• Home
  • »
  • News
  • »
  • trend
  • »
  • Viral Video: ಅಬ್ಬಬ್ಬಾ! ಹಿಂಗೂ ಪ್ರಪೋಸ್ ಮಾಡ್ತಾರಾ? ಈ ವಿಡಿಯೋ ನೋಡಿದ್ರೆ ಏನ್​ ಗುರು ಇವ್ನು ಅನ್ನೋದು ಪಕ್ಕಾ

Viral Video: ಅಬ್ಬಬ್ಬಾ! ಹಿಂಗೂ ಪ್ರಪೋಸ್ ಮಾಡ್ತಾರಾ? ಈ ವಿಡಿಯೋ ನೋಡಿದ್ರೆ ಏನ್​ ಗುರು ಇವ್ನು ಅನ್ನೋದು ಪಕ್ಕಾ

ಡಿಫರೆಂಟ್ ಆಗಿ ಮದುವೆ ಪ್ರಸ್ತಾಪ ಮಾಡಿದ ಜೋಡಿ

ಡಿಫರೆಂಟ್ ಆಗಿ ಮದುವೆ ಪ್ರಸ್ತಾಪ ಮಾಡಿದ ಜೋಡಿ

ವ್ಯಕ್ತಿ ತಾನು ಪ್ರೀತಿಸುವ ಹುಡುಗಿಗೆ ಹೇಗೆ ಡಿಫರೆಂಟ್ ಆಗಿ ಮೊದಲು ಸ್ವಲ್ಪ ಶಾಕ್ ನೀಡಿ, ನಂತರ ಆಕೆಯ ಮುಂದೆ ಮೊಣಕಾಲನ್ನು ಊರಿ ಕುಳಿತು ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದಾನೆ ನೋಡಿ. ವಿಡಿಯೋ ನೋಡಲು ತುಂಬಾನೇ ಖುಷಿ ಕೊಡುವಂತಿದ್ದು, ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

ಮುಂದೆ ಓದಿ ...
  • Share this:

ಈಗಂತೂ ಜನರು ತಮ್ಮ ಜೀವನದಲ್ಲಿ (Life) ನಡೆಯುವ ಮಹತ್ವದ ಘಟನೆಗಳನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಅದನ್ನು ಬೇರೆಯವರು ಸಹ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ವಿಭಿನ್ನ ರೀತಿಯಲ್ಲಿ ಪ್ರೀತಿಯನ್ನು (Love) ಹೇಳಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ಗೆಳೆಯ ಅಥವಾ ಗೆಳತಿಗೆ ಸ್ವಲ್ಪ ಡಿಫರೆಂಟ್ ಆಗಿ ಮದುವೆ ಪ್ರಸ್ತಾಪವನ್ನು (Marriage proposal) ಮಾಡುತ್ತಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಮದುವೆಗಳಲ್ಲಿ ವಧು ಮತ್ತು ವರರು (Bride and Groom) ನೀಡುವಂತಹ ಗ್ರ್ಯಾಂಡ್ ಎಂಟ್ರಿ, ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವುದು, ವಿಭಿನ್ನವಾಗಿ ಮದುವೆ ಪ್ರಸ್ತಾಪ ಮಾಡುವ ಅನೇಕ ವಿಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ನೋಡಿದ್ದೇವೆ.


ತನ್ನ ಹುಡುಗಿಯ ಮುಂದೆ ಹೇಗೆ ಮದುವೆ ಪ್ರಸ್ತಾಪ ಮಾಡಿದ್ದಾನೆ ನೋಡಿ ಈ ವ್ಯಕ್ತಿ!
ಇಲ್ಲೊಬ್ಬ ವ್ಯಕ್ತಿ ತಾನು ಪ್ರೀತಿಸುವ ಹುಡುಗಿಗೆ ಹೇಗೆ ಡಿಫರೆಂಟ್ ಆಗಿ ಮೊದಲು ಸ್ವಲ್ಪ ಶಾಕ್ ನೀಡಿ, ನಂತರ ಆಕೆಯ ಮುಂದೆ ಮೊಣಕಾಲನ್ನು ಊರಿ ಕುಳಿತು ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದಾನೆ ನೋಡಿ. ವಿಡಿಯೋ ನೋಡಲು ತುಂಬಾನೇ ಖುಷಿ ಕೊಡುವಂತಿದ್ದು, ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ ಎಂದರೆ ಅದು ಅವನ ಮದುವೆಯಾಗುವ ಕ್ಷಣ ಅಥವಾ ತನ್ನ ಬಾಳ ಸಂಗಾತಿಯಾಗುವವರಿಗೆ ಮದುವೆಯ ಪ್ರಸ್ತಾಪ ಮಾಡುವ ಸಮಯ.


ಈ ವ್ಯಕ್ತಿ ಪ್ರೊಪೋಸ್ ಮಾಡಿದ ರೀತಿ ಹೇಗಿದೆ ನೋಡಿ
ಇಲ್ಲೊಬ್ಬ ವ್ಯಕ್ತಿಯು ತನ್ನ ಪ್ರೇಯಸಿಯೊಂದಿಗೆ ರೆಸ್ಟೋರೆಂಟ್ ಒಂದರಲ್ಲಿ ಕುಳಿತುಕೊಂಡಿರುತ್ತಾನೆ, ನಂತರ ಆ ರೆಸ್ಟೋರೆಂಟ್ ಗೆ ಬಂದ ಪೊಲೀಸರು ಆ ವ್ಯಕ್ತಿಯ ಪ್ರೇಯಸಿಯ ಮುಂದೆಯೇ ಆ ವ್ಯಕ್ತಿಯ ಕೈಗೆ ಕೋಳ ಹಾಕಿ ಕರೆದುಕೊಂಡು ಹೋಗುತ್ತಾರೆ. ಒಂದು ಕ್ಷಣ ಅಲ್ಲಿ ಏನು ನಡೆಯುತ್ತಿದೆ ಅಂತ ಅರ್ಥವಾಗದೆ ಹುಡುಗಿ ಆಘಾತಗೊಂಡು ಹಾಗೆಯೇ ಪೊಲೀಸರ ಹಿಂದೆಯೇ ಹೊರಗೆ ಹೋಗುತ್ತಾಳೆ.


[embed]https://youtu.be/L6URul7Sr9s[/embed]


ಇದನ್ನೂ ಓದಿ: Viral Story: ಗಂಡ ಪ್ರೀತಿಸಿದ ಹುಡುಗಿ ಜೊತೆ ಮದುವೆ ಮಾಡಿಸಿದ ಪತ್ನಿ, ಒಂದೇ ಮನೆಯಲ್ಲಿ ಇರೋಕೂ ಒಪ್ಪಿಗೆ ಕೊಟ್ಟ ಹೆಂಡ್ತಿ!


ರೆಸ್ಟೋರೆಂಟ್ ನಿಂದ ಹೊರಗೆ ಬಂದ ನಂತರ ಆಕೆಗೆ ಅಲ್ಲಿ ಪ್ರಿಯಕರ ಮಂಡಿ ಊರಿ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ. ನಿಜವಾಗಿಯೂ ಇದು ಒಂದು ಡಿಫರೆಂಟ್ ಮದುವೆ ಪ್ರಸ್ತಾಪ. ಈ ಮದುವೆ ಪ್ರಸ್ತಾಪ ಮಾಡಿರುವ ಮತ್ತು ನಕಲಿ ಬಂಧನದ ವಿಡಿಯೋ ತುಣುಕು ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಂತರ್ಜಾಲದಲ್ಲಿ ತುಂಬಾನೇ ಹರಿದಾಡುತ್ತಿದೆ. ಇದನ್ನು ವಾಷಿಂಗ್ಟನ್ ವಿಟ್ಮನ್ ಪೊಲೀಸ್ ಇಲಾಖೆ ತನ್ನ ಫೇಸ್‌ಬುಕ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ.


ಹೀಗೆ ಮಾಡಿ ಅಂತ ಪೊಲೀಸರಿಗೆ ವಿನಂತಿಸಿಕೊಂಡ ಮೋರ್ಸ್
ಪೋಸ್ಟ್ ಪ್ರಕಾರ, ವೇಯ್ನ್ ಮೋರ್ಸ್ ಎಂಬ ವ್ಯಕ್ತಿ ಕ್ರಿಸ್ಟನ್ ಫ್ಲೆಮಿಂಗ್ ಎಂಬ ತನ್ನ ಗೆಳತಿಗೆ ವಿಶಿಷ್ಟ ವಿವಾಹ ಪ್ರಸ್ತಾಪಕ್ಕೆ ಸಹಾಯ ಮಾಡುವಂತೆ ಪೊಲೀಸ್ ಇಲಾಖೆಗೆ ವಿನಂತಿಸಿಕೊಂಡಿರುತ್ತಾನೆ. ಅದೇ ರೀತಿಯಾಗಿ ಪೊಲೀಸರು ಇವರ ಒಂದು ವಿನಂತಿಗೆ ಒಪ್ಪಿ ಈ ನಕಲಿ ಬಂಧನದ ನಾಟಕವಾಡುತ್ತಾರೆ. ಮೋರ್ಸ್ ತನ್ನ ಗೆಳತಿ ಮತ್ತು ಅವಳ ಹೆತ್ತವರೊಂದಿಗೆ ವಿಟ್ಮನ್ ನ ಮೆಕ್ ಗುಯಿಗ್ಗನ್ ನಲ್ಲಿರುವ ‘ದಿ ಪ್ಯಾಟಿಯೋ’ ಎಂಬ ರೆಸ್ಟೋರೆಂಟ್ ನಲ್ಲಿ ಸೆಪ್ಟೆಂಬರ್ 9 ರಂದು ಶುಕ್ರವಾರ ಊಟ ಮಾಡಲು ಹೋಗಿರುತ್ತಾರೆ.


ಪೊಲೀಸರಿಗೆ ಆ ರೆಸ್ಟೋರೆಂಟ್ ಗೆ ಬಂದು, ತನ್ನ ಗೆಳತಿ ಮತ್ತು ಅವಳ ಹೆತ್ತವರ ಮುಂದೆ ಅವನ ಕೈಗೆ ಕೋಳ ಹಾಕಿ ಕರೆದುಕೊಂಡು ಹೋಗಿ ಅಂತ ಹೇಳಿರುತ್ತಾನೆ. ಏನಾಗುತ್ತಿದೆ ಅಂತ ಆಕೆ ಗಾಬರಿಯಾಗಿ ನನಗೆ ಕೇಳಿದಾಗ ನಾನು ಆಕೆಗೆ ಮದುವೆ ಪ್ರಸ್ತಾಪ ಮಾಡುತ್ತೇನೆ ಅಂತ ಮೊದಲೇ ಪೊಲೀಸರಿಗೆ ತಿಳಿಸಿದ್ದರಂತೆ ಈ ವ್ಯಕ್ತಿ.


ಇದನ್ನೂ ಓದಿ: Viral Post: ಸಾಫ್ಟ್‌ ವೇರ್‌ ಎಂಜಿನಿಯರ್ಸ್‌ ಕರೆ ಮಾಡಬೇಡ್ರಪ್ಪೋ! ಇಂಥಾ ಮದುವೆ ಜಾಹೀರಾತು ನೋಡಿದ್ದೀರಾ?


ಈ ವಿಡಿಯೋ ಇದುವರೆಗೆ 23,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು ಸಾವಿರಕ್ಕೂ ಹೆಚ್ಚು ಬಾರಿ ಇದನ್ನು ಮರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ನೂರಾರು ಫೇಸ್‌ಬುಕ್ ಬಳಕೆದಾರರು ಈ ದಂಪತಿಗಳನ್ನು ಅಭಿನಂದಿಸಿದ್ದಾರೆ.

Published by:Ashwini Prabhu
First published: