VIDEO: ಬಾಲಕಿಯ ಕೆಳಭಾಗವನ್ನು ಮುಟ್ಟಿದ ಬಾಲಕನನ್ನು ನಡುರಸ್ತೆಯಲ್ಲೇ ನಗ್ನಗೊಳಿಸಿದ ತಾಯಿ: ಇದೆಂಥಾ ಶಿಕ್ಷೆ?

ಮಗನ ವರ್ತನೆಯಿಂದ ಕುಪಿತಗೊಂಡಿದ್ದ ತಾಯಿ, ಜನನಿಬಿಡ ರಸ್ತೆಯಲ್ಲೇ ಬಾಲಕನನ್ನು ನಗ್ನನಾಗಿ ನಿಲ್ಲಿಸಿದರು.

zahir | news18
Updated:May 18, 2019, 7:39 PM IST
VIDEO: ಬಾಲಕಿಯ ಕೆಳಭಾಗವನ್ನು ಮುಟ್ಟಿದ ಬಾಲಕನನ್ನು ನಡುರಸ್ತೆಯಲ್ಲೇ ನಗ್ನಗೊಳಿಸಿದ ತಾಯಿ: ಇದೆಂಥಾ ಶಿಕ್ಷೆ?
ಶಿಕ್ಷೆ
  • News18
  • Last Updated: May 18, 2019, 7:39 PM IST
  • Share this:
ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ತಾಯಿಯಿಂದ ಕಲಿಯುವ ಶಿಸ್ತು ಮಕ್ಕಳನ್ನು ಮುಂದೆ ಉತ್ತಮ ಪ್ರಜೆಗಳನ್ನಾಗಿಸುತ್ತದೆ ಎಂದು ಹೇಳಲಾಗುತ್ತದೆ. ಎಳೆ ವಯಸ್ಸಿನಲ್ಲಿ ಕಲಿಯುವ ನೀತಿಪಾಠಗಳು ಜೀವನ ಪೂರ್ತಿ ಮಕ್ಕಳಿಗೆ ನೆರವಿಗೆ ಬರಲಿದೆ. ಹೀಗಾಗಿ ಮಕ್ಕಳನ್ನು ಎಳೆ ವಯಸ್ಸಿನಲ್ಲೇ ತಿದ್ದುವ ಜವಾಬ್ದಾರಿ ಹೆತ್ತಮ್ಮನ ಮೇಲಿರುತ್ತದೆ. ಆದರೆ ಈ ಘಟನೆಯನ್ನು ನೋಡಿದರೆ ಕರುಳ ಕುಡಿಯ ಜವಾಬ್ದಾರಿ ಎನ್ನಬೇಕೊ ಅಥವಾ ಮಗುವಿಗೆ ನೀಡಿದ ಕ್ರೂರ ಶಿಕ್ಷೆ ಎನ್ನಬೇಕೊ ನಿಮಗೆ ಬಿಟ್ಟಿದ್ದು.

ಏಕೆಂದರೆ ಕೆಲ ದಿನಗಳ ಹಿಂದೆ ಚೀನಾದಲ್ಲಿ ಏಳು ವರ್ಷದ ಬಾಲಕನಿಗೆ ತಾಯಿಯೊಬ್ಬರು ನಡು ರಸ್ತೆಯಲ್ಲೇ ಕಠಿಣ ಶಿಕ್ಷೆಯೊಂದನ್ನು ನೀಡಿದ್ದರು. ಗುಯಿಯಾಂಗ್​ನ 2ನೇ ತರಗತಿಯಲ್ಲಿ ಓದುತ್ತಿರುವ ಮಗನ ಶಾಲೆಯಿಂದ ತಾಯಿಗೆ ಕರೆಯೊಂದು ಬಂದಿತ್ತು. ಕರೆ ಮಾಡಿದ ಶಿಕ್ಷಕಿಯು ನಿಮ್ಮ ಮಗ ಸಹಪಾಠಿ ವಿದ್ಯಾರ್ಥಿನಿಯ ಕೆಳಭಾಗವನ್ನು ಮುಟ್ಟಿರುವುದಾಗಿ ದೂರಿದ್ದರು.

ಈ ವೇಳೆ ಶಾಲೆಗೆ ತೆರಳಿದ ಅಮ್ಮ ಶಿಕ್ಷಕಿಯೊಂದಿಗೆ ಘಟನೆ ಬಗ್ಗೆ ವಿಚಾರಿಸಿದ್ದರು. ಮಗ ಈಗ ಮಾಡಿರುವ ತಪ್ಪು ಹದಿಹರೆಯದಲ್ಲಿ ಮಾಡಿದ್ದರೆ, ಇದು ಲೈಂಗಿಕ ದೌರ್ಜನ್ಯ ಪ್ರಕರಣವಾಗಿರುತ್ತಿತ್ತು. ಹೀಗಾಗಿ ಮಗನಿಗೆ ಸ್ವಲ್ಪ ಬುದ್ಧಿವಾದ ಹೇಳುವಂತೆ ಟೀಚರ್ ತಿಳಿಸಿದ್ದರು.

ಮಗನ ವರ್ತನೆಯಿಂದ ಕುಪಿತಗೊಂಡಿದ್ದ ತಾಯಿ, ಜನನಿಬಿಡ ರಸ್ತೆಯಲ್ಲೇ ಬಾಲಕನನ್ನು ನಗ್ನನಾಗಿ ನಿಲ್ಲಿಸಿದರು. ಇದರಿಂದ ತಪ್ಪು ಮಾಡಿದರೆ ಆರೋಪಿಯನ್ನು ಸಮಾಜ ಹೇಗೆ ನೋಡುತ್ತದೆ ಎಂಬುದು ತಿಳಿಸುವ ಉದ್ದೇಶ ತಾಯಿದಾಗಿತ್ತು. ನಡುರಸ್ತೆಯಲ್ಲಿ ಸಂಪೂರ್ಣವಾಗಿ ನಗ್ನತೆಯಲ್ಲಿ ನಿಂತಿದ್ದ ಬಾಲಕನನ್ನು ದಾರಿ ಹೋಕರು ದಿಟ್ಟಿಸಿ ನೋಡುತ್ತಿದ್ದರು. ಈ ಶಿಕ್ಷೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾಯಿ ನೀಡಿದ ಶಿಕ್ಷೆಗೆ ಪರ ವಿರುದ್ಧ ವಾದಗಳು ಕೇಳಿ ಬಂದಿವೆ. ಕೆಲವರು ಮಹಿಳೆ ಮೇಲಿನ ಗೌರವ ಬಾಲ್ಯದಲ್ಲೇ ಮೂಡಲು ತಾಯಿ ಮಾಡಿರುವುದ ಸರಿ ಅಂದರೆ, ಇನ್ನು ಕೆಲವರು ಪುಟ್ಟ ಬಾಲಕನಿಗೆ ನೀಡಿದ ಶಿಕ್ಷೆಯು ತುಸು ಕ್ರೂರವಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.



ಈ ಘಟನೆಯ ಬಳಿಕ ಮಗ ಮಾಡಿರುವ ತಪ್ಪಿಗೆ ತಾಯಿಯು ಬಾಲಕಿಯೊಂದಿಗೆ ಹಾಗೂ ಆಕೆಯ ಪೋಷಕರ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಇಲ್ಲಿ ತಾಯಿ ತನ್ನ ಜವಾಬ್ದಾರಿ ಮೆರೆದರೋ ಅಥವಾ ಜವಾಬ್ದಾರಿ ಹೆಸರಲ್ಲಿ ಮಗುವಿಗೆ ಕ್ರೂರ ಶಿಕ್ಷೆ ನೀಡಿದರೋ ಎಂಬುದು ನಿರ್ಧರಿಸುವುದು ನಿಮಗೆ ಬಿಟ್ಟಿದ್ದು.ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?
First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading