• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಅವಳಿ ಮಕ್ಕಳಿಗೆ ಜನ್ಮ ನೀಡಿದ 6 ತಿಂಗಳಲ್ಲೇ ಮತ್ತೆ ಗರ್ಭಿಣಿ, 'ಮೊಮೊ ಟ್ವಿನ್ಸ್' ಹೆತ್ತ ತಾಯಿ!

Viral News: ಅವಳಿ ಮಕ್ಕಳಿಗೆ ಜನ್ಮ ನೀಡಿದ 6 ತಿಂಗಳಲ್ಲೇ ಮತ್ತೆ ಗರ್ಭಿಣಿ, 'ಮೊಮೊ ಟ್ವಿನ್ಸ್' ಹೆತ್ತ ತಾಯಿ!

ವೈರಲ್​ ಆದ ತಾಯಿ

ವೈರಲ್​ ಆದ ತಾಯಿ

ಬ್ರಿಟ್ನಿ ಆಲ್ಬಾ ತನ್ನ ಮೊದಲ ಜೋಡಿ ಲುಕಾ ಮತ್ತು ಲೆವಿ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದ ಸುಮಾರು ಆರು ತಿಂಗಳ ನಂತರವೇ ಮತ್ತೊಂದು ಜೋಡಿ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿದುಬಂದಿದೆ.

  • Share this:

ಈಗಂತೂ ವೈದ್ಯ ಲೋಕದಲ್ಲಿ (Medical) ಪ್ರತಿದಿನ ಒಂದಲ್ಲ ಒಂದು ಹೊಸದೊಂದು ರೋಗದ ಹೆಸರು ನಮಗೆ ಕೇಳಲು ಸಿಗುತ್ತದೆ ಮತ್ತು ವಿನೂತನವಾದ ಚಿಕಿತ್ಸಾ ಕ್ರಮಗಳನ್ನು ಸಹ ನಮಗೆ ನೋಡಲು ಸಿಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಸಹ ಒಂದು ಅಪರೂಪದ ನಿದರ್ಶನದಲ್ಲಿ, ಯುನೈಟೆಡ್ ಸ್ಟೇಟ್ಸ್ (US) ನಲ್ಲಿರುವ ಮಹಿಳೆಯೊಬ್ಬಳು ಸತತ ಎರಡು ಬಾರಿ ಗರ್ಭಧಾರಣೆಗಳನ್ನು ಹೊಂದಿದ್ದಳು, ಇದರ ಪರಿಣಾಮವಾಗಿ ಒಂದೇ ರೀತಿಯ ಎರಡು ಜೋಡಿ ಅವಳಿಗಳ ಜನನವಾಯಿತು. ಬರ್ಮಿಂಗ್ಹ್ಯಾಮ್ ನ ಅಲಬಾಮಾ ವಿಶ್ವವಿದ್ಯಾಲಯ (UAB) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಬ್ರಿಟ್ನಿ ಆಲ್ಬಾ ತನ್ನ ಮೊದಲ ಜೋಡಿ ಲುಕಾ ಮತ್ತು ಲೆವಿ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿದ ಸುಮಾರು ಆರು ತಿಂಗಳ ನಂತರವೇ ಮತ್ತೊಂದು ಜೋಡಿ ಅವಳಿ ಮಕ್ಕಳನ್ನು(Twins) ನಿರೀಕ್ಷಿಸುತ್ತಿರುವುದಾಗಿ ತಿಳಿದುಬಂದಿದೆ.


‘ಮೊಮೊ’ ಅವಳಿ ಮಕ್ಕಳು ಎಂದು ಯಾರನ್ನು ಕರೆಯುತ್ತಾರೆ ಗೊತ್ತೇ?


ಈ ರೀತಿಯ ಅವಳಿಗಳನ್ನು 'ಮೊಮೊ' ಅವಳಿ ಮಕ್ಕಳು ಎಂದು ಕರೆಯಲಾಗುತ್ತದೆ, ಇದು ಮೊನೊಅಮ್ನಿಯೋಟಿಕ್-ಮೊನೊಕೊರಿಯೋನಿಕ್ ನ ಸಂಕ್ಷಿಪ್ತ ರೂಪವಾಗಿದೆ ಅಂತ ಹೇಳಲಾಗುತ್ತದೆ. ಒಂದೇ ಜರಾಯು, ಆಮ್ನಿಯೋಟಿಕ್ ಚೀಲ ಮತ್ತು ದ್ರವವನ್ನು ಹಂಚಿಕೊಂಡಿದೆ.


ವಿಶ್ವವಿದ್ಯಾಲಯದ ಪ್ರಕಾರ, ಮೊಮೊ ಅವಳಿಗಳು ಅಪರೂಪದ ರೀತಿಯ ಅವಳಿಗಳು, ಇದು ಯುನೈಟೆಡ್ ಸ್ಟೇಟ್ಸ್ ನ ಎಲ್ಲಾ ಜನನಗಳಲ್ಲಿ ಒಂದು ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಮೊಮೊ ಅವಳಿ ಗರ್ಭಧಾರಣೆಗಳು ಭ್ರೂಣದ ತೊಡಕುಗಳ ಹೆಚ್ಚಿನ ಅಪಾಯವನ್ನು ಹೊಂದಿವೆ ಅಂತ ವೈದ್ಯರು ಹೇಳುತ್ತಾರೆ.


ಸಿಸೇರಿಯನ್ ಮೂಲಕ ಅವಳಿ ಮಕ್ಕಳನ್ನು ಹೊರ ತಂದಿದ್ದಾರಂತೆ ವೈದ್ಯರು


ಬ್ರಿಟ್ನಿ ಆಲ್ಬಾ ಅವರು 25 ವಾರಗಳ ಗರ್ಭಿಣಿಯಾಗಿದ್ದಾಗ ಯುಎಬಿಯ ತುಂಬಾನೇ ಅಪಾಯದ ಪ್ರಸೂತಿ ಘಟಕಕ್ಕೆ ದಾಖಲಾಗಿದ್ದರು. ತೊಡಕುಗಳ ಪರಿಣಾಮವಾಗಿ ಅವಳು 50 ದಿನಗಳಿಗಿಂತ ಹೆಚ್ಚು ಕಾಲ ಅಲ್ಲಿಯೇ ಇದ್ದಳು. ಮೊಮೊ ಜನನಗಳಿಗೆ ಸಂಬಂಧಿಸಿದ ಹೆರಿಗೆಯ ಹೆಚ್ಚಿನ ಅಪಾಯವನ್ನು ಪರಿಗಣಿಸಿ 32 ರಿಂದ 34 ವಾರಗಳಲ್ಲಿ ಸಿಸೇರಿಯನ್ ಮೂಲಕ ಅವಳಿ ಮಕ್ಕಳನ್ನು ಹೊರ ತರುವುದು ತಮ್ಮ ಗುರಿಯಾಗಿತ್ತು ಎಂದು ವೈದ್ಯರು ಹೇಳಿದ್ದರು.


ಇದನ್ನೂ ಓದಿ: 8 ವರ್ಷಗಳ ಕಾಲ ಮನೆಯಿಂದ ಹೆಂಡತಿಯನ್ನು ಹೊರಗಿಟ್ಟ ಪತಿ, ಕಾರಣ ವಿಚಿತ್ರವಾಗಿದೆ!

ಈ ದಂಪತಿಗಳು ಅಕ್ಟೋಬರ್ 25, 2022 ರಂದು ಅವಳಿ ಮಕ್ಕಳಾದ ಲಿಡಿಯಾ ಮತ್ತು ಲಿನ್ಲೀ ಆಲ್ಬಾ ಅವರನ್ನು ಸ್ವಾಗತಿಸಿದ್ದಾರೆ. "ಅವಳಿಗಳು ಚೆನ್ನಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ತಂಡವು ದಿನಕ್ಕೆ ಹಲವಾರು ಬಾರಿ ಭ್ರೂಣದ ಮೇಲ್ವಿಚಾರಣೆ ಸೇರಿದಂತೆ ಪ್ರಸವಪೂರ್ವ ಆರೈಕೆಯನ್ನು ನಡೆಸಿತು.


ಆಕೆಯ ಗರ್ಭಧಾರಣೆಯ ವಿರಳತೆಯನ್ನು ಗಮನದಲ್ಲಿಟ್ಟುಕೊಂಡು, ಆಲ್ಬಾ ಅವರನ್ನು ವೈದ್ಯಕೀಯ ವಿದ್ಯಾರ್ಥಿಗಳು, ನಿವಾಸಿಗಳು ಮತ್ತು ಸಹವರ್ತಿಗಳು ಸಹ ಭೇಟಿ ಮಾಡಿದರು" ಎಂದು ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಆಸ್ಪತ್ರೆಯ ನವಜಾತ ಘಟಕದಲ್ಲಿ ತಿಂಗಳುಗಳ ಕಾಲ ಆರೈಕೆ ಪಡೆದ ಮಕ್ಕಳು


ಅವಳಿಗಳು 32ನೇ ವಾರದಲ್ಲಿ ಜನಿಸಿದ್ದರಿಂದ, ಅವರು ಡಿಸೆಂಬರ್ 7, 2022 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೊದಲು ಆಸ್ಪತ್ರೆಯ ನವಜಾತ ಘಟಕದಲ್ಲಿ ತಿಂಗಳುಗಳ ಕಾಲ ಆರೈಕೆ ಪಡೆದರು.


 


"ಹಲವಾರು ವಾರಗಳವರೆಗೆ ನನ್ನ ಮಕ್ಕಳಿಂದ ದೂರವಿರುವ ಬಗ್ಗೆ ಯೋಚಿಸುವುದು ನನ್ನನ್ನು ತುಂಬಾನೇ ವಿಚಲಿತಗೊಳಿಸಿತು. ಆದರೆ ಯುಎಬಿಯಲ್ಲಿರುವ ಸಿಬ್ಬಂದಿ ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ನನಗೆ ತಿಳಿದಿತ್ತು, ಇದು ನನ್ನ ಚಿಂತೆಯನ್ನು ದೂರಮಾಡಿತು" ಎಂದು ಆಲ್ಬಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಯುಎಬಿಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಚೆಲ್ ಸಿಂಕಿ ಹೇಳಿಕೆಯಲ್ಲಿ, "ಇದು ಅತ್ಯಂತ ಅಪರೂಪವಾಗಿದ್ದರೂ, ಮೊಮೊ ಅವಳಿ ಗರ್ಭಧಾರಣೆಗಳು ಭ್ರೂಣದ ತೊಡಕುಗಳ ಹೆಚ್ಚಿನ ಅಪಾಯವನ್ನು ಹೊಂದಿವೆ. ಪ್ರಾರಂಭದಿಂದ ಅಂತ್ಯದವರೆಗೆ, ಬ್ರಿಟ್ನಿ ಮತ್ತು ಆಕೆಯ ಮಕ್ಕಳು ಅನೇಕ ರೀತಿಯ ಅಡೆತಡೆಗಳನ್ನು ಜಯಿಸಿದ್ದಾರೆ” ಎಂದು ಅವರು ಹೇಳಿದರು.

First published: