Viral Video: ದೋಣಿ ದುರಂತದಲ್ಲಿ ಸಿಲುಕಿದ ಜನರನ್ನು ರಕ್ಷಿಸಿದ ಯುಎಸ್ ಕೋಸ್ಟ್ ಗಾರ್ಡ್; ಭಯಾನಕ ವಿಡಿಯೋ ವೈರಲ್

ಈ ಸಮುದ್ರಗಳಿಗೆ ದೋಣಿಯಲ್ಲಿ ಕೂತು ಇಳಿಯುವ ಜನರು ಅವರೊಂದಿಗೆ ಯಾವುದೇ ರೀತಿಯ ಅಹಿತಕರವಾದ ಘಟನೆಗಳು ನಡೆಯಬಹುದು ಎಂದು ತಿಳಿದುಕೊಂಡು ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲಿಯೂ ಸಹ ಒಂದು ದೋಣಿ ದುರಂತದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಸಮುದ್ರಗಳು (Sea) ನೋಡಲು ಕಣ್ಣಿಗೆ ಮತ್ತು ಮನಸ್ಸಿಗೆ ಎಷ್ಟು ಮುದ ನೀಡುತ್ತವೆಯೋ, ಆ ಸಮುದ್ರದ ನೀರಿನಲ್ಲಿ ಆಗುವ ದೋಣಿ ದುರಂತಗಳು (Boat disaster) ಅಷ್ಟೇ ಭಯಾನಕವಾಗಿರುತ್ತವೆ ಮತ್ತು ಮನಸ್ಸಿಗೆ ಆಘಾತವನ್ನು ಉಂಟು ಮಾಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾವು ಆಗಾಗ್ಗೆ ಈ ದೋಣಿ ದುರಂತಗಳ ಬಗ್ಗೆ ಸುದ್ದಿ ಮಾಧ್ಯಮದಲ್ಲಿ ಮತ್ತು ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ದೋಣಿ ದುರಂತಗಳ ಅನೇಕ ಭಯಾನಕ ವಿಡಿಯೋಗಳು ನಮಗೆ ನೋಡಲು ಸಿಗುತ್ತಿವೆ. ಈ ಸಮುದ್ರಗಳಿಗೆ ದೋಣಿಯಲ್ಲಿ ಕೂತು ಇಳಿಯುವ ಜನರು ಅವರೊಂದಿಗೆ ಯಾವುದೇ ರೀತಿಯ ಅಹಿತಕರವಾದ ಘಟನೆಗಳು ನಡೆಯಬಹುದು ಎಂದು ತಿಳಿದುಕೊಂಡು ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲಿಯೂ ಸಹ ಒಂದು ದೋಣಿ ದುರಂತದ ವಿಡಿಯೋ (Video) ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

ಇದನ್ನು ನೋಡಿದರೆ, ಅಬ್ಬಾ ಎಷ್ಟು ಭಯಾನಕವಾಗಿದೆ ಈ ವಿಡಿಯೋ ಅಂತ ಅನ್ನಿಸುವುದಂತೂ ನಿಜ. ಅಷ್ಟಕ್ಕೂ ಈ ದೋಣಿ ದುರಂತವಾದದ್ದಾದರೂ ಹೇಗೆ? ಇದರಲ್ಲಿ ಸಿಲುಕಿದ್ದ ಜನರನ್ನು ನಂತರ ಹೇಗೆ ಸುರಕ್ಷಿತವಾಗಿ ರಕ್ಷಿಸಲಾಯಿತು? ಏನಾದರೂ ಸಾವು ನೋವು ಘಟನೆಗಳು ನಡೆದಿವೆಯೇ ಅಂತ ಅನೇಕ ರೀತಿಯ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ.

ದೋಣಿಗೆ ಸಿಡಿಲು ಬಡಿಯುವ ವಿಡಿಯೋ ವೈರಲ್
ಫ್ಲೋರಿಡಾದ ಕ್ಲಿಯರ್ ವಾಟರ್ ನಲ್ಲಿ ನಡೆದ ಫಿಷಿಂಗ್ ಟೂರ್ನಾಮೆಂಟ್ ನಲ್ಲಿ ಏಳು ಜನರು ಭಾಗವಹಿಸುತ್ತಿದ್ದಾಗ ಅವರು ಇದ್ದಂತಹ ದೋಣಿಗೆ ಭಾರಿ ಸಿಡಿಲು ಬಡಿದು ಆ ದೋಣಿ ತಲೆಕೆಳಗಾಗಿದೆ. ನಂತರ ಯುಎಸ್ ಕೋಸ್ಟ್ ಗಾರ್ಡ್ ನ ಸಿಬ್ಬಂದಿಗಳು ಬಂದು ಇವರನ್ನು ಕಾಪಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸಿಡಿಲು ದೋಣಿಗೆ ಬಂದು ಅಪ್ಪಳಿಸುವ ಭಯಾನಕ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Woman Astronaut: ಗುಂಟೂರಿನಿಂದ ಗಗನದವರೆಗೆ; ಭಾರತೀಯ ಮಹಿಳೆಯ ಕಥೆಯಿದು

ಯುಎಸ್‌ಸಿಜಿ ಸೌತ್ ಈಸ್ಟ್ ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕ್ಲಿಪ್ ದೋಣಿಯಲ್ಲಿರುವ ಜನರನ್ನು ತೋರಿಸುತ್ತದೆ. ಇದ್ದಕ್ಕಿದ್ದಂತೆ, ಮಿಂಚು ಅಪ್ಪಳಿಸುತ್ತದೆ ಮತ್ತು ಜನರು ಕಿರುಚುವುದನ್ನು ವಿಡಿಯೋದಲ್ಲಿ ನಾವು ಕೇಳಬಹುದು. ನಂತರ, ಅವರನ್ನು ಒಬ್ಬಬ್ಬರಂತೆ ಎಲ್ಲರನ್ನು ಹೆಲಿಕಾಪ್ಟರ್ ನಲ್ಲಿ ಸುರಕ್ಷಿತವಾಗಿ ತಂದು ಇಳಿಸುವುದನ್ನು ವಿಡಿಯೋದಲ್ಲಿ ನಾವು ನೋಡಬಹುದು.

ಏಳು ಜನರ ರಕ್ಷಣೆ
ಕಳೆದ ವಾರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಐವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ ಏಳು ಜನರನ್ನು 39 ಅಡಿ ಹಡಗಿನಿಂದ ರಕ್ಷಿಸಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮತ್ತು ಅವರನ್ನು ಎಂಎಚ್ -60 ಜಯ್ಹಾಕ್ ಹೆಲಿಕಾಪ್ಟರ್ ಮೂಲಕ ಏರ್ಲಿಫ್ಟ್ ಮಾಡಲಾಯಿತು, ಈಗ ಅವರೆಲ್ಲರೂ ಅವರ ಕುಟುಂಬದೊಂದಿಗೆ ಸೇರಿದ್ದಾರೆ ಎಂದು ಅದು ಹೇಳಿದೆ.ದೋಣಿಯಲ್ಲಿದ್ದ ಸದಸ್ಯರು ರೇಡಿಯೋ ಬೀಕನ್ (ಇಪಿಐಆರ್‌ಬಿ) ಎಚ್ಚರಿಕೆಯನ್ನು ಸೂಚಿಸುವ ತುರ್ತು ಸ್ಥಿತಿಯ ಬಗ್ಗೆ ಮಾಹಿತಿಯನ್ನು ಕಳುಹಿಸಿದ್ದರು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಅವರನ್ನು ತ್ವರಿತವಾಗಿ ರಕ್ಷಿಸಲು ಸಾಧ್ಯವಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. "ಫ್ಲೋರಿಡಾ ಕಡಲ ಪರಿಸರದಲ್ಲಿ ಮಿಂಚಿನ ಚಂಡಮಾರುತಗಳು ನಿಯಮಿತವಾಗಿ ಎದುರಾಗುತ್ತವೆ ಮತ್ತು ದೋಣಿಗಾರರಿಗೆ ಗಮನಾರ್ಹ ಅಪಾಯವನ್ನು ಉಂಟು ಮಾಡಬಹುದು" ಎಂದು ಕೋಸ್ಟ್ ಗಾರ್ಡ್ ಪೈಲಟ್ ಲೆಫ್ಟಿನೆಂಟ್ ಡೇವಿಡ್ ಮೆಕಿನ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಳುಗಿದ ದೋಣಿಯನ್ನು ಮರು ಪಡೆಯಲು ಶೋಧ ಕಾರ್ಯ
"ಅದೃಷ್ಟವಶಾತ್, ಈ ಸಂದರ್ಭದಲ್ಲಿ, ತ್ವರಿತ ಮತ್ತು ದಕ್ಷ ಪಾರುಗಾಣಿಕಾವನ್ನು ಖಚಿತಪಡಿಸಿಕೊಳ್ಳಲು ಇಪಿಆರ್‌ಬಿ, ಫ್ಲೇರ್ ಗಳು ಮತ್ತು ಸಾಗರದಲ್ಲಿರುವ ವಿಎಚ್ಎಫ್ ರೇಡಿಯೋ ಸೇರಿದಂತೆ ಎಲ್ಲಾ ಅಗತ್ಯ ಸುರಕ್ಷತಾ ಸಾಧನಗಳೊಂದಿಗೆ ದೋಣಿ ಸವಾರರು ಸಿದ್ಧರಾಗಿದ್ದರು" ಎಂದು ಮೆಕಿನ್ಲೆ ಹೇಳಿದರು. ಆ ನೀರಿನಲ್ಲಿ ಮುಳುಗಿದ ಅವರ ದೋಣಿಯನ್ನು ಮರು ಪಡೆಯಲು ಶೋಧ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:  Old House: 7 ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದ ಈ ಮನೆಗೆ 987 ವರ್ಷ! ಈಗಲೂ ಎಷ್ಟು ಗಟ್ಟಿಯಾಗಿದೆ ನೋಡಿ

ಈ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು “ಓ..ದೇವರೇ ಎಂತಹ ಭಯಾನಕ ಘಟನೆ ಇದು, ಸದ್ಯ ಎಲ್ಲರೂ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: