ಬುಲ್ ತಳಿಯ ನಾಯಿಯನ್ನು ಮೇಯರ್ ಆಗಿ ಆಯ್ಕೆ ಮಾಡಿದ ಅಮೆರಿಕ ಮಂದಿ!

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಈ ಶ್ವಾನದ ಗೆಲುವಿನ ಬಗ್ಗೆ ಅನೇಕರು ಸಂತಸ ಹೊರ ಹಾಕಿದ್ದಾರೆ.

Bulldog

Bulldog

 • Share this:
  ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಡೆಮಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬಿಡೆನ್​ ಗೆಲುವಿನ ಸಮೀಪದಲ್ಲಿದ್ದಾರೆ. ಈ ಮಧ್ಯೆ ಅಚ್ಚರಿಯ ಬೆಳವಣಿಗೆ ಒಂದು ನಡೆದಿದೆ. ಅದೇನೆಂದರೆ, ಅಮೆರಿಕದ ನಗರವೊಂದು  ಬುಲ್​ ಜಾತಿಯ ನಾಯಿಯನ್ನು ಮೇಯರ್​ ಆಗಿ ಆಯ್ಕೆ ಮಾಡಿದೆ.

  ಕೆಂಟಕಿ ನಗರದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಜನರು ಫ್ರೆಂಚ್​ ಬುಲ್​ಡಾ​ಗ್​ ಅನ್ನು ಮೇಯರ್​ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ, ಈ ಶ್ವಾನವು ಬರೋಬ್ಬರಿ 13 ಸಾವಿರ ಮತಗಳನ್ನು ಪಡೆದಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಈ ಶ್ವಾನ ಕೆಂಟಕಿಯ ಮೇಯರ್​ ಆಗಿ ಮುಂದುವರಿಯಲಿದೆ. ವಿಲ್ಬರ್​ ಬೀಸ್ಟ್​ ಈಗ ಮುಂದಿನ ಮೇಯರ್​. ಜ್ಯಾಕ್​ ರ್ಯಾಬಿಟ್​ ಹಾಗೂ ಪಾಪ್ಪಿ ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಕ್ಕೆ ಆಯ್ಕೆ ಆಗಿವೆ.  ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಈ ಶ್ವಾನದ ಗೆಲುವಿನ ಬಗ್ಗೆ ಅನೇಕರು ಸಂತಸ ಹೊರ ಹಾಕಿದ್ದಾರೆ.
  Published by:Rajesh Duggumane
  First published: