• Home
  • »
  • News
  • »
  • trend
  • »
  • Eye Flashlight: ಇದು ಅಂತಿಂತ ಕಣ್ಣಲ್ಲ ಬ್ಯಾಟರಿ ಕಣ್ಣು, ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಆವಿಷ್ಕಾರ ನೋಡಿ

Eye Flashlight: ಇದು ಅಂತಿಂತ ಕಣ್ಣಲ್ಲ ಬ್ಯಾಟರಿ ಕಣ್ಣು, ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಆವಿಷ್ಕಾರ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

US Man Turns His Eye Into A Flashlight: ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋಗಳಲ್ಲಿ ಈ ವ್ಯಕ್ತಿಯ ಕಣ್ಣುಗಳು ಥೇಟ್‌ ಟಾರ್ಚ್‌ನಂತೆ ಕಾಣುತ್ತವೆ. ಸ್ಟಾನ್ಲಿ ಕಣ್ಣನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡು 'ಟೈಟಾನಿಯಂ ಸ್ಕಲ್ ಲ್ಯಾಂಪ್' ಕತ್ತಲೆಯಲ್ಲಿ ಓದಲು ಸೂಕ್ತವಾಗಿದೆ ಎಂದು ಶೀರ್ಷಿಕೆ ಬರೆದು ಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಸಾಮಾಜಿಕ ಜಾಲತಾಣಗಳು (Social Media) ಬಂದ ನಂತರ ಹೊಸದಾದ, ವಿಭಿನ್ನವಾದ ವಿಡಿಯೋಗಳಿಗೆ (Video) ಬರವೇ ಇಲ್ಲದಂತಾಗಿದೆ. ಜನ ತಮ್ಮಲ್ಲಿರುವ ಸಾಮರ್ಥ್ಯ, ಪ್ರತಿಭೆ, ಹೊಸ ಕಲೆ, ಬುದ್ಧಿವಂತಿಕೆ ಎಲ್ಲವನ್ನೂ ತೋರಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ. ಇಂತಹ ಹಲವಾರು ವಿಡಿಯೋಗಳನ್ನು ಪ್ರತಿನಿತ್ಯ ಜನ ನೋಡಿ ವೈರಲ್‌ (Viral)  ಮಾಡುತ್ತಲೇ ಇರುತ್ತಾರೆ. ಇಂಥದ್ದೇ ಒಂದು ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಿದೆ ನೋಡಿ. ಅಮೆರಿಕದ 33 ವರ್ಷದ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆಯುವ ಆವಿಷ್ಕಾರವನ್ನು ರಚಿಸಿದ್ದಾರೆ. ಕ್ಯಾನ್ಸರ್‌ನಿಂದ ಕಣ್ಣನ್ನು ಕಳೆದುಕೊಂಡ ಬ್ರಿಯಾನ್ ಸ್ಟಾನ್ಲಿ ಒಂದು ಕಣ್ಣು ಹೋಯಿತು ಎಂದು ಹತಾಶೆಗೆ ಒಳಗಾಗದೆ ತನ್ನದೇ ಆದ ಕೃತಕ ಕಣ್ಣನ್ನು ಸೃಷ್ಟಿಸಿ ಕೊಂಡಿದ್ದಾರೆ. ಅದು ಅಂತಿಂತ ಕಣ್ಣಲ್ಲ ಬದಲಿಗೆ ಬ್ಯಾಟರಿ ಕಣ್ಣು.


ಕಣ್ಣನ್ನು ಬ್ಯಾಟರಿಯನ್ನಾಗಿ ಪರಿವರ್ತಿಸಿದ ವ್ಯಕ್ತಿ
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬ್ರಿಯಾನ್ ಸ್ಟಾನ್ಲಿ ಕ್ಯಾನ್ಸರ್‌ನಿಂದ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದ್ದರು. ನಂತರ ಕಳೆದುಕೊಂಡಿರುವ ಕಣ್ಣನ್ನು ಹೇಗಾದರೂ ಮರುಸೃಷ್ಟಿಸಬೇಕೆಂದು ಆಲೋಚಿಸಿ ಈ ರೀತಿಯಾಗಿ ಕಣ್ಣಿನ ಭಾಗವನ್ನು ಬ್ಯಾಟರಿಯನ್ನಾಗಿ ಮಾಡಿದ್ದಾರೆ. ಹೌದು, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬ್ರಿಯಾನ್ ಸ್ಟಾನ್ಲಿ ತನ್ನ ಬುದ್ಧಿವಂತಿಕೆ, ಕೌಶಲ್ಯದಿಂದ ತನ್ನ ಕಣ್ಣುಗುಡ್ಡೆಯನ್ನು ಸಂಪೂರ್ಣವಾಗಿ ಬ್ಯಾಟರಿಯನ್ನಾಗಿ ಪರಿವರ್ತಿದುವ ಮೂಲಕ ಪ್ರಾಸ್ಥೆಟಿಕ್ ಐ ರಚಿಸಿದ್ದಾನೆ. ಬ್ರಿಯಾನ್ ಸ್ಟಾನ್ಲಿ ತಮ್ಮ ಫ್ಲಾಶ್‌ ಲೈಟ್‌ ಕಣ್ಣಿನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.


ಹಲವು ವಿಶೇಷತೆಗಳಿರುವ ಪ್ರಾಸ್ಥೆಟಿಕ್ ಕಣ್ಣು
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋಗಳಲ್ಲಿ ಈ ವ್ಯಕ್ತಿಯ ಕಣ್ಣುಗಳು ಥೇಟ್‌ ಟಾರ್ಚ್‌ನಂತೆ ಕಾಣುತ್ತವೆ. ಸ್ಟಾನ್ಲಿ ಕಣ್ಣನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡು 'ಟೈಟಾನಿಯಂ ಸ್ಕಲ್ ಲ್ಯಾಂಪ್' ಕತ್ತಲೆಯಲ್ಲಿ ಓದಲು ಸೂಕ್ತವಾಗಿದೆ ಎಂದು ಶೀರ್ಷಿಕೆ ಬರೆದು ಕೊಂಡಿದ್ದಾರೆ.


ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಫ್ರೀ ಶವರ್, ಒಡೆದ ನಲ್ಲಿಯ ವಿಡಿಯೋ ಫುಲ್ ವೈರಲ್


ಈ ಕಣ್ಣನ್ನು ಸ್ಟಾನ್ಲಿ 'ಟೈಟಾನಿಯಂ ಸ್ಕಲ್ ಲ್ಯಾಂಪ್' ಎಂದು ಹೆಸರಿಸಿದ್ದಾರೆ ಮತ್ತು ಇದು ಒಂದು ಚಾರ್ಜ್ ಅಥವಾ ಬ್ಯಾಟರ್‌ನಿಂದ 20 ಗಂಟೆಗಳ ಮೌಲ್ಯದ ಬೆಳಕನ್ನು ಪಡೆಯಬಹುದು ಎಂದು ಹೇಳಿದರು. ಈ ಬ್ಯಾಟರಿ ಬಿಸಿಯಾಗುವುದಿಲ್ಲ ಮತ್ತು ಅದರ ಬ್ಯಾಟರಿ ಬಾಳಿಕೆ 20 ಗಂಟೆಗಳಿರುತ್ತದೆ ಎಂದು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಆ ಕಣ್ಣಿನ ಬ್ಯಾಟರಿಯ ಬಣ್ಣವನ್ನು ಸಹ ಬದಲು ಮಾಡಲು ಸಾಧ್ಯವಾಗುತ್ತದೆ ಎಂದು ತಮ್ಮ ಟಾರ್ಚ್‌ ಕಣ್ಣಿನ ಬಗ್ಗೆ ಹೇಳಿದ್ದಾರೆ.









View this post on Instagram






A post shared by Brian Stanley (@bsmachinist)





ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್
ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಕೇವಲ 2 ದಿನಗಳಲ್ಲಿ, ವೀಡಿಯೊ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಮಂದಿ ಬ್ರಿಯಾನ್ ಸ್ಟಾನ್ಲಿ ಬುದ್ಧಿವಂತಿಕೆಯ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. ನೀವೊಬ್ಬ ಉತ್ತಮ ಸಾಧಕ ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನೂ ಕೆಲವರು ಇದು ನಿಮ್ಮ ಸ್ವಂತ ಬೆಳಕಿ ಮೂಲ ಎಂದಿದ್ದಾರೆ. ಇನ್ನೂ ಕೆಲವರು ನೀವು ಟಾರ್ಚ್‌ ಇಲ್ಲದೇ ಕತ್ತಲಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ತಮಾಷೆಯಾಗಿ ಬರೆದಿದ್ದಾರೆ. ಇನ್ನೊಬ್ಬರು ನೀವು ಕ್ಯಾಮೆರಾವನ್ನು ತಯಾರಿಸುವ ಬಗ್ಗೆ ಯೋಚಿಸಿದ್ದೀರಾ? ಎಂದು ಕೇಳಿದ್ದಾರೆ.


ಇದನ್ನೂ ಓದಿ: ಮಾನವನ ಮೆದುಳಿನಲ್ಲಿರುವ ಈ ಒಂದು ಕೋಶ ಸಮಯದ ಹರಿವನ್ನು ಎನ್ಕೋಡ್ ಮಾಡುತ್ತಂತೆ


ಈ ಹಿಂದೆ ಕೂಡ ವಿಭಿನ್ನ ಕಣ್ಣನ್ನು ರಚಿಸಿದ್ದ ಸ್ಟಾನ್ಲಿ
ಸೈಬೋರ್ಗ್ ಕಣ್ಣಿನ ಬಗೆಗಿನ ಸ್ಟಾನ್ಲಿಯ ಈ ಆವಿಷ್ಕಾರ ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂತಹ ವಿಚಿತ್ರ ಆವಿಷ್ಕಾರವನ್ನು ಅವರು ಮಾಡಿದ್ದರು. ಸ್ಟಾನ್ಲಿ ಈ ಹಿಂದೆ ಟರ್ಮಿನೇಟರ್ ಸಿನಿಮಾದಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಪಾತ್ರದಲ್ಲಿ ಇದ್ದಂತಹ ಪ್ರಾಸ್ಥೆಟಿಕ್ ಕಣ್ಣನ್ನು ಸೃಷ್ಟಿಸಿದ್ದರು. ಪ್ರಸ್ತುತ ಹೀಗೆ ಟಾರ್ಚ್‌ ಕಣ್ಣನ್ನು ರಚಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Published by:Sandhya M
First published: