ಏಸುವಿನ ಹೆಸರು ಬಳಕೆ; ಮಲಯಾಳಂ ನಿರ್ದೇಶಕ ನಾದಿರ್​ ಶಾ ವಿವಾದ ಸುಳಿಯಲ್ಲಿ!

ಚಿತ್ರದ ಶೀರ್ಷಿಕೆಯ ಮೇಲೆಯೇ ನಮಗೆ ಅಸಮಾಧಾನವಿದ್ದು ಚಿತ್ರದ ವಿಷಯ ಏನೆಂಬುದು ಇಲ್ಲಿ ಮುಖ್ಯವಾಗುವುದಿಲ್ಲ.ನಾದಿರ್​ ಶಾ ಅವರಂತಹ ನಿರ್ದೇಶಕರು ಈ ರೀತಿ ಮಾಡುತ್ತಾರೆ ಎಂಬುದು ಕೇಳಿ ದುಃಖವಾಗಿದೆ. ಕ್ರೈಸ್ತ ಧರ್ಮದವರನ್ನು ಅವಮಾನಿಸುವ ಕೆಲಸವನ್ನು ಚಲನಚಿತ್ರ ನಿರ್ಮಾಪಕರು ಮಾಡುತ್ತಿದ್ದಾರೆ ಎಂಬುದಾಗಿ ಜಾರ್ಜ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಟ ದಿಲೀಪ್​- ನಿರ್ದೇಶಕ ನಾದಿರ್​ ಶಾ

ನಟ ದಿಲೀಪ್​- ನಿರ್ದೇಶಕ ನಾದಿರ್​ ಶಾ

 • Share this:

  ಬಿಡುಗಡೆ ಕಾಣಬೇಕಾಗಿರುವ ಎರಡು ಮಲಯಾಳಂ ಚಲನಚಿತ್ರಗಳ ನಿರ್ದೇಶಕರು ಕ್ರಿಶ್ಚಿಯನ್ ಧರ್ಮದವರ ಭಾವನೆಗಳನ್ನು ನೋಯಿಸಿದ್ದಾರೆ ಎಂಬ ಕಾರಣಕ್ಕೆ ವಿವಾದಕ್ಕೆ ಒಳಗಾಗಿದ್ದು ಈಶೋ (ಏಸು, ಜೀಸಸ್) ಎಂಬ ಪದವನ್ನು ಚಿತ್ರತಂಡವು ಹಾಸ್ಯಾಸ್ಪದವಾಗಿ ಬಳಸಿಕೊಂಡಿದೆ ಎಂಬುದಾಗಿ ಧಾರ್ಮಿಕ ಸಮುದಾಯದ ಮುಖಂಡರು ನಿರ್ದೇಶಕರಾದ ನಾದಿರ್​ ಶಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ಹೆಸರನ್ನು ಕೂಡಲೇ ಬದಲಾಯಿಸಬೇಕಾಗಿ ಒತ್ತಾಯಪಡಿಸಿದ್ದಾರೆ.


  ನಾದಿರ್​ ಶಾ ನಿರ್ದೇಶನದಲ್ಲಿ ದಿಲೀಪ್ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರವಾದ ಕೇಶು ಈ ವೀಡಿಂಡೆ ನಾಥನ್ (ಕೇಶು ಮನೆಯ ಮುಖ್ಯಸ್ಥ) ಇದು ಯೇಶು ಈ ವೀಡಿಂಡೆ ನಾಥನ್ (ಜೀಸಸ್ ಈ ಮನೆಯ ಮುಖ್ಯಸ್ಥ) ಎಂಬ ಅದೇ ಸಮಾನ ಅರ್ಥವನ್ನು ಹೊಂದಿದ್ದು ಯೇಸುವಿನ ಹೆಸರನ್ನು ಚಿತ್ರ ತಂಡ ಪರಿಹಾಸ್ಯದ ರೂಪದಲ್ಲಿ ಬಳಸಿಕೊಂಡಿದೆ ಎಂದು ಕ್ರೈಸ್ತ ಧರ್ಮದವರು ದೂರಿದ್ದಾರೆ. 2019 ಕ್ಕಿಂತ ಮುಂಚೆಯೇ ಚಿತ್ರದ ಶೀರ್ಷಿಕೆಯನ್ನು ತಂಡವು ಘೋಷಿಸಿದ್ದರೂ ಈಗ ಚಿತ್ರತಂಡ ಹಾಗೂ ಸಿನಿಮಾ ನಿರ್ದೇಶಕರು ವಿವಾದಕ್ಕೆ ಒಳಗಾಗಿದ್ದಾರೆ.


  ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ನಾದಿರ್​ ಚಿತ್ರದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಹೆಸರನ್ನು ನನ್ನ ಇಚ್ಛೆಗೆ ಅನುಸಾರವಾಗಿ ನಾನು ಗೊತ್ತುಪಡಿಸಿದ್ದೇನೆ. ನಿರ್ಮಾಪಕರು ಹಾಗೂ ನಾಯಕನ ಸಮ್ಮತಿಯ ಮೇರೆಗೆ ಹೆಸರಿನ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಚಿತ್ರದ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ. ಈ ಹಿಂದೆ ಕೂಡ ಇದೇ ಹೆಸರಿನ ಚಿತ್ರಗಳು ಬಿಡುಗಡೆಗೊಂಡಿದ್ದವು. ಆದರೆ ಈಗ ಮಾತ್ರ ಏಕೆ ಇಂತಹ ವಿವಾದಗಳನ್ನು ಜನರು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  ಆಲ್ ಕೇರಳ ಕ್ಯಾಥೊಲಿಕ್ ಕಾಂಗ್ರೆಸ್ (AKCC) ಮಲಬಾರ್ ಚರ್ಚ್‌ನಲ್ಲಿನ ಕ್ಯಾಥೊಲಿಕ್‌ಗಳ ಸಂಘಟನೆಯು ಚಿತ್ರದ ಹೆಸರಿನ ಕುರಿತು ತಗಾದೆ ತೆಗೆದಿದ್ದು ಚಿತ್ರವೊಂದಕ್ಕೆ ತಮ್ಮ ದೇವರ ಹೆಸರಿಡುವುದನ್ನು ಕುರಿತು ಪ್ರತಿಭಟನೆ ನಡೆಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ನಮ್ಮೆಲ್ಲಾ ಕ್ರೈಸ್ತಧರ್ಮದವರಿಗೆ ಒಂದೇ ದೇವರು ಏಸು. ಆ ದೇವರನ್ನು ಈಶೋ ಎಂದು ಕರೆಯುತ್ತಾರೆ. ದೇವರ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡುವುದು ನಾವು ಒಪ್ಪಲು ಸಾಧ್ಯವಿಲ್ಲ. ಕ್ರಿಶ್ಚಿಯನ್ನರು ತಮ್ಮ ಮನೆಯ ಪ್ರವೇಶದ್ವಾರದ ಮೇಲೆ ಏಸು ಈ ಮನೆಯ ಮುಖ್ಯಸ್ಥ ಎಂಬ ಫಲಕವನ್ನು ಹಾಕುತ್ತಾರೆ. ಕೇಶು ಹೆಸರು ಏಸುವಿನ ಹೆಸರನ್ನು ಹಾಸ್ಯ ಮಾಡಿದಂತಿದೆ. ಒಂದು ಹೆಸರು ಮಾತ್ರ ಇಲ್ಲಿ ಬದಲಾಗಿದೆ ಎಂಬುದು ಎಕೆಸಿಸಿ ಯ ಅಧ್ಯಕ್ಷರಾದ ಪಿಪಿ ಜೋಸೆಫ್ ವಾದವಾಗಿದೆ.


  ಚಿತ್ರದ ಶೀರ್ಷಿಕೆಯ ಮೇಲೆಯೇ ನಮಗೆ ಅಸಮಾಧಾನವಿದ್ದು ಚಿತ್ರದ ವಿಷಯ ಏನೆಂಬುದು ಇಲ್ಲಿ ಮುಖ್ಯವಾಗುವುದಿಲ್ಲ.ನಾದಿರ್​ ಶಾ ಅವರಂತಹ ನಿರ್ದೇಶಕರು ಈ ರೀತಿ ಮಾಡುತ್ತಾರೆ ಎಂಬುದು ಕೇಳಿ ದುಃಖವಾಗಿದೆ. ಕ್ರೈಸ್ತ ಧರ್ಮದವರನ್ನು ಅವಮಾನಿಸುವ ಕೆಲಸವನ್ನು ಚಲನಚಿತ್ರ ನಿರ್ಮಾಪಕರು ಮಾಡುತ್ತಿದ್ದಾರೆ ಎಂಬುದಾಗಿ ಜಾರ್ಜ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.


  ಇದೇ ಸಮಯದಲ್ಲಿ, ಯೂಥನಾನ್ ಮಾರ್ ಮೆಲೆಟಿಯಸ್, ಆರ್ಥೊಡಾಕ್ಸ್ ಚರ್ಚ್‌ನ ತ್ರಿಶೂರ್ ಡಯಾಸಿಸ್‌ನ ಮೆಟ್ರೋಪಾಲಿಟನ್, ಫೇಸ್‌ಬುಕ್ ಪೋಸ್ಟ್‌ನಲ್ಲಿ ನಾದಿರ್ಷಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈಶೋ ಹೆಸರಿನ ಹಾಗೆಯೇ ಇರುವ ಹೆಸರನ್ನು ಚಿತ್ರದಲ್ಲಿ ಶೀರ್ಷಿಕೆಯ ರೂಪದಲ್ಲಿ ಇಡುವುದರಿಂದ ಏನು ಸಮಸ್ಯೆ? ನನ್ನ ಸಂಬಂಧಿ ಸೇರಿದಂತೆ ಮಧ್ಯ ತಿರುವಾಂಕೂರಿನಲ್ಲಿ ಅನೇಕ ಜನರು ಈ ರೀತಿಯ ಹೆಸರುಗಳನ್ನು ಹೊಂದಿದ್ದಾರೆ! ಇಲ್ಲಿಯವರೆಗೆ ಅವರಲ್ಲಿ ಯಾರಿಗೂ 'ನಿಷೇಧ' ಎಂದು ಹೇಳಿಲ್ಲ.


  ಇದನ್ನೂ ಓದಿ: ಜಗನ್​ ಒಬ್ಬ ಟಿಪ್ಪು ಸುಲ್ತಾನ್​; ಆಂಧ್ರದಲ್ಲಿ ಹಿಂದುಗಳು ನರಳುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ

  ಕೆಲವು ಕ್ರೈಸ್ತರು ಮೆಸ್ಸೀಯನನ್ನು 'ಈಶೋ' ಎಂದು ಕರೆಯುತ್ತಾರೆ, ಇನ್ನು ಕೆಲವರು ಅವರನ್ನು 'ಯೇಸು' ಎಂದು ಕರೆಯುತ್ತಾರೆ. ಈ ಹೆಸರು ಬೇರೆಲ್ಲಿಯೂ ಬರುವುದಿಲ್ಲ ಎಂದು ಯಾರಾದರೂ ಹೇಳುತ್ತಾರೆಯೇ? ಎಂಬುದಾಗಿ ಪೋಸ್ಟ್‌ನಲ್ಲಿರುವ ಸುದ್ದಿ ಹೇಳಿದೆ. ಮಲಯಾಳಂ ಚಿತ್ರರಂಗದಲ್ಲಿ ಯೇಸು ಹಾಗೂ ಮೇರಿಯ ಹೆಸರಿರುವ ಹಲವಾರು ಚಿತ್ರಗಳನ್ನು ಈ ಮೊದಲು ಪ್ರದರ್ಶಿಸಲಾಗಿದೆ. ಎಷ್ಟೋ ಚಿತ್ರಗಳು ಹಿಟ್ ಕೂಡ ಆಗಿವೆ. ಆಗ ಎಲ್ಲಿಯೂ ಬಾರದ ಸಮಸ್ಯೆ ಈಗೇಕೆ ಎಂಬುದು ನಿರ್ದೇಶಕರ ವಾದವಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: