ನಮ್ಮ ಭಾರತ (India) ದೇಶದಲ್ಲಿ 60 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ವರದಕ್ಷಿಣೆಯನ್ನು (Dowry) ನಿಷೇಧಿಸಲಾಗಿದ್ದರೂ, ಈ ದುಶ್ಚಟವು ದೇಶದ ಅನೇಕ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವುದನ್ನು ನಾವು ನೋಡುತ್ತೇವೆ ಮತ್ತು ಇದು ಇನ್ನೂ ಆಚರಣೆಯಲ್ಲಿದೆ ಅನ್ನೋದಕ್ಕೆ ಅನೇಕ ಮದುವೆಗಳು (Marriages) ಮುರಿದು ಬೀಳುವುದಕ್ಕೆ ಕಾರಣವೇ ಈ ವರದಕ್ಷಿಣೆ (Dowry Case News) ಅಂತ ಅನೇಕ ಸುದ್ದಿಗಳನ್ನು ಪ್ರತಿದಿನ ನಾವು ಟಿವಿಯಲ್ಲಿ ನೋಡುತ್ತಲೇ ಇರುತ್ತೇವೆ ಅಂತ ಹೇಳಬಹುದು. ತುಂಬಾ ಹಿಂದಿನ ಸುದ್ದಿಗಳ ಬಗ್ಗೆ ಮಾತಾಡೋದು ಬೇಡ. ನಿನ್ನೆ ತಾನೇ ಒಂದು ಸುದ್ದಿ ಬಂದಿತ್ತು. ಅದರಲ್ಲಿ ಬಾರಾಬಂಕಿ ಜಿಲ್ಲೆಯಲ್ಲಿರುವ ಒಂದು ಗ್ರಾಮದಲ್ಲಿ ವರನು (Groom) ತನಗೆ ವಧುವಿನ ಮನೆಯವರು ಮೋಟರ್ ಬೈಕ್ (Motor Bike) ಕೊಡಿಸಲಿಲ್ಲ ಅಂತ ಮದುವೆ ನಡೆಯುವ ಸ್ಥಳದಿಂದ ಮದುವೆ ಮಧ್ಯೆದಲ್ಲಿಯೇ ಎದ್ದು ಹೊರಟು ಹೋಗಿದ್ದರು.
ಆನಂತರ ಆ ವಧು ಅಷ್ಟಕ್ಕೆ ಸುಮ್ಮನಿರದೆ ಹಠ ಹಿಡಿದು ಪೊಲೀಸರ ಬಳಿ ಹೋಗಿ ವರನ ಮತ್ತು ಅವರ ಮನೆಯವರ ಬಗ್ಗೆ ದೂರು ದಾಖಲಿಸಿ ಮತ್ತೆ ಅದೇ ವರನ ಜೊತೆಗೆ ತನ್ನ ಮದುವೆ ಮಾಡಿಸಿಕೊಡಿ ಅಂತ ಮನವಿ ಮಾಡಿಕೊಂಡಾಗ, ಎರಡು ದಿನಗಳ ನಂತರ ಆ ವರ ಮತ್ತು ಅವರ ಮನೆಯವರು ಮತ್ತೆ ಅದೇ ಮದುವೆ ಮಂಟಪದಲ್ಲಿ ಮೊನ್ನೆ ನಿಂತು ಹೋದ ಮದುವೆ ಸಮಾರಂಭವನ್ನು ಪೂರ್ಣಗೊಳಿಸಿದರು.
ವರದಕ್ಷಿಣೆ ಬೇಡ ಅಂತ ಹೇಳಿದ್ರಂತೆ ಈ ವರ
ಆದರೆ ಇಲ್ಲೊಂದು ಹೊಸದಾಗಿ ಬಂದಿರುವ ಸುದ್ದಿಯಲ್ಲಿ ಉತ್ತರ ಪ್ರದೇಶದ ವರನೊಬ್ಬ ವರದಕ್ಷಿಣೆ ತೆಗೆದುಕೊಳ್ಳಲು ನಿರಾಕರಿಸಿದ್ದಾನೆ. ಈ ಸುದ್ದಿ ಎಲ್ಲರಿಗೂ ಒಂದು ಕ್ಷಣ ಆಶ್ಚರ್ಯವನ್ನುಂಟು ಮಾಡಬಹುದು, ಆದರೆ ಇದು ನಿಜವಾಗಿಯೂ ನಡೆದಿರುವ ಘಟನೆ ಅಂತ ಹೇಳಲಾಗುತ್ತಿದೆ.
ಮದುವೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ವರದಕ್ಷಿಣೆಗೆ ಬೇಡಿಕೆ ಇಡುವುದನ್ನು ಮತ್ತು ವರದಕ್ಷಿಣೆ ಕೊಡದೆ ಇರುವುದರಿಂದ ಮದುವೆಗಳನ್ನು ರದ್ದುಗೊಳಿಸಿದ ಅನೇಕ ಘಟನೆಗಳನ್ನು ನಾವು ಟಿವಿಯಲ್ಲಿ ನೋಡುತ್ತಿರುತ್ತೇವೆ.
ಸರ್ಕಾರಿ ಉದ್ಯೋಗಿಯಾಗಿದ್ರೆ ಹೆಚ್ಚು ವರದಕ್ಷಿಣೆ
ಅದರಲ್ಲೂ ಹುಡುಗನು ಒಳ್ಳೆಯ ಕೆಲಸದಲ್ಲಿದ್ದರೆ ಅಥವಾ ಸರ್ಕಾರಿ ಉದ್ಯೋಗವನ್ನು ಹೊಂದಿದ್ದರೆ, ಹುಡುಗಿಯ ಕುಟುಂಬದವರಿಗೆ ಭಾರೀ ದೊಡ್ಡ ಮೊತ್ತದ ವರದಕ್ಷಿಣೆಯನ್ನು ಪಾವತಿಸಲು ಕೇಳಲಾಗುತ್ತದೆ.
ಇಂತಹ ಜನರು ಮುಜಾಫರ್ ನಗರದ ಸೌರಭ್ ಚೌಹಾಣ್ ಅವರಿಂದ ಪಾಠ ಕಲಿಯಲೆಬೇಕು ನೋಡಿ. ಏಕೆಂದರೆ ಅವರು ತಮ್ಮ ವಿವಾಹದಲ್ಲಿ ತಮ್ಮ ಅತ್ತೆ-ಮಾವನಿಂದ ವರದಕ್ಷಿಣೆ ರೂಪದಲ್ಲಿ ಪಡೆದ 11 ಲಕ್ಷ ರೂಪಾಯಿಗಳು ಮತ್ತು ಆಭರಣಗಳನ್ನು ಅವರಿಗೆ ಹಿಂದಿರುಗಿಸಿದರು.
ಕೇವಲ 1 ರೂಪಾಯಿಯನ್ನು ಶಗುನ್ ರೂಪದಲ್ಲಿ ಸ್ವೀಕರಿಸಿದ ವರ
ಇದರ ಬದಲಾಗಿ ಅವರು ಕೇವಲ ಒಂದು ರೂಪಾಯಿಯನ್ನು 'ಶಗುನ್' ಅಂತ ಸ್ವೀಕರಿಸಿ ತನ್ನ ವಧುವನ್ನು ಮದುವೆಯಾದರು. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಪಾತ್ರೆ, ಲೋಟ ಬಾರಿಸುತ್ತಾ ಮದುವೆ ಮನೆಯಲ್ಲಿ ದೇಶಿ ಹುಡುಗರ ಕ್ರೇಜಿ ಡ್ಯಾನ್; ವಿಡಿಯೋ ನೋಡಿ
ಸುದ್ದಿ ಸಂಸ್ಥೆಯೊಂದರ ವರದಿಯ ಪ್ರಕಾರ, ವರ ಸೌರಭ್ ಚೌಹಾಣ್ ಕಂದಾಯ ಅಧಿಕಾರಿಯಾಗಿದ್ದು, ವಧು ನಿವೃತ್ತ ಸೈನಿಕರೊಬ್ಬರ ಮಗಳಾಗಿದ್ದು, ಪ್ರಿನ್ಸಿ ಲಖನ್ ಗ್ರಾಮದ ನಿವಾಸಿಯಾಗಿದ್ದಾರೆ.
ಮಾದರಿಯಾದ ಯುವಕ
ವರದಿಗಳ ಪ್ರಕಾರ, ಸೌರಭ್ ತನ್ನ ಮದುವೆಯ ಮೆರವಣಿಗೆಯೊಂದಿಗೆ ಲಖನ್ ಹಳ್ಳಿಯನ್ನು ತಲುಪಿದರು. ಆದಾಗ್ಯೂ, ಮದುವೆಗೆ ಮೊದಲು ಹುಡುಗಿಯ ಕುಟುಂಬವು ವರದಕ್ಷಿಣೆಯನ್ನು ಅವರ ಕಡೆಯಿಂದ ನೀಡಿದಾಗ, ಅವರು ಅದನ್ನು ಸ್ವೀಕರಿಸದೆ ಒಂದು ಒಳ್ಳೆಯ ಉದಾಹರಣೆಯನ್ನು ಸೆಟ್ ಮಾಡಿದ್ದಾರೆ.
"ಮದುವೆ ಸಮಾರಂಭದಲ್ಲಿ ನಡೆಯುವ ದುಂದು ವೆಚ್ಚವನ್ನು ಸಹ ಕಡಿಮೆ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು. ಜನರು ಸೌರಭ್ ಅವರ ನಿರ್ಧಾರವನ್ನು ತುಂಬಾನೇ ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ: Anand Mahindra: ಆನಂದ್ ಮಹೀಂದ್ರಾ ಅವರು ಶೇರ್ ಮಾಡಿರುವ ವೈರಲ್ ಫೋಟೋ ಹೇಗಿದೆ ಗೊತ್ತಾ?
ಪ್ರತಿಯೊಬ್ಬ ವರ ಮತ್ತು ಅವರ ಕುಟುಂಬವು ಸೌರಭ್ ಅವರಿಂದ ಕಲಿಯುವುದು ತುಂಬಾನೇ ಇದೆ. ಯಾವುದೇ ವಧು ಸರಕಲ್ಲ, ದುಡ್ಡು ಕೊಟ್ಟು ಖರೀದಿ ಮಾಡುವುದಕ್ಕೆ ಅಂತ ಎಲ್ಲರೂ ತಿಳಿದುಕೊಳ್ಳಬೇಕು ಎಂದು ಜನರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ