ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿರುವ ವೀಡಿಯೊವು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಒಂದು ಘಟನೆಯಾಗಿದೆ. ವ್ಯಕ್ತಿಯೊಬ್ಬರು ನಿರಾಶ್ರಿತ ಮಹಿಳೆಯ ಮೇಲೆ ಜೋರಾಗಿ ಪೈಪ್ನಿಂದ ನೀರನ್ನು ಸಿಂಪಡಿಸುತ್ತಿರುವುದನ್ನು ನೋಡಬಹುದು. ಈ ಪ್ರದೇಶದಲ್ಲಿ ತಾಪಮಾನವು 9 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. ABC7 ನಿಂದ ಕೊಲಿಯರ್ ಗ್ವಿನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಕಲಾ ಗ್ಯಾಲರಿಯ (Art Gallery) ಮಾಲೀಕನಂತೆ. ಕೋಪವನ್ನು ತಡೆಯಲಾಗದೇ ಈ ಕೃತ್ಯವನ್ನು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಆತನ ಕ್ರಮಗಳನ್ನು ಖಂಡಿಸಿದರು, ಮಹಿಳೆಯ ಮುಖದ ಮೇಲೆ ನೇರವಾಗಿ ನೀರನ್ನು ಸಿಂಪಡಿಸತ್ತಿದ್ದಾರೆ ಹಾಗಾಗಿ ಇದನ್ನು ಕ್ರೂರ ಘಟನೆ ಎಂದು ಪರಿಗಣಿಸಲಾಗಿದೆ.
ವರದಿಯ ಪ್ರಕಾರ, ಹತ್ತಿರದ ಕೆಫೆಯ ಸಹ-ಮಾಲೀಕರಾದ ಎಡ್ಸನ್ ಗಾರ್ಸಿಯಾ ಅವರು ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ . "ನಾನು ಆಕಡೆ ತಿರುಗಿದಾಗ ಆ ವ್ಯಕ್ತಿ ಮಹಿಳೆಗೆ ನೀರು ಸುರಿಯುವುದನ್ನು ನೋಡಿದೆ" ಎಂದು ಅವರು ಸುದ್ದಿವಾಹಿನಿಗೆ ತಿಳಿಸಿದರು.
"ಇದು ಚಳಿ ಮತ್ತು ಮಳೆಗಾಲ . ಅವಳು "ಸರಿ ನಾನು ಚಲಿಸುತ್ತೇನೆ ನಾನು ಚಲಿಸುತ್ತೇನೆ" ಎಂದು ಕಿರುಚುತ್ತಿದ್ದಳು! ಜನರು ಅಂತಹ ಕೆಲಸವನ್ನು ಮಾಡುವುದನ್ನು ನೋಡುವುದು ನ್ಯಾಯೋಚಿತವಲ್ಲ, ”ಎಂದು ಗಾರ್ಸಿಯಾ ಹೇಳಿದರು.
ಕೆಫೆ ಮಾಲೀಕರು ಕೆಲವೊಮ್ಮೆ ಮನೆಯಿಲ್ಲದ ಮಹಿಳೆಗೆ ತಮ್ಮ ಔಟ್ಲೆಟ್ಗೆ ದಯವಿಟ್ಟು ಬರಲೇಬೇಡಿ ಎಂದು ಹೇಳಿದ್ದರು, ಆದರೆ ಆಕೆಗೆ ಬೇರೆ ಎಲ್ಲಿಯೂ ದಾರು ತೋಚದೇ, ಆಕೆ ಒಂದು ಅಂಗಡಿಯ ಮುಂಬಾಗಕ್ಕೆ ಬಂದು ಕುಳಿತುಕೊಳ್ಳುತ್ತಾಳೆ. ಅದಾಗ ಅಂಗಡಿಯ ಮಾಲೀಕ ಮಾಡುವ ಕೃತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗ್ತಾ ಇದೆ.
ಆ ಮಹಿಳೆ ನಾನು ಹೋಗುತ್ತೀನಿ, ಬಿಟ್ಟು ಬಿಡು ಎಂದು ಕೈ ಮುಗಿದು ಕೇಳಿಕೊಂಡರು ಕೂಡ ಆ ವ್ಯಕ್ತಿಗೆ ಹೃದಯವೇ ಎಲ್ಲದಂತೆ ವರ್ತಿಸಿದ. ಎಂದು ಎದುರುಗಡೆ ಅಂಗಡಿಯ ಮಾಲೀಕ ಹೇಳಿದ್ದಾರೆ.
ಇದನ್ನೂ ಓದಿ: ರೋಮನ್ನರು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ವಸ್ತು ಯಾವುದು? ದೀರ್ಘ ಬಾಳಿಕೆಯ ಹಿಂದಿನ ಸೀಕ್ರೆಟ್ ಇಲ್ಲಿದೆ
ಮಹಿಳೆಯ ಬಡ ಪರಿಸ್ಥಿತಿಯಲ್ಲಿಯೂ, ನಡು ಬೀದಿಯಲ್ಲಿಯೇ ದೊಡ್ಡದಾದ ಪೈಪ್ನಿಂದ ಆಕೆಯ ಮೈಮೇಲೆ ನೀರನ್ನು ಹಾಕಲಾಯಿತು ಮತ್ತು ಆಕೆಗೆ ಎದ್ದೇಳಲೇ ಆಗಲಿಲ್ಲ. ಇದರಿಂದ ಜೋರಾಗಿ ಕಿರುಚಲು ಪ್ರಾರಂಭಿಸಿದರು ಆ ಮಹಿಳೆ." ಎಂದು ಆರ್ಟ್ ಗ್ಯಾಲರಿ ಮಾಲೀಕರು ಸುದ್ದಿವಾಹಿನಿಗೆ ತಿಳಿಸಿದರು. "
ಶ್ರೀ ಗ್ವಿನ್ ಮಹಿಳೆ ಸುಮಾರು ಎರಡು ವಾರಗಳ ಕಾಲ ತನ್ನ ಕಟ್ಟಡದ ಮುಂದೆ ಇದ್ದಳು ಎಂದು ಹೇಳಿದರು, ಅವರು ಸಹಾಯ ಕೋರಿ ಪೊಲೀಸರಿಗೆ 25 ಬಾರಿ ಕರೆ ಮಾಡಿದ್ದಾರೆ ಮತ್ತು ಮಹಿಳೆಗೆ ಆ ದಿನ ಬೆಳಿಗ್ಗೆ ಪೊಲೀಸರು ಸ್ಥಳಾಂತರಗೊಳ್ಳಿಸುತ್ತೇವೆ ಎಂದು ಹೇಳಿ, ಯಾವ ಕ್ರಮವೂ ಕೈಕೊಂಡಿಲ್ಲ ಎಂದು ಹೇಳಿದರು.
ಸ್ಯಾನ್ ಫ್ರಾನ್ಸಿಸ್ಕೊ ಪೊಲೀಸ್ ಡಿಪಾರ್ಟ್ಮೆಂಟ್ (SFPD) ಪೊಲೀಸರು ಹೋಸಿಂಗ್ ಘಟನೆಯನ್ನು ಸಂಭವನೀಯ ಆಕ್ರಮಣವೆಂದು ಸಂಪರ್ಕಿಸಿದರು, ಆದರೆ ಶ್ರೀ ಗ್ವಿನ್ ಮತ್ತು ಮಹಿಳೆ ಇಬ್ಬರೂ ಮುಂದಿನ ಪೊಲೀಸ್ ಕ್ರಮವನ್ನು ನಿರಾಕರಿಸಿದರು.
ಆದರೆ ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರಾಶ್ರಿತ ಮಹಿಳೆಗೆ ನೀಡಿದ ಟಾರ್ಚರ್ ಇಂದ ಪ್ರತಿಯೊಬ್ಬರೂ ಕಂಗಾಲಾಗಿದ್ದಾರೆ.
San Francisco pic.twitter.com/n6XU5CMvQa
— Clown World ™ 🤡 (@ClownWorld_) January 10, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ