Ice cream Pizza Video: ನಿಮಗೆ ಪಿಜ್ಜಾ ಗೊತ್ತು, ಐಸ್ ಕ್ರೀಮ್ ಗೊತ್ತು; ಆದ್ರೆ ಐಸ್‌ಕ್ರೀಮ್ ಪಿಜ್ಜಾ ಬಗ್ಗೆ ಗೊತ್ತಾ?

ಒರಿಯೋ ಬಿಸ್ಕತ್ತುಗಳಿಂದ ಶುರುವಾದ ಈ ರೀತಿಯ ಮಿಕ್ಸಿಂಗ್ ಅಡುಗೆಗಳ ವಿಡಿಯೋಗಳು 'ಮ್ಯಾಂಗೋ ಮ್ಯಾಗಿ' ಯವರೆಗೆ ಬಂದು ನಿಂತಿದೆ ನೋಡಿ. ಇವತ್ತಿನವರೆಗೆ ನೆಟ್ಟಿಗರು ಸಾಕಷ್ಟು ವಿಲಕ್ಷಣ ಆಹಾರ ಪ್ರಯೋಗಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದಾರೆ. ಈ ವಿಲಕ್ಷಣ ಆಹಾರ ಸಂಯೋಜನೆಯ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಅದು ಐಸ್‌‌ಕ್ರೀಮ್ ಪಿಜ್ಜಾ. 

ಐಸ್‌‌ಕ್ರೀಮ್ ಪಿಜ್ಜಾ

ಐಸ್‌‌ಕ್ರೀಮ್ ಪಿಜ್ಜಾ

  • Share this:
ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತಾವು ಹಾಕಿದ ವಿಡಿಯೋ ಸಹ ಬೇರೆಯವರ ವೀಡಿಯೋಗಳಂತೆ ವೈರಲ್ ಆಗಬೇಕು, ತುಂಬಾ ಜನರು ನೋಡಿ ಮೆಚ್ಚಿಕೊಳ್ಳಬೇಕು, ತುಂಬಾನೇ ಜನಪ್ರಿಯವಾಗಬೇಕು ಅಂತ ಜನರು ಈಗಂತೂ ಸಿಕ್ಕಿದ್ದೆಲ್ಲಾ ಟ್ರೈ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿಸುತ್ತಿದ್ದಾರೆ.  ಅದರಲ್ಲೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದಲೂ ಈ ರೀತಿಯ ಚಿತ್ರ ವಿಚಿತ್ರವಾದ ವಿಡಿಯೋಗಳನ್ನು (Video) ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಳ್ಳುವುದನ್ನು ಶುರು ಮಾಡಿದ್ದಾರೆ. ಅದರಲ್ಲೂ ಈ ಅಡುಗೆಗಳು (Cooking) ಮತ್ತು ಎರಡು ಮೂರು ಅಡುಗೆಗಳನ್ನು ಅಥವಾ ಆಹಾರ (Food) ಪದಾರ್ಥಗಳನ್ನು ಸೇರಿಸಿ ಮಿಕ್ಸ್ ಮಾಡಿ ಬೇರೆಯದ್ದೆ ವಿಚಿತ್ರವಾದ ತಿಂಡಿಯನ್ನು ಮಾಡುತ್ತಿರುವ ವಿಡಿಯೋಗಳನ್ನು ನೋಡಿ ಜನರಿಗೆ ಸಾಕಾಗಿದೆ. 

ವಿಲಕ್ಷಣ ಆಹಾರ ಸಂಯೋಜನೆಯ ಪಟ್ಟಿಗೆ ಹೊಸ ಸೇರ್ಪಡೆ
ಮೊದಲು 'ಒರಿಯೋ ಬಿಸ್ಕತ್ತುಗಳಿಂದ ಶುರುವಾದ ಈ ರೀತಿಯ ಮಿಕ್ಸಿಂಗ್ ಅಡುಗೆಗಳ ವಿಡಿಯೋಗಳು 'ಮ್ಯಾಂಗೋ ಮ್ಯಾಗಿ' ಯವರೆಗೆ ಬಂದು ನಿಂತಿದೆ ನೋಡಿ. ಇವತ್ತಿನವರೆಗೆ ನೆಟ್ಟಿಗರು ಸಾಕಷ್ಟು ವಿಲಕ್ಷಣ ಆಹಾರ ಪ್ರಯೋಗಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದಾರೆ. ವಿಲಕ್ಷಣ ಸಂಯೋಜನೆಗಳು ಹೆಚ್ಚಿನ ಸಂದರ್ಭಗಳಲ್ಲಿ ಅವರನ್ನು ಹೊರಗಿನಿಂದ ಗೊಂದಲಕ್ಕೀಡು ಮಾಡಿವೆ ಮತ್ತು ಈ ವಿಲಕ್ಷಣ ಆಹಾರ ಸಂಯೋಜನೆಯ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಅದು ಐಸ್‌‌ಕ್ರೀಮ್ ಪಿಜ್ಜಾ.

ಇದನ್ನೂ ಓದಿ: Photos: ಫ್ರೆಂಚ್ ಫ್ರೈಸ್ ಈ ದೇಶದ ರಾಷ್ಟ್ರೀಯ ಖಾದ್ಯ! ಹಾಗಿದ್ರೆ ಬಿರಿಯಾನಿ ಯಾವ ದೇಶದ್ದು ಗೊತ್ತಾ?

ಇಟಾಲಿಯನ್ ಆಹಾರಕ್ಕೆ ಐಸ್‌‌ಕ್ರೀಮ್ ಮತ್ತು ಚಾಕೊಲೇಟ್ ಸಾಸ್ ಹಾಕಿ ಟ್ವಿಸ್ಟ್ ನೀಡಲಾಯಿತು ಮತ್ತು ಇದು ನೆಟ್ಟಿಗರನ್ನು ಇನ್ನೂ ಸಿಟ್ಟಿಗೇಳುವಂತೆ ಮಾಡಿದೆ. ಉದ್ಯಮಿ ಹರ್ಷ್ ಗೋಯೆಂಕಾ ಅವರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಮತ್ತು ತೆರೆದ ಬಾಯಿ, ವಾಂತಿ ಮಾಡುವ ಮತ್ತು ಅಳುವ ಮುಖಗಳ ಎಮೋಜಿಗಳೊಂದಿಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ.

ಐಸ್‌‌ಕ್ರೀಮ್ ಪಿಜ್ಜಾ ಹೇಗೆ ತಯಾರಿಸಿದ್ದಾರೆ ನೋಡಿ 
ದುಂಡಗಿನ ಒಂದು ಗೋಧಿ ಆಧಾರಿತ ಹಿಟ್ಟಿನಿಂದ ಮಾಡಿದ ಪಿಜ್ಜಾ ಕ್ರಸ್ಟ್ ನಲ್ಲಿ ಮೊದಲು ಚಾಕೊಲೇಟ್ ಸಾಸ್ ಅನ್ನು ಹಚ್ಚುತ್ತಿರುವುದನ್ನು ನಾವು ವಿಡಿಯೋ ಆರಂಭದಲ್ಲಿ ನೋಡಬಹುದು. ಇದನ್ನು ವಿಲಕ್ಷಣವಾಗಿಸಲು, ಇದರ ಮೇಲೆ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಚೀಸ್ ಟಾಪಿಂಗ್ ಗಳನ್ನು ಸೇರಿಸಲಾಗುತ್ತದೆ. ಅದನ್ನು ಓವನ್ ಮೇಲೆ ಇಡುವ ಮೊದಲು, ವೆನಿಲ್ಲಾ ಐಸ್‌‌ಕ್ರೀಮ್ ಅನ್ನು ಸಹ ಅದರ ಮೇಲೆ ಸುತ್ತಲೂ ಸೇರಿಸಲಾಗುತ್ತದೆ ಮತ್ತು ಹಿನ್ನೆಲೆಯಲ್ಲಿರುವ ವ್ಯಕ್ತಿಯು ಜೋರಾಗಿ ‘ನೋ’ ಅಂತ ಹೇಳುವುದನ್ನು ಸಹ ನಾವು ಈ ವೀಡಿಯೋದಲ್ಲಿ ಕೇಳಬಹುದು.



ಬೇಕಿಂಗ್ ಮಾಡಿದ ನಂತರ, 'ಪಿಜ್ಜಾ' ಮೇಲೆ ಮತ್ತೆ ಸ್ಟ್ರಾಬೆರಿ ಐಸ್‌‌ಕ್ರೀಮ್ ಮತ್ತು ಚಾಕೊಲೇಟ್ ಸಾಸ್ ಅನ್ನು ಹಾಕಿ ಸೇರಿಸಿ ತಿನ್ನಲು ನೀಡಲಾಗುತ್ತದೆ. ಒಬ್ಬ ವ್ಯಕ್ತಿಯು ಈ ಐಸ್‌‌ಕ್ರೀಮ್ ಪಿಜ್ಜಾವನ್ನು ಟೇಸ್ಟ್ ಮಾಡುತ್ತಾನೆ. ಆಗ ನೋಡಬಹುದು ಆ ವ್ಯಕ್ತಿಯ ಮುಖದಲ್ಲಿ ಮೂಡುವ ಭಾವ ಹೇಗಿರುತ್ತದೆ ಅಂತ.

ವಿಡಿಯೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?
ಈ ಕ್ಲಿಪ್ ಅನ್ನು ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಬಳಕೆದಾರ ರೇಡಿಯೋಕಾರೋಹನ್ ಎರಡು ದಿನಗಳ ಹಿಂದೆ ಹಂಚಿಕೊಂಡಿದ್ದಾರೆ. ವಿಲಕ್ಷಣ ಆಹಾರ ಸಂಯೋಜನೆಯನ್ನು ಬಳಕೆದಾರರು ಒಪ್ಪಲಿಲ್ಲ ಮತ್ತು ಕಾಮೆಂಟ್ ಹಾಕುವ ಜಾಗದಲ್ಲಿ ಅನೇಕ ರೀತಿಯ ಮೀಮ್ ಗಳನ್ನು ಹಾಕಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

"ಜನರು ಸಾಮಾನ್ಯವಾಗಿ ಪಿಜ್ಜಾದ ಮೇಲೆ ಕೆಚಪ್ ಹಾಕುವುದನ್ನು ನೋಡಿದಾಗ ಆಘಾತಕ್ಕೆ ಒಳಗಾಗುವ ಇಟಾಲಿಯನ್ನರು ಇದನ್ನು ನೋಡಿದರೆ ಆಘಾತದಿಂದ ಸಾಯುತ್ತಾರೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಇದು ಹುಚ್ಚುತನ. ಇದರ ಬದಲು ನಾನು ಅನ್ನ ಸಾರು ತಿನ್ನುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Ganesh Laddu: ಗಣೇಶನ ಲಡ್ಡುಗೆ ಬರೋಬ್ಬರಿ 24 ಲಕ್ಷ 60 ಸಾವಿರ ರೂಪಾಯಿ! ಇದನ್ನು ಖರೀದಿಸಿದ್ರೆ ಅದೃಷ್ಟವಂತೆ

ಈ ವರ್ಷದ ಜನವರಿಯಲ್ಲಿ, ಮೊಮೊ ಐಸ್‌‌ಕ್ರೀಮ್ ರೋಲ್ಸ್ ಬಗ್ಗೆ ನೆಟ್ಟಿಗರು ಚಕಿತರಾಗಿದ್ದರು. ವೈರಲ್ ವೀಡಿಯೋದಲ್ಲಿ, ಬೀದಿ ವ್ಯಾಪಾರಿಯೊಬ್ಬರು ಹಬೆಯಲ್ಲಿ ಬೇಯಿಸಿದ ಮೂರು ಮೊಮೊಗಳನ್ನು ಒಡೆದು ಒಟ್ಟಿಗೆ ಬೆರೆಸುವುದನ್ನು ನೋಡಬಹುದು. ಹಾಲು ಆಧಾರಿತ ದ್ರವವನ್ನು ಪುಡಿಮಾಡಿದ ಮೊಮೊಗಳ ಮೇಲೆ ಸುರಿಯಲಾಗುತ್ತದೆ, ನಂತರ ಅದನ್ನು ಐಸ್ ಪ್ಯಾನ್ ಗೆ ಹಾಕಲಾಗುತ್ತದೆ. ವೆನಿಲ್ಲಾ ಐಸ್‌‌ಕ್ರೀಮ್ ನೊಂದಿಗೆ ಸೇರಿಸಲಾಗುತ್ತದೆ. ಇದರ ನಂತರ, ಮೊಮೊ ಐಸ್‌‌ಕ್ರೀಮ್ ಅನ್ನು ಮೆಣಸಿನಕಾಯಿ ಚಟ್ನಿಯೊಂದಿಗೆ ತಿನ್ನಲು ನೀಡಲಾಯಿತು.
Published by:Ashwini Prabhu
First published: