ಕಾಲೇಜು (College) ಅಂತ ಹೇಳಿದ ಕೂಡಲೇ ಅಲ್ಲಿ ಮುಖ್ಯವಾಗಿ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಪಠ್ಯೇತರ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ, ಕ್ರೀಡೆಗಳಿಗೂ ಹೆಚ್ಚಿನ ಆದ್ಯತೆಗಳನ್ನು ನೀಡಲಾಗುತ್ತದೆ. ಇದರಿಂದ ಮಕ್ಕಳಿಗೆ ಸಮಾಜದಲ್ಲಿ ಯಾವ ರೀತಿಯಾಗಿ ಜೀವನವನ್ನು ನಡೆಸಬೇಕೆಂದು ತಿಳಿಯುತ್ತದೆ. ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಹೇಗೆ ವರ್ತಿಸಬೇಕೆಂದು ಕೂಡ ಅರಿಯುತ್ತಾರೆ. ಶಾಲೆಯಲ್ಲಿ ನಾನಾ ರೀತಿಯ ಹೊಸ ಯೋಜನೆಗಳು ಕೂಡ ಮಕ್ಕಳು ಶಾಲೆಗೆ ಬರುವಂತೆ ಒತ್ತಾಯಿಸುತ್ತದೆ. ಹಾಗೆಯೇ ಸಣ್ಣವರಿದ್ದಾಗ ಪ್ರೀತಿ ಪ್ರೇಮ (Love) ಎಲ್ಲಾ ತಿಳಿದಿರುವುದಿಲ್ಲ ಬಿಡಿ. ಹೆಣ್ಣು ಮತ್ತು ಗಂಡು ಎಂಬುದು ಬೇರೆ ಬೇರೆ ಲಿಂಗ ಎಂದು ತಿಳಿದಿರುತ್ತದೆ ಬಿಟ್ರೆ ಸಣ್ಣ ವಯಸ್ಸಿಗೆ ಅಂಥದ್ದೇನೂ ತಿಳಿದಿರುವುದಿಲ್ಲ. ಹಾಗೆಯೇ ಶಾಲೆಗಳಲ್ಲಿ ಪ್ರೀತಿ ಪ್ರೇಮದ ರೀತಿಯ ಪರಕರಣಗಳು ಕಂಡು ಬಂದಲ್ಲಿ ಸ್ಟ್ರಿಕ್ಟ್ (Strict) ಆಗಿ ಆಕ್ಷನ್ ತೆಗೆದುಕೊಳ್ಳುತ್ತಾರೆ.
ಅದಕ್ಕೇ ಅಲ್ವಾ ಶಾಲೆ ಅಂತ ಹೇಳೋದು. ಅಸಂಬದ್ಧ ನಡವಳಿಕೆಗಳು ಕಂಡು ಬಂದಾಗ ಶಿಕ್ಷಕರು ಮಕ್ಕಳಿಗೆ ಎಚ್ಚರಿಕೆಯನ್ನು ನೀಡುತ್ತಾರೆ. ಪೋಷಕರ ಸಭೆಯನ್ನು ಕೂಡ ಕರೆಯುತ್ತಾರೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಇದರ ಉಲ್ಟ ಕೇಸ್ ಆಗಿದೆ. ಏನು ಅಂತ ಕೇಳ್ತೀರಾ? ಹಾಗಾದ್ರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೌದು. ಒಡಿಶಾದ ಜಗತ್ಸಿಂಗ್ಪುರದಲ್ಲಿರುವ ಎಸ್ವಿಎಂ ಸ್ವಾಯುತ್ತ ಕಾಲೇಜಿನಲ್ಲಿ ಒಂದು ಘಟನೆ ನಡೆದಿದೆ. ಇನ್ನೇನು ಫೆಬ್ರವರಿ 14 ಬಂದೇ ಬಿಡ್ತು. ಪ್ರೇಮಿಗಳ ದಿನ ಅಂದ್ರೆ ಪೊಲೀಸರು ಎಲ್ಲಾ ಕಡೆಯೂ ಸ್ವಲ್ಪ ಬಿಗಿ ಬಂದಸ್ತು ಮಾಡಿರುತ್ತಾರೆ. ಅದರ ಜೊತೆಗೆ ಅಂಗಡಿಗಳಲ್ಲಿ, ಮಾಲ್ಗಳಲ್ಲಿ ಒಂದಷ್ಟು ಗಿಫ್ಟ್ಗಳು ಬೆಸ್ಟ್ ಆಫರ್ಗಳಲ್ಲಿ ಬಿಟ್ಟಿರುತ್ತಾರೆ.
ಹೀಗೆಯೇ ಒಡಿಶಾದ ಜಗತ್ಸಿಂಗ್ಪುರದಲ್ಲಿರುವ ಎಸ್ವಿಎಂ ಸ್ವಾಯುತ್ತ ಕಾಲೇಜಿನ ನೋಟೀಸ್ ಬೋರ್ಡ್ನಲ್ಲಿ ಹಾಕಿದ ನೋಟೀಸ್ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಧಂಗ್ ಮಾಡಿಬಿಟ್ಟಿತ್ತು. "ಪ್ರೇಮಿಗಳ ದಿನದಂದು ಪ್ರತಿಯೊಬ್ಬರು ಕೂಡ ಒಂದೊಂದು ಜೊತೆಗಾರ ಅಥವಾ ಜೊತೆಗಾರ್ತಿಯನ್ನು ಕರೆದುಕೊಂಡು ಬರಬೇಕು, ಇಲ್ಲದಿದ್ದಲ್ಲಿ ಕಾಲೇಜಿಗೆ ಪ್ರವೇಶವಿಲ್ಲ" ಎಂದು ಬರೆದಿದ್ದು, ಕಾಲೇಜಿನ ಪ್ರಾಂಶುಪಾಲರ ಸಹಿಯು ಕೂಡ ಆ ನೋಟೀಸ್ನಲ್ಲಿ ಇತ್ತು.
ಈ ಸುದ್ಧಿಯನ್ನು ವಿದ್ಯಾರ್ಥಿಗಳು ಓದಿ ಫುಲ್ ಭಯ ಆಗಿದ್ದಾರೆ ಮತ್ತು ಪೋಷಕರು ಶಾಕ್ ಆಗಿದ್ದಾರೆ. ಇದೆಂಥಾ ವಿಚಿತ್ರ ಎಂದು ಎಲ್ಲರು ಅಚ್ಚರಿ ಪಡುವಾಗ ಗೊತ್ತಾಯ್ತು ಒಂದು ಸತ್ಯ. ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸ ಎಂದು. ಆದರೂ ಒಂದು ಕಾಲೇಜಿನ ಅಧಿಕೃತ ನೋಟೀಸ್ ಮತ್ತು ಪ್ರಾಂಶುಪಾಲರ ಸೈನ್ ಹಾಕಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ ಎಂದು ಹೇಳಬಹುದು.
ಇದನ್ನೂ ಓದಿ: ನೀವು ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇನ್ನು ಮುಂದೆ ಹುಷಾರ್!
ಕಾಲೇಜಿನ ಪ್ರಾಂಶುಪಾಲರ ಹೆಸರನ್ನು ಹಾಳುಮಾಡುವ ಸಲುವಾಗಿ ಯಾರೋ ಈ ಕೃತ್ಯಕ್ಕೆ ಕೈ ಹಾಕಿದ್ದಾರೆಯೇ ಹೊರತು, ಇದು ಯಾವುದೇ ಅಧಿಕೃತ ನೀತಿ ನಿಯಮ, ನೋಟೀಸ್ ಅಲ್ವೇ ಅಲ್ಲ ಎಂದು ಕಾಲೇಜಿನ ವಿದ್ಯಾರ್ಥಿನಿಯಾದ ರಶ್ಮಿಕಾ ಬೆಹೆರಾರವರು ತಿಳಿಸಿದ್ದಾರೆ.
ಇದು ಕಾಲೇಜಿನ ನೋಟಿಸ್ ಅಲ್ವೇ ಅಲ್ಲ.
ಯಾಕೆಂದ್ರೆ ನೋಟಿಸ್ ಫಾರ್ಮೇಟ್ನಲ್ಲಿ ಇಲ್ಲ ಮತ್ತು ಕಾಲೇಜಿನ ವಿಳಾಸ, ನಂಬರ್ ಯಾವುದೂ ಕೂಡ ಇಲ್ಲ. ಒಟ್ಟಿನಲ್ಲಿ ಯಾರೋ ಮಾಡಿರುವ ಕೃತ್ಯ ಇದು ಎಂದು ಇನ್ನೋರ್ವ ವಿದ್ಯಾರ್ಥಿನಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಯಾರೋ ಕಿಡಿಗೇಡಿಗಳಿಂದ ಕಾಲೇಜಿನ ಪ್ರತಿಯೊಬ್ಬರೂ ಮತ್ತು ಪೋಷಕರು ಧಂಗಾಗಿದ್ದಂತೂ ನಿಜ ಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ