• Home
  • »
  • News
  • »
  • trend
  • »
  • ಜೂಮ್ ಮೀಟಿಂಗ್​​ನಲ್ಲಿ ಬೆಕ್ಕಿನ ಫಿಲ್ಟರ್ ಬಳಸಿ ವೈರಲ್ ಆದ ವಕೀಲ; ನೆಟ್ಟಿಗರು ಹೇಳಿದ್ದೇನು?

ಜೂಮ್ ಮೀಟಿಂಗ್​​ನಲ್ಲಿ ಬೆಕ್ಕಿನ ಫಿಲ್ಟರ್ ಬಳಸಿ ವೈರಲ್ ಆದ ವಕೀಲ; ನೆಟ್ಟಿಗರು ಹೇಳಿದ್ದೇನು?

ಬೆಕ್ಕಿನ ರೀತಿ ಕಾಣಿಸಿಕೊಂಡಿರುವ ಲಾಯರ್

ಬೆಕ್ಕಿನ ರೀತಿ ಕಾಣಿಸಿಕೊಂಡಿರುವ ಲಾಯರ್

ಯುಟ್ಯೂಬ್​​ನಲ್ಲಿ 'ಕಿಟನ್ ಜೂಮ್ ಫಿಲ್ಟರ್ ಮಿಶಾಪ್' ಶೀರ್ಷಿಕೆಯಲ್ಲಿ ಲಭ್ಯವಿರುವ ವಿಡಿಯೋದಲ್ಲಿ, ಪ್ರೆಸಿಡಿಯೊ ಕೌಂಟಿ ಅಟಾರ್ನಿ ರಾಡ್ ಪೊಂಟನ್ ಅವರು ಬೆಕ್ಕಿನ ಫಿಲ್ಟರ್ ಅಳವಡಿಸಿಕೊಂಡಿರುವುದು ಕಾಣಬಹುದು. ಜೂಮ್ ಸಭೆಯಲ್ಲಿ ಬೆಕ್ಕಿನ ಫಿಲ್ಟರ್ ಬಳಸಿದಾಗ ಇದನ್ನು ತೆಗೆಯುವಂತೆ ನ್ಯಾಯಾಧೀಶ ಫರ್ಗುಸನ್ ಅವರು ಹೇಳುತ್ತಾರೆ. ಅದಕ್ಕೆ ರಾಡ್ ಪೊಂಟನ್ ಪ್ರತಿಕ್ರಿಯಿಸಿ ನಾನು ಇಲ್ಲಿ ಲೈವ್ ಆಗಿದ್ದೇನೆ, ನಾನು ಬೆಕ್ಕು ಅಲ್ಲ" ಎಂದು ಹೇಳುವುದನ್ನು ಕೇಳಬಹುದು. ಅದಕ್ಕೆ ನ್ಯಾಯಾಧೀಶರು ನಾನು ವಿಡಿಯೋದಲ್ಲಿ ಬೆಕ್ಕು ನೋಡುತ್ತಿದ್ದೇನೆ ಎಂದು ಉತ್ತರಿಸುತ್ತಾರೆ.

ಮುಂದೆ ಓದಿ ...
  • Share this:

    ಕೊರೋನಾ ಸೋಂಕು ಆವರಿಸಿಕೊಂಡ ಬಳಿಕ ವರ್ಕ್​​ ಫ್ರಮ್​  ಹೋಮ್, ವರ್ಚುವಲ್ ಮೀಟಿಂಗ್​ಗೆ ಎಲ್ಲರೂ ಹೊಂದಿಕೊಳ್ಳುವಂತೆ ಆಗಿದೆ. ಒಬ್ಬರನ್ನು ಮತ್ತೊಬ್ಬರು ಮಾತನಾಡಿಸಲು ಇದೀಗ ತಂತ್ರಜ್ಞಾನ ಬಹಳ ಸಹಾಯ ಮಾಡುತ್ತದೆ. ನಾವು ಎಲ್ಲೇ ಇದ್ದರೂ ಕೂಡ ಆನ್​ಲೈನ್​​ ಸಹಾಯದಿಂದ ಸಭೆ ಸೇರಿದಂತೆ ಮತ್ತೊಬ್ಬರ ಜೊತೆಗೆ ಸಂವಹನ ನಡೆಸಬಹುದು. ಆದರೆ, ಅಮೆರಿಕದಲ್ಲಿ ವರ್ಚುವಲ್ ವಿಡಿಯೋ ಮೂಲಕ ನ್ಯಾಯಾಲಯದ ವಿಚಾರಣೆ ವೇಳೆ ವಕೀಲರೊಬ್ಬರು ಲೈವ್​ನಲ್ಲಿ ಬೆಕ್ಕಿನ ರೀತಿಯಲ್ಲಿ ಕಾಣಿಸಿಕೊಂಡ ಪ್ರಸಂಗ ನಡೆದಿದ್ದು, ಈ ವಿಡಿಯೋ ಕೂಡ ವೈರಲ್ ಆಗಿದೆ.


    ಅಮೆರಿಕದಲ್ಲಿ ಅಟಾರ್ನಿ ಅವರು ಜೂಮ್ ಮೀಟಿಂಗ್ ಮೂಲಕ ನ್ಯಾಯಾಲಯದ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ವಕೀಲರೊಬ್ಬರು ಬೆಕ್ಕಿನ ಫಿಲ್ಟರ್ ಬಳಸಿ ಜೂಮ್ ಸಭೆಯಲ್ಲಿ ಲಾಗಿನ್ ಆಗುವ ಮೂಲಕ ಟಾಕ್ ಆಫ್ ಟೌನ್ ಆಗಿದ್ದಾರೆ. ಇದನ್ನು ವೆಸ್ಟ್ ಟೆಕ್ಸಾಸ್​​​ನ ಜಡ್ಜ್ ಅವರು ಜೂಮ್ ಸಭೆಗೆ ಲಾಗಿನ್ ಆಗುವ ಮೊದಲು ನಿಮ್ಮ ಫಿಲ್ಟರ್ಸ್ ಅನ್ನು ಪರೀಕ್ಷಿಸಿ ಎಂದು ಅಡಿಬರಹ ಬರೆದುಕೊಂಡು ಟ್ವಿಟರ್​​ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಕೀಲರನ್ನು ಅಟಾರ್ನಿ ಅಟ್ ಪಾವ್ ಎಂದು ಕರೆದಿದ್ದಾರೆ.


    ಶುಲ್ಕ ಕಡಿತ ವಿಚಾರದಲ್ಲಿ ಭುಗಿಲೆದ್ದ ಸ್ಪೋಟ; ಫೆ.23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆ


    ನಾನು ಬೆಕ್ಕು ಅಲ್ಲ ಎಂದ ವಕೀಲ!


    ಇನ್ನು ಯುಟ್ಯೂಬ್​​ನಲ್ಲಿ 'ಕಿಟನ್ ಜೂಮ್ ಫಿಲ್ಟರ್ ಮಿಶಾಪ್' ಶೀರ್ಷಿಕೆಯಲ್ಲಿ ಲಭ್ಯವಿರುವ ವಿಡಿಯೋದಲ್ಲಿ, ಪ್ರೆಸಿಡಿಯೊ ಕೌಂಟಿ ಅಟಾರ್ನಿ ರಾಡ್ ಪೊಂಟನ್ ಅವರು ಬೆಕ್ಕಿನ ಫಿಲ್ಟರ್ ಅಳವಡಿಸಿಕೊಂಡಿರುವುದು ಕಾಣಬಹುದು. ಜೂಮ್ ಸಭೆಯಲ್ಲಿ ಬೆಕ್ಕಿನ ಫಿಲ್ಟರ್ ಬಳಸಿದಾಗ ಇದನ್ನು ತೆಗೆಯುವಂತೆ ನ್ಯಾಯಾಧೀಶ ಫರ್ಗುಸನ್ ಅವರು ಹೇಳುತ್ತಾರೆ. ಅದಕ್ಕೆ ರಾಡ್ ಪೊಂಟನ್ ಪ್ರತಿಕ್ರಿಯಿಸಿ ನಾನು ಇಲ್ಲಿ ಲೈವ್ ಆಗಿದ್ದೇನೆ, ನಾನು ಬೆಕ್ಕು ಅಲ್ಲ" ಎಂದು ಹೇಳುವುದನ್ನು ಕೇಳಬಹುದು. ಅದಕ್ಕೆ ನ್ಯಾಯಾಧೀಶರು ನಾನು ವಿಡಿಯೋದಲ್ಲಿ ಬೆಕ್ಕು ನೋಡುತ್ತಿದ್ದೇನೆ ಎಂದು ಉತ್ತರಿಸುತ್ತಾರೆ.


    ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?


    ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಆನಂದಿಸುತ್ತಿದ್ದಾರೆ. ಟ್ವಿಟ್ಟರ್​​ನಲ್ಲಿ ಹಂಚಿಕೊಂಡ ಈ ವಿಡಿಯೋಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 5,000ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ನೆಟ್ಟಿಗರು ಈ ವಿಡಿಯೋವನ್ನು ನೋಡಿ ಉಲ್ಲಾಸಿತರಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಟ್ವೀಟ್ ಬಳಕೆದಾರರೊಬ್ಬರು ಈ ವಿಡಿಯೋ ನೋಡಿ ನಗುವಂತೆ ಆಯಿತು. ಮಕ್ಕಳೊಂದಿಗೆ ಕಂಪ್ಯೂಟರ್ ಹಂಚಿಕೊಳ್ಳುವುದು ಅಪಾಯ ಎಂದು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

    Published by:Latha CG
    First published: