Pink Marriage: ಪಿಂಕ್‌ ಬಣ್ಣದ ಜೊತೆಗೆ 40 ವರ್ಷ ಡೇಟಿಂಗ್, ನಂತರ ಮದುವೆ! ಹೀಗೂ ಇರ್ತಾರೆ

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸೆರಾ ತನ್ನ ಕೊನೆಯುಸಿರಿರುವ ದಿನದವರೆಗೂ, ಕೇವಲ ಗುಲಾಬಿಬಣ್ಣವನ್ನೇ ಧರಿಸುವುದಾಗಿ ಪ್ರತಿಜ್ಞೆ ಮಾಡಿದರು .

  • Share this:

ಐತಿಹಾಸಿಕ ಲಾಸ್ ವೇಗಾಸ್ (Las Vegas) ಮದುವೆಯಲ್ಲಿ, ಗುಲಾಬಿ ಬಣ್ಣವನ್ನು ವರಿಸಿದ ಅಮೆರಿಕದ ಕ್ಯಾಲಿಫೋರ್ನಿಯಾ(American California) ಮಹಿಳೆಯೊಬ್ಬರು ತನ್ನ ಗುಲಾಬಿ ಬಣ್ಣದ ಆಭರಣಗಳು ಮತ್ತು ಲಿಪ್‌ಸ್ಟಿಕ್‌ಗೆ ಹೊಂದಿಕೆಯಾಗುವಂತೆ ತಮ್ಮ ಕೂದಲಿಗೆ ಕೂಡ ಗುಲಾಬಿ ಬಣ್ಣವನ್ನು ಬಳಿದುಕೊಂಡಿದ್ದರು. ಸಾಮಾಜಿಕ ಜಾಲತಾಣವು ಇಂತಹ ಹಲವಾರು ವಿಚಿತ್ರ ಮದುವೆಗಳಿಗೆ(Marriages) ಸಾಕ್ಷಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ತನ್ನ ನೆಚ್ಚಿನ ಬಣ್ಣವಾದ ಗುಲಾಬಿ ಬಣ್ಣವನ್ನು (Favorite Color, Pink)ಲಾಸ್ ವೇಗಸ್‌ನಲ್ಲಿ ಮದುವೆಯಾಗುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ .


ಗುಲಾಬಿ ಬಣ್ಣದ ಗೌನ್
ಹೊಸ ವರ್ಷದ ದಿನವಾದ ಜನವರಿ 1 ರಂದು ಕಿಟನ್ ಕೇ ಸೆರಾ ಮತ್ತು ಗುಲಾಬಿ ಬಣ್ಣದ ವಿವಾಹ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸೆರಾ ತನ್ನ ಮದುವೆಯ ದಿನದಂದು ನಯವಾದ ಗುಲಾಬಿ ಬಣ್ಣದ ಕೋಟ್‌ನೊಂದಿಗೆ ಗುಲಾಬಿ ಬಣ್ಣದ ಗೌನ್ ಮತ್ತು ಕಿರೀಟವನ್ನು ಧರಿಸಿದ್ದರು. ಅವರು ತನ್ನ ಕೂದಲಿಗೆ ಗುಲಾಬಿ ಬಣ್ಣ ಬಳಿದಿದ್ದರು. ಇದರೊಂದಿಗೆ ಅವರು ತೊಟ್ಟಿದ್ದ ಆಭರಣ ಮತ್ತು ಲಿಪ್‌ಸ್ಟಿಕ್‌ ಸಹಿತ ಎಲ್ಲವೂ ಅವರ ಉಡುಪಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿತ್ತು .


ಮೊದಲ ಬಾರಿಗೆ 2 ವರ್ಷಗಳ ಹಿಂದೆ ಮಗುವೊಂದು ಅವರನ್ನು ನೋಡಿ ಗೇಲಿ ಮಾಡಿದಾಗ ಗುಲಾಬಿ ಬಣ್ಣವನ್ನು ಮದುವೆಯಾಗುವ ವಿಚಿತ್ರ ಆಲೋಚನೆ ಅವರ ಮನಸ್ಸಲ್ಲಿ ಮೂಡಿತು. 2 ವರ್ಷಗಳ ಹಿಂದೆ ಅವರು ಬಾಲಕನನ್ನು ಭೇಟಿಯಾದಾಗ ಅವನು "ನಿಮಗೆ ಗುಲಾಬಿ ಬಣ್ಣ ಇಷ್ಟ ಅಲ್ಲವೇ..?" ಎಂದು ಕೇಳಿದನಂತೆ. ಸೆರಾ ಕೂಡ ಹೌದು ಅನ್ನುವಂತೆ ತಲೆಯನ್ನಾಡಿಸಿದರು ಎಂದು ಸ್ಥಳೀಯ ಕೆವಿವಿಯು-ಟಿವಿಗೆ ಸೆರಾ ಹೇಳಿಕೆ ನೀಡಿದರು.


ಇದನ್ನೂ ಓದಿ: Lesbian Marriage: ಎಲ್ಲಾ ಅಡೆತಡೆಗಳನ್ನು ಮೀರಿ ಮದುವೆಯಾಗಲಿರುವ ಮಹಿಳಾ ವೈದ್ಯರು.. ಇಂಟ್ರೆಸ್ಟಿಂಗ್​ ಕಹಾನಿ ಇಲ್ಲಿದೆ


40 ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್
ನಂತರ ಆ ಮಗು ಆಕೆಯಲ್ಲಿ, ನಿಮಗೆ ಆ ಗುಲಾಬಿ ಬಣ್ಣ ಅಷ್ಟು ಇಷ್ಟವಾದಲ್ಲಿ ನೀವದನ್ನು ಏಕೆ ಮದುವೆಯಾಗಬಾರದು..? ಎಂದು ಪ್ರಶ್ನಿಸಿತು. ಈ ಸಂಭಾಷಣೆಯ ನಂತರ, ಸೆರಾ ಗುಲಾಬಿ ಬಣ್ಣವನ್ನು ಮದುವೆಯಾಗುವ ನಿರ್ಧಾರ ಮಾಡಿದರು. 40 ವರ್ಷಗಳಿಗೂ ಹೆಚ್ಚು ಕಾಲ ಈ ಬಣ್ಣದೊಂದಿಗೆ ಡೇಟಿಂಗ್ ಮಾಡಿದ ನಂತರ, ಅವರು ಅಂತಿಮವಾಗಿ ಅದನ್ನು ಮದುವೆಯಾಗಲು ನಿರ್ಧರಿಸಿದರು ಎಂದು ತಿಳಿಸಿದರು.


ಮದುವೆಯ ಧಿರಿಸು..!
ವಧು ದೈತ್ಯಾಕಾರದ ಬಟ್ಟೆಯೊಂದಿಗೆ ಪ್ರವೇಶಾಂಗಣದಲ್ಲಿ ನಡೆದರು. ಮತ್ತದು ಗುಲಾಬಿ ಬಣ್ಣದ ಐದು ಛಾಯೆಗಳನ್ನು ಒಳಗೊಂಡಿತ್ತು . “ನಾನು ನಿಜವಾಗಿಯೂ ಗುಲಾಬಿ ಬಣ್ಣವನ್ನು ಮದುವೆಯಾಗುತ್ತಿದ್ದೇನೆ. ನನ್ನ ಬಳಿ ಗುಲಾಬಿ ಬಣ್ಣದ ದೈತ್ಯ ಸಂಗ್ರಹವೇ ಇದೆ ಮತ್ತದು ಪೇಂಟ್ ಸಂಗ್ರಹದಂತೆ ಕಾಣುತ್ತದೆ. ಆ ಬೃಹತ್ ಸಂಗ್ರಹದಲ್ಲಿ ಗುಲಾಬಿಯ ಎಲ್ಲಾ ಐದು ಛಾಯೆಗಳನ್ನು ನಾನು ಸಮನಾಗಿ ಪ್ರೀತಿಸುತ್ತೇನೆ ಎಂದು ಅವರು ಹೇಳಿದರು.


ಮದುವೆಗೆ ಆಗಮಿಸಿದ ಅತಿಥಿಗಳು ಕೂಡ ಸೆರಾ ಅವರ ಗುಲಾಬಿ ಬಣ್ಣದ ಪ್ರೀತಿಯ ಗೌರವಾರ್ಥವಾಗಿ ಗುಲಾಬಿ ಬಟ್ಟೆಗಳನ್ನೇ ಧರಿಸಿದ್ದರು. ವಧುವಿನ ಸ್ವಾಗತಕ್ಕೆ ಸಿದ್ಧಪಡಿಸಿದ ಅಲಂಕಾರ ಸಾಮಾಗ್ರಿಗಳು, ಹೂಗಳು ಎಲ್ಲವೂ ಗುಲಾಬಿಮಯವಾಗಿದ್ದವು. ಜನರಿಗೆ ಸಹಚರರು ಜೊತೆಯಾದರೆ, ತನಗೆ ಬಣ್ಣವೇ ಸಹಚರ ಎಂದು ಸೆರಾ ಹೇಳಿಕೊಂಡರು.


ಇದನ್ನೂ ಓದಿ: Marriage: ಮದುವೆಗೂ ಮುನ್ನ ತಪ್ಪದೇ ನಿಮ್ಮ ಸಂಗಾತಿ ಜೊತೆಗೆ ಈ ವಿಷಯ ಚರ್ಚಿಸಿ


ಮದುವೆ ಸಮಾರಂಭಕ್ಕೆ ಏನು ಪ್ರತಿಜ್ಞೆ ಮಾಡಿದರು..? ಎಂದು ನೀವು ಅಚ್ಚರಿ ಪಡಬಹುದು . ಸೆರಾ ತನ್ನ ಕೊನೆಯುಸಿರಿರುವ ದಿನದವರೆಗೂ, ಕೇವಲ ಗುಲಾಬಿಬಣ್ಣವನ್ನೇ ಧರಿಸುವುದಾಗಿ ಪ್ರತಿಜ್ಞೆ ಮಾಡಿದರು . ಪಿಂಕ್ ರಿಂಗಿನ ಫೋಟೋವನ್ನು ಹಂಚಿಕೊಳ್ಳುತ್ತಾ , ನನ್ನ ಮದುವೆಯ ಕೇಕ್ ಮತ್ತು ಕಪ್ ಕೇಕ್ ಎಲ್ಲವೂ ಪಿಂಕ್‌ಮಯ..! ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

First published: