ವಾಸ್ತುಶಾಸ್ತ್ರ (Vastu Tips) ಎಂಬುದು ಪ್ರಾಚಿನ ಕಾಲದಿಂದಲೂ ಭಾರತೀಯರಲ್ಲಿ ಮನೆಮಾಡಿದೆ, ಅಂತೆಯೇ ಮನೆಯನ್ನೂ ಸಹ ವಾಸ್ತು ಪರಿಪೂರ್ಕವಾಗಿಯೇ ಜನರು ಕಟ್ಟಿಸಿಕೊಳ್ಳಲು ಮುಂದಿರುತ್ತಾರೆ. ಅಷ್ಟಕ್ಕೂ ಮನೆಯ ವಾಸ್ತು ಸಾಕಷ್ಟು ಪ್ರಾಮುಖ್ಯತೆ ಹೊಂದಿದ್ದು ಇದು ಮನೆಯ ಯಜಮಾನರಿಂದ ಹಿಡಿದು ಅಲ್ಲಿರುವ ಮನೆಯ ಸದಸ್ಯರೆಲ್ಲರ ಸುಖ, ನೆಮ್ಮದಿಗೆ ಒಂದು ಮಾರ್ಗದರ್ಶಿಯಾಗಿದೆ ಎನ್ನಬಹುದು. ಒಬ್ಬ ವ್ಯಕ್ತಿ ದಿನವಿಡೀ ಒತ್ತಡ ಭರಿತ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ಮೇಲೆ ವಿಶ್ರಾಂತಿ (Rest) ಬಯಸುತ್ತಾನೆ. ಅಂತಹ ಸಂದರ್ಭದಲ್ಲಿ ಮನೆಯ ವಾಸ್ತು ಆ ವ್ಯಕ್ತಿಗೆ ಗರಿಷ್ಠ ಮಟ್ಟದಲ್ಲಿ ಬೇಕಾದ ಎಲ್ಲವೂ ಧನಾತ್ಮಕ (Positive) ರೀತಿಯಲ್ಲಿ ಒದಗಿಸಿದರೆ ಆ ವ್ಯಕ್ತಿ ಸಾಕಷ್ಟು ಪುಳಕಿತನಾಗುತ್ತಾನಲ್ಲದೆ ಮತ್ತೆ ಚೈತನ್ಯದ ಬುಗ್ಗೆಯಾಗಿ ಪರಿವರ್ತಿತನಾಗುತ್ತಾನೆ.
ಈ ನಿಟ್ಟಿನಲ್ಲಿ ವಾಸ್ತುಶಾಸ್ತ್ರವು ಒಂದು ಕಟ್ಟಡ ಅಥವಾ ಮನೆಯ ವಿನ್ಯಾಸ ಯಾವ ರೀತಿಯಾಗಿರಬೇಕು ಎಂಬುದನ್ನು ಬಲು ಸೂಕ್ಷ್ಮವಾಗಿ ವಿಶ್ಲೇಷಿಸಿ ಮಾರ್ಗದರ್ಶನ ನೀಡುತ್ತದೆ. ಹೀಗೆ ಮನೆಯ ಪ್ರತಿಯೊಂದು ಘಟಕಗಳನ್ನು ವಾಸ್ತುವಿನಡಿಯಲ್ಲಿ ಪೂರಕವಾಗಿ ನಿರ್ಮಿಸಿದಾಗ ಆ ಮನೆಯಲ್ಲಿ ಸಾಕ್ಷಾತ್ ಧನಾತ್ಮಕ ಶಕ್ತಿಯ ನಿರಂತರ ವಾಸವಾಗಿ ಅದು ಮನೆಯ ಪ್ರತಿಯೊಬ್ಬರಿಗೂ ಒಳಿತನ್ನುಂಟು ಮಾಡುತ್ತದೆ ಎನ್ನಲಾಗುತ್ತದೆ. ಒತ್ತಡ, ಖಿನ್ನತೆ ಎಂಬುದು ಮನೆಯ ಸದಸ್ಯರೆಲ್ಲರಿಂದ ದೂರ ಉಳಿಯುವುದಾಗಿ ಬಲವಾದ ನಂಬಿಕೆಯಿದೆ.
ಮನೆಯ ವಾಸ್ತುವಿಗೆ ಕೆಲ ಮೂಲ ಸಿದ್ಧಾಂತಗಳು
ಮನೆಯ ಆಕಾರ
ವಾಸ್ತು ಪ್ರಕಾರ, ಮನೆಯ ಆಕಾರವು ಚೌಕ ಇಲ್ಲವೆ ಆಯತಾಕಾರದಲ್ಲಿರಬೇಕೆಂದು ಹೇಳಲಾಗಿದೆ.
ಕೋಣೆ
ಮನೆಯ ಕೋಣೆಗಳು ಸಾಕಷ್ಟು ಪ್ರಕಾಶತೆಯಿಂದ ಕೂಡಿರಬೇಕು ಹಾಗೂ ಗಾಳಿಯಾಡುವಂತಿರಬೇಕು. ಅಲ್ಲದೆ ಕೋಣೆಗಳು ಯಾವಾಗಲೂ ಸ್ವಚ್ಛವಾಗಿವೆ ಏಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಾಸ್ತು ಹೇಳುತ್ತದೆ.
ಮನೆಯಲ್ಲಿರುವ ಫರ್ನಿಚರ್
ಫರ್ನಿಚರೆಂಬುದು ಮನೆಯ ಅಂದವನ್ನು ಸಾಕಷ್ಟು ಹೆಚ್ಚಿಸುತ್ತದೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ವಾಸ್ತುವಿನ ಪ್ರಕಾರ ಮನೆಯ ಕೆಲ ಭಾರವಾದ ಫರ್ನಿಚರ್ ಗಳಾದ ಮಂಚ, ಕಪ್ ಬೋರ್ಡ್ ಗಳನ್ನು ಮನೆಯ ನೈರುತ್ಯ ದಿಕ್ಕಿನಲ್ಲಿರಿಸಬೇಕು.
ವಾಸ್ತುವಿನ ಪ್ರಕಾರ ಜಲ ಕಲೆಗಳು
ವಾಸ್ತು ಅಕ್ವೇರಿಯಮ್, ಕಾರಂಜಿ, ಅಥವಾ ಇತರೆ ನೀರಿನ ಕಲಾತ್ಮಕತೆಗಳು ಮತ್ತು ಸಸ್ಯಗಳನ್ನು ಮನೆಯಲ್ಲಿ ಸ್ಥಾಪಿಸುವುದು ಉತ್ತಮ ಎನ್ನುತ್ತದೆ.
ಡೈನಿಂಗ್ ಟೇಬಲ್
ವಾಸ್ತು ಈ ವಿಷಯದಲ್ಲಿ ಮುಖ್ಯವಾಗಿ ಹೇಳುವ ಒಂದು ಸಂದೇಶವೆಂದರೆ ನಿಮ್ಮ ಡೈನಿಂಗ್ ಟೇಬಲ್ ಮುಖ್ಯದ್ವಾರದ ಬಳಿ ಎಂದಿಗೂ ಇರಿಸಕೂಡದು. ಸಾಧ್ಯವಾದಷ್ಟು ಡೈನಿಂಗ್ ಹಾಲ್ ಪಶ್ಚಿಮ ವಲಯದಲ್ಲಿರಲಿ. ಇದು ಸಾಧ್ಯವಿಲ್ಲವೆಂದರೆ ಉತ್ತರ, ಪೂರ್ವ ಅಥವಾ ದಕ್ಷಿಣಕ್ಕಿರಲಿ ಆದರೆ ಎಂದಿಗೂ ನೈರುತ್ಯಕ್ಕೆ ಬೇಡ.
ಮನೆ ಪ್ರವೇಶ ಸ್ಥಳ
ಮನೆಯ ಪ್ರವೇಶ ಸ್ಥಳ ಎಂಬುದು ಕೇವಲ ಮನೆಯ ಜನರಿಗೆ ಪ್ರವೇಶ ಸ್ಥಳ ಮಾತ್ರವಲ್ಲದೆ ವಿವಿಧ ಬಗೆಯ ಶಕ್ತಿಗಳಿಗೂ ಪ್ರವೇಶ ಸ್ಥಳವಾಗಿದೆ. ಮನೆಯ ಪ್ರವೇಶವು ಯಾವಾಗಲೂ ಉತ್ತರ, ಪೂರ್ವ ಅಥವಾ ಈಶಾನ್ಯಕ್ಕೆ ಎದುರಾಭಿಮುಖವಾಗಿರಬೇಕು ಎಂದು ಹೇಳುತ್ತದೆ ವಾಸ್ತು.
ಮನೆಯ ವಿನ್ಯಾಸ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿರಿಸಿ
* ಉತ್ತಮ ಗುಣಮಟ್ಟದ ಕಟ್ಟಿಗೆ ಬಳಸಿ
* ಮುಖ್ಯದ್ವಾರದ ಬಳಿ ಯಾವುದೇ ರೀತಿಯ ನೀರಿನ ಕಲಾತ್ಮಕತೆ ಬೇಡ
* ಮುಖ್ಯದ್ವಾರದ ಪಕ್ಕ ಶೂರ್‍ಯಾಕ್ ಇರಿಸದಿರಿ
* ಮುಖ್ಯ ಪ್ರವೇಶದ ಬಳಿ ವಾಶ್ ರೂಮ್ ಬೇಡ
* ಮುಖ್ಯ ದ್ವಾರಕ್ಕೆ ಕಪ್ಪು ಬಣ್ಣ ಬಳಿಯಬೇಡಿ
* ಮುಖ್ಯದ್ವಾರ ಗಟ್ಟಿಯಾಗಿ ಮತ್ತು ಪ್ರಕಾಶಮಾನವಾಗಿರಬೇಕು
* ಅತ್ಯುತ್ತಮವಾದ ನೇಮ್ ಪ್ಲೇಟ್ ಹಾಗೂ ತೋರಣಗಳು ಮುಖ್ಯದ್ವಾರವನ್ನು ಅಲಂಕರಿಸಿರಬೇಕು
* ಮುಖ್ಯದ್ವಾರ ಕ್ಲಾಕ್ ವೈಸ್ ಆಗಿ ತೆರೆಯುವಂತಿರಬೇಕು
* ಪ್ರಾಣಿಗಳ ಮೂರ್ತಿಗಳನ್ನು ಮುಖ್ಯ ಪ್ರವೇಶದ ಬಳಿ ಇರಿಸಬೇಡಿ
ಮೆಟ್ಟಿಲು
ಮನೆಯಲ್ಲಿ ಸಾಮರಸ್ಯ ಹಾಗೂ ಶಾಂತಿ ನೆಲೆಸಬೇಕೆಂದರೆ ಸ್ಟೇರ್ಕೇಸ್ ಅನ್ನು ಸ್ಥಾಪಿಸುವುದು ಪ್ರಮುಖ ಅಂಶವಾಗಿದೆ. ಮೆಟ್ಟಿಲುಗಳನ್ನು ಆದರ್ಶಪ್ರಾಯವಾಗಿ ನೈರುತ್ಯದಲ್ಲಿ ಸ್ಥಾಪಿಸಬಹುದಾಗಿದೆ. ಆದರೆ ಈಶಾನ್ಯಕ್ಕೆಂದೂ ಇರದಂತೆ ನೋಡಿ.
ಹಾಲ್
ಮನೆಯ ಹಾಲ್ ಮನೆಯ ಹೃದಯ ಭಾಗವಿದ್ದಂತೆ. ಮನೆಗೆ ಬರುವ ಅತಿಥಿಗಳಿಗೆ ಸ್ವಾಗತಕೋರುವ ಹಾಲ್ ಎಲ್ಲ ರೀತಿಯಿಂದಲೂ ಪರಿಪೂರ್ಣವಾಗಿರಬೇಕು. ಮನೆಯ ಹಾಲ್ ಪೂರ್ವ, ಉತ್ತರ ಅಥವಾ ಈಶಾನ್ಯಕ್ಕಿರಬೇಕು. ಹಾಗೂ ಹಾಲ್ ನಲ್ಲಿರುವ ಫರ್ನಿಚರ್ ಪಶ್ಚಿಮ ಅಥವಾ ನೈರುತ್ಯಕ್ಕೆ ಮುಖ ಮಾಡಿರಬೇಕು.
ಇದನ್ನೂ ಓದಿ: ನಿಮ್ಮ ಮನೆಯಲ್ಲಿ ನಲ್ಲಿಗಳು ಎಲ್ಲಿವೆ? ಸರಿಯಾದ ದಿಕ್ಕಲ್ಲಿ ಇರದಿದ್ದರೆ ದುರಾದೃಷ್ಟ ತರಬಹುದು!
ಹಾಲ್ ಗಾಗಿ ಕೆಲ ಸಲಹೆಗಳು
* ಹಾಲ್ ನಲ್ಲಿರುವ ಎಲ್ಲ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಗ್ನೇಯಕ್ಕೆ ಇರುವಂತೆ ನೋಡಿಕೊಳ್ಳಿ
* ಹಾಲ್ ನಲ್ಲಿ ಕನ್ನಡಿ ಏನಾದರೂ ಇದ್ದರೆ ಅದನ್ನು ಉತ್ತರದ ಗೋಡೆಗೆ ತೂಗು ಹಾಕಿ.
ಬೆಡ್ ರೂಮ್
ಕೋಣೆಗಳು ನೈರುತ್ಯ ದಿಕ್ಕಿನಲ್ಲಿರಬೇಕು. ಇದರಿಂದ ಮನೆಯ ಜನರ ಆರೋಗ್ಯ ಹಾಗೂ ಮನೆಯಲ್ಲಿ ಸಾಮರಸ್ಯ ಸದಾ ನೆಲೆಸಿರುತ್ತದೆ. ಈಶಾನ್ಯಕ್ಕಿರುವ ಕೋಣೆಗಳು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ. ಆಗ್ನೇಯಕ್ಕಿರುವ ಕೋಣೆಗಳು ಮನೆಯಲ್ಲಿ ಕಿರಿಕಿರಿ ಹಾಗೂ ಜಗಳಗಳನ್ನುಂಟು ಮಾಡುತ್ತವೆ.
ಜೊತೆಗೆ ಕೋಣೆಯಲ್ಲಿರುವ ಮಂಚವು ಕೋಣೆಯ ನೈರುತ್ಯ ಮೂಲೆಯಲ್ಲಿರಬೇಕು ಹಾಗೂ ತಲೆ ಭಾಗವು ಪಶ್ಚಿಮ ದಿಕ್ಕಿನೆಡೆ ಇರಬೇಕು.
ಸಲಹೆಗಳು
* ಮಂಚದ ಮುಂದೆ ಕನ್ನಡಿ ಅಥವಾ ಟಿವಿ ಇರಿಸಬಾರದು
* ಭೂಮಿ ಪ್ರತಿನಿಧಿಸುವ, ಹಗುರವಾದ ಬಣ್ಣ ಬಳಿಯಬೇಕು
* ದೇವರ ಕೋಣೆ ಇರಿಸಬಾರದು
* ನೀರಿನ ಅಥವಾ ಕಾರಂಜಿ ಚಿತ್ರಗಳಿರಬಾರದು
* ಸುಗಂಧ ಪಸರಿಸುವ ಎಣ್ಣೆಗಳನ್ನು ಬಳಸಬಹುದು
ಅಡುಗೆಮನೆ
ಮನೆಯ ಆಗ್ನೇಯ ಭಾಗಕ್ಕೆ ಅಡುಗೆಮನೆಯನ್ನು ಸ್ಥಾಪಿಸಬೇಕು. ಅಡುಗೆಮನೆಯ ಅಪ್ಲೈಯನ್ಸಸ್ ಗಳನ್ನು ಸಹ ಇದೇ ದಿಕ್ಕಿನಲ್ಲಿರಿಸಬೇಕು.
ಮಕ್ಕಳ ಕೋಣೆ
ಮಕ್ಕಳ ಕೋಣೆಯನ್ನು ನೈರುತ್ಯ ದಿಕ್ಕಿನಲ್ಲಿರಬೇಕು. ಮಕ್ಕಳು ತಮ್ಮ ತಲೆಯನ್ನು ದಕ್ಷಿಣಕ್ಕೆ ಅಥವಾ ಪೂರ್ವಕ್ಕೆ ಮುಖ ಮಾಡುವಂತಿರಬೇಕು.
ಧ್ಯಾನದ ಕೋಣೆ
ವಾಸ್ತುವಿನ ಪ್ರಕಾರ, ಮನೆಯು ಧ್ಯಾನದ ಕೋಣೆಯನ್ನು ಹೊಂದಿರಬೇಕು. ಈ ಕೋಣೆಯು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಧ್ಯಾನ ಮಾಡುವಾಗ ಪೂರ್ವಕ್ಕೆ ಎದುರಾಭಿಮುಖವಾಗಿರಬೇಕು. ಅಲ್ಟರ್ ಅನ್ನು ಕಟ್ಟಬಹುದು. ಪ್ರಶಾಂತವಾದ ಮನಸ್ಸಿಗೆ ಇಂಬು ನೀಡುವ ಬಣ್ಣವನ್ನು ಈ ಕೋಣೆ ಹೊಂದಿರಬೇಕು.
ಬಚ್ಚಲುಮನೆ
* ಬಚ್ಚಲುಮನೆ ಅಥವಾ ಟಾಯ್ಲೆಟ್ ಮನೆಯ ವಾಯವ್ಯ ಮೂಲೆಯಲ್ಲಿರಬೇಕು.
* ನೈರುತ್ಯ ದಿಕ್ಕಿನಲ್ಲಿ ಇವುಗಳನ್ನು ಎಂದಿಗೂ ಕಟ್ಟಿಸಬೇಡಿ.
* ಶೌಚಾಲಯದ ಬಾಗಿಲು ಉತ್ತರ ಅಥವಾ ಪೂರ್ವದ ಗೋಡೆಗಿರುವಂತೆ ಹಾಕಬೇಕು.
* ಟಾಯ್ಲೆಟ್ ಸೀಟ್ ಎಂಬುದು ವಾಯವ್ಯ ಅಥವಾ ಆಗ್ನೇಯ ದಿಕ್ಕಿನೆಡೆ ಇರಬೇಕು.
* ಟಾಯ್ಲೆಟ್ ಅಥವಾ ಬಚ್ಚಲುಮನೆ ಕಿಟಕಿಗಳು ಪಶ್ಚಿಮ, ಪೂರ್ವ ಅಥವಾ ಉತ್ತರಕ್ಕಿರಬೇಕು.
* ಶೋವರ್ ಅಥವಾ ವಾಶ್ ಬೇಸಿನ್ ಈಶಾನ್ಯ, ಉತ್ತರ ಅಥವಾ ಪೂರ್ವಕ್ಕಿರಬೇಕು.
* ಯಾವಾಗಲೂ ಕಟ್ಟಿಗೆಯ ಬಾಗಿಲುಗಳನ್ನೇ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ