• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ತಾವು ಮದುವೆಯಾಗ್ತಿದ್ದೀವಿ ಎಂದು ಪತ್ರಿಕೆಯಲ್ಲಿ ಘೋಷಿಸಿಕೊಂಡ ಜೋಡಿ, ಇವರ ಘೋಷಣೆ ನೋಡಿದವರೆಲ್ಲಾ ಅತ್ತುಬಿಟ್ಟರಂತೆ!

ತಾವು ಮದುವೆಯಾಗ್ತಿದ್ದೀವಿ ಎಂದು ಪತ್ರಿಕೆಯಲ್ಲಿ ಘೋಷಿಸಿಕೊಂಡ ಜೋಡಿ, ಇವರ ಘೋಷಣೆ ನೋಡಿದವರೆಲ್ಲಾ ಅತ್ತುಬಿಟ್ಟರಂತೆ!

ಯುಎಸ್ ಜೋಡಿ

ಯುಎಸ್ ಜೋಡಿ

ಕೆಲವರು ಇವರ ಪ್ರೀತಿಗೆ ಶುಭ ವ್ಯಕ್ತಪಡಿಸಿದ್ದರೆ ವಿಚಿತ್ರ ಮದುವೆಯ ಕರೆಯೋಲೆ ಎಂದು ಇನ್ನು ಕೆಲವರು ಬರೆದುಕೊಂಡಿದ್ದಾರೆ.

  • Share this:

ಸಾಮಾಜಿಕ ತಾಣದಲ್ಲಿ ನಾವು ಒಮ್ಮೊಮ್ಮೆ ನೋಡುವ ಕೆಲವೊಂದು ಘಟನೆಗಳು ನಿಜವೇ ಸುಳ್ಳೇ ಎಂಬ ಜಿಜ್ಞಾಸೆಗೆ(Curiosity) ನಮ್ಮನ್ನು ತಳ್ಳಿಬಿಡುತ್ತದೆ. ಏಕೆಂದರೆ ಸುದ್ದಿಪತ್ರಿಕೆಯಲ್ಲಿ ಪ್ರಕಟವಾಗಿದ್ದ  (Published ) ಮುಂದಿನ ವರ್ಷ ಫೆಬ್ರವರಿ 2022ರಂದು ನಡೆಯಲಿರುವ ಜೋಡಿಗಳ ವಿವಾಹದ ಘೋಷಣೆ (Announcement)ಕೂಡ ಇದೇ ರೀತಿ ನೆಟ್ಟಿಗರ ತಲೆತುರಿಸಿಕೊಳ್ಳುವಂತೆ ಮಾಡಿದೆ. ವಿವಾಹ ಅಧಿಸೂಚನೆಯ ಆರಂಭ ಜೋಡಿಗಳ ಪರಿಚಯದ ವಿವರಗಳನ್ನು ಒಳಗೊಂಡಿದ್ದು, ನಂತರ ಬರುವ ಸಾಲುಗಳು ವೈಯಕ್ತಿಕವಾಗಿ ಜೋಡಿಗಳು ಅನುಭವಿಸಿರುವ ಕಷ್ಟಗಳನ್ನು( Difficulties Experienced) ವಿವರಿಸಿದೆ. ಇವರಿಬ್ಬರೂ ತಮ್ಮ ತಮ್ಮ ಜೀವನದಲ್ಲಿ ಬಹುವಾಗಿ ನೊಂದಿದ್ದರು ಎಂಬುದನ್ನು ಈ ವಿವಾಹ ಸಾರಾಂಶದ (Wedding summary) ಸಾಲುಗಳು ವ್ಯಕ್ತಪಡಿಸಿವೆ.


ಬದುಕಿನ ಕಹಿ ಘಟನೆ
ಜೋಡಿಗಳ ಹಿಂದಿನ ವೈವಾಹಿಕ ಬದುಕಿನ ಕಹಿ ಘಟನೆಗಳನ್ನು ವಿವಾಹದ ಘೋಷಣೆ ಬಹಿರಂಗಪಡಿಸಿದ್ದು ಸಾಮಾಜಿಕ ತಾಣದಲ್ಲಿ ಇದು ಸಾಕಷ್ಟು ನೆಟ್ಟಿಗರ ಕಾಮೆಂಟ್‌ಗಳಿಂದ ವೈರಲ್ ಆಗಿದೆ.ಡಾ. ಮ್ಯಾಥ್ಯೂ ಜಾನ್ಸನ್ ಹಾಗೂ ಮಿಸ್. ಜೆನ್ನಿಫರ್ ಬೇರ್ ಕ್ಯುಲನ್ ಮುಂದಿನ ಫೆಬ್ರವರಿಯಂದು ವಿವಾಹವಾಗುತ್ತಿದ್ದಾರೆ. ಜಾನ್ಸನ್ ಪ್ರೊಫೆಸರ್ ಆಗಿದ್ದು ಲೇಖಕರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: Viral Video: ಗ್ರ್ಯಾಂಡ್ ಎಂಟ್ರಿ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡ ನವ ದಂಪತಿ..! ಏನಾಗಿದೆ ನೀವೇ ನೋಡಿ


ಮಲತಂದೆಗೆ ಕೃತಜ್ಞತೆ
ಇನ್ನು ವಧುವಾಗಿರುವ ಬೇರ್ ಕ್ಯುಲನ್ ನಡವಳಿಕೆ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ವಿವಾಹದ ಒಕ್ಕಣೆ ತಿಳಿಸಿದೆ. ಆದರೆ ನಂತರ ನೋಟೀಸ್‌ನಲ್ಲಿ ಬರೆದಿರುವ ಸಾಲುಗಳು ವಿಚಿತ್ರವಾಗಿದ್ದು ವಧು ವರರ ಹಿಂದಿನ ಜೀವನದ ಸಾಲುಗಳನ್ನು ಬಣ್ಣಿಸಿದೆ. ವಧುವಿನ ಮಗನಾದ ಕೋಲ್ಟನ್ ಕ್ಯುಲನ್ ಈ ಅದ್ಭುತ ಪ್ರೀತಿ ಹಾಗೂ ದೈವದತ್ತವಾದ ಕ್ಷಣಕ್ಕೆ ಮೊದಲ ಬಾರಿಗೆ ಸಾಕ್ಷಿಯಾಗಿದ್ದಾನೆ. ಆತ ಹಾಗೂ ಆತನ ತಾಯಿ (ವಧು) ಹಿಂದೆಂದೂ ಕಂಡರಿಯದ ನಿಜವಾದ ನ್ಯಾಯನಿಷ್ಟತೆ, ಸ್ನೇಹಪರತೆ ಹಾಗೂ ಸಂರಕ್ಷಣೆಗೆ ತನ್ನ ಮಲತಂದೆಗೆ ಕೃತಜ್ಞತೆ ಅರ್ಪಿಸಿದ್ದಾರೆ.


ಪ್ರೀತಿಗಾಗಿ ಕಾಯುತ್ತಿದ್ದ ಜೆನ್ನಿಫರ್‌
ಹೀಗೆಯೇ ಮುಂದುವರಿದ ನೋಟೀಸ್‌ನಲ್ಲಿನ ಸಾಲು ವಧುವಿನ ವೈಯಕ್ತಿಕ ಜೀವನದ ಬಗ್ಗೆ ವಿವರವಾದ ಮಾಹಿತಿ ನೀಡಿದೆ. ಆಕೆ ಜೀನದಲ್ಲಿ ಬಹುವಾಗಿ ನೊಂದು ಬೆಂದು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಮುಂದಿನ ಸಾಲುಗಳು ವಿಚಿತ್ರವಾಗಿದ್ದು, ಹೊಗಳಿಕೆ ಹಾಗೂ ತೆಗಳಿಕೆಯ ಸಮ್ಮಿಶ್ರಣವಾಗಿದೆ ಎಂಬುದಾಗಿ ಸಾಲುಗಳು ವಿವರಿಸಿವೆ. ಇಷ್ಟು ದಿನ ಪ್ರೀತಿಗಾಗಿ ಕಾಯುತ್ತಿದ್ದ ಜೆನ್ನಿಫರ್‌ಗೆ ಪ್ರೀತಿ ತುಂಬಿದ ನವ ಜೋಡಿಯಾಗಿ ಮ್ಯಾಥ್ಯೂ ಆಗಮಿಸಿದ್ದಾರೆ. ಚಿನ್ನವು ಹೇಗೆ ಹೆಚ್ಚಿನ ಬಿಸಿ ಮತ್ತು ಜ್ಞಾಲೆಗೆ ಕರಗುತ್ತದೆಯೋ ಅಂತೆಯೇ ಮ್ಯಾಥ್ಯೂವಿನ ಬಲ ಸಾಮರ್ಥ್ಯವು ಹಲವಾರು ವರ್ಷಗಳ ಕಠಿಣತೆಯಿಂದ ದೃಢವಾಗಿದೆ.


ನೆಟ್ಟಿಗರಿಗೆ ಒಂದೆಡೆ ಸೋಜಿಗ
ಅಂತೂ ಜೆನ್ನಿಫರ್ ತನ್ನ ಜೀವನದಲ್ಲಿ ಹಿಂದೆಂದೂ ಕಂಡಿರದ ಪ್ರೀತಿಯ ಮಳೆಯಲ್ಲಿ ತೋಯಲಿದ್ದಾರೆ ಹಾಗೂ ಈ ಹಿಂದೆ ಅನುಭವಿಸಿರದ ಅಪರಿಮಿತ ಪ್ರೇಮವನ್ನು ಪಡೆಯಲಿದ್ದಾರೆ. ಇನ್ನು ಸರಳವಾಗಿ ಹೇಳಬೇಕೆಂದರೆ ಇಬ್ಬರೂ ತಮ್ಮ ಜೀವನದಲ್ಲಿ ಗೆದ್ದಿದ್ದಾರೆ ಹೀಗೆ ವಿವಾಹ ಪತ್ರ ಮುಕ್ತಾಯವಾಗುತ್ತದೆ. ಹೀಗೆ ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವಿವಾಹದ ಘೋಷಣಾ ಪತ್ರವು ನೆಟ್ಟಿಗರಿಗೆ ಒಂದೆಡೆ ಸೋಜಿಗವನ್ನುಂಟು ಮಾಡಿದ್ದರೆ ಇನ್ನೊಂದೆಡೆ ಪ್ರೀತಿಯನ್ನು ಹೀಗೆಯೂ ಬಣ್ಣಿಸಲಾಗುತ್ತದೆಯೇ ಎಂಬ ಸಂತಸವನ್ನುಂಟು ಮಾಡಿದೆ.


ಇದನ್ನೂ ಓದಿ: Family Planning: ಕುಟುಂಬಕ್ಕೆ ಹೊಸ ಸದಸ್ಯನನ್ನ ಬರ ಮಾಡಿಕೊಳ್ಳುವ ಮುನ್ನ ಇರಲಿ ಸಿದ್ಧತೆ

top videos


    ಇನ್ನು ಕೆಲವರು ಇವರ ಪ್ರೀತಿಗೆ ಶುಭ ವ್ಯಕ್ತಪಡಿಸಿದ್ದರೆ ವಿಚಿತ್ರ ಮದುವೆಯ ಕರೆಯೋಲೆ ಎಂದು ಇನ್ನು ಕೆಲವರು ಬರೆದುಕೊಂಡಿದ್ದಾರೆ. ಇದೊಂದು ವಿಚಿತ್ರ ರೀತಿಯ ವಿವಾಹ ಪತ್ರವಾಗಿದ್ದು, ವಧು ವರರ ಜೀವನವನ್ನು ಅವರು ಪಟ್ಟಿದ್ದ ಕಷ್ಟಗಳನ್ನು ಹಾಗೂ ಇವರಿಬ್ಬರೂ ತಮ್ಮ ಪ್ರೀತಿಯನ್ನು ಕಂಡುಕೊಂಡ ಬಗೆಯನ್ನು ಸಾರಾಂಶವಾಗಿ ನೀಡಲಾಗಿದೆ.

    First published: