Shocking: 125 ಹಾವುಗಳ ನಡುವೆ ಪತ್ತೆಯಾಯ್ತು ಆ ಶವ, ಅಲ್ಲಿನ ದೃಶ್ಯ ನೋಡಿ ಪೊಲೀಸರಿಗೇ ಶಾಕ್!

ಡೇವಿಡ್ ರಿಸ್ಟನ್ ಅವರ ಮನೆಯಲ್ಲಿ ಪತ್ತೆಯಾಗಿರುವ ಹಾವುಗಳು ಅವನ ಮನೆಯ ಪಂಜರದಲ್ಲಿದ್ದವು ಎಂದು ಹೇಳಲಾಗುತ್ತಿದ್ದು ಅವುಗಳಲ್ಲಿ ಕೆಲವು ತುಂಬಾ ಅಪಾಯಕಾರಿ ಹಾವುಗಳಾಗಿದ್ದವು ಎನ್ನಲಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವಿಷಪೂರಿತ ಹಾವುಗಳನ್ನು ಮನೆಯಲ್ಲಿಯೇ ಸಾಕಿಕೊಂಡ 49 ವರ್ಷದ ವ್ಯಕ್ತಿ ಡೇವಿಡ್ ರಿಸ್ಟನ್(David Riston) ಎಂಬಾತನು ಯುಎಸ್‌ನ ಮೇರಿಲ್ಯಾಂಡ್‌ನ(Maryland) ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಅವನ ಮನೆಯಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ 125 ಹಾವುಗಳನ್ನು(Snakes) ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ ಅತ್ಯಂತ ವಿಷಕಾರಿ ಬ್ಲ್ಯಾಕ್ ಮಾಂಬಾಗಳು (Poisonous Black Mambas) ಸಹ ಸೇರಿವೆ ಎಂದು ತಿಳಿದುಬಂದಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಶವ ಪತ್ತೆ
ಸ್ಥಳೀಯ ಮಾಧ್ಯಮದ ವರದಿಯ ಪ್ರಕಾರ, ಸ್ಥಳೀಯ ಪೊಲೀಸರು ಬುಧವಾರ ರಾತ್ರಿ ಆ ವ್ಯಕ್ತಿಯ ಪಕ್ಕದ ಮನೆಯವರಿಂದ ದೂರವಾಣಿ ಕರೆ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಆ ಪಕ್ಕದ ಮನೆಯವನು ಈ ವ್ಯಕ್ತಿಯನ್ನು ಇಡೀ ದಿನ ಹೊರಗೆ ಬಂದಿರುವುದನ್ನು ನೋಡಿಲ್ಲದ ಕಾರಣ, ತಬ್ಬಿಬ್ಬಾಗಿ ಅವನ ಮನೆಗೆ ಹೋಗಿ ಕಿಟಕಿಯಿಂದ ನೋಡಿದಾಗ ಆ ವ್ಯಕ್ತಿ ನೆಲದ ಮೇಲೆ ಪ್ರಜ್ಞಾಹೀನನಾಗಿ ಬಿದ್ದಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾನೆ.

125 ಹಾವುಗಳು ಪತ್ತೆ
ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಅವನ ಮನೆಗೆ ಬಂದಿದ್ದಾರೆ, ಬಾಗಿಲು ತೆರೆದು ನೋಡಿದರೆ ಅವರಿಗೆ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ ಆ ವ್ಯಕ್ತಿ ಸತ್ತಿದ್ದು ಮತ್ತು ಅವನ ಮನೆಯಲ್ಲಿ 14 ಅಡಿ ಹಳದಿ ಬರ್ಮೀಸ್ ಹೆಬ್ಬಾವು ಸೇರಿದಂತೆ 125 ಹಾವುಗಳನ್ನು ಸಾಕು ಪ್ರಾಣಿಗಳಂತೆ ಪಂಜರದಲ್ಲಿ ಹಾಕಿ ಇರಿಸಿದ್ದನ್ನು ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರಿಗೆ ಆ ವ್ಯಕ್ತಿಯ ಶವ ನೋಡಿ ಯಾವುದೇ ಸಂಶಯಗಳು ಬಂದಿಲ್ಲವಾದ್ದರಿಂದ ಆ ವ್ಯಕ್ತಿಯ ದೇಹವನ್ನು ಶವ ಪರೀಕ್ಷೆಗಾಗಿ ಬಾಲ್ಟಿಮೋರ್‌ನ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಗೆ ಸಾಗಿಸಲಾಯಿತು.

ಇದನ್ನೂ ಓದಿ: Snake Bite: ಹಾವು ಕಚ್ಚಿದ್ದಕ್ಕೆ ಈಕೆಯ ಎರಡೂ ಕಿಡ್ನಿ ಫೇಲ್ ಆಗಿಬಿಟ್ಟವು, ಆದರೂ ರೋಗಿ ಬದುಕುಳಿದ ಪವಾಡದ ಕತೆ ಇದು!

ಮನೆಯಿಂದ ಹಾವುಗಳ ರಕ್ಷಣೆ
ಪ್ರಾಣಿ ನಿಯಂತ್ರಣ ಅಧಿಕಾರಿಗಳು ವರ್ಜೀನಿಯಾ ಮತ್ತು ಉತ್ತರ ಕೆರೊಲಿನಾದ ಸರೀಸೃಪ ತಜ್ಞರನ್ನು ಸಂಪರ್ಕಿಸಿ ಹಾವುಗಳನ್ನು ಆ ಮನೆಯಿಂದ ಸುರಕ್ಷಿತವಾಗಿ ಹೊರ ತೆಗೆಯಲು ಸಹಾಯ ಮಾಡಿದರು, ಅವುಗಳನ್ನು ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಹಾಕಿಕೊಂಡು ವಾಹನಗಳಿಗೆ ಲೋಡ್ ಮಾಡಲಾಯಿತು” ಎಂದು ಚಾರ್ಲ್ಸ್ ಕೌಂಟಿ ಪ್ರಾಣಿ ನಿಯಂತ್ರಣ ಸಂಸ್ಥೆಯ ವಕ್ತಾರರಾದ ಜೆನ್ನಿಫರ್ ಹ್ಯಾರಿಸ್ ಹೇಳಿದರು. ನಮ್ಮ ಬಳಿ ಇರುವ ಯಾವುದೇ ಹಾವುಗಳು ತಪ್ಪಿಸಿಕೊಂಡು ಹೊರ ಬಂದಿಲ್ಲ ಎಂದು ಇಲ್ಲಿ ವಾಸಿಸುತ್ತಿರುವ ಸಮುದಾಯದ ಜನರಿಗೆ ನಾನು ಭರವಸೆ ನೀಡಲು ಬಯಸುತ್ತೇನೆ" ಎಂದು ಜೆನ್ನಿಫರ್ ಹ್ಯಾರಿಸ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಅಪಾಯಕಾರಿ ಹಾವು
ಡೇವಿಡ್ ರಿಸ್ಟನ್ ಅವರ ಮನೆಯಲ್ಲಿ ಪತ್ತೆಯಾಗಿರುವ ಹಾವುಗಳು ಅವನ ಮನೆಯ ಪಂಜರದಲ್ಲಿದ್ದವು ಎಂದು ಹೇಳಲಾಗುತ್ತಿದ್ದು, ಅವುಗಳಲ್ಲಿ ಕೆಲವು ತುಂಬಾ ಅಪಾಯಕಾರಿ ಹಾವುಗಳಾಗಿದ್ದು ಅವುಗಳನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಕು ಪ್ರಾಣಿಗಳಾಗಿ ಮನೆಯಲ್ಲಿ ಇರಿಸಿಕೊಳ್ಳುವುದು ಕಾನೂನು ಬಾಹಿರವಾಗಿದೆ ಎಂದು ಹೇಳಲಾಗುತ್ತಿದೆ. ಡೇವಿಡ್ ಹೇಗೆ ಸಾವನ್ನಪ್ಪಿದನು ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇಷ್ಟು ಹಾವುಗಳಲ್ಲಿ ಯಾವುದಾದರೊಂದು ಹಾವು ರಿಸ್ಟನ್‌ನನ್ನು ಕಚ್ಚಿರಬಹುದೇ ಎಂಬುದರ ಬಗ್ಗೆ ಇನ್ನೂ ತನಿಖಾಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Salman Khan: ಸಲ್ಲುಭಾಯ್​ಗೆ 3 ಬಾರಿ ಕಚ್ಚಿತ್ತಂತೆ ಹಾವು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್!

ಬ್ಲ್ಯಾಕ್ ಮಾಂಬಾ
ಒಬ್ಬಂಟಿಯಾಗಿ ವಾಸಿಸುತ್ತಿದ್ದ ರಿಸ್ಟನ್, ಹಾವುಗಳು ಮತ್ತು ಸರೀಸೃಪಗಳನ್ನು ಇಟ್ಟುಕೊಳ್ಳಲು ಅನುಮತಿಸುವ ಮಾನ್ಯ ಪರವಾನಗಿ ಹೊಂದಿದ್ದನು ಎಂದು ಹೇಳಲಾಗುತ್ತಿದೆ. ಆದರೆ ಮೇರಿಲ್ಯಾಂಡ್ ಕಾನೂನಿನ ಪ್ರಕಾರ, ಯಾವುದೇ ವಿಷಪೂರಿತ ಹಾವುಗಳನ್ನು ಮನೆಯಲ್ಲಿ ಸಾಕುವುದು ಕಾನೂನು ಬಾಹಿರವಾಗಿದೆ. ಇವರ ಮನೆಯಲ್ಲಿ ಪತ್ತೆಯಾದ ಬ್ಲ್ಯಾಕ್ ಮಾಂಬಾ ಹಾವಿನ ವಿಷದ ಕೇವಲ 2 ಹನಿಗಳು ಮನುಷ್ಯನ ದೇಹ ಹೊಕ್ಕಿದರೆ ಇಡೀ ಮಾನವನ ನರವ್ಯೂಹವನ್ನು ದುರ್ಬಲಗೊಳಿಸುವ ಮೂಲಕ ಪಾರ್ಶ್ವವಾಯು ಉಂಟು ಮಾಡುವ ಮೂಲಕ ಮನುಷ್ಯನನ್ನು ಕೊಲ್ಲಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಸ್ಟನ್ ಅವನ ಮನೆಯಲ್ಲಿದ್ದ ಎಲ್ಲಾ ಹಾವುಗಳನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಅವರ ಪಕ್ಕದ ಮನೆಯವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ರಿಸ್ಟನ್ ಅವರ ಮಗಳು ಎಮಿಲಿ ಲೋಪೆಜ್-ಲಹೋಕಿ ತನ್ನ ತಂದೆಯ ಮರಣದ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ದೃಢಪಡಿಸಿದ್ದಾರೆ.
Published by:vanithasanjevani vanithasanjevani
First published: