ಪ್ರಕೃತಿಯಲ್ಲಿ ಏನಾದರೊಂದು ವಿಚಿತ್ರ, ವಿಸ್ಮಯ ಸಂಗತಿಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಮಾತ್ರವಲ್ಲದೆ, ಸಾಮಾಜಿಕ ಜಲತಾಣದಲ್ಲೂ ಅಂತಹ ಸಂಗತಿಗಳು ವೈರಲ್ ಆಗುತ್ತಿರುತ್ತವೆ. ಅದರಂತೆ ಇಲ್ಲೊಂದು ಹಾವಿನ ವಿಡಿಯೋ ಭಾರೀ ವೈರಲ್ ಆಗಿದೆ. ಆದರೆ ಇದು ಬರೀ ಹಾವಲ್ಲ. ಎರಡು ತಲೆಯ ಹಾವು. ಆ ಕಾರಣಕ್ಕಾಗಿ ಅನೇಕರು ಹಾವಿನ ವಿಡಿಯೋವನ್ನು ವೀಕ್ಷಿಸಿದ್ದಾರೆ. ಎರಡು ತಲೆಯ ಹಾವುಗಳು ಕಂಡು ಬರುವುದೇ ಅಪರೂಪ. ಆದರೆ ಈ ಹಾವು ಅಮೆರಿಕದ ಉತ್ತರ ಕೆರೊಲಿನಾದ ಮನೆಯೊಂದರಲ್ಲಿ ಕಾಣಿಸಿಕೊಂಡಿದೆ. ಮನೆಯ ಮಾಲಕಿ ಜೀನ್ ವಿಲ್ಸನ್ಗೆ ಈ ಹಾವು ಕಣ್ಣಿಗೆ ಕಂಡಿದೆ. ತಕ್ಷಣವೇ ಹಾವಿಗೆ ಎರಡು ತಲೆ ಇರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ತಮ್ಮ ಸ್ಮಾರ್ಟ್ಫೋನ್ ಮೂಲಕ ದೃಶ್ಯವನ್ನು ಸೆರೆಹಿಡಿದು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೀನ್ ವಿಲ್ಸನ್ಗೆ ಮನೆಯ ಮೇಜಿನ ಬಳಿ ಎರಡು ತಲೆ ಹಾವು ಕಾಣಿಸಿಕೊಂಡಿದೆ. ನಂತರ ಅವರ ಸ್ನೇಹಿತರಿಗೆ ವಿಚಾರ ತಿಳಿಸಿದ್ದಾರೆ. ಅವರ ಸಹಾಯದಿಂದ ಹಾವನ್ನು ಒಂದು ಜಾರ್ನಲ್ಲಿ ಹಾಕಿದ್ದಾರೆ. ನಂತರ ಕ್ಯಾಟವ್ಬಾ ವಿಜ್ಞಾನ ಕೇಂದ್ರಕ್ಕೆ ಹಸ್ತಾಂತರಿಸಿದರು.
ಎರಡು ತಲೆಯ ಹಾವನ್ನು ಕಂಡು ಅಲ್ಲಿನ ತಜ್ಞರು ಬ್ಲಾಕ್ ರಾಟ್ ಸ್ನೇಕ್ ಎಂದು ಗುರುತಿಸಿದ್ದಾರೆ. ಒಂದು ಲಕ್ಷದಲ್ಲಿ ಒಂದು ಇಂತಹ ಹಾವು ಹುಟ್ಟುತ್ತದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ