Research: ಕಾಲಿಲ್ಲದ ಕಪ್ಪೆಗೆ ಮತ್ತೆ ಬಂತು ಕಾಲು, US Scientistsನಿಂದ ಪುನರ್ ಅಭಿವೃದ್ಧಿ ಪ್ರಯೋಗ!

ಗಾಯದಿಂದಾಗಿ ಕೈಕಾಲುಗಳನ್ನು ಕಳೆದುಕೊಂಡಿರುವ ಆಫ್ರಿಕನ್ ಕ್ಲಾವ್ಡ್ ಫ್ರಾಗ್ ಮೇಲೆ ಈ ವಿನೂತನ ಪ್ರಯೋಗವನ್ನು ನಡೆಸಲಾಯಿತು ಎಂದು ಡೈಲಿ ಮೇಲ್ ವರದಿ ತಿಳಿಸಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಅಮೆರಿಕದ ಸಂಶೋಧಕರ (American Researchers) ಗುಂಪೊಂದು ಐದು ಔಷಧಗಳ ಸಂಯೋಜನೆಯನ್ನು ಬಳಸಿಕೊಂಡು ಕಪ್ಪೆಯ ನಷ್ಟಗೊಂಡ (Frog's Lost Legs) ಕಾಲುಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂಬುದಾಗಿ ಡೈಲಿ ಮೇಲ್ ವರದಿ ಮಾಡಿದೆ. ಸಂಶೋಧಕರ ತಂಡವು ಇದೀಗ ಸಸ್ತನಿಗಳ (Mammals) ಮೇಲೆ ಇದೇ ಪ್ರಯೋಗವನ್ನು(Experiment) ಪರೀಕ್ಷಿಸಲು ಮುಂದಾಗಿದ್ದಾರೆ ಎಂಬುದಾಗಿ ಸುದ್ದಿಮೂಲ ವರದಿ ಮಾಡಿದೆ.

ಕೈಕಾಲು ನಷ್ಟಗೊಂಡ ಕಪ್ಪೆಯ ಮೇಲೆ ಪ್ರಯೋಗ:

ಗಾಯದಿಂದಾಗಿ ಕೈಕಾಲುಗಳನ್ನು ಕಳೆದುಕೊಂಡಿರುವ ಆಫ್ರಿಕನ್ ಕ್ಲಾವ್ಡ್ ಫ್ರಾಗ್ (ಜೆನೋಪಸ್ ಲೇವಿಸ್) ಮೇಲೆ ಈ ವಿನೂತನ ಪ್ರಯೋಗವನ್ನು ನಡೆಸಲಾಯಿತು ಎಂದು ಡೈಲಿ ಮೇಲ್ ವರದಿ ತಿಳಿಸಿದೆ. ನ್ಯೂರೋಟ್ರೋಫಿಕ್ ಅಂಶ, 1,4-ಡೈಹೈಡ್ರೋಫೆನಾಂಟ್ರೋಲಿನ್-4-ಒನ್-3ಕಾರ್ಬಾಕ್ಸಿಲಿಕ್‌ ಆ್ಯಸಿಡ್, ರೆಸೊಲ್ವಿನ್ ಡಿ5, ಬೆಳವಣಿಗೆಯ ಹಾರ್ಮೋನ್ ಮತ್ತು ರೆಟಿನೊಯಿಕ್ ಆಮ್ಲವನ್ನು ಒಳಗೊಂಡಿರುವ ಐದು-ಔಷಧ ಮಿಶ್ರಣವನ್ನು ಕಾಕ್‌ಟೇಲ್‌ನಂತೆ ಭರ್ತಿಯಾದ ಪ್ರೋಟೀನ್ ಜೆಲ್ ಹೊಂದಿರುವ ಸಿಲಿಕಾನ್ ಕ್ಯಾಪ್‌ನಲ್ಲಿ ಗಾಯಗೊಂಡ ಭಾಗವನ್ನು ಮುಚ್ಚಲಾಯಿತು.

ವಿಭಿನ್ನ ಉದ್ದೇಶವನ್ನು ಒಳಗೊಂಡ ಔಷಧಗಳ ಪ್ರಯೋಗ:
ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ನರ ನಾರುಗಳು, ರಕ್ತನಾಳಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುವುದು ಸೇರಿದಂತೆ ಐದು ಕೂಡ ಔಷಧವು ವಿಭಿನ್ನ ಉದ್ದೇಶವನ್ನು ಹೊಂದಿತ್ತು. ಕಪ್ಪೆ ಇದ್ದ ಜೈವಿಕ ಡೋಮ್‌ಗಳನ್ನು 24 ಗಂಟೆಗಳ ಕಾಲ ದ್ರಾವಣದೊಂದಿಗೆ ಸೀಲ್ ಮಾಡಲಾಯಿತು ಹಾಗೂ ಪುನರುತ್ಪಾದನೆಯು 18 ತಿಂಗಳುಗಳ ಸಮಯವನ್ನು ತೆಗೆದುಕೊಂಡಿತು ಎಂಬುದಾಗಿ ಸಂಶೋಧಕರು ಉಲ್ಲೇಖಿಸಿರುವ ಮಾಹಿತಿಯನ್ನು ಡೈಲಿ ಮೇಲ್ ತಿಳಿಸಿದೆ.

ಇದನ್ನೂ ಓದಿ: Viral Video: ಡಂಬಲ್ಸ್ ಹಿಡಿದು ಕಪ್ಪೆಯ ಭಯಂಕರ ವರ್ಕೌಟ್..! ವಿಡಿಯೋ ಸಖತ್​ ವೈರಲ್

ಕೈಕಾಲುಗಳಲ್ಲಿ ಪುನರ್ ಉತ್ಪಾದನೆಗೊಂಡ ಸಾಮರ್ಥ್ಯ:
ಈಜಲು ಸಹಕರಿಸುವ ಮೂಳೆರಹಿತ ಕಾಲ್ಬೆರಳುಗಳನ್ನು ಒಳಗೊಂಡಂತೆ ನೈಸರ್ಗಿಕವಾಗಿ ಕೈಕಾಲುಗಳನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗದೇ ಇರುವ ವಯಸ್ಕ ಕಪ್ಪೆಯು ಔಷಧದ ಪರಿಣಾಮದಿಂದ ಇದೀಗ ಬಹುತೇಕ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಅಂಗಗಳನ್ನು ಪುನಸ್ಥಾಪಿಸಿದೆ ಎಂದು ಬೋಸ್ಟನ್‌ನಲ್ಲಿರುವ ಮೆಡ್‌ಫೋರ್ಡ್, ಮ್ಯಾಸಚೂಸೆಟ್ಸ್‌ನ ಟಫ್ಟ್ಸ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ವೈಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳನ್ನು ಒಳಗೊಂಡ ಸಂಶೋಧಕರ ತಂಡ ತಿಳಿಸಿದೆ.

ಈ ವಿಧಾನವು ಮಾನವರಿಗೆ ಅಂಗಗಳನ್ನು ಉತ್ಪಾದಿಸುವ ಗುರಿಯನ್ನು ಸಾಧಿಸುವುದಕ್ಕೆ ಸಹಕಾರವನ್ನು ನೀಡುತ್ತದೆ ಎಂಬುದಾಗಿ ಸಂಶೋಧಕರು ತಂಡ ಉಲ್ಲೇಖಿಸಿದೆ.

ಪುನಃ ಬೆಳೆದ ಅಂಗಗಳ ಚಲನೆ
18 ತಿಂಗಳ ನಂತರ, ವಯಸ್ಕ ಕಪ್ಪೆ "ಬಹುತೇಕ ಸಂಪೂರ್ಣವಾಗಿ ಕ್ರಿಯಾತ್ಮಕ" ಕೈಕಾಲುಗಳನ್ನು ಅಭಿವೃದ್ಧಿಪಡಿಸಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ವೈಸ್ ಇನ್ಸ್ಟಿಟ್ಯೂಟ್ ಮತ್ತು ಮ್ಯಾಸಚೂಸೆಟ್ಸ್‌ನ ಮೆಡ್‌ಫೋರ್ಡ್‌ನಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೇರಿದಂತೆ ಸಂಶೋಧಕರ ತಂಡವು ಹೇಳಿದೆ. ಪುನರುಜ್ಜೀವನಗೊಂಡ ಅಂಗವು ಚಲಿಸುವುದು ಮಾತ್ರವಲ್ಲದೆ ಸ್ಪರ್ಶದಂತಹ ಪ್ರಚೋದಕಗಳಿಗೆ ಪ್ರತಿಕ್ರಿಯಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಪ್ಪೆಗಳು ಹಾಗೂ ಪ್ರಾಯಶಃ ಇತರ ಪ್ರಾಣಿಗಳು ನಿಷ್ಕ್ರಿಯ ಪುನರುತ್ಪಾದಕ ಸಾಮರ್ಥ್ಯಗಳನ್ನು ಹೊಂದಿದ್ದರೂ ತಿಂಗಳ ಅವಧಿಯ ಪುನರುತ್ಪಾದನೆಯ ಪ್ರಕ್ರಿಯೆಗಾಗಿ ಔಷಧಿಗಳಿಗೆ ಪೂರ್ಣಪ್ರಮಾಣದಲ್ಲಿ ಒಡ್ಡಿಕೊಳ್ಳುವುದು ಮಾತ್ರ ಅಗತ್ಯವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅಧ್ಯಯನದ ಲೇಖಕಿಯಾಗಿರುವ ನಿರೋಶಾ ಮುರುಗನ್ ಅವರ ಅಭಿಪ್ರಾಯವನ್ನು ಡೈಲಿ ಮೇಲ್ ಉಲ್ಲೇಖಿಸಿದೆ. ಪುನಃ ಬೆಳೆದ ಅಂಗವು ಚಲಿಸುತ್ತಿದ್ದು ಮತ್ತು ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತದೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಮನುಷ್ಯರಲ್ಲಿ ಅಂಗ ಪುನರ್ ಉತ್ಪಾದನೆಗೆ ಇರುವ ವ್ಯತ್ಯಾಸವೇನು?
ಸಲಾಮಾಂಡರ್‌ಗಳು, ಸ್ಟಾರ್‌ಫಿಶ್‌ಗಳು, ಏಡಿಗಳು ಮತ್ತು ಹಲ್ಲಿಗಳಂತಹ ಅನೇಕ ಜೀವಿಗಳು ಕೈಕಾಲುಗಳನ್ನು ಪುನರುತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಚಪ್ಪಟೆ ಹುಳುಗಳಂತೆ ಇತರ ಕೆಲವು ಜೀವಿಗಳನ್ನು ತುಂಡುಗಳಾಗಿ ಕತ್ತರಿಸಬಹುದಾದರೂ ಪ್ರತಿ ತುಂಡು ಸಂಪೂರ್ಣ ಜೀವಿಗಳನ್ನು ಪುನರ್ ನಿರ್ಮಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ.

ಇದನ್ನೂ ಓದಿ: State Frog: ಕರ್ನಾಟಕ ಧ್ವಜ, ಲಾಂಛನದಂತೆ 'ರಾಜ್ಯ ಕಪ್ಪೆ' ಘೋಷಣೆಗೆ ತಜ್ಞರ ಮನವಿ

ಮನುಷ್ಯರಿಗೆ ಹೋಲಿಸಿದಾಗ ಈ ಸಾಮರ್ಥ್ಯ ಯಕೃತ್ತಿನಂತಹ ಅಂಗಗಳಲ್ಲಿ ಕಂಡುಬಂದಿದೆ. ಈ ಅಂಗಗಳನ್ನು ಅರ್ಧದಷ್ಟು ತೆಗೆದ ನಂತರ ಪೂರ್ಣ ಗಾತ್ರಕ್ಕೆ ಮತ್ತೆ ಬೆಳೆಯಬಹುದು. ಆದಾಗ್ಯೂ, ಸಸ್ತನಿಗಳು ನೈಸರ್ಗಿಕವಾಗಿ ದೊಡ್ಡ ಸಂಕೀರ್ಣ ಅಂಗಗಳನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ.

ಪುನರುತ್ಪಾದಕ ಔಷಧದ ಅಧ್ಯಯನದ ಫಲಿತಾಂಶಗಳ ಬಗ್ಗೆ ವಿಜ್ಞಾನಿಗಳು ಉತ್ಸುಕರಾಗಿದ್ದಾರೆ. ಸಂಶೋಧನೆಗಳು ಹೃದಯಾಘಾತದ ನಂತರ ಗಾಯ-ರಹಿತ ಗುಣಪಡಿಸುವ ಸಾಮರ್ಥ್ಯವನ್ನು ಅನ್ವೇಷಿಸಬಹುದು ಎಂದು ದಿ ಗಾರ್ಡಿಯನ್ ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಮೈಕೆಲ್ ಷ್ನೇಯ್ಡರ್ ಹೇಳಿದ್ದಾರೆ.
Published by:vanithasanjevani vanithasanjevani
First published: