HOME » NEWS » Trend » US TIKTOKER WORE A SAME SHIRT TO OFFICE ZOOM MEETINGS FOR 264 DAYS AND NOBODY NOTICED IT STG KVD

ವರ್ಕ್ ಫ್ರಮ್ ಹೋಮ್​​ ವಿಡಿಯೋ ಕಾಲ್​​ಗಳ ಬಂಡವಾಳ.. 264 ದಿನ ಒಂದೇ ಬಟ್ಟೆ ಧರಿಸಿದ ಮಹಿಳೆ!

ಕೆಲಸದ ಕೊನೆಯ ದಿನ ಆಫೀಸ್‍ನಲ್ಲಿ, ‘ಹೌದು ನಾನು ಪ್ರತಿದಿನ ಮೀಟಿಂಗ್ ಒಂದೇ ರೀತಿಯ ಶರ್ಟ್ ಧರಿಸಿಕೊಂಡು ಬರುತ್ತಿದ್ದೆ. ನೀವು ಗುರುತಿಸಿದ್ದೀರಾ ಇಲ್ಲವೋ ತಿಳಿದಿಲ್ಲ ಎಂದೆ. ಆಗ ಗೊತ್ತಾಯಿತು ಅವರಿಗೆ ತಿಳಿದಿರಲಿಲ್ಲ ಎಂದು.

Trending Desk
Updated:June 24, 2021, 10:27 PM IST
ವರ್ಕ್ ಫ್ರಮ್ ಹೋಮ್​​ ವಿಡಿಯೋ ಕಾಲ್​​ಗಳ ಬಂಡವಾಳ.. 264 ದಿನ ಒಂದೇ ಬಟ್ಟೆ ಧರಿಸಿದ ಮಹಿಳೆ!
ಒಂದೇ ಶರ್ಟ್​​ ಧರಿಸಿದ ಮಹಿಳೆ
  • Share this:

ನೀವು ತುಂಬಾ ತಮಾಷೆಯ ವ್ಯಕ್ತಿಯೇ? ನಿಮ್ಮ ಸಹೋದ್ಯೋಗಿಗಳನ್ನು ತಮಾಷೆ ಮಾಡಲು ನೀವು ಇಷ್ಟಪಡುತ್ತೀರಾ? ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಕಂಪನಿಯ ತಮಾಷೆ ಮಾಸ್ಟರ್ ಎಂದು ಕರೆಯುತ್ತಾರೆಯೇ? ಹಾಗಾದರೆ ಟಿಕ್‍ಟಾಕ್ ಬಳಕೆದಾರರು ಅನುಸರಿಸಿದ ತಮಾಷೆ ಮಾರ್ಗವನ್ನು ಅನುಸರಿಸಿ ಮನೋರಂಜನೆ ತೆಗೆದುಕೊಳ್ಳಬಹುದು. 33 ವರ್ಷದ ಟಿಕ್‍ಟಾಕ್ ಬಳಕೆದಾರರಾದ ಜೆಮ್ ಅವರು ಎಲೆಯ ರೀತಿಯ ದಪ್ಪ ಮುದ್ರಣ ಹೊಂದಿರುವ ಕಡುನೀಲಿ-ಬಿಳುಪು ಬಣ್ಣದ ಹವಾಯಿಯನ್ ಶರ್ಟ್ ಅನ್ನು 264 ದಿನಗಳ ಕಾಲ ಜೂಮ್ ಮೀಟಿಂಗ್‍ಗೆ ಬಳಸಿದ್ದರು. ಆದರೆ ಒಬ್ಬ ಸಹೋದ್ಯೋಗಿಗಳು ಇದನ್ನು ಗುರುತಿಸಲೇ ಇಲ್ಲ.




ಕೊರೋನಾ ಕಾರಣ ಪ್ರತಿಯೊಬ್ಬರಿಗೂ ಆಯಾ ಕಂಪೆನಿಗಳು ವರ್ಕ್ ಫ್ರಂ ಹೋಮ್ ಕೊಟ್ಟಿವೆ. ದಿನಪೂರ್ತಿ ಕೆಲಸ ಮಾಡುವ ಸಹೋದ್ಯೋಗಿಗಳು ಒಮ್ಮೆಯಾದರೂ ಆಫೀಸ್‍ನ ಜೂಮ್ ಮೀಟಿಂಗ್‍ನಲ್ಲಿ ಪಾಲ್ಗೊಳ್ಳಲೇಬೇಕು. ಕೆಲಸದ, ಕಂಪೆನಿಯ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಯುತ್ತದೆ. ಇದೇ ರೀತಿಯಾಗಿ ಜೆಮ್ ಅವರು ಕೂಡ ಪ್ರತಿದಿನ ಜೂಮ್ ಮೀಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ.



ಈ ಬಗ್ಗೆ ಹೇಳುವ ಅವರು, ನಾನು ಒಂದೇ ಶರ್ಟ್ ಅನ್ನು ಪ್ರತಿದಿನ ಧರಿಸಿದರೆ ತಮಾಷೆಯಾಗುವುದಿಲ್ಲವೇ ಎಂದೆನಿಸಿತು. ಆದರೆ ಅಲ್ಲಿ ಆ ರೀತಿಯಾಗಲಿಲ್ಲ. ಪ್ರತಿದಿನ ಒಂದೇ ಶರ್ಟ್ ಧರಿಸಿದರೂ ನನ್ನನ್ನು ಯಾರು ಗುರುತಿಸಲೇ ಇಲ್ಲ. ಯಾರಾದರೂ ಕಮೆಂಟ್ ಮಾಡುತ್ತಾರೆ ಎಂದುಕೊಂಡೆ. ಆದರೆ ಯಾರು ಏನು ಹೇಳಲಿಲ್ಲ. ಆಗ ನಾನು ಯಾರಾದರೂ ಗುರುತಿಸುವವರೆಗೂ ಇದನ್ನೇ ಧರಿಸೋಣ ಎಂದು ಭಾವಿಸಿದೆ. ಕೊನೆಗೂ ಸಹೋದ್ಯೋಗಿಗಳು ನನ್ನ ಶರ್ಟ್ ಗುರುತಿಸುವಲ್ಲಿ ವಿಫಲವಾದರು ಎಂದು ಹೇಳಿದ್ದಾರೆ.
ನಂತರ ಕೊನೆಗೆ ಅದೇ ಶರ್ಟ್ ಅನ್ನು ಆಫೀಸ್‍ಗೆ ಧರಿಸಿಕೊಂಡ ಜೆಮ್, ನಾನು ಈ ಶರ್ಟ್ ಹಲವು ತಿಂಗಳು ಪ್ರತಿದಿನ ಬಳಸಿದೆ. ಆದರೆ ಯಾರು ಗುರುತಿಸಲಿಲ್ಲ ಎಂದು ಸಹೋದ್ಯೋಗಿಗಳಿಗೆ ವಿವರಿಸಿದರು. ಆಗ ಅವರಿಗೆಲ್ಲರಿಗೂ ಅರಿವಾಯಿತು.


ಇದನ್ನೂ ಓದಿ: ಫೇಸ್​​ಬುಕ್​​ ಮೂಲಕ ಗರ್ಭಿಣಿಯರಾದ ಇಬ್ಬರು ಯುವತಿಯರು.. ಹೇಗೆ ಅಂತ ನೀವೇ ನೋಡಿ!


ಕೆಲಸದ ಕೊನೆಯ ದಿನ ಆಫೀಸ್‍ನಲ್ಲಿ, ‘ಹೌದು ನಾನು ಪ್ರತಿದಿನ ಮೀಟಿಂಗ್ ಒಂದೇ ರೀತಿಯ ಶರ್ಟ್ ಧರಿಸಿಕೊಂಡು ಬರುತ್ತಿದ್ದೆ. ನೀವು ಗುರುತಿಸಿದ್ದೀರಾ ಇಲ್ಲವೋ ತಿಳಿದಿಲ್ಲ ಎಂದೆ. ಆಗ ಗೊತ್ತಾಯಿತು ಅವರಿಗೆ ತಿಳಿದಿರಲಿಲ್ಲ ಎಂದು. ಆ ಶರ್ಟ್, ಹೌದು ನಾನು ಈಗ ಧರಿಸಿರುವ ಶರ್ಟ್ ಎಂದು ಹೇಳಿ ಹೊರಟೆ ಎಂದು ಹೇಳಿದರು. ಜೆಮ್ಸ್ ಅವರ ಟಿಕ್‍ಟಾಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಆಕೆಗೆ ಬೆಂಬಲ ಸೂಚಿಸಿದರೆ, ಇನ್ನು ಕೆಲವರು ಅವರ ಅದ್ಭುತ ತಮಾಷೆ ಕಂಡು ಖುಷಿಪಟ್ಟರು.



ಇನ್ನೊಬ್ಬರು ಕಮೆಂಟ್ ಮಾಡಿದ್ದು, ನಾವು ಫ್ಯಾಷನ್ ಮತ್ತು ಹೊರಗಿನ ನೋಟಕ್ಕೆ ಎಷ್ಟು ಬೆಲೆ ಕೊಡುತ್ತೇವೆ ಎಂಬುದಕ್ಕೆ ಇದು ಒಂದು ಉತ್ತಮ ನಿದರ್ಶನ. ಈ ರೀತಿ ಇದ್ದಾಗ ನಾವು ಬೇರೆ ಯಾವುದಕ್ಕೂ ಬೆಲೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ, ನಿಜವಾಗಿಯೂ ಇದು ಉತ್ತಮ ಪ್ರದರ್ಶನ ಕಲೆ. ಅದ್ಭುತ ಎಂದಿದ್ದಾರೆ. ಜೆಮ್ ಹಿಂದಿನ ಕಂಪೆನಿಯನ್ನು ತೊರೆದಿದ್ದು, ಹೊಸ ಕಂಪೆನಿಯಲ್ಲಿ ಈ ಶರ್ಟ್ ಧರಿಸಿಲ್ಲ.

Published by: Kavya V
First published: June 24, 2021, 10:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories