Mental Health: ಕೆಟ್ಟ ಮಾತು ಆಡುವುದು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ : ಸಂಶೋಧನೆಯಲ್ಲಿ ಬಹಿರಂಗ..!

ನಿಮಗೊಂದು ಅಚ್ಚರಿಯ ವಿಷಯ ಹೇಳ್ತೀವಿ ಕೇಳಿ. ಹೀಗೆ ಕೋಪದಲ್ಲಿ, ಅಸಹ್ಯವಾದ, ಕೆಟ್ಟ ಮಾತುಗಳನ್ನು ಆಡುವವರೇ ಜೀವನದಲ್ಲಿ ನಿಜಕ್ಕೂ ಸಂತೋಷವಾಗಿರುವ ವ್ಯಕ್ತಿಗಳು ಎನ್ನುತ್ತಿವೆ ಸಂಶೋಧನೆಗಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೈ, ಬಾಯಿ ಶುದ್ಧವಾಗಿದ್ರೆ ಎಲ್ಲಿ ಬೇಕಾದರೂ ಸಲ್ಲಬಹುದು ಎನ್ನುವ ಮಾತು ಚಾಲ್ತಿಯಲ್ಲಿದೆ. ಎಂತಹದ್ದೇ ಕಷ್ಟ ಬಂದರೂ ಪರರ ವಸ್ತುವಿಗೆ ಆಸೆ ಪಡಬಾರದು. ಜೊತೆಗೆ ಅತಿರೇಕದ ವರ್ತನೆ, ಕೋಪ, ಸಿಟ್ಟಿನಂತಹ ಕೆಟ್ಟ ಸಂದರ್ಭದಲ್ಲಿ ನಮ್ಮ ಮಾತುಗಳ ಮೇಲೆ ನಿಯಂತ್ರಣವಿರಬೇಕು ಎನ್ನುವುದು ಈ ಮಾತಿನ ಅರ್ಥ. ಈ ರೀತಿ ಉತ್ತಮ ನಡವಳಿಕೆ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತದೆ. ಆದರೆ ಈ ಸಂದರ್ಭದಲ್ಲಿ ಮನದೊಳಗೆ ಅದುಮಿಟ್ಟುಕೊಂಡ ಕೆಟ್ಟ ಪದಗಳು ಮಾನಸಿಕ ಸಮಸ್ಯೆಯನ್ನು ತಂದೊಡ್ಡಬಹುದು. ಇದೇ ಕಾರಣಕ್ಕೆ ಕೆಲವರು ಕೋಪದ ಸಮಯದಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಎಲ್ಲರಲ್ಲೂ ನಿಷ್ಠುರತೆ ಸಂಪಾದನೆ ಮಾಡುತ್ತಾರೆ.

ಆದರೆ, ನಿಮಗೊಂದು ಅಚ್ಚರಿಯ ವಿಷಯ ಹೇಳ್ತೀವಿ ಕೇಳಿ. ಹೀಗೆ ಕೋಪದಲ್ಲಿ, ಅಸಹ್ಯವಾದ, ಕೆಟ್ಟ ಮಾತುಗಳನ್ನು ಆಡುವವರೇ ಜೀವನದಲ್ಲಿ ನಿಜಕ್ಕೂ ಸಂತೋಷವಾಗಿರುವ ವ್ಯಕ್ತಿಗಳು ಎನ್ನುತ್ತಿವೆ ಸಂಶೋಧನೆಗಳು.

Everything You Need to Know About Anxiety health and lifestyle
ಸಾಂದರ್ಭಿಕ ಚಿತ್ರ


ಕೋಪ ಹೊರಹಾಕುವವರೇ ಸುಖಿಗಳು

ಮನೆ ಇರಲಿ... ಇಲ್ಲವೇ ಕಚೇರಿ ಇರಲಿ... ಯಾರೇ ಇರಲಿ... ಎಲ್ಲರೆದುರು ತಮ್ಮ ಕೋಪ ಹೊರ ಹಾಕುವ ವ್ಯಕ್ತಿಗಳು ಮಾನಸಿಕವಾಗಿ ಬಹಳ ನೆಮ್ಮದಿಯಾಗಿರುವುದು ಈ ಸಂಶೋಧನೆಯಿಂದ ತಿಳಿದು ಬಂದಿದೆ.

ನಿಂದಿಸಿದವರು ಸುಖ ಜೀವಿಗಳು

ಭಾಷೆಯ ಮೇಲೆ ಹಿಡಿತವಿಲ್ಲದಿದ್ದರೂ ಒತ್ತಡ ರಹಿತ ಜೀವನದ ಸುಖದ ಒಡೆಯರು ಇವರು. ನ್ಯೂಜೆರ್ಸಿಯ ಕೀನ್ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯ ಪ್ರಕಾರ, ಹೀಗೆ ಇನ್ನೊಬ್ಬರನ್ನು ನಿಂದಿಸಿ ತಮ್ಮ ಸಿಟ್ಟನ್ನು ಪ್ರದರ್ಶಿಸುವ ವ್ಯಕ್ತಿಗಳು ದೀರ್ಘಕಾಲದವರೆಗೂ ಸಂತೋಷವಾದ ಮತ್ತು ಆರೋಗ್ಯಪೂರ್ಣ ಜೀವನ ನಡೆಸುತ್ತಾರೆ. ಹೀಗೆ ತಮ್ಮ ಕೋಪವನ್ನು ಕೆಟ್ಟ ಮಾತುಗಳ ಮೂಲಕ ವ್ಯಕ್ತಪಡಿಸುವ ಇವರು ಹತಾಶೆ, ಒತ್ತಡವನ್ನು ಮೀರಿ ಶಾಂತಿಯಿಂದ ಬದುಕು ನಡೆಸುತ್ತಾರೆ.

ಆ ಕ್ಷಣಕ್ಕೆ ಬಂದ ಸಿಟ್ಟನ್ನು ಅಲ್ಲಿಯೇ ಪ್ರದರ್ಶಿಸಿ ಮನಸ್ಸನ್ನು ಪ್ರಫುಲ್ಲವಾಗಿರಿಸಿಕೊಳ್ಳುತ್ತಾರೆ. ಸಂಶೋಧನೆಯ ಪ್ರಕಾರ ಈ ರೀತಿ ಮೌಖಿಕವಾಗಿ ಯಾವುದನ್ನೂ ಕೇರ್​ ಮಾಡದೇ ನಿಂದನೆಯ ಮಾತುಗಳನ್ನಾಡುವುದು ಉಪಯುಕ್ತಕಾರಿಯಾಗಿದೆ. ಆದರೆ, ಇದನ್ನು ದುರುಪಯೋಗಪಡಿಸಿಕೊಳ್ಳುವವರ ವಿಚಾರದಲ್ಲಿ ಸ್ವಲ್ಪ ಯೋಚಿಸಬೇಕಷ್ಟೇ.

ಕೆಟ್ಟ ಮಾತುಗಳನ್ನಾಡುವವರು ನೆಮ್ಮದಿಯಾಗಿರುವರು

ಕೀನ್ ವಿಶ್ವವಿದ್ಯಾಲಯವು ಇಂತಹ ಅಪರೂಪದ ಸಂಶೋಧನೆಗಾಗಿ ತಮ್ಮ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿದೆ. ಈ ಸಂಶೋಧನೆಗಾಗಿ ಸಣ್ಣದೊಂದು ಪ್ರಯೋಗ ನಡೆಸಲಾಗಿದೆ. ವಿದ್ಯಾರ್ಥಿಗಳ ಕೈಗಳನ್ನು ಮಂಜಿನಷ್ಟೇ ತಣ್ಣನೆಯ ನೀರಿನಲ್ಲಿ ಮುಳುಗಿಸಲಾಗಿತ್ತು. ಈ ಹಂತದಲ್ಲಿ ವಿದ್ಯಾರ್ಥಿಗಳು ಕೆಟ್ಟ, ಅವಾಚ್ಯ, ನಿಂದನೀಯ ಪದಗಳನ್ನು ಬಳಸಿದ್ದಾರೆ. ಈ ರೀತಿ ಪದಗಳನ್ನು ಬಳಸಿದ ವಿದ್ಯಾರ್ಥಿಗಳು ಹೆಚ್ಚು ಹೊತ್ತು ಆ ನೀರಿನಲ್ಲಿ ಕೈ ಮುಳುಗಿಸಿದ್ದಾರೆ.

ಇದನ್ನೂ ಓದಿ: ಈ ಎಣ್ಣೆಗಳ ಬಳಕೆ ಕೂದಲು ಉದುರುವಿಕೆಗೆ ಕಾರಣವಾಗಬಹುದು..!

ಆದರೆ, ಅವಾಚ್ಯ ಶಬ್ಧ ಬಳಸದ ವಿದ್ಯಾರ್ಥಿಗಳು ನೀರಿನ ಪ್ರಯೋಗದಲ್ಲಿ ದೀರ್ಘ ಸಮಯ ನಿಲ್ಲದೇ ಕೈ ಚೆಲ್ಲಿದ್ದಾರೆ. ಆದ್ದರಿಂದ ನಿಂದನೀಯ , ಕೆಟ್ಟ ಪದಗಳನ್ನಾಡುತ್ತ ಹೆಚ್ಚು ಹೊತ್ತು ಪ್ರಯೋಗದಲ್ಲಿದ್ದವರನ್ನು ಗಮನಿಸಿ ಸಂಶೋಧನೆ ಈ ತೀರ್ಮಾನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ನಿಂದನೀಯ, ಕೆಟ್ಟ ಬೈಗುಳ, ಅವಾಚ್ಯ ಶಬ್ಧಗಳ ಬಳಕೆಯು ವ್ಯಕ್ತಿಯೊಬ್ಬನನ್ನು ಒತ್ತಡದ ಭಾವನೆಗಳಿಂದ ಬಿಡುಗಡೆಗೊಳಿಸತ್ತದೆ. ಆ ಮೂಲಕ ಹತಾಶೆ, ಸಿಟ್ಟು, ಕೋಪವನ್ನು ಕೆಟ್ಟ ಮಾತುಗಳ ಮೂಲಕ ಹೊರಹಾಕಲಾಗುತ್ತದೆ. ಇದರಿಂದ ವ್ಯಕ್ತಿ ಮಾನಸಿಕವಾಗಿ ಸಂತೋಷ ಅನುಭವಿಸುತ್ತಾನೆ. ಮಾನಸಿಕ ಒತ್ತಡ, ರಕ್ತದೊತ್ತಡದಂತಹ ಸಮಸ್ಯೆಗಳಿಂದ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸುತ್ತಾನೆ. ಇದು ಮೆದುಳಿನ ಆರೋಗ್ಯದ ರಹಸ್ಯವೆಂದು ಸಂಶೋಧಕರು ವಿವರಿಸಿದ್ದಾರೆ.

ಕೆಟ್ಟ ಬೈಗುಳ ಹತಾಶೆಯನ್ನು ನಿವಾರಿಸುತ್ತದೆ

ಯಾವ ವ್ಯಕ್ತಿಯು ಹೆಚ್ಚು ಒತ್ತಡ ಮುಕ್ತನಾಗಿರುತ್ತಾನೋ ಆತ ದೀರ್ಘಾಯುಷಿ ಆಗಿರುತ್ತಾನೆ. ಕೆಟ್ಟ ಪದಗಳನ್ನು ಬಳಸದ ವ್ಯಕ್ತಿಗಳು ಇಂತಹ ಕಠಿಣ ಸಂದರ್ಭದಲ್ಲಿ ಬಿಟ್ಟುಕೊಡುವ ಮನೋಭಾವದಾಗಿರುತ್ತಾರೆ ಎನ್ನುವ ಇನ್ನೊಂದು ಅಂಶವನ್ನು ಸಂಶೋಧನೆ ಬಹಿರಂಗ ಮಾಡಿದೆ. ಹೀಗೆ ಮಾಡುವುದರಿಂದ ಕೆಟ್ಟ ಬೈಗುಳ , ಹತಾಶೆ, ಸಿಟ್ಟು ಮನದಲ್ಲೇ ಉಳಿದುಕೊಂಡು ಅವರು ಮಾನಸಿಕ ಒತ್ತಡಕ್ಕೆ ತುತ್ತಾಗುತ್ತಾರೆ. ಅಲ್ಲದೇ ಇದು ಮಾನಸಿಕ ಆರೋಗ್ಯ ಹದಗೆಡುವಂತೆ ಮಾಡುತ್ತದೆ ಎನ್ನುವುದನ್ನು ಸಂಶೋಧಕರು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: Fruits: ಮಧುಮೇಹಿಗಳು ತಿನ್ನಬಹುದಾದ ಹತ್ತು ಹಣ್ಣುಗಳ ಪಟ್ಟಿ ಇಲ್ಲಿದೆ..!

ಅದೇನೇ ಇರಲಿ, ಕೋಪ, ಸಿಟ್ಟು ಎಲ್ಲವೂ ಸಹಜವೇ. ಈ ನಿಟ್ಟಿನಲ್ಲಿ ಸಿಟ್ಟು ಮಾಡಿಕೊಳ್ಳುವ ಆತ್ಮೀಯರನ್ನು ದ್ವೇಷಿಸುವ ಬದಲಿಗೆ ಅರ್ಥ ಮಾಡಿಕೊಂಡು ನೋಡುವುದು ಮುಖ್ಯವಾಗುತ್ತದೆ. ಒಳ್ಳೆಯತನ ಮತ್ತು ಕೆಟ್ಟತನ ಎರಡೂ ಸಹ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ಅದನ್ನೇ ನಾವು ನಮ್ಮ ವ್ಯಕ್ತಿತ್ವಕ್ಕೆ ಅಂಟಿಸಿಕೊಳ್ಳಬಾರದು. ಅಗತ್ಯವಿದ್ದಾಗ ನಮ್ಮ ಸಿಟ್ಟನ್ನು ಪೋಷಿಸಬೇಕು, ಇಲ್ಲವಾದರೇ ನಿರ್ಲಕ್ಷಿಸಬೇಕು. ಒಮ್ಮೆ ಕೆಟ್ಟ ಮಾತನಾಡಿ ನೆಮ್ಮದಿ ಪಡೆದು ಆ ನಂತರ ಪಡುವ ಪಶ್ಚಾತಾಪ ಇನ್ನೊಂದು ಸಮಸ್ಯೆಗೆ ಕಾರಣವಾಗದಂತೆ ಎಚ್ಚರವಹಿಸಿ ಎನ್ನುತ್ತಾರೆ ಹಿರಿಯರು.
Published by:Anitha E
First published: