ಈಗಿನ ಕಾಲದಲ್ಲಿ ಮನರಂಜನೆಗೇನೂ ( Entertainment ) ಕೊರೆತೆ ಇಲ್ಲ ಬಿಡಿ. ಯಾಕಂದ್ರೆ ಟಿ.ವಿ ಹಾಗೂ ಮೊಬೈಲ್ಗಳು ಇವೆ. ರೇಡಿಯೋ ಕೂಡ ಮೊಬೈಲ್ನಲ್ಲಿಯೇ ಇರುತ್ತೆ. ಒಂದು ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ರೇಡಿಯೋ ಇರ್ತಿತ್ತು. ಆದರೆ ಇದೀಗ ಕೈಯಲ್ಲೇ ಮೊಬೈಲ್ (Mobile), ರಿಮೋಟ್ಗಳು ಇರಬೇಕಾದ್ರೆ ಮನರಂಜನೆಗೇನೂ ಕೊರತೆ ಇಲ್ಲ ಬಿಡಿ. ಯಾರ ಮನೆಯಲ್ಲಿ ಟಿ.ವಿ ಇಲ್ಲ ಹೇಳಿ? ಧಾರಾವಾಹಿಗಳು, ಕ್ರೀಡೆ, ನ್ಯೂಸ್ಗಳು ಮನೆಯಲ್ಲಿ ರಾರಾಜಿಸುತ್ತಿರುತ್ತದೆ. ಆದ್ರೆ ಇದೀಗ ಒಂದು ಊರು ಸಖತ್ ವೈರಲ್ (Viral) ಆಗ್ತಾ ಇದೆ. ಯಾಕೆ ಗೊತ್ತಾ? ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರ! ಏನು ಅಂತ ತಿಳಿದುಕೊಳ್ಳಲು ಈ ಸ್ಟೋರಿಯನ್ನು (Story) ಸಂಪೂರ್ಣವಾಗಿ ಓದಿ.
ಅಮೇಥಿಯ ಐಂಥಾ ಎಂಬ ಗ್ರಾಮದಲ್ಲಿ ಸುಮಾರು 200 ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮವು ರಸ್ತೆ-ವಿದ್ಯುತ್-ನೀರಿನ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಇನ್ನು ಕೆಲವು ಮನೆಗಳಲ್ಲಿ ಫ್ರಿಡ್ಜ್, ಕೂಲರ್, ವಾಷಿಂಗ್ ಮೆಷಿನ್ಗಳು ಬಳಕೆಯಲ್ಲಿವೆ. ಇದೇನು ಕಾಮನ್, ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುತ್ತೆ. ಇದ್ರಲ್ಲಿ ಏನು ಸ್ಪೆಷಲ್ ಅಂದುಕೊಂಡ್ರಾ? ಅಸಲಿ ಕಥೆ ಕೇಳಿ.
ಎಲ್ಲಾ ಮಿಷಿನ್ಗಳು ಇವೆ. ಆದರೆ, ಇಲ್ಲಿ ಟಿವಿ ಬಳಸದಿರುವುದು ಈ ಗ್ರಾಮದ ಸಂಪ್ರದಾಯ. ಅನಾದಿ ಕಾಲದ ಸಂಪ್ರದಾಯವನ್ನು ಇಂದಿಗೂ ಗ್ರಾಮಸ್ಥರು ನಿಷ್ಠೆಯಿಂದ ಪಾಲಿಸುತ್ತಿದ್ದಾರೆ. ಟಿವಿ ಇಲ್ಲದ ಕಾರಣ ಜನರು ಮನರಂಜನೆಗಾಗಿ ಅಂಗಡಿಗಳಲ್ಲಿ ಕುಳಿತುಕೊಳ್ಳುತ್ತಾರೆ. ಗ್ರಾಮಸ್ಥರು ಪತ್ರಿಕೆಗಳನ್ನು ಓದುತ್ತಾರೆ. ಅವರು ಪರಸ್ಪರ ಸುದ್ದಿಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಯಾವುದೇ ಸಂದರ್ಭದಲ್ಲೂ ಟಿವಿಯ ಸಹಾಯವನ್ನು ತೆಗೆದುಕೊಳ್ಳುವುದಿಲ್ಲ.
ಅಮೇಥಿಯ ಗೌರಿಗಂಜ್ ತಹಸಿಲ್ ಅಡಿಯಲ್ಲಿ ಬರುವ ಐಂಥಾ ಗ್ರಾಮವು ಸುಮಾರು 200 ಮನೆಗಳನ್ನು ಹೊಂದಿದೆ. ಆದರೆ ಜನರು ಯಾವುದೇ ಮನೆಯಲ್ಲಿ ಟಿವಿ ಇಡುವುದಿಲ್ಲ. ಮಕ್ಕಳಿಗೆ ಓದಲು ಗ್ರಾಮದಲ್ಲಿಯೇ 2 ಸರಕಾರಿ ಶಾಲೆಗಳಿವೆ. ಇದರೊಂದಿಗೆ ಧಾರ್ಮಿಕ ಶಿಕ್ಷಣಕ್ಕಾಗಿ ಟ್ಯೂಷನ್, ಪುಸ್ತಕಗಳು ಇದೆ.
ಇದನ್ನೂ ಓದಿ: ಈ ದೇಶದಲ್ಲಿ ವ್ಯಾಲೆಂಟೈನ್ಸ್ ಡೇ ಒಂದು ದಿನಕ್ಕೆ ಸೀಮಿತವಲ್ಲ, ವರ್ಷಕ್ಕೆ 12 ಬಾರಿ ಈ ದಿನವನ್ನು ಆಚರಿಸ್ತಾರಂತೆ!ನುಸರಿಸುತ್ತಾರೆ
ಇಲ್ಲಿ ಮಕ್ಕಳಿಗೆ ಉರ್ದು ಜೊತೆಗೆ ಹಿಂದಿ ಭಾಷೆಯನ್ನು ಕಲಿಸಲಾಗುತ್ತದೆ. ಗ್ರಾಮದಲ್ಲಿ ಬಹುತೇಕ ಎಲ್ಲಾ ಸೌಲಭ್ಯಗಳಿವೆ, ಆದರೆ ಇಂದಿಗೂ ಜನರು ಇಲ್ಲಿ ಟಿವಿ ಬಳಸುವುದಿಲ್ಲ. ಮದುವೆಗಳಲ್ಲಿಯೂ ಟಿವಿಯನ್ನು ಉಡುಗೊರೆಯಾಗಿ ನೀಡುವುದಿಲ್ಲ ಅಥವಾ ತೆಗೆದುಕೊಳ್ಳುವುದಿಲ್ಲ. ಈ ಹಳ್ಳಿಯ ಜನರು ವಿದೇಶದಲ್ಲಿದ್ದರೂ ಟಿ.ವಿ. ನೋಡೋದಿಲ್ಲ.
ಗ್ರಾಮದಲ್ಲಿ ಟಿವಿ ನೋಡುವ ಸಂಪ್ರದಾಯ ಇಲ್ಲ ಎನ್ನುತ್ತಾರೆ ಐಂಥಾ ಗ್ರಾಮದ ರಿಜ್ವಾನ್ ಅಹಮದ್. ಗ್ರಾಮದ ಯಾವ ಮನೆಯಲ್ಲೂ ಟಿವಿ ಇಲ್ಲ. ನಮ್ಮ ಧರ್ಮದಲ್ಲಿ ಟಿವಿ ನೋಡುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಈ ಸಂಪ್ರದಾಯವು ನಮ್ಮ ಪೂರ್ವಿಕರು ನಡೆಸಿಕೊಂಡು ಬರುತ್ತಿದ್ದು, ಮುಂದೆಯೂ ಇದನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.
ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರಬಾರದೆಂಬ ಕಾರಣಕ್ಕಾಗಿ ಈ ಸಂಪ್ರದಾಯ!
ಗ್ರಾಮದ ಮುಖಂಡ ಮೊಹಮ್ಮದ್ ಶಮೀಮ್ ಮಾತನಾಡಿ, ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ನಮ್ಮ ಧರ್ಮಕ್ಕೆ ಇದು ವಿರುದ್ಧವಾಗಿವೆ. ಮಕ್ಕಳು ಕೆಟ್ಟ ಸಹವಾಸಕ್ಕೆ ಹೋಗುವುದಿಲ್ಲ ಮತ್ತು ಅಡ್ಡ ಪರಿಣಾಮಗಳನ್ನು ಪಡೆಯುವುದಿಲ್ಲ, ಅದಕ್ಕಾಗಿಯೇ ಇಲ್ಲಿ ಟಿವಿಯನ್ನು ಎಂದಿಗೂ ಇಡಲ್ಲ. ಹಾಗೆಯೇ ಟಿವಿ ಇಡುವುದು ನಮ್ಮ ಧರ್ಮದಲ್ಲಿ ಇಲ್ಲ. ನಾವು ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ.
ಇದಲ್ಲದೆ ಯಾರಾದರೂ ಮೊಬೈಲ್‌ನಲ್ಲಿ ರಹಸ್ಯವಾಗಿ ಏನನ್ನಾದರೂ ವೀಕ್ಷಿಸಿದರೆ ಅದು ಬೇರೆ ವಿಷಯ, ಆದರೆ ಟಿವಿ ನೋಡುವುದು ಅಥವಾ ಇಟ್ಟುಕೊಳ್ಳುವುದನ್ನು ಇಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ