾರದೇ. ಈ ಸುಂದರವಾದ ಡ್ಯಾನ್ಸ್ ಹೆಜ್ಜೆಗಳಿಗಾಗಿ ಧನ್ಯವಾದಗಳು" ಎಂದು ಆಯಾತ್ ತನ್ನ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಗಗನಸಖಿಯ ಡ್ಯಾನ್ಸ್ ಅನ್ನು ಇಷ್ಟಪಟ್ಟಿದ್ದು, ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. “ಈ ಹಾಡಿಗೆ ನೀವು ಹಾಕಿದಂತಹ ಹೆಜ್ಜೆ ತುಂಬಾನೇ ಹೊಂದುತ್ತದೆ” ಎಂದು ಒಬ್ಬರು ಬರೆದರೆ, ಇನ್ನೊಬ್ಬರು “ನೀವು ಈ ಹಾಡಿಗೆ ಮಾಡಿದ ಡ್ಯಾನ್ಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.








View this post on Instagram






A post shared by Yohani (@yohanimusic)






ಈ ಹಾಡಿನಲ್ಲಿ ವಿಭಿನ್ನ ಭಾಷೆಯ ಸಾಹಿತ್ಯವನ್ನು ಹೊಂದಿದ್ದರೂ ಇಂಪಾದ ಸಂಗೀತವು ಜನರ ಮನಸ್ಸನ್ನು ಮುಟ್ಟುವುದಕ್ಕೆ ಯಾವುದೇ ರೀತಿಯ ಅಡತಡೆಗಳು ಇರುವುದಿಲ್ಲ ಎನ್ನುವುದಕ್ಕೆ ಈ ಹಾಡು ಇಷ್ಟೊಂದು ಜನಪ್ರಿಯತೆಯನ್ನು ಗಳಿಸಿದ್ದೇ ಸಾಕ್ಷಿ ಅಂತ ಹೇಳಬಹುದು.

ಯೊಹಾನಿ ಹಾಡಿರುವ ಹಾಡು ಮೇ ತಿಂಗಳಿನಲ್ಲಿ ಬಿಡುಗಡೆಯಾಗಿದ್ದು, 3 ತಿಂಗಳೊಳಗೆ ಯೂಟ್ಯೂಬ್‌ನಲ್ಲಿ 91 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಸೂಪರ್ ಹಿಟ್ ಆಗಿದೆ. ಯೊಹಾನಿ ಡಿ ಸಿಲ್ವಾ ಎಂಬ ಶ್ರೀಲಂಕಾ ಮೂಲದ ಗಾಯಕಿ ಹಾಡಿರುವ ಮನಿಕೆ ಮಗೆ ಹಿತೆ ಹಾಡು ಕಳೆದ 8 ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಯೋಹಾನಿ ಹಾಡಿರುವ ಹಾಡು ವೈರಲ್​ ಆಗುತ್ತಿದ್ದಂತೆಯೇ ಈ ಹಾಡಿನ ಇಂಗ್ಲಿಷ್​, ಹಿಂದಿ, ತಮಿಳು ವರ್ಷನ್​ಗಳು ಸಹ ರಿಲೀಸ್ ಆದವು. ಅದರಲ್ಲೂ ಭಾರಿ ಬೇಡಿಕೆ ಮೇರೆಗೆ ಯೋಹಾನಿ ಅವರಿಂದಲೇ ತಮಿಳು ವರ್ಷನ್​ ಹಾಡನ್ನೂ ಹಾಡಿಸಲಾಯಿತು.

ಇದನ್ನೂ ಓದಿ: ತಮಿಳು ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ಚಿತ್ರ ಶೇರ್​ ಮಾಡಿದ Ashika Ranganath..!

ಮನಿಕೆ ಮಗೆ ಹಿತೆ ಒರಿಜಿನಲ್​ ಹಾಡನ್ನು ಹಾಡಿರುವ, ಗಾಯಕ ಶ್ರೀಲಂಕಾದ ಸತೀಷನ್​, ಈ ಹಾಡಿಗೆ ಸಾಹಿತ್ಯ ಹಾಗೂ ಸಂಗೀತ ನೀಡಿರುವುದು ದುಲ್ಹನ್ ಎಆರ್​ಎಕ್ಸ್​ ಹಾಗೂ ಹಾಡಿನ ನಿರ್ದೇಶನ ಮಾಡಿರುವುದು ಹಸಿತ್ ಆಯರ್ನ್​. ಈ ಹಾಡನ್ನು 2020ರ ಜುಲೈ 31ರಂದು ಅಪ್​ಲೋಡ್​ ಮಾಡಲಾಗಿದೆ. ಆದರೆ, ಯೋಹಾನಿ ಈ ಹಾಡನ್ನು ಹಾಡಿನ ನಂತರ ವೈರಲ್​ ಆಯಿತು.
Published by:Anitha E
First published: