Kitchen Hacks: ಅಡುಗೆಗೆ ಖಾರ ಜಾಸ್ತಿ ಆಯ್ತಾ? ಹೀಗೆ ಮಾಡಿದ್ರೆ ಖಾರ ಕೂಡಲೇ ಕಡಿಮೆ ಆಗುತ್ತೆ ನೋಡಿ

ಕೆಲವೊಂದು ಉಪಾಯಗಳ ಮೂಲಕ ಉಪ್ಪು ಅಥವಾ ಖಾರ ಹೆಚ್ಚಾದ ಆಹಾರದ ರುಚಿಯನ್ನು ಸರಿಪಡಿಸಲು ಸಾಧ್ಯವಿದೆ. ಈ ಕೆಳಗೆ ಆಡುಗೆಯಲ್ಲಿ ಖಾರ ಹೆಚ್ಚಾದರೆ ಹೇಗೆ ಸರಿಪಡಿಸಬಹುದು ಎಂಬ ಕುರಿತು ಕೆಲವು ಸಲಹೆಗಳನ್ನು ನೀಡಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Food Tricks: ನಿಮ್ಮ ನೆಚ್ಚಿನ ಆಹಾರವನ್ನು ತಿನ್ನಬೇಕು ಎನ್ನುವಷ್ಟರಲ್ಲಿ, ಅದಕ್ಕೆ ನೀವಂದುಕೊಂಡದ್ದಕ್ಕಿಂತ ಹೆಚ್ಚು ಖಾರ ಸೇರಿಸಿದ್ದೀರಿ ಎಂಬುವುದು ಗಮನಕ್ಕೆ ಬಂದಂತಹ ಸನ್ನಿವೇಶವನ್ನು ಎದುರಿಸಿದ್ದೀರಾ? ಅಡುಗೆ ಮಾಡುವುದು ಒಂದು ಕಲೆ, ನಿರಂತರ ಅಭ್ಯಾಸದಿಂದಷ್ಟೇ ಅದರಲ್ಲಿ ಪರಿಣಿತಿ ಪಡೆಯಲು ಸಾಧ್ಯ. ಕೆಲವೊಮ್ಮೆ ಪರಿಣಿತ ಅಡುಗೆ ಭಟ್ಟರು ಕೂಡ, ಅಡುಗೆಗೆ ಸಾಮಾಗ್ರಿಗಳನ್ನು ಹಾಕುವಾಗ ಅಳತೆ ತಪ್ಪುವುದುಂಟು.ಆದರೆ ಉಪ್ಪು ಅಥವಾ ಖಾರ ಹೆಚ್ಚಾದಾಗ ಅಡುಗೆ ಕೆಡುವುದು ಖಂಡಿತ. ಹಾಗಂತ , ಅದಕ್ಕೆ ಪರಿಹಾರ ಇಲ್ಲವೆಂದಲ್ಲ, ಕೆಲವೊಂದು ಉಪಾಯಗಳ ಮೂಲಕ ಉಪ್ಪು ಅಥವಾ ಖಾರ ಹೆಚ್ಚಾದ ಆಹಾರದ ರುಚಿಯನ್ನು ಸರಿಪಡಿಸಲು ಸಾಧ್ಯವಿದೆ. ಈ ಕೆಳಗೆ ಆಡುಗೆಯಲ್ಲಿ ಖಾರ ಹೆಚ್ಚಾದರೆ ಹೇಗೆ ಸರಿಪಡಿಸಬಹುದು ಎಂಬ ಕುರಿತು ಕೆಲವು ಸಲಹೆಗಳನ್ನು ನೀಡಲಾಗಿದೆ.
1. ಹಾಲಿನ ಉತ್ಪನ್ನ
ಅತೀ ಮಸಾಲೆಯುಕ್ತ ಅಥವಾ ಖಾರ ಆಹಾರಕ್ಕೆ ಹಾಲಿನ ಉತ್ಪನ್ನಗಳನ್ನು ಸೇರಿಸುವುದರಿಂದ ಅದರ ರುಚಿಯನ್ನು ಸರಿದೂಗಿಸಬಹುದು.ಹಾಲು, ಮೊಸರು ಅಥವಾ ಕೆನೆಯನ್ನು ಸೇರಿಸಿ, ಆಹಾರದಲ್ಲಿನ ಖಾರದ ಪ್ರಮಾಣವನ್ನು ಸರಿದೂಗಿಸಬಹುದು.ಅದನ್ನು ಆಹಾರಕ್ಕೆ ಸೇರಿಸುವುದರ ಜೊತೆಗೆ, ಖಾರ ಆಹಾರ ಸೇವನೆಯ ಪರಿಣಾಮವನ್ನು ಕಡಿಮೆ ಮಾಡಲು ನೀರಿನ ಬದಲು ಹಾಲನ್ನು ಕುಡಿಯಬಹುದು.
2. ಹೆಚ್ಚು ಸಾಮಾಗ್ರಿ ಸೇರಿಸಿ
ಇದು ಅತ್ಯಂತ ಸರಳ ವಿಧಾನದಂತೆ ಕಂಡರೂ ಅದ್ಭುತವಾಗಿ ಕೆಲಸ ಮಾಡುತ್ತದೆ. ನೀವು ಸೂಪ್, ಸ್ಟಿವ್ ಅಥವಾ ಸಾಂಬಾರನ್ನು ಹೆಚ್ಚು ಮಸಾಲೆಯುಕ್ತ ಮಾಡಿದ್ದೀರಿ ಎಂದಾದಲ್ಲಿ ಅದಕ್ಕೆ ಕೊಂಚ ನೀರು ಸೇರಿಸಿ, ಸರಿಮಾಡಬಹುದು. ನೀವು ಅದರಲ್ಲಿನ ಬೇರೆ ಸಾಮಾಗ್ರಿಗಳ ಪ್ರಮಾಣವನ್ನು ಕೂಡ ಹೆಚ್ಚಿಸಬಹುದು. ಉದಾಹರಣೆಗೆ, ಪಾಸ್ತಾದಲ್ಲಿ ಇನ್ನಷ್ಟು ಪಾಸ್ತಾ ಸೇರಿಸುವುದು ಅಥವಾ ಮುಖ್ಯ ಆಹಾರಕ್ಕೆ ಇನ್ನಷ್ಟು ತರಕಾರಿಗಳನ್ನು ಹಾಕುವುದು. ಈರುಳ್ಳಿ,ಕ್ಯಾರೆಟ್ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಆಹಾರ ರುಚಿ ಹೆಚ್ಚಿಸಲು ಬಳಸಬಹುದು.


ಇದನ್ನೂ ಓದಿ: Kitchen Hacks: ಬೆಳ್ಳುಳ್ಳಿ ಸಿಪ್ಪೆ ಬಿಡಿಸೋಕೆ ಅಷ್ಟೆಲ್ಲಾ ಕಷ್ಟ ಪಡ್ಬೇಡಿ.. ತುಂಬಾ ಸಲಭದ ಟ್ರಿಕ್ ಇದೆ, ಹೀಗೆ ಮಾಡಿ ನೋಡಿ!


3. ನಟ್ ಬಟರ್/ ಒಣ ಬೀಜಗಳ ಬೆಣ್ಣೆ
ಖಾರವಾಗಿರುವ ತಿನಿಸಿಗೆ ಸ್ವಲ್ಪ ಶೇಂಗಾ ಬೆಣ್ಣೆ (ಪೀನಟ್ ಬಟರ್) ಸೇರಿಸಿ, ನೀವು ಆ ಆಹಾರ ತಿನ್ನುವಾಗ ಶೇಂಗಾದ ರುಚಿ ಖಂಡಿತಾ ಗೊತ್ತಾಗುವುದಿಲ್ಲ. ಶೇಂಗಾ ಬೆಣ್ಣೆಯ ಬದಲಿಗೆ ಆಲ್ಮಂಡ್ ಬಟರ್ ಕೂಡ ಸೇರಿಸಬಹುದು.
4. ಆಮ್ಲ
ಆಮ್ಲ ಅಂದರೆ, ವಿನೇಗರ್ , ಸಿಟ್ರಸ್ ಅಥವಾ ಕೆಚಪ್ ಕೂಡ ಆಗಬಹುದು. ಅತಿಯಾಗಿ ಖಾರವಾಗಿರುವ ಆಹಾರಕ್ಕೆ ಈ ಮೇಲಿನ ಆಮ್ಲಗಳಲ್ಲಿ ಯಾವುದನ್ನಾದರೂ ಒಂದೆರಡು ಚಮಚ ಹಾಕಿ, ಆಹಾರದ ರುಚಿಯನ್ನು ಸರಿದೂಗಿಸಬಹುದು.
5. ನಿಂಬೆ ರಸ
ಆಹಾರಕ್ಕೆ ನಿಂಬೆ ರಸ ಸೇರಿಸುವುರಿಂದಲೂ ಅದರಲ್ಲಿ ಖಾರವನ್ನು ಕಡಿಮೆ ಮಾಡಬಹುದು. ಹೆಚ್ಚುವರಿ ಮಸಾಲೆಯೊಂದಿಗೆ ಸೇರಿ ಲಿಂಬೆ ರಸ ಆಹಾರಕ್ಕೆ ಹೆಚ್ಚಿನ ರುಚಿ ಮತ್ತು ಸುವಾಸನೆ ನೀಡಬಲ್ಲದು.


ಇದನ್ನೂ ಓದಿ: Astrology: ಶ್ರಾವಣ ಮಾಸದ ಈ ದಿನಗಳಲ್ಲಿ ಉಪವಾಸ ಮಾಡಿದರೆ ಎಲ್ಲಾ ಅದೃಷ್ಟಗಳು ಒಲಿಯುತ್ತವಂತೆ, ಆಚರಣೆ ಹಿಂದಿನ ಕಾರಣ ತಿಳಿಯಿರಿ!


6.ಸಿಹಿ ಪದಾರ್ಥ
ಯಾವುದೇ ಖಾರವಾದ ಆಹಾರವನ್ನು ತಿಂದ ನಂತರ ಸಿಹಿ ತಿನ್ನುವ ಆಸೆ ಆಗುತ್ತದೆ. ಖಾರ ತಿಂದು ಸಿಹಿ ತಿನ್ನುವ ಬದಲು, ಆಹಾರದಲ್ಲಿನ ಅತೀ ಖಾರವನ್ನು ತಪ್ಪಿಸಲು ಅದಕ್ಕೆ ಸಿಹಿ ಹಾಕಿಬಿಡಿ. ನಿಮ್ಮ ಆಹಾರಕ್ಕೆ ಸಕ್ಕರೆ, ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಬಹುದು. ಆದರೆ ಪ್ರಮಾಣದ ಬಗ್ಗೆ ಎಚ್ಚರವಿರಲಿ, ಏಕೆಂದರೆ ಮುಖ್ಯ ಆಹಾರ ಸಿಹಿ ತಿನಿಸಾಗಿ ಬದಲಾಗಬಾರದು ಅಲ್ಲವೇ? ಸಕ್ಕರೆ ಮಾತ್ರವಲ್ಲ, ನೈಸರ್ಗಿಕ ಸಿಹಿ ಉಳ್ಳ ಈರುಳ್ಳಿ ಮತ್ತು ಟೊಮ್ಯಾಟೋಗಳು ಕೂಡ ಖಾರ ಆಹಾರದ ರುಚಿಯನ್ನು ಸರಿ ಮಾಡಿ, ಸ್ವಾದ ನೀಡಬಲ್ಲವು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: