ಗೋಡಂಬಿ ಹಾಲಿನಿಂದ ಕೂದಲು, ಚರ್ಮ ಎರಡೂ ಫಳ ಫಳ..!

ಗೋಡಂಬಿ

ಗೋಡಂಬಿ

ಗೋಡಂಬಿ ಹಾಲು ಕೊಲಾಜಿನ್ ಅನ್ನು ಹೆಚ್ಚಿಸುತ್ತದೆ, ಕೂದಲನ್ನು ಮೃದುವಾಗಿಸುತ್ತದೆ, ಒಣ ಕೂದಲಿಗೆ ಹೊಳಪು ನೀಡುತ್ತದೆ, ದಟ್ಟ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅಕಾಲಿಕ ಬಿಳಿ ಕೂದಲನ್ನು ತಡೆಯುತ್ತದೆ. ಗೋಡಂಬಿ ಹಾಲನ್ನು ಬಳಸಿ, ಮುಖ ಮತ್ತು ಕೂದಲಿಗೆ ಆರೈಕೆ ಮಾಡಿದರೆ ನಿಮ್ಮ ಸೌಂದರ್ಯ ಇಮ್ಮಡಿಸುವುದರಲ್ಲಿ ಸಂಶಯ ಇಲ್ಲ.

ಮುಂದೆ ಓದಿ ...
  • Share this:

ಗೋಡಂಬಿ ಬೀಜದ ರುಚಿಯನ್ನು ಮೆಚ್ಚದವರಿಲ್ಲ. ಸಿಹಿ ಖಾದ್ಯಗಳಿರಲಿ, ಮಸಾಲೆ ಖಾದ್ಯಗಳಿರಲಿ ಎಲ್ಲದರ ಸ್ವಾದವನ್ನು ಹೆಚ್ಚಿಸುತ್ತದೆ ಗೋಡಂಬಿ ಬೀಜ. ಆದರೆ ಗೋಡಂಬಿಯ ಹಾಲು ನಾಲಗೆಗೆ ಮಾತ್ರವಲ್ಲ, ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿ..!


ಗೋಡಂಬಿ ಬೀಜಗಳನ್ನು ಮಿಕ್ಸಿಯಲ್ಲಿ ರುಬ್ಬಿ, ಹಾಲನ್ನು ತೆಗೆಯಬಹುದು. ಆ ಹಾಲಿನಲ್ಲಿ ಹೇರಳ ವಿಟಮಿನ್‍ಗಳು, ಆ್ಯಂಟಿ ಆಕ್ಸಿಡೆಂಟ್‍ಗಳು, ಕಬ್ಬಿಣಾಂಶ ಮತ್ತು ಜಿಂಕ್ ಇರುತ್ತದೆ. ಗೋಡಂಬಿ ಹಾಲನ್ನು ಕುಡಿದಾಗ ಅಥವಾ ಚರ್ಮ ಮತ್ತು ಕೂದಲಿಗೆ ಲೇಪಿಸಿದಾಗ , ಅದು ಕೂದಲು ಮತ್ತು ಚರ್ಮದ ಹಲವಾರು ಸಮಸ್ಯೆಗಳನ್ನು ನಿವಾರಿಸಿ, ಸೌಂದರ್ಯವನ್ನು ಹೆಚ್ಚಿಸುತ್ತದೆ.


ಗೋಡಂಬಿ ಹಾಲು ಕೊಲಾಜಿನ್ ಅನ್ನು ಹೆಚ್ಚಿಸುತ್ತದೆ, ಕೂದಲನ್ನು ಮೃದುವಾಗಿಸುತ್ತದೆ, ಒಣ ಕೂದಲಿಗೆ ಹೊಳಪು ನೀಡುತ್ತದೆ, ದಟ್ಟ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅಕಾಲಿಕ ಬಿಳಿ ಕೂದಲನ್ನು ತಡೆಯುತ್ತದೆ. ಗೋಡಂಬಿ ಹಾಲನ್ನು ಬಳಸಿ, ಮುಖ ಮತ್ತು ಕೂದಲಿಗೆ ಆರೈಕೆ ಮಾಡಿದರೆ ನಿಮ್ಮ ಸೌಂದರ್ಯ ಇಮ್ಮಡಿಸುವುದರಲ್ಲಿ ಸಂಶಯ ಇಲ್ಲ.


ಯೌವನಯುತ ಚರ್ಮಕ್ಕಾಗಿ..


ಸಾಮಾಗ್ರಿಗಳು:
2 ಟೇಬಲ್ ಚಮಚ ಗೋಡಂಬಿ ಹಾಲು
1 ಟೇಬಲ್ ಚಮಚ ಹಿಚುಕಿದ ಬೆಣ್ಣೆ ಹಣ್ಣು (ಅವಕಾಡೋ)
1 ಟೇಬಲ್ ಚಮಚ ಲೋಳೆಸರ (ಅಲೋವೇರಾ)


ವಿಧಾನ:
ಗೊಡಂಬಿಗಳನ್ನು ಮಿಕ್ಸಿಯಲ್ಲಿ ರುಬ್ಬಿ ಹಾಲು ತೆಗೆಯಿರಿ. ಹಾಲಿಗೆ ಹೆಚ್ಚು ನೀರು ಸೇರಿಸಬೇಡಿ. ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಪೇಸ್ಟ್ ತಯಾರಿಸಿ. ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. 20 ನಿಮಿಷಗಳ ಬಳಿಕ ತೊಳೆದು ತೆಗೆಯಿರಿ.


ಮೊಡವೆ ನಿವಾರಣೆಗೆ


ಸಾಮಾಗ್ರಿಗಳು:
2 ಟೇಬಲ್ ಚಮಚ ಓಟ್ಸ್ ಹಿಟ್ಟು
1 ಟೇಬಲ್ ಚಮಚ ಗೋಡಂಬಿ ಹಾಲು
1 ಟೇಬಲ್ ಚಮಚ ಸೌತೆಕಾಯಿ ರಸ
1/4 ಟೇಬಲ್ ಚಮಚ ಅರಿಶಿನ ಪುಡಿ


ವಿಧಾನ:
ಓಟ್ಸ್ ಹಿಟ್ಟು , ಗೋಡಂಬಿ ಹಾಲು , ಸೌತೆಕಾಯಿ ರಸ, ಅರಶಿನ ಪುಡಿಯನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಅದನ್ನು ನಿಮ್ಮ ಚರ್ಮಕ್ಕೆ ಲೇಪಿಸಿರಿ. 20 ನಿಮಿಷಗಳ ಬಳಿಕ ಮುಖಕ್ಕೆ ಹಚ್ಚಿದ ಲೇಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ತೆಗೆಯಿರಿ.


ಹೊಳೆಯುವ ಕೂದಲಿಗಾಗಿ


ಸಾಮಾಗ್ರಿಗಳು:
3 ಟೇಬಲ್ ಚಮಚ ನೆಲ್ಲಿಕಾಯಿ ಪುಡಿ
2 ಟೇಬಲ್ ಚಮಚ ಗೋಡಂಬಿ ಹಾಲು
1 ಟೇಬಲ್ ಚಮಚ ಆಲಿವ್ ಎಣ್ಣೆ


ಇದನ್ನೂ ಓದಿ: ತೇಜಸ್ವಿ ಯಾದವ್​- ಚಿರಾಗ್ ಪಾಸ್ವಾನ್ ಮೈತ್ರಿಗೆ ಗ್ರೀನ್​ ಸಿಗ್ನಲ್​ ಕೊಟ್ಟ ಲಾಲು ಪ್ರಸಾದ್ ಯಾದವ್

ವಿಧಾನ:
ನೆಲ್ಲಿಕಾಯಿ ಪುಡಿ , ಗೋಡಂಬಿ ಹಾಲು, ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಹೇರ್ ಮಾಸ್ಕ್ ತಯಾರಿಸಿ. ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಕೂದಲನ್ನು ಗಂಟು ಹಾಕಿಕೊಳ್ಳಿ. 30 ನಿಮಿಷಗಳ ಬಳಿಕ ಕೂದಲನ್ನು ತಣ್ಣೀರಲ್ಲಿ ತೊಳೆದು ತೆಗೆಯಿರಿ. ಕೂದಲಲ್ಲಿ ಹೇರ್ ಮಾಸ್ಕ್‌ನ ಶೇಷ ಉಳಿದಿದ್ದರೆ ಯಾವುದಾದರೂ ಉತ್ತಮ ರಾಸಾಯನಿಕ ಮುಕ್ತ ಶ್ಯಾಂಪೂ ಬಳಸಿ ತೊಳೆಯಿರಿ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: