ತಮ್ಮ ಬುಲೆಟ್ ಪ್ರೂಫ್ (Bulletproof) ವಾಹನಗಳನ್ನು ಬದಿಗಿಟ್ಟು ನಾಲ್ಕು ಯುಎಸ್ ಮಹಿಳಾ ರಾಯಭಾರಿಗಳು ತಮ್ಮ ಅಗತ್ಯತೆಗಳಿಗೆ ಅನುಗುಣವಾದ ಆಟೋ ರಿಕ್ಷಾಗಳೊಂದಿಗೆ ರಾಜ ತಾಂತ್ರಿಕ ಶೈಲಿಯಲ್ಲಿ ದೆಹಲಿಯಲ್ಲಿ ನಗರ ಪ್ರಯಾಣಕ್ಕೆ ಸಜ್ಜಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಆನ್ ಎಲ್ ಮೇಸನ್, ರುತ್ ಹೋಲ್ಬರ್ಗ್, ಶರೀನ್ ಜೆ ಕಿಟರ್ಮ್ಯಾನ್ ಮತ್ತು ಜೆನ್ನಿಫರ್ ಬೈವಾಟರ್ಸ್ ವಿಶೇಷವಾಗಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸಿದ್ಧಪಡಿಸಿರುವ ಕಪ್ಪು ಹಾಗೂ ಗುಲಾಬಿ ಬಣ್ಣದ ತ್ರಿ-ಚಕ್ರ ವಾಹನದಲ್ಲಿ ಸವಾರಿ ಮಾಡಲು ಇಷ್ಟಪಡುತ್ತಾರೆ ಏಕೆಂದರೆ ತಮ್ಮ ಯಾವುದೇ ಅಧಿಕೃತ ಪ್ರವಾಸಕ್ಕೆ ಆಟೋರಿಕ್ಷಾದಲ್ಲೇ (Auto Rikshaw)ಪ್ರಯಾಣಿಸಲು ಬಯಸುವ ಈ ಮಹಿಳಾ ಅಧಿಕಾರಿಗಳು ತಮ್ಮೆಲ್ಲಾ ಕೆಲಸಗಳಿಗೆ ಈ ರಿಕ್ಷಾವನ್ನು ಬಳಸುತ್ತಾರೆ ಹಾಗೂ ತಾವೇ ಸ್ವತಃ ಚಲಾಯಿಸುತ್ತಾರೆ.
ರಿಕ್ಷಾವನ್ನೇ ಈ ರಾಯಭಾರಿಗಳು ಆರಿಸಿಕೊಂಡಿದ್ದೇಕೆ?
ಜನಸಾಮಾನ್ಯರು ಪ್ರಯಾಣಿಸುವ ರಿಕ್ಷಾದಲ್ಲಿ ಪ್ರಯಾಣಿಸುವುದು ಇವರಿಗೆ ಮೋಜಿನ ವಿಷಯವಾಗಿದ್ದರೂ ತಮ್ಮನ್ನು ಒಂದು ಉದಾಹರಣೆಯಾಗಿ ಜನತೆಗೆ ತೋರಿಸಬೇಕೆಂಬ ನಿಟ್ಟಿನಲ್ಲಿ ಕೂಡ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಮಾಧ್ಯಮದೊಂದಿಗೆ ಮಾತನಾಡುತ್ತಾ ತಮ್ಮ ರಿಕ್ಷಾ ಪ್ರಯಾಣದ ಅನುಭವ ಹಂಚಿಕೊಂಡ ರಾಯಭಾರಿಗಳು ವಿಭಿನ್ನ ಸಾರಿಗೆ ವಿಧಾನವನ್ನು ಕಲಿಯುವ ತಮ್ಮ ಅನುಭವವನ್ನು ಹಂಚಿಕೊಂಡರು ಹಾಗೂ ಉನ್ನತ ಅಧಿಕಾರದಲ್ಲಿರುವ ಅಧಿಕಾರಿಗಳಾಗಿ ಕೂಡ ಜನಸಾಮಾನ್ಯರು ಬಳಸುವ ರಿಕ್ಷಾದಲ್ಲಿ ಪ್ರಯಾಣಿಸಿದ್ದು ಇದೊಂದು ಅಪರೂಪದ ಉದಾಹರಣೆ ಎಂದೆನಿಸಿದೆ
ರಿಕ್ಷಾ ಚಲಾಯಿಸುವ ರಾಯಭಾರಿಗಳ ಮನದ ಅಭಿಪ್ರಾಯವೇನು?
ಡೆಟ್ರಾಯಿಟ್ನಿಂದ ನನ್ನ ಆಟೋ ರಿಕ್ಷಾದವರೆಗೆ ನಾನು ಜೀವನವಿಡೀ ವಾಹನಗಳ ಅಭಿರುಚಿಯನ್ನು ಹೊಂದಿದ್ದು ವಾಹನಗಳೆಂದರೆ ನನಗೆ ತುಬಾ ಪ್ರೀತಿ. ಹಾಗಾಗಿಯೇ ನಾನು ಎಲ್ಲೇ ಪ್ರಯಾಣಿಸಿದರೂ ವಾಹನದಲ್ಲಿರುವ ವಿಶೇಷತೆಯನ್ನು ಕಂಡುಕೊಳ್ಳುತ್ತೇನೆ ಆದರೆ ಆಟೋರಿಕ್ಷಾದಲ್ಲಿರುವ ವಿಶೇಷತೆ ಇತರ ಯಾವುದೇ ವಾಹನಗಳಿಂದ ದೊರೆಯುವುದಿಲ್ಲ ಎಂದೇ ಆನ್ ಎಲ್ ಮೇಸನ್ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಗ್ಲೋಬಲ್ ಚಾಂಪ್ಸ್! ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ!
ನಾನು ಪಾಕಿಸ್ತಾನದಲ್ಲಿದ್ದಾಗ ಭಾರತಕ್ಕೆ ಬರುವ ಮೊದಲು ಶಸ್ತ್ರಸಜ್ಜಿತ ವಾಹನಗಳಲ್ಲಿಯೇ ಪ್ರಯಾಣಿಸುತ್ತಿದ್ದೆ ಹಾಗೂ ಅವು ಕೂಡ ತುಂಬಾ ದೊಡ್ಡದಾದ ಸೌಲಭ್ಯಗಳಿಂದ ಕೂಡಿರುವ ವಾಹನಗಳು ಎಂದು ಮೇಸನ್ ತಿಳಿಸುತ್ತಾರೆ. ಆದರೆ ನನ್ನ ಗಮನವನ್ನು ಹೆಚ್ಚು ಸೆಳೆದಿರುವುದು ಆಟೋರಿಕ್ಷಾಗಳಾಗಿದ್ದು ಒಮ್ಮೆಯಾದರೂ ಅದರಲ್ಲಿ ಪ್ರಯಾಣಿಸಬೇಕೆಂಬ ಇಂಗಿತ ಇಟ್ಟುಕೊಂಡಿದ್ದೆ ಎಂದು ತಿಳಿಸಿದ್ದಾರೆ. ಹಾಗಾಗಿ ಭಾರತಕ್ಕೆ ಬಂದ ಸಂದರ್ಭದಲ್ಲಿ ಒಂದು ಆಟೋರಿಕ್ಷಾವನ್ನು ಖರೀದಿಸಿದೆ ಹಾಗೂ ನನಗೆ ಬೇಕಾದ ಹಾಗೆ ಅದನ್ನು ಮಾರ್ಪಡಿಸಿಕೊಂಡೆ ಎಂಬುದು ಮೇಸನ್ ಹೇಳಿಕೆಯಾಗಿದೆ.
ರಿಕ್ಷಾ ಚಲಾಯಿಸಲು ಬರದೇ ಇದ್ದರೂ ಕಲಿತುಕೊಂಡೆ
ಆಟೋರಿಕ್ಷಾ ಓಡಿಸಲು ನನಗೆ ಸುತಾರಾಂ ಬರುತ್ತಿರಲಿಲ್ಲ ಎಂದು ತಿಳಿಸಿರುವ ಮೇಸನ್, ಯಾವುದೇ ವಾಹನವನ್ನು ಕ್ಲಚ್ ಹಿಡಿದು ಓಡಿಸಿಲ್ಲ ಆಟೋರಿಕ್ಷಾ ಚಾಲನೆ ನನಗೆ ಸಂಪೂರ್ಣ ಹೊಸದು ಎಂದು ಮೇಸನ್ ತಿಳಿಸಿದ್ದಾರೆ. ದಕ್ಷಿಣ ಭಾರತದ ಕರ್ನಾಟಕದಲ್ಲಿ ಜನಿಸಿದ ಹಾಗೂ ಯುಎಸ್ ಪೌರತ್ವವನ್ನು ಹೊಂದಿರುವ ಶರೀನ್ ಜೆ ಕಿಟ್ಟರ್ಮ್ಯಾನ್ ಗುಲಾಬಿ ಬಣ್ಣದ ಹೂವಿನ ಪಕಳೆಗಳ ಅಲಂಕಾರಗಳಿಂದ ಶೋಭಿತಗೊಂಡ ಆಟೋರಿಕ್ಷಾವನ್ನು ಪರಿಚಯಿಸಿ ಆಟೋ ಹೊಂದಿರುವ ಮೆಕ್ಸಿಕನ್ ರಾಯಭಾರಿಯಿಂದ ಪ್ರೇರಣೆಗೊಂಡು ಆಟೋ ಖರೀದಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆಟೋದ ಇಕ್ಕೆಲಗಳಲ್ಲಿ ವರ್ಣರಂಜಿತ ದಾರಗಳನ್ನು ಕಟ್ಟಿದ್ದು ಅಮೆರಿಕಾ ಹಾಗೂ ಭಾರತದ ಧ್ವಜಗಳಿಂದ ಆಟೋವನ್ನು ಅಲಂಕರಿಸಿದ್ದಾರೆ.
ಮೆಕ್ಸಿಕನ್ ರಾಯಭಾರಿ ಆರಂಭಿಸಿದ ಟ್ರೆಂಡ್
ಅಮೆರಿಕಾದಲ್ಲಿದ್ದಾಗ ಹೊಸದೆಹಲಿಗೆ ಬರುವ ಯೋಜನೆಯನ್ನು ನಾನು ಮಾಡುತ್ತಿದ್ದಾಗ ಮೆಕ್ಸಿಕನ್ ಅಂಬಾಸಿಡರ್ ತಮ್ಮ ಬಳಿ ಆಟೋರಿಕ್ಷಾ ಹಾಗೂ ಅದನ್ನು ಚಲಾಯಿಸಲು ಆಟೋ ಡ್ರೈವರ್ ಅನ್ನು ಹೊಂದಿದ್ದರು ಎಂಬುದನ್ನು ಕುರಿತು ತಿಳಿದಿದ್ದೆ. ನಾನು ದೆಹಲಿಗೆ ಬಂದಾಗ ಆಟೋ ಹೊಂದಿದ್ದ ಅನ್ನ ಮೇಸನ್ ಅವರನ್ನು ನೋಡಿದೆ ಹಾಗಾಗಿ ನಾನು ಆಟೋ ಖರೀದಿಸಿದಾಗ ಅದನ್ನು ನಾನೇ ಚಲಾಯಿಸಬೇಕೆಂಬ ಗುರಿ ಇರಿಸಿಕೊಂಡೆ. ಹಾಗಾಗಿ ಆಟೋ ಚಲಾವಣೆ ನನ್ನ ಸಂಪೂರ್ಣ ಗುರಿಯಾಯಿತು ಎಂದು ತಿಳಿಸಿದ್ದಾರೆ.
U.S. diplomats in New Delhi drive tuk tuks instead of cars, say it's liberating to get around in a three-wheeler pic.twitter.com/4MWJWpAmGK
— Reuters (@Reuters) November 24, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ