ಇವ್ನೇನ್​ ಗುರೂ.. ಮಾಸ್ಕ್​ ಬದಲು ಮಹಿಳೆಯ ಒಳಉಡುಪು ಹಾಕೊಂಡವ್ನೆ..! ಆಮೇಲೆನಾಯ್ತು ನೀವೇ ನೋಡಿ..

Face Mask: ಈ ಹಿಂದೆಯೂ ಪ್ರಯಾಣಿಸಿದ್ದಾಗ ತನ್ನ ಒಳ ಉಡುಪನ್ನು ಮಾಸ್ಕ್ ರೀತಿ ಬಳಸಿದ್ದಾಗಿ, "ಇದು ಮಾಸ್ಕ್, ತನ್ನ ಕೆಲಸ ಏನೋ ಅದನ್ನು ಮಾಡುತ್ತದೆ" ಎಂಬುದಾಗಿ ಹೇಳಿದ್ದಾನೆ.

 ಪ್ರಯಾಣಿಕ

ಪ್ರಯಾಣಿಕ

  • Share this:
ಪ್ರಸ್ತುತ, ಕೋವಿಡ್ ಸಾಂಕ್ರಾಮಿಕ (Covid epidemic) ಪೂರ್ಣವಾಗಿ ನಿಂತಿಲ್ಲ. ನಿತ್ಯವೂ ಜಗತ್ತಿನಾದ್ಯಂತ (World) ಸಾವಿರಾರು ಸಂಖ್ಯೆಯಲ್ಲಿ ಜನರು ಈ ವೈರಾಣು ಸೋಂಕಿಗೀಡಾಗುತ್ತಲೇ ಇದ್ದಾರೆ. ಹಾಗಾಗಿ, ಸಂಚಾರಕ್ಕೆ ಸಂಬಂಧಿಸಿದಂತೆ ಅದರಲ್ಲೂ ವಿಶೇಷವಾಗಿ ವಿಮಾನ ಪ್ರಯಾಣಗಳಲ್ಲಿ ಕೋವಿಡ್ ನಿಯಮಗಳನ್ನು(Rules are strictly followed) ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಮೆರಿಕದಲ್ಲಿ ಪ್ರಯಾಣಿಕನೊಬ್ಬ ಥಾಂಗ್‌ ಅಥವಾ ಕೆಂಪು (Red strip) ಪಟ್ಟಿಯೊಂದನ್ನು ಫೇಸ್ ಮಾಸ್ಕ್ ಆಗಿ (Face mask) ಬಳಸಿದ್ದಕ್ಕಾಗಿ ಅವನನ್ನು ವಿಮಾನದಿಂದಲೇ ಕೆಳಗಿಳಿಸಲಾದ ಘಟನೆಯೊಂದು ವರದಿಯಾಗಿದೆ.

ಬಲವಂತವಾಗಿ ಕೆಳಗಿಳಿಸಿದರು
ಅಮೆರಿಕದ ಫ್ಲೋರಿಡಾ ನಗರದಲ್ಲಿ ಪ್ರಯಾಣಿಕನೊಬ್ಬ ಪ್ರಯಾಣಿಸುವ ಸಂದರ್ಭದಲ್ಲಿ ಕೆಂಪು ಬಣ್ಣದ ಪಟ್ಟಿಯೊಂದನ್ನು ಫೇಸ್ ಮಾಸ್ಕ್ ಆಗಿ ಉಪಯೋಗಿಸಿದ್ದ. ಇದನ್ನು ಗಮನಿಸುತ್ತಿದ್ದಂತೆಯೇ ಫ್ಲೈಟ್ ಸಿಬ್ಬಂದಿ ಆ ವ್ಯಕ್ತಿಯನ್ನು ಕೋವಿಡ್ ನಿಯಮದ ಉಲ್ಲಂಘನೆಯ ವಿಚಾರದಲ್ಲಿ ಫ್ಲೈಟ್‌ನಿಂದ ಬಲವಂತವಾಗಿ ಕೆಳಗಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಹುತಾತ್ಮ ಯೋಧನ ತಂಗಿಯ ಮದುವೆಯನ್ನು ತಾವೇ ಮುಂದೆ ನಿಂತು ಮಾಡಿದ ಸೈನಿಕರು, ವಿಡಿಯೋ ನೋಡಿ

ಆ್ಯಡಮ್ ಜೆನ್ನೆ ಎಂಬ ವ್ಯಕ್ತಿ
ಆ ವ್ಯಕ್ತಿಯನ್ನು 38 ವರ್ಷದ ಆ್ಯಡಮ್ ಜೆನ್ನೆ ಎಂದು ಗುರುತಿಸಲಾಗಿದೆ. ಈತ ಫ್ಲೋರಿಡಾದ ಫೋರ್ಟ್ ಲೌಡರ್ಡೇಲ್ ಏರ್‌ಪೋರ್ಟ್‌ನಿಂದ ಪ್ರಯಾಣಿಸಲು ವಿಮಾನ ಏರಿದ್ದ. ಆದರೆ ವಿಮಾನ ಹಾರುವ ಮುಂಚೆಯೇ ಈತನನ್ನು ಬಲವಂತವಾಗಿ ಕೆಳಗಿಳಿಸಲಾಯಿತು.

ವಿಡಿಯೋ ನೋಡಿ:ಸ್ಥಳೀಯ ಮಾಧ್ಯಮವಾದ NBC2 ನೊಂದಿಗೆ ಮಾತನಾಡುತ್ತ ಈ ವ್ಯಕ್ತಿಯು, ಹೇಗೆ ಫ್ಲೈಟ್‌ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಧರಿಸಲು ಬಲವಂತ ಮಾಡಲಾಗುತ್ತದೆ ಹಾಗೂ ಅವರು ಆಹಾರ ಅಥವಾ ಪಾನೀಯಗಳನ್ನು ಸೇವಿಸುವಾಗ ಈ ನಿಯಮವನ್ನು ಗಾಳಿಗೆ ತೂರಿ ಮಾಸ್ಕ್ ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ 'ಅಸಂಬದ್ಧತೆ'ಯನ್ನು ತೋರಿಸುವ ಸಲುವಾಗಿಯೇ ತಾನು ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆಂದು ವರದಿಯಾಗಿದೆ.

ವಿಡಿಯೋ ಚಿತ್ರೀಕರಣ
ಈ ಒಟ್ಟಾರೆ ಪ್ರಸಂಗವನ್ನು ಆ ವಿಮಾನದಲ್ಲಿದ್ದ ಇನ್ನೊಬ್ಬ ಪ್ರಯಾಣಿಕ ವಿಡಿಯೋ ಚಿತ್ರೀಕರಣ ಮಾಡಿದ್ದು ಅದರಲ್ಲಿ, ಮೊದಲಿಗೆ ಫ್ಲೈಟ್ ಸಿಬ್ಬಂದಿ ಆ್ಯಡಮ್‌ರನ್ನು ಅವರು ಹಾಕಿರುವ ಪಟ್ಟಿಯಂತಹ ಮಾಸ್ಕ್ ಅನ್ನು ವಿರೋಧಿಸಿದರು. ತದನಂತರ ಸ್ವಲ್ಪ ಹೊತ್ತು ಸಿಬ್ಬಂದಿ ಹಾಗೂ ಆ್ಯಡಮ್‌ ಮಧ್ಯೆ ಸಂಭಾಷಣೆ ಏರ್ಪಟ್ಟು ಅಂತಿಮವಾಗಿ ಆ್ಯಡಮ್‌ ತಮ್ಮ ಆಸನವನ್ನು ತೊರೆದಿದ್ದನ್ನು ಕಾಣಬಹುದಾಗಿದೆ.

ಆ್ಯಡಮ್‌ ಜೆನ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತ, ತಾನು ಈ ಹಿಂದೆಯೂ ಪ್ರಯಾಣಿಸಿದ್ದಾಗ ತನ್ನ ಒಳ ಉಡುಪನ್ನು ಮಾಸ್ಕ್ ರೀತಿ ಬಳಸಿದ್ದಾಗಿ, "ಇದು ಮಾಸ್ಕ್, ತನ್ನ ಕೆಲಸ ಏನೋ ಅದನ್ನು ಮಾಡುತ್ತದೆ" ಎಂಬುದಾಗಿ ಹೇಳಿದ್ದಾನೆ.

ನಿರ್ಬಂಧಗಳ ಉಲ್ಲಂಘನೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಏರ್‌ಲೈನ್ಸ್‌ ಪ್ರಕಟಣೆಯೊಂದನ್ನು ಹೊರಡಿಸಿದ್ದು ಅದರಲ್ಲಿ ಆಡಳಿತವು ವಿಧಿಸಿದ ನಿರ್ಬಂಧಗಳ ಉಲ್ಲಂಘನೆಯನ್ನು ಈ ಗ್ರಾಹಕ ಮಾಡಿದ್ದಾನೆ ಹಾಗೂ ಈ ಫ್ಲೈಟ್ ಹೊರಡುವ ಮುಂಚೆಯೇ ಅದೃಷ್ಟವಶಾತ್ ನಮ್ಮ ಸಿಬ್ಬಂದಿಗೆ ಈ ಬಗ್ಗೆ ಗಮನಬಂದಿದ್ದು ಮುಂದೆ ಯಾವ ರೀತಿಯ ಅಡಚಣೆಯಾಗದಂತೆ ಆ ವ್ಯಕ್ತಿಯನ್ನು ಕೆಳಗಿಳಿಸಲಾಗಿದೆ ಎಂದು ಹೇಳಿದೆ.

ಒಳ ಉಡುಪಿನಲ್ಲಿ 1,894 ಗ್ರಾಂಗಳಷ್ಟು ಬಂಗಾರ
ಇನ್ನೊಂದು ಆಶ್ಚರ್ಯಕರ ಬೆಳವಣಿಗೆಯಲ್ಲಿ ಇದೇ ನಿಲ್ದಾಣದಲ್ಲಿ ಇನ್ನೊಬ್ಬ ಪ್ರಯಾಣಿಕ ತನ್ನ ಒಳ ಉಡುಪಿನಲ್ಲಿ 1,894 ಗ್ರಾಂಗಳಷ್ಟು ಬಂಗಾರದ ಲೇಪನ ಮುಚ್ಚಿಕೊಂಡು ಕಳ್ಳಸಾಗಣೆ ಮಾಡುತ್ತಿರುವುದನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದು ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸೋಮವಾರದ ಪ್ರಕಟಣೆಯೊಂದರಲ್ಲಿ ಕಸ್ಟಮ್ ಅಧಿಕಾರಿಗಳು ದೃಢಪಡಿಸಿರುವುದಾಗಿಯೂ ವರದಿಯಾಗಿದೆ. ಅಧಿಕಾರಿಗಳು, ಆ ವ್ಯಕ್ತಿಯು ಇಲ್ಲಿಗೆ ಶಾರ್ಜಾದಿಂದ ಬಂದಿದ್ದಾಗಿಯೂ ಹಾಗೂ ಅವರನ್ನು ಭಾನುವಾರದಂದೇ ಬಂಧಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಕೋತಿಗೆ ಉಸಿರು ನೀಡಿ ಜೀವ ಉಳಿಸಿದ ವ್ಯಕ್ತಿ, ಮಾನವೀಯತೆ ಇನ್ನೂ ಜೀವಂತ...ವಿಡಿಯೋ ನೋಡಿ

ಒಟ್ಟು 78 ಲಕ್ಷ ರೂ. ಮೌಲ್ಯ
ಈ ಮುಂಚೆ, ಕಸ್ಟಮ್ ಅಧಿಕಾರಿಗಳು ವ್ಯಕ್ತಿಯನ್ನು ಶೋಧಿಸಿದಾಗ ಆತ ತನ್ನ ಒಳ ಉಡುಪಿನಲ್ಲಿ 1,894 ಗ್ರಾಂಗಳಷ್ಟು ಬಂಗಾರದ ಲೇಪನ ಮುಚ್ಚಿಕೊಂಡಿದ್ದು ಕಂಡುಬಂದಿದ್ದು ಅದನ್ನು ಸಂಸ್ಕರಿಸಿದಾಗ ಒಟ್ಟು 78 ಲಕ್ಷ ರೂ. ಮೌಲ್ಯದ 1600 ಗ್ರಾಂ ಬಂಗಾರ ಸಂಗ್ರಹಿಸಿರುವುದಾಗಿ ಕಸ್ಟಮ್ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ವ್ಯಕ್ತಿಯನ್ನು ಬಂಧಿಸಲಾಗಿದ್ದು ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
Published by:vanithasanjevani vanithasanjevani
First published: