ಈಗಂತೂ ಇಡೀ ದೇಶಾದ್ಯಂತ ಬಹುತೇಕರ ಬಾಯಲ್ಲಿ ಮತ್ತು ಅವರ ವಾಟ್ಸಾಪ್ ನ ಸ್ಟೇಟಸ್ ನಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡಿನದ್ದೆ ಸುದ್ದಿ ಹರಿದಾಡುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಈ ಹಾಡಿನ ಬಗ್ಗೆ ನಾವೆಲ್ಲಾ ಎಷ್ಟು ಮಾತಾಡಿದರೂ ಕಡಿಮೆಯೇ ಅಂತ ಹೇಳಬಹುದು. ಏಕೆಂದರೆ ಎಲ್ಲರಿಗೂ ಗೊತ್ತಿರುವಂತೆ ಜಾಗತಿಕ ಮಟ್ಟದಲ್ಲಿ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಅವರು ‘ನಾಟು ನಾಟು’ (Naatu Naatu) ಹಾಡಿನಿಂದ ಮಿಂಚುತ್ತಿದ್ದಾರೆ ಅಂತ ಹೇಳಬಹುದು. ‘ನಾಟು ನಾಟು’ ಹಾಡು ಇವರಿಗೆ ತಂದು ಕೊಟ್ಟ ಕೀರ್ತಿ ಅಷ್ಟಿಷ್ಟಲ್ಲ ಬಿಡಿ, ಆಸ್ಕರ್ ಅಂತಹ ಪ್ರಶಸ್ತಿಯನ್ನೆ ಇವರಿಗೆ ತಂದು ಕೊಟ್ಟಿದ್ದು, ಇದರ ಮೂಲಕ ಇಡೀ ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ ಅಂತ ಹೇಳಬಹುದು.
‘ನಾಟು ನಾಟು’ ಹಾಡಿಗೆ ಕೀರವಾಣಿಗೆ ಸಿಕ್ತು ಆಸ್ಕರ್
ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು’ ಹಾಡಿನ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳ ಮನಗೆದ್ದ ಎಂ ಎಂ ಕೀರವಾಣಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ.
ಭಾನುವಾರ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಎಸ್.ಎಸ್.ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಹಾಡು ಅಂತ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಚಿತ್ರವಾಗಿದೆ.
ಇದನ್ನೂ ಓದಿ: ವೀಕೆಂಡ್ನಲ್ಲಿ ಮಾತ್ರ ಇವ್ರು ಗಂಡ-ಹೆಂಡತಿ, ಉಳಿದ ದಿನಗಳಲ್ಲಿ ಸಿಂಗಲ್ ಲೈಫ್!
ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಯ ನಂತರ, ಚಂದ್ರಬೋಸ್ ಬರೆದ ಮತ್ತು ಎಂ ಎಂ ಕೀರವಾಣಿ ಸಂಯೋಜಿಸಿದ ಹಿಟ್ ಹಾಡಿಗೆ ಇದು ಮೂರನೇ ಪ್ರಮುಖ ಅಂತರರಾಷ್ಟ್ರೀಯ ಗೌರವವಾಗಿದೆ.
ಈ ಹಿಟ್ ಹಾಡಿಗೆ ಡ್ಯಾನ್ಸ್ ಮಾಡಿದ ಯುಎಸ್ ಪೊಲೀಸ್ ಅಧಿಕಾರಿಗಳು..
ಸಾಮಾಜಿಕ ಮಾಧ್ಯಮಗಳಲ್ಲಿ ಈ ಈ ಹಾಡಿಗೆ ಸ್ಟೆಪ್ಸ್ ಹಾಕಿದ ಅನೇಕರ ವೀಡಿಯೋಗಳು ಹರಿದಾಡುತ್ತಿವೆ ಅಂತ ಹೇಳಬಹುದು. ಇದೀಗ, ಯುಎಸ್ ಪೊಲೀಸ್ ಅಧಿಕಾರಿಗಳು ಸಹ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ನೋಡಿ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆಸ್ಕರ್ ಸಮಾರಂಭಕ್ಕೆ ಮುಂಚಿತವಾಗಿಯೇ ಈ ವೀಡಿಯೋವನ್ನು ನೆನಾವತ್ ಜಗನ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪ್ರಶಸ್ತಿ ಲಭಿಸಿದ ನಂತರ ಇದು ಸಾಕಷ್ಟು ಜನರ ಗಮನ ಸೆಳೆದಿದೆ ಅಂತ ಹೇಳಬಹುದು.
ಇದನ್ನೂ ಓದಿ: ನೊಣಗಳು ತಮ್ಮ ಕಾಲುಗಳನ್ನು ಉಜ್ಜಿಕೊಳ್ಳೋದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಫ್ಯಾಕ್ಟ್!
ಈ 44 ಸೆಕೆಂಡಿನ ವೀಡಿಯೋದಲ್ಲಿ, ಯುಎಸ್ ಪೊಲೀಸರು ಈ ಹಾಡಿಗೆ ಕಾಲು ಕುಲುಕುತ್ತಿರುವುದನ್ನು ಕಾಣಬಹುದು. ಅಲ್ಲೇ ಪಕ್ಕದಲ್ಲಿ ಜನರು ಬಣ್ಣ ಆಡುತ್ತಿರುವುದನ್ನು ಮತ್ತು ಗುಲಾಲ್ ಗಳನ್ನು ಹಿಡಿದುಕೊಂಡು ಹೋಳಿ ಆಡುತ್ತಿರುವುದನ್ನು ಸಹ ಈ ವೀಡಿಯೋದಲ್ಲಿ ನಾವು ನೋಡಬಹುದು.
ಈ ವೀಡಿಯೋ ಮಾಡಿದ್ದು ಟೆಕ್ಸಾಸ್ ನಲ್ಲಿ ಅಂತೆ..
ಈ ವೀಡಿಯೋವನ್ನು ಬಹುಶಃ ಹೋಳಿ ಹಬ್ಬದ ದಿನದಂದು ತೆಗೆದುಕೊಳ್ಳಲಾಗಿದೆ ಎಂದು ತೋರುತ್ತದೆ. ಕ್ಲಿಪ್ ನಲ್ಲಿ ಒಬ್ಬ ವ್ಯಕ್ತಿಯು ಪೊಲೀಸರ ಭುಜದ ಮೇಲೆ ತನ್ನ ಕೈಗಳನ್ನು ಇರಿಸಿ, ಹಿನ್ನೆಲೆ ಸಂಗೀತ ಬರುತ್ತಿದ್ದಂತೆ ಹುಕ್ ಸ್ಟೆಪ್ಸ್ ಗಳನ್ನು ಹಾಕುತ್ತಾನೆ.
#California cops are enjoying the the #NaatuNaatu song.🙌🙌🤙🤙 Naatu naatu is everywhere #RamCharan #NTR #RRRMovie #SSRajamouli #RRRForOscars #RRR #GlobalStarRamCharan #NTRGoesGlobal #Oscars #Oscars2023 #letsdance pic.twitter.com/rjRQMrjoTs
— nenavath Jagan (@Nenavat_Jagan) March 11, 2023
ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದಾಗಿನಿಂದ, ಈ ವೀಡಿಯೋ 5.4 ಲಕ್ಷ ವೀಕ್ಷಣೆಗಳು ಮತ್ತು ಐದು ಸಾವಿರ ಲೈಕ್ ಗಳನ್ನು ಗಳಿಸಿದೆ.
ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಹಾಡಿಗೆ ತುಂಬಾನೇ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ" ಎಂದು ಹೇಳಿದರು. "ಇದು ಸೂಪರ್" ಅಂತ ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಹೌದು, ಅವರ ಹಾಡಿನ ಆಯ್ಕೆ ತುಂಬಾನೇ ಚೆನ್ನಾಗಿದೆ ಮತ್ತು ಡ್ಯಾನ್ಸ್ ಸಹ ಮುದ್ದಾಗಿದೆ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ