• Home
  • »
  • News
  • »
  • trend
  • »
  • Joe Biden: ಯುವತಿಗೆ ಡೇಟಿಂಗ್‌ ಸಲಹೆ ನೀಡಿ ಪೇಚಿಗೆ ಸಿಲುಕಿದ ಅಮೆರಿಕಾ ಅಧ್ಯಕ್ಷ! ಏನಿದು ಜೋ ಬೈಡನ್ ವಿವಾದ?

Joe Biden: ಯುವತಿಗೆ ಡೇಟಿಂಗ್‌ ಸಲಹೆ ನೀಡಿ ಪೇಚಿಗೆ ಸಿಲುಕಿದ ಅಮೆರಿಕಾ ಅಧ್ಯಕ್ಷ! ಏನಿದು ಜೋ ಬೈಡನ್ ವಿವಾದ?

ಜೋ ಬೈಡನ್

ಜೋ ಬೈಡನ್

ಜೋ ಬೈಡನ್ ಅವರು ಕ್ಯಾಲಿಫೋರ್ನಿಯಾದ ಇರ್ವಿನ್ ಕಾಲೇಜು ಸಮಾರಂಭದ ಭೇಟಿಯ ಸಂದರ್ಭದಲ್ಲಿ ಯುವತಿಯೊಬ್ಬರಿಗೆ ಡೇಟಿಂಗ್ ಸಲಹೆ ನೀಡಿದರು. ಅದೀಗ ವಿವಾದಕ್ಕೆ ಕಾರಣವಾಗಿದೆ!

  • Share this:

ಕ್ಯಾಲಿಫೊರ್ನಿಯದಲ್ಲಿ (California) ಯುವತಿಯೊಬ್ಬಳಿಗೆ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಡೇಟಿಂಗ್ ಸಲಹೆ ನೀಡಿರುವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆ ಹುಡುಗಿಗೆ ಜೋ ಬೈಡನ್ (Joe Biden) ಅವರು ಏನ್‌ ಹೇಳಿದ್ರು? ಈ ವಿಡಿಯೋ ಯಾಕೆ ಇಷ್ಟೊಂದು ವೈರಲ್‌ ಆಗ್ತಿದೆ? ಎಂಬೆಲ್ಲ ಮಾಹಿತಿಗಾಗಿ ಮುಂದೆ ಓದಿ. ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಜೋ ಬೈಡನ್ ಅವರು “ನಿಮಗೆ 30 ವರ್ಷ ತುಂಬುವವರೆಗೆ ಯಾವ ಕೆಲಸವನ್ನು ಗಂಭಿರವಾಗಿ ಮಾಡಲು ಹೋಗಬೇಡಿ. ನಿಮ್ಗೆ 30 ವರ್ಷ ತುಂಬುವವರೆಗೂ ನೀವು ಅಂತಹ ಸೀರಿಯಸ್‌ ಹುಡುಗ (Boy) ಅಥವಾ ಹುಡುಗಿ (Girl) ಆಗುವ ಸಾಹಸಕ್ಕೆ ಕೈ ಹಾಕಬೇಡಿ” ಎಂದು ಹೇಳುವ ಮೂಲಕ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.


ಇರ್ವಿನ್‌ ವ್ಯಾಲಿ ಕಮ್ಯುನಿಟಿ ಕಾಲೇಜ್ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜೋ ಬೈಡನ್ ಈ ಮಾತನ್ನು ಹೇಳಿದ್ದಾರೆ.


ಏನಿದು ಘಟನೆ?
ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕ್ಯಾಲಿಫೋರ್ನಿಯಾದ ಇರ್ವಿನ್ ಕಾಲೇಜು ಸಮಾರಂಭದ ಭೇಟಿಯ ಸಂದರ್ಭದಲ್ಲಿ ಯುವತಿಯೊಬ್ಬರಿಗೆ ಡೇಟಿಂಗ್ ಸಲಹೆ ನೀಡಿದರು. ಇದರಿಂದ ಇರ್ವಿನ್ ವ್ಯಾಲಿ ಕಾಲೇಜಿನಲ್ಲಿ ಟೀಕೆಗಳ ಸುರಿಮಳೆಯೇ ಆಯಿತು. ಇದರ ನಂತರ ಎಚ್ಚೆತ್ತ ಜೋ ಬೈಡನ್ ಅವರು ಯುವತಿಯೊಂದಿಗೆ ಪೋಟೋ ತೆಗೆಸಿಕೊಳ್ಳುವುದಕ್ಕೆ ನಿಲ್ಲುತ್ತಾರೆ. ಆ ಸಮಯದಲ್ಲಿ ಬೈಡನ್ ಅವರು ಯುವತಿಯ ತೋಳುಗಳ ಮೇಲೆ ತಮ್ಮ ಕೈಗಳನ್ನು ಇರಿಸಿ ಪೋಟೋಕ್ಕೆ ಪೋಸ್‌ ಕೊಡುತ್ತಾ ಡೇಟಿಂಗ್‌ ಸಲಹೆಯನ್ನು ನೀಡಿರುವ ವಿಡಿಯೋ ಈಗ ಸಖತ್‌ ಸದ್ದು ಮಾಡುತ್ತಿದೆ. ಆ ಯುವತಿಗೆ ಈ ಡೇಟಿಂಗ್‌ ಸಲಹೆಯ ಅವಶ್ಯಕತೆ ಇದ್ದಿದ್ದಿಲ್ಲ ಎಂಬುದು ಅವಳ ಮುಖದ ಭಾವನೆಯಲ್ಲಿಯೇ ಕಂಡುಬರುತ್ತದೆ.


ಇದನ್ನೂ ಓದಿ: Hanuman Chalisa: ವಿದೇಶಿಯರಿಂದ ಹನುಮಾನ್‌ ಚಾಲೀಸ ಪಠಣ, ನೆಟ್ಟಿಗರ ಮನಗೆದ್ದ ವಿಡಿಯೋ


ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ, ಜೋ ಬೈಡನ್ ಯುವತಿಗೆ, "ಈ ಸಮಯದಲ್ಲಿ ಹೇಳಿರುವ ಈ ವಿಷಯ ನನ್ನ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳಿಗೆ ನಾನು ಹೇಳಿರುವ ಬಹಳ ಮುಖ್ಯವಾದ ವಿಷಯ ಆಗಿದೆ" ಎಂದು ಹೇಳುವುದನ್ನು ನಾವು ಆ ವಿಡಿಯೋದಲ್ಲಿ ಕಾಣಬಹುದು. “ ನೀವು 30 ವರ್ಷದ ತನಕ ಗಂಭೀರ ವ್ಯಕ್ತಿಗಳು ಆಗಿರಲು ಸಾಧ್ಯವೇ ಇಲ್ಲ” ಎಂದು ಜೋ ಬೈಡನ್ ತಮ್ಮ ಮಾತನ್ನು ಸೇರಿಸಿದ್ದಾರೆ.


ಜೋ ಬೈಡನ್ ಈ ರೀತಿ ಹೇಳಿದ್ದಕ್ಕೆ ಯುವತಿ ಏನ್ ಹೇಳಿದ್ಲು ಗೊತ್ತಾ 
“ತಮ್ಮ ಮುಂದೆ ನಿಂತಿರುವ ಹುಡುಗಿಗೆ 'ನಿಮಗೆ 30 ವರ್ಷವಾಗುವವರೆಗೆ ನೀವು ಯಾವುದೇ ರೀತಿಯಲ್ಲಿ ಗಂಭೀರ ವ್ಯಕ್ತಿಗಳು ಅಲ್ಲ” ಎಂದು ಜೋ ಬೈಡನ್ ಹೇಳಿದ್ದಾರೆ. ಇದಕ್ಕೆ ನಗುತ್ತಾ ಉತ್ತರಿಸಿದ ಆ ಹುಡುಗಿ "ಇದನ್ನು ನಾನು ನೆನಪಿಟ್ಟುಕೊಳ್ಳುತ್ತೇನೆ" ಎಂದು ಹೇಳಿದ್ದಾಳೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಕಾಮೆಂಟ್ ಗಳ ಮೂಲಕ ಜೋ ಬೈಡನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಡೇಟಿಂಗ್‌ ಸಲಹೆ ನೀಡಿರುವ ಹುಡುಗಿ ಇವರ ವರ್ತನೆಯಿಂದ ಪೇಚಿಗೆ ಸಿಲುಕಿದ್ದಾಳೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ಇದರಿಂದ ಕೆಲವರಿಗೆ ಒಳ್ಳೆಯ ಮಾಹಿತಿ ಸಿಕ್ಕಂತಾಗಿದೆ” ಎಂದು ಹೇಳುತ್ತಿದ್ದಾರೆ.


ಈ ಹಿಂದೆ, ರಾಷ್ಟ್ರೀಯ ಶಿಕ್ಷಣ ಸಂಘದಲ್ಲಿ ಭಾಷಣ ಮಾಡುವಾಗ ಜೋ ಬೈಡನ್ ಅವರಿಗಿಂತ 18 ವರ್ಷ ಚಿಕ್ಕ ವಯಸ್ಸಿನ ಹುಡುಗಿಯೊಂದಿಗಿನ ಸ್ನೇಹ ಸಂಬಂಧದ ಕಾರಣ ತೀವ್ರವಾಗಿ ಟೀಕೆಗೆ ಒಳಗಾಗಿದ್ದರು. "ನೀವು ನನಗೆ ಏನಂತಿರೋ ಗೊತ್ತಿಲ್ಲ. ಆದರೆ ನಾವು ಬಹಳ ಹತ್ತಿರದ ಸ್ನೇಹಿತರು ಎಂದ್ರೆ ನೀವು ಆಶ್ಚರ್ಯ ಪಡುತ್ತಿರಿ. ಅವಳ ವಯಸ್ಸು 12, ನನ್ನ ವಯಸ್ಸು 30. ಆದರೂ ಸಹ ನಮ್ಮಲ್ಲಿ ಉತ್ತಮ ಬಾಂಧವ್ಯ ಅದು ಹೇಗೆ ನಿರ್ಮಾಣವಾಯಿತೋ ನಾನು ಅರಿಯೇನು. ಅವಳು ನನಗೆ ಸಾಕಷ್ಟು ಸಹಾಯವನ್ನು ಸಹ ಮಾಡಿದ್ದಾಳೆ” ಎಂದು ಜೋ ಬೈಡನ್ ತಮ್ಮ ಭಾಷಣದಲ್ಲಿ ಆ ಹುಡುಗಿಯ ಬಗ್ಗೆ ಹೇಳಿದ್ದರು.


ಇದನ್ನೂ ಓದಿ: Viral Video: ಅದೇ ಶಿವ, ಅದೇ ಫಾರೆಸ್ಟ್ ಆಫೀಸರ್, ಆದ್ರೆ ಇದು ಕಾಂತಾರ ಅಲ್ಲ! ಹೆಂಗಿದೆ ಕಾಣಿ ಮಕ್ಕಳಾಟ!


ಯುವತಿಯೊಬ್ಬಳಿಗೆ ಡೇಟಿಂಗ್‌ ಸಲಹೆ ನೀಡಿರುವ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸಾಕಷ್ಟು ಮಿಶ್ರ ರೀತಿಯ ಟೀಕೆ ಟಿಪ್ಪಣಿಗಳು ಬಂದಿವೆ. ಈಗಾಗಲೇ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಸುಮಾರು ಐದು ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

Published by:Ashwini Prabhu
First published: