Vaastu Tips: ಮನೆಯಲ್ಲಿ ಈ ಚಿತ್ರಗಳಿದ್ದರೆ ಮದುವೆ ತಡವಾಗುತ್ತದಂತೆ, ನಿಮ್ಮ ಮನೆಯಲ್ಲೂ ಇದೆಯಾ ನೋಡಿ !

Vaastu Tips: ನೀವು ಏನನ್ನು ಇಚ್ಛಿಸುತ್ತೀರೋ ಅದು ಸಾಕಾರವಾಗಬೇಕೆಂದರೆ ನಿಮ್ಮ ಪ್ರಯತ್ನದ ಜೊತೆಜೊತೆಗೆ ಪರಿಸ್ಥಿತಿ ಮತ್ತು ಪ್ರಪಂಚದ ಶಕ್ತಿಯೂ ಸೇರಿರಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಮದುವೆ ಆಗದೇ ಇರುವ ಯುವಕ ಯುವತಿಯರು ತಮ್ಮ ಪ್ರಯತ್ನದೊಂದಿಗೆ ವಾಸ್ತು ಶಾಸ್ತ್ರ ಹೇಳುವ ಈ ಸಣ್ಣದೊಂದು ವಿಚಾರ ಗಮನಿಸಿದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Vaastu Tips: ನಿಮಗಿದು ಸೋಜಿಗ ಎನಿಸಬಹುದು, ಆದ್ರೆ ನಾವು ನಮ್ಮ ಮನೆಯ ಗೋಡೆ ಮೇಲೆ ಹಾಕಿರೋ ಚಿತ್ರ ಕೂಡಾ ನಮ್ಮ ಬದುಕಿನ ಅನೇಕ ಘಟ್ಟಗಳ ಮೇಲೆ ಪರಿಣಾಮ ಬೀರುತ್ತದಂತೆ. ಇಂಥಾ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಬಗ್ಗೆ ಗಮನ ಹರಿಸಿ ಅದರ ವಿವರ ತಿಳಿಸುವುದು ವಾಸ್ತು ಶಾಸ್ತ್ರ. ಮನೆ ಹೇಗೆ ಕಟ್ಟಬೇಕು, ಯಾಔ ಕೋಣೆ ಯಾವ ದಿಕ್ಕಿಗೆ ಇರಬೇಕು, ಯಾವ ಬಾಗಿಲು ಯಾಕ ಕಿಟಕಿ ಎಲ್ಲಿರಬೇಕು ಎನ್ನುವ ಲೆಕ್ಕಾಚಾರಗಳು ಒಂದು ಕಡೆ. ಈಗಾಗಲೇ ಇರುವ ಮನೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ನಿಮ್ಮ ಒಟ್ಟಾರೆ ಬದುಕಿನ ದಿಕ್ಕನ್ನೇ ಬದಲಿಸಬಲ್ಲದು ಎನ್ನುತ್ತಾರೆ ವಾಸ್ತು ತಜ್ಞರು.

    ನೀವು ಏನನ್ನು ಇಚ್ಛಿಸುತ್ತೀರೋ ಅದು ಸಾಕಾರವಾಗಬೇಕೆಂದರೆ ನಿಮ್ಮ ಪ್ರಯತ್ನದ ಜೊತೆಜೊತೆಗೆ ಪರಿಸ್ಥಿತಿ ಮತ್ತು ಪ್ರಪಂಚದ ಶಕ್ತಿಯೂ ಸೇರಿರಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾಗಿಯೇ ನಾವು ವಾಸಿಸುವ ಮನೆ, ಆ ಮನೆಯೊಳಗಿನ ಪರಿಕರಗಳು, ಅವುಗಳ ದಿಕ್ಕು, ಬಣ್ಣ ಎಲ್ಲವುಗಳ ಬಗ್ಗೆಯೂ ವಾಸ್ತು ಶಾಸ್ತ್ರ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಹಾಗಾಗಿಯೇ ನಮಗೇನಾದರೂ ಸಮಸ್ಯೆ ಇದೆ ಎಂದು ನಾವು ಪರಿಹಾರಕ್ಕಾಗಿ ವಾಸ್ತು ಶಾಸ್ತ್ರದ ಮೊರೆ ಹೋದರೆ ಇರುವ ವಸ್ತುಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಸೂಚಿಸುತ್ತಾರೆ. ಆಗ ನಮ್ಮ ಬಳಿ ಬರಬೇಕಿದ್ದ ಸಕಾರಾತ್ಮಕ ಶಕ್ತಿ ಬಹಳ ಸರಾಗವಾಗಿ ಮತ್ತು ವೇಗವಾಗಿ ಬಂದು ನಮ್ಮ ಇಚ್ಛೆ ಪೂರ್ಣವಾಗಕು ಸಹಕಾರಿಯಾಗುತ್ತದೆ ಎನ್ನುವ ಲೆಕ್ಕಾಚಾರ ಇರುತ್ತದೆ.

    ಇದನ್ನೂ ಓದಿ: Vaastu Tips : ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಹಣ ನಷ್ಟವಾಗುತ್ತದೆ ! ಇದು ವಾಸ್ತು ಪ್ರಕಾರ !

    ಮದುವೆ ಆಗದೇ ಇರುವ ಯುವಕ ಯುವತಿಯರು ತಮ್ಮ ಪ್ರಯತ್ನದೊಂದಿಗೆ ವಾಸ್ತು ಶಾಸ್ತ್ರ ಹೇಳುವ ಈ ಸಣ್ಣದೊಂದು ವಿಚಾರ ಗಮನಿಸಿದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಅದೆಂದರೆ ಮದುವೆಯಾಗಬೇಕಿರುವ ಹುಡುಗ ಅಥವಾ ಹುಡುಗಿಯ ಕೋಣೆಯಲ್ಲಿ ಒಂಟಿ ಬಾತುಕೋಳಿ ಅಥವಾ ಒಂಟಿ ಚಿಟ್ಟೆಯ ಚಿತ್ರ. ಇದೇನಿದು ಬಾತುಕೋಳಿ ಚಿಟ್ಟೆಗೂ ನಮ್ಮ ಮದುವೆಗೂ ಏನು ಸಂಬಂಧ ಎಂದೆಲ್ಲಾ ನಿಮಗೆ ಅನಿಸಬಹುದು. ಆದರೆ ವಾಸ್ತು ಶಾಸ್ತ್ರಜ್ಞರು ಇದನ್ನು ಖಡಾಖಂಡಿತವಾಗಿ ಹೇಳುತ್ತಾರೆ.  ಒಂಟಿಯಾಗಿರುವ ಚಿಟ್ಟೆ ಮತ್ತು ಬಾತುಕೋಳಿಯ ಚಿತ್ರಗಳು ನಿಮ್ಮ ಒಂಟಿತನದ ಸೂಚಕವಾಗಿರುತ್ತದೆ, ಒಂಟಿಯಾಗಿಯೇ ಮುಂದುವರೆಯುವ ಸಾಧ್ಯತೆಗಳಿಗೆ ಈ ಚಿತ್ರಗಳು ಮತ್ತಷ್ಟು ಪುಷ್ಟಿ ಕೊಡುತ್ತವಂತೆ.

    ಎಷ್ಟು ಸಾಧ್ಯವೋ ಅಷ್ಟು ನೆಗೆಟಿವ್ ಎನರ್ಜಿಯಿಂದ ದೂರವಿರಬೇಕು, ದೂರ ಇರಿಸಬೇಕು. ಹಾಗಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಅಥವಾ ಕೋಣೆಯಲ್ಲಿ ಒಂಟಿ ಬಾತುಕೋಳಿ ಅಥವಾ ಒಂದೇ ಒದು ಚಿಟ್ಟೆಯ ಚಿತ್ರ ಇದ್ದರೆ ಅದನ್ನು ಅಲ್ಲಿಂದ ತೆಗೆಯಿರಿ. ಕೇವಲ ಚಿತ್ರ ಮಾತ್ರವಲ್ಲ ಒಂಟಿ ಬಾತುಕೋಳಿ ಮತ್ತು ಒಂಟಿ ಚಿಟ್ಟೆಯ ವಿಗ್ರಹವಿದ್ದರೂ ಅದನ್ನು ತೆಗೆಯಿರಿ. ಬಾತುಕೋಳಿಗಳು ಜೋಡಿಯಾಗಿ ಇರುವುದೇ ಹೆಚ್ಚು. ಅಂಥಾ ಪಕ್ಷಿಗಳು ಒಂಟಿಯಾಗಿರುವುದು ಒಳ್ಳೆಯ ವಿಚಾರವಲ್ಲ. ಚಿಟ್ಟೆ ಕೂಡಾ ಅದೇ ರೀತಿ. ಅವುಗಳಿಂದ ಹೊರಹೊಮ್ಮುವ ನಕಾರಾತ್ಮಕ ಭಾವನೆಗಳು ನಿಮ್ಮ ವಿವಾಹದ ಪ್ರಯತ್ನಕ್ಕೆ ಅಡ್ಡಿ ಮಾಡಬಹುದು. ನೋಡಲು ಇದೊಂದು ಸಣ್ಣ ವಿಚಾರದಂತೆ ಕಂಡರೂ ಇದರ ಪ್ರಭಾವ ಮಹತ್ವದ್ದು ಎನ್ನುತ್ತಾರೆ ವಾಸ್ತು ತಜ್ಞರು.

    ನಿರಂತರ ಪ್ರಯತ್ನ ಪಟ್ಟರೂ ಮದುವೆಯ ಯೋಗ ಕೂಡಿ ಬರದ ಅನೇಕರಿಗೆ ಈ ಮಾತುಗಳು ಸರಿಯಾಗಿ ಅರ್ಥವಾಗುತ್ತವೆ. ಅನೇಕ ಬಾರಿ ಎಲ್ಲಾ ಸರಿಯಾಗಿ ಇನ್ನೇನು ಮುಹೂರ್ತ ನಿಶ್ಚಯ ಎನ್ನುವಷ್ಟರಲ್ಲಿ ಮದುವೆ ನಿಂತುಹೋಗಿರುತ್ತದೆ. ಅಥವಾ ಪ್ರತೀ ಸಂಬಂಧವೂ ಒಂದಿಲ್ಲೊಂದು ಕಾರಣದಿಂದ ಮದುವೆಯ ತನಕ ತಲುಪುವುದೇ ಇಲ್ಲ. ಇದಕ್ಕಾಗಿ ಅನೇಕ ಪೂಜೆ ಪುನಸ್ಕಾರಗಳನ್ನೂ ಮಾಡಿರುತ್ತಾರೆ. ಹಾಗಾಗಿ ಈ ಒಂದು ಸಣ್ಣ ಬದಲಾವಣೆ ನಿಮ್ಮ ಆಕಾಂಕ್ಷೆಗಳ ಈಡೇರಿಕೆಗೆ ಸಹಾಯ ಮಾಡುತ್ತದೆ ಎನ್ನುವ ಭರವಸೆ ನೀಡುತ್ತಾರೆ ವಾಸ್ತು ತಜ್ಞರು, ಒಮ್ಮೆ ಪ್ರಯತ್ನಿಸಿ ನೋಡಿ.
    Published by:Soumya KN
    First published: