Relationship: ಅಜ್ಜನನ್ನು ಪ್ರೀತಿಯಿಂದ ತಬ್ಬಿಕೊಂಡ ಪುಟ್ಟ ಮೊಮ್ಮಗಳು! ವೀಡಿಯೊ ವೈರಲ್

ತನ್ನ ಮೆಚ್ಚಿನ ಕಾರ್ಯಕ್ರಮಕ್ಕೆ ಬಂದಿರುವ ಆ ಪುಟ್ಟ ಹುಡುಗಿಗೆ ತುಂಬ ಸಂತಸವಾಗಿದೆ ಎಂದು ತೋರುತ್ತದೆ, ತಕ್ಷಣ ಆ ಹುಡುಗಿ ಕಾರ್ಯಕ್ರಮ ನೋಡ ನೋಡುತ್ತಿದ್ದಂತೆ ಒಂದು ಬಾರಿ ಹಿಂದಕ್ಕೆ ಹೊರಳಿ ತನ್ನ ಅಜ್ಜನನ್ನು ಜೋರಾಗಿ ತಬ್ಬಿಕೊಂಡಿದ್ದಾಳೆ.

ಅಜ್ಜನ ಮಡಿಲಲ್ಲಿ ಮೊಮ್ಮಗಳು

ಅಜ್ಜನ ಮಡಿಲಲ್ಲಿ ಮೊಮ್ಮಗಳು

  • Share this:
ಸಾಮಾನ್ಯವಾಗಿ ಅಜ್ಜ-ಅಜ್ಜಿಯರಿಗೆ ಮೊಮ್ಮಕ್ಕಳೆಂದರೆ (Grand children) ಬಡ್ಡಿ ಇದ್ದಂತೆ ಎಂದು ಹೇಳುವುದು ರೂಢಿಯಲ್ಲಿದೆ, ಕಾರಣ, ಹೇಗೆ ಲೇವಾ-ದೇವಿದಾರರಿಗೆ ಅಸಲಿಗಿಂತ ಬಡ್ಡಿಯ ಮೇಲೆ ವ್ಯಾಮೋಹ ಜಾಸ್ತಿಯಾಗಿರುತ್ತದೆ ಎಂದು ಭಾವಿಸಲಾಗುತ್ತದೆಯೋ ಅದೇ ರೀತಿ ಮೊಮ್ಮಕ್ಕಳ ಮೇಲೆ ಅಜ್ಜ-ಅಜ್ಜಿಯರಿಗೆ ಸ್ವಲ್ಪ ವಾಮೋಹ ಹೆಚ್ಚೆಂದೇ ಹೇಳಬಹುದು. ಹಾಗಾಗಿಯೇ ಅಜ್ಜ-ಮೊಮ್ಮಗ ಅಥವಾ ಮೊಮ್ಮಗಳ ಬಾಂಧವ್ಯ (Relationship) ಸಾಕಷ್ಟು ಪ್ರೀತಿಯಿಂದ (Love) ಕೂಡಿದ್ದು ಸುಮಧುರವಾಗಿರುತ್ತದೆ. ಆಗಾಗ ಈ ಬಾಂಧವ್ಯದ ಗಟ್ಟಿತನ ತೋರಿಸುವ ಉದಾಹರಣೆಯಂತಹ ಘಟನೆಗಳೂ ಸಹ ನಡೆಯುತ್ತಿರುತ್ತವೆ.

ಸದ್ಯ, ಅದೇ ರೀತಿಯ ಒಂದು ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ಹೇಳಬಹುದು. ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಂದು ತನ್ನ ಅಜ್ಜನನ್ನು ತಬ್ಬಿಕೊಂಡ ಪರಿ ಯಾವ ರೀತಿ ಆಗಿದೆ ಎಂದರೆ ಅದನ್ನು ನೋಡುವ ಪ್ರತಿ ಹೃದಯವಂತ ಮನುಷ್ಯನಲ್ಲಿ ಆನಂದದ ಭಾಷ್ಪಗಳು ಸುರಿಯದೆ ಇರಲಾರದು.

ನೀವು ತುಂಬಾ ಸಂತಸದಾಯಕವಾದ, ಕ್ಯೂಟ್ ಆಗಿರುವ ವಿಡಿಯೋಗಳ ದೊಡ್ಡಅಭಿಮಾನಿಯಾಗಿದ್ದರೆ ಬಹುಶಃ ಈ ವಿಡಿಯೋ ನಿಮಗಾಗಿಯೇ ಎಂದು ಖಚಿತವಾಗಿ ಹೇಳುವುದರಲ್ಲಿ ಯಾವ ಅನುಮಾನವೂ ಇಲ್ಲ.

ಅಜ್ಜನ ಜೊತೆ ಶೋ ಟೈಂ

ಈ ವಿಡಿಯೋದಲ್ಲಿ ಅಸಲಿಗೆ ಪುಟ್ಟ ಹುಡುಗಿಯೊಂದು ತನ್ನ ಅಜ್ಜನ ತೊಡೆಗಳ ಮೇಲೆ ಕುಳಿತು ಕಾರ್ಯಕ್ರಮವೊಂದನ್ನು ಸಖತ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಹೌದು, ಈ ಪುಟ್ಟ ಬಾಲೆಗೆ ಡಿಸ್ನಿಯ ಪಾತ್ರಗಳು ಹಾಗೂ ಡಿಸ್ನಿ ಕಾರ್ಯಕ್ರಮ ಎಂದರೆ ಬಲು ಅಚ್ಚುಮೆಚ್ಚು ಅಂತ ಕಾಣಿಸುತ್ತದೆ. ಹಾಗಾಗಿ ಆಕೆಯ ಅಜ್ಜ ಅವಳನ್ನು ಸಂತಸಪಡಿಸುವ ದೃಷ್ಟಿಯಿಂದ ಡಿಸ್ನಿ ಆನ್ ಐಸ್ ಎಂಬ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ.

ಅಜ್ಜನಿಗೆ ಅಪ್ಪುಗೆಯ ಥ್ಯಾಂಕ್ಸ್

ತನ್ನ ಮೆಚ್ಚಿನ ಕಾರ್ಯಕ್ರಮಕ್ಕೆ ಬಂದಿರುವ ಆ ಪುಟ್ಟ ಹುಡುಗಿಗೆ ತುಂಬ ಸಂತಸವಾಗಿದೆ ಎಂದು ತೋರುತ್ತದೆ, ತಕ್ಷಣ ಆ ಹುಡುಗಿ ಕಾರ್ಯಕ್ರಮ ನೋಡ ನೋಡುತ್ತಿದ್ದಂತೆ ಒಂದು ಬಾರಿ ಹಿಂದಕ್ಕೆ ಹೊರಳಿ ತನ್ನ ಅಜ್ಜನನ್ನು ಜೋರಾಗಿ ತಬ್ಬಿಕೊಂಡಿದ್ದಾಳೆ.

ತನ್ನ ಅಜ್ಜ ತನ್ನನ್ನು ಇಂತಹ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿರುವುದಕ್ಕೆ ಪ್ರತಿಯಾಗಿ ಅವರಿಗೆ ಧನ್ಯವಾದಗಳನ್ನು ಹೇಳುವ ದೃಷ್ಟಿಯಿಂದ ಆ ಪುಟ್ಟ ಹುಡುಗಿ ತನ್ನ ಅಜ್ಜನನ್ನು ಬಲು ಪ್ರೀತಿಯಿಂದ ತಬ್ಬಿಕೊಂಡು ಮತ್ತೆ ಕಾರ್ಯಕ್ರಮ ನೋಡುವುದನ್ನು ಮುಂದುವರೆಸಿದೆ.

ಇದನ್ನೂ ಓದಿ: Gray-headed Swamphen: ಇಡೀ ಪ್ರಪಂಚದಲ್ಲಿ ಈಗ ಒಂದೇ 'ಗ್ರೇ ಹೆಡೆಡ್ ಸ್ವಾಂಪ್‍ಹೆನ್' ಇರೋದಂತೆ, ಅದು ಒರಿಸ್ಸಾದಲ್ಲಿ!

ಕ್ಯೂಟ್ ವಿಡಿಯೋ

ಈ ವೀಡಿಯೋವನ್ನು ಆ ಪುಟ್ಟ ಹುಡುಗಿಯ ತಾಯಿಯಾದ ಮಾರಿಯಾ ಗಾಲಾಟಿ ಹಿಲ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಆ ಬಗ್ಗೆ "ಡಿಸ್ನಿ ಆನ್ ಐಸ್ ಕಾರ್ಯಕ್ರಮಕ್ಕೆ ತನ್ನ ಅಜ್ಜ ತನ್ನನ್ನು ಕರೆದುಕೊಂಡು ಹೋಗಿರುವುದಕ್ಕೆ ಧನ್ಯವಾದಗಳನ್ನು ಆಕೆ ಹೇಳುತ್ತಿದ್ದಾಳೆ" ಎಂದು ಬರೆದುಕೊಂಡಿದ್ದಾರೆ.


ವೈರಲ್ ಆಗ್ತಿದೆ ವಿಡಿಯೋ

ಈ ಪೋಸ್ಟ್ ಸದ್ಯ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ಅಷ್ಟೆ ಅಲದೆ, ಆ ಹುಡುಗಿಯ ಮುಗ್ಧತೆಯನ್ನು ಬಳಕೆದಾರರು ಮನಸ್ಸು ಬಿಚ್ಚಿ ಕೊಂಡಾಡುತ್ತಿದ್ದಾರೆ. ಕೆಲವರು ಇದನ್ನು ಅತಿ ಕ್ಯೂಟ್ ಆಗಿದೆ ಎಂದರೆ ಇನ್ನೂ ಕೆಲವರು ಇದು ಅದ್ಭುತವಾಗಿದೆ ಎಂದೆಲ್ಲ ಕೊಂಡಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋದಲ್ಲಿ ಆ ಪುಟ್ಟ ಬಾಲೆಯ ನಿಸ್ವಾರ್ಥದ ಪ್ರೀತಿಯ ಅಪ್ಪುಗೆಯು ಎಷ್ಟೊಂದು ಸುಮಧುರವಾಗಿರುತ್ತದೆ ಎಂಬುದನ್ನು ಸಾರಿ ಸಾರಿ ಹೇಳಿದಂತಿದೆ. ಸಾಕಷ್ಟು ಜನರು ಇದು ಬಲು ಅಮೂಲ್ಯವಾದ ಘಳಿಗೆ, ಮರೆಯಲಾಗದ ಘಟನೆ ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Baby Doll: ಈ ಹುಡುಗಿ 'ಬೇಬಿ ಡಾಲ್' ಆಗಬೇಕು ಅಂತ ಏನೆಲ್ಲಾ ಮಾಡಿದಳು ನೋಡಿ, ಈಗ ಮನೆಗೆ ಸೇರಿಸುತ್ತಿಲ್ಲ ಕುಟುಂಬಸ್ಥರು!

ಸಾಮಾನ್ಯವಾಗಿ ಪುಟ್ಟ ಮಕ್ಕಳ ಕ್ಯೂಟಾದ ಸಾಕಷ್ಟು ವಿಡಿಯೋಗಳು ಇಂಟರ್ನೆಟ್ ನಲ್ಲಿ ಬಂದಾಗ ಜನರ ಮಧ್ಯೆ ಅತಿ ಹೆಚ್ಚು ಪ್ರೀತಿಗಳಿಸುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿದ್ದು ಅವುಗಳ ಪಟ್ಟಿಯಲ್ಲಿ ಈ ವಿಡಿಯೋ ಮತ್ತೊಂದು ಸೇರ್ಪಡೆಯಾಗಿದೆ ಅಂತ ಹೇಳಬಹುದು. ಇಲ್ಲಿಯವರೆಗೂ 30,000 ಕ್ಕೂ ಅಧಿಕ ವೀಕ್ಷಣೆಗಳು ಈ ವಿಡಿಯೋಗೆ ದೊರೆತಿದ್ದು ಈ ಸಂಖ್ಯೆ ಏರುತ್ತಲೇ ಇದೆ ಎನ್ನಬಹುದು.

ಏನಿದು ಡಿಸ್ನಿ ಆನ್ ಐಸ್

ವಾಲ್ಟ್ ಡಿಸ್ನಿ ಎಂಬುದು ಬಹುಶಃ ಎಲ್ಲರಿಗೂ ಗೊತ್ತೆ ಇದೆ. ವಾಲ್ಟ್ ಡಿಸ್ನಿಯ ಹಲವಾರು ಪಾತ್ರಗಳು ಸಾಕಷ್ಟು ಜನಪ್ರೀಯವಾಗಿದ್ದು ಅದರಲ್ಲೂ ವಿಶೇಷವಾಗಿ ಮಕ್ಕಳ ಮನದಲ್ಲಿ ವಿಶಿಷ್ಟ ಸ್ಥಾನವನ್ನೇ ಪಡೆದಿವೆ. ಈ ಪಾತ್ರಧಾರಿಗಳ ವೇಷ ತೊಟ್ಟು ಮಂಜುಗಡ್ಡೆಯ ಮೈದಾನದಲ್ಲಿ ವಿವಿಧ ರೀತಿಯ ಸ್ಕೇಟಿಂಗ್ ಪ್ರದರ್ಶನ ತೋರಿಸುವಂತಹ ಕಾರ್ಯಕ್ರಮವೇ ಡಿಸ್ನಿ ಆನ್ ಐಸ್ ಎಂದು ಕರೆಯಲಾಗುತ್ತದೆ. ಈ ಕಾರ್ಯಕ್ರಮವನ್ನು ಮಕ್ಕಳನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡು ರೂಪಿಸಲಾಗಿದ್ದು ಸಾಕಷ್ಟು ಹೆಸರುವಾಸಿಯಾಗಿದೆ.
Published by:Divya D
First published: