ಪ್ರತಿಯೊಬ್ಬರ ಆಹಾರ (Food) ಅಭ್ಯಾಸಗಳು ಭಿನ್ನವಾಗಿರುತ್ತವೆ. ಇಬ್ಬರು ವ್ಯಕ್ತಿಗಳಿಗೆ ಒಂದೇ ರೀತಿಯ ತಿನಿಸು ಇಷ್ಟವಾಗಬೇಕೆಂದಿಲ್ಲ. ವ್ಯಕ್ತಿಗಳಿಗೆ ಊಟದ ಕುರಿತು ಅವರದ್ದೇ ಆದ ಸ್ವಂತ ಅಭಿರುಚಿಗಳು ಇರುತ್ತವೆ ಎಂಬುವುದು ಸತ್ಯವಾಗಿದ್ದರೂ, ತಮ್ಮಿಷ್ಟಕ್ಕೆ ತಕ್ಕಂತೆ ತನ್ನ ಸಂಗಾತಿ ಅಥವಾ ಕುಟುಂಬದವರು ಆಹಾರ ಸೇವಿಸಬೇಕು ಎಂಬ ಮೊಂಡು ಹಠವುಳ್ಳ ವ್ಯಕ್ತಿಗಳು ಕೂಡ ಇರುತ್ತಾರೆ. ಅಂತವರ ಆ ಮನೋಭಾವದಿಂದಾಗಿ ಊಟದ ಕುರಿತ ಜಗಳಗಳು ನಡೆಯುತ್ತಲೇ ಇರುತ್ತವೆ. ಅಂತದ್ದೇ ವ್ಯಕ್ತಿಯೊಬ್ಬನ ಕಥೆ ಇಲ್ಲಿದೆ.
ಸಸ್ಯಾಹಾರಿಯಾಗಿರುವ (Veg) ಆತ, ತನ್ನ ಪತ್ನಿ ಮಾಂಸಾಹಾರವನ್ನು (Non-Veg) ತ್ಯಜಿಸಲು ಸಿದ್ಧವಾಗಿಲ್ಲ ಎಂಬ ಸಂಗತಿ ಹಂಚಿಕೊಂಡಿದ್ದು, ಪತ್ನಿಗೆ , “ಕುರಿ ಮಾಂಸ ಅಥವಾ ನಾನು” ಎಂಬ ಆಯ್ಕೆಯ ಷರತ್ತನ್ನು ವಿಧಿಸಿರುವುದಾಗಿ ಆತ ತಿಳಿಸಿದ್ದಾನೆ.
ನೆಟ್ಟಿಗರು ಈ ಸಂಗತಿಯ ಕುರಿತು ಪರ- ವಿರೋಧ ವಾದಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ಸುದ್ದಿಯ ಸಾರಾಂಶ ಹೀಗಿದೆ : ತನ್ನ ಪತ್ನಿಗೆ ಕುರಿ ಮಾಂಸವೆಂದರೆ ಅಚ್ಚುಮೆಚ್ಚು , ಆದರೆ ತಾನು ಸಸ್ಯಾಹಾರಿ. ಮದುವೆಯಾದ ನಂತರ ಮಾಂಸಾಹಾರ ತ್ಯಜಿಸುತ್ತೇನೆ ಎಂದು ಆಕೆ ತನಗೆ ಮದುವೆಗೆ ಮುನ್ನವೇ ಭಾಷೆ ನೀಡಿದ್ದಳು.
ಅದರೆ ಈಗ ಮಾಂಸಾಹಾರ ತ್ಯಜಿಸುತ್ತಿಲ್ಲ ಎಂದು ಗೋಳು ತೋಡಿಕೊಂಡಿದ್ದಾನೆ. ಆಕೆ ಗುಟ್ಟಾಗಿ ಮಾಂಸಹಾರ ಸೇವನೆ ಮುಂದುವರಿಸಿರುವುದನ್ನು ಆ ವ್ಯಕ್ತಿ ಇತ್ತೀಚೆಗೆ ಕಂಡು ಹಿಡಿದನಂತೆ. ಆ ಬಗ್ಗೆ ಅವಳನ್ನು ಪ್ರಶ್ನಿಸಿದಾಗ, ತನಗೆ ಕುರಿ ಮಾಂಸ ಎಂದರೆ ಸಿಕ್ಕಾಪಟ್ಟೆ ಇಷ್ಟ ಮತ್ತು ನಾನು ಅದನ್ನು ಬಿಟ್ಟು ಬದುಕಿರಲಾರೆ ಎಂದು ಆಕೆ ಉತ್ತರಿಸಿದ್ದಾಳೆ. ತಾನು ಅವಳ ಈ ತಪ್ಪನ್ನು ಕ್ಷಮಿಸುವ ನಿರ್ಧಾರ ಮಾಡಿದ್ದೇನೆ.
ಆದರೆ ಪತ್ನಿಗೆ , “ಕುರಿ ಮಾಂಸ ಅಥವಾ ನಾನು” ಎಂಬ ಆಯ್ಕೆಯ ಷರತ್ತನ್ನು ವಿಧಿಸಿದ್ದೇನೆ ಎಂದು ಆತ ತಿಳಿಸಿದ್ದಾನೆ. ಹೆಂಡತಿಯ ಮುಂದೆ ಗಂಭೀರವಾಗಿ ಭಾರಿ ಧೈರ್ಯದಿಂದ ಅಂತಹ ಷರತ್ತನ್ನು ವಿಧಿಸಿದ್ದರೂ, ಆಕೆ ಎಲ್ಲಿಯಾದರೂ ತನ್ನ ಬದಲು ಕುರಿ ಮಾಂಸ ಆಯ್ಕೆ ಮಾಡಿಕೊಂಡರೆ ಏನು ಗತಿ ಎಂಬ ಅಳುಕು ಆತನಿಗೆ ಇದೆಯಂತೆ. ಆಕೆ ಹಾಗೇನಾದರು ಮಾಡಿದರೆ ತಾನು ಬಹಳ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬುವುದು ಆತನ ಅಂಬೋಣ.
ಇದನ್ನು ಓದಿ: World’s biggest lips: ತೊಂಡೆಹಣ್ಣಿನಂಥಾ ತುಟಿ ಅಂತೀರಲ್ವಾ.. ಆದ್ರೆ ಈಕೆಯ ತುಟಿಗೆ ನಿವೇನು ಹೇಳ್ತೀರಾ?
''ಆಹಾರ ನಮ್ಮನ್ನು ಬೇಷರತ್ತಾಗಿ ಪ್ರೀತಿಸುತ್ತದೆ, ಹಾಗಾಗಿ ಯಾವಾಗಲೂ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಪ್ರತಿಯಾಗಿ ಬೇಷರತ್ತಾದ ಪ್ರೀತಿಯನ್ನು ನೀಡಬೇಕು” ಎಂದು ಒಬ್ಬ ನೆಟ್ಟಿಗ ಈ ಸುದ್ದಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದರೆ, ಇನ್ನೊಬ್ಬರು, ಆತನ ಪತ್ನಿ ಏನಾದರೂ ಕುರಿ ಮಾಂಸ ಆಯ್ಕೆ ಮಾಡಿಕೊಂಡರೆ ಆಕೆಗೆ ಈ ಜಗತ್ತಿನಲ್ಲಿ ಪ್ರೀತಿಸುವವರು ಡಜನ್ ಗಟ್ಟಲೆ ಮಂದಿ ಸಿಗುತ್ತಾರೆ ಎಂದು ಊಹಿಸಿದ್ದಾರೆ. ಹೊಟ್ಟೆ ಮೆದುಳನ್ನು ಆಳುತ್ತದೆ. ಹಾಗಾಗಿ ಆಕೆ ಯಾವಾಗಲೂ ಊಟವನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಇದನ್ನು ಓದಿ: Androidಗಿಂತಲೂ ಕಡಿಮೆ ಬೆಲೆಗೆ ಸಿಗಲಿದೆ iPhone, ವಿಶ್ವದ ಅತ್ಯಂತ ಅಗ್ಗದ 5G ಐಫೋನ್ ಪರಿಚಯಿಸಲಿದೆ ಆ್ಯಪಲ್!
ಆಕೆ ಆತನಿಗೆ ಉಲ್ಟಾ ಹೊಡೆದು, “ಕುರಿ ಮಾಂಸ ತಿನ್ನು ಇಲ್ಲವಾದಲ್ಲಿ, ನಾನು ನಿನ್ನನ್ನು ಬಿಟ್ಟು ಬಿಡುತ್ತೇನೆ” ಎಂದು ಮರು ಷರತ್ತು ವಿಧಿಸಿದರೆ ಏನಾಗಬಹುದು ಎಂದು ಪ್ರಶ್ನಿಸಿ, ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ