ಜೀವನಶೈಲಿ (Life Style) ಬದಲಾಂತಯೆ ಮಾನವನ ದೇಹದಲ್ಲಿ ಕೂಡ ಅಷ್ಟೇ ಬದಲಾವಣೆಗಳು ಕಂಡು ಬರುತ್ತದೆ. ಕೆಲವೊಬ್ಬರಿಗೆ ಪಾಸಿಟೀವ್ ಆಗಿ ದೇಹದಲ್ಲಿ ಬದಲಾವಣೆ ಆದ್ರೆ ಇನ್ನು ಅದೆಷ್ಟೋ ಜನರಿಗೆ ನೆಗೆಟೀವ್ ಆಗಿ ಎಫೆಕ್ಟ್ (Effects) ಆಗುತ್ತೆ. ಹೀಗಾಗಿ ಆರೋಗ್ಯದಲ್ಲಿ ಏರು ಪೇರಾಗೋದು ಸಾಮಾನ್ಯ. ಇತ್ತೀಚಿಗಿನ ಕಾಲದಲ್ಲಿ ಹೆಚ್ಚಾಗಿ ಕ್ಯಾನ್ಸರ್ (Cancer) ರೋಗಕ್ಕೆ ತುತ್ತಾಗೋದು ಕಾಮನ್ ಆಗಿದೆ. ಇದರಿಂದ ಮರಣ ಕೂಡ ಹೊಂದುತ್ತಾರೆ. ಇದರ ಜೊತೆಗೆ ಹೆಸರೇ ಕೇಳಿರದಂತಹ ಅದೆಷ್ಟೋ ರೋಗ ರುಜಿನಗಳು ಇತ್ತೀಚೆಹೆ ಶುರುವಾಗಿದೆ. ವೈದ್ಯ ಲೋಕಕ್ಕೇ ಅಚ್ಚರಿ ಮೂಡಿಸುವಂತಹ ಆಪರೇಷನ್ಗಳು (Operation) ನಡೆಯುತ್ತಿವೆ ಎನ್ನಬಹುದು.
ಹೌದು, ಡಾಕ್ಟರ್ಗಳಿಗೇ ಶಾಕ್ ಆಗುವಂತಹ ಅದೆಷ್ಟೋ ಕೇಸ್ಗಳು ಪ್ರಸ್ತುತ ನಡೆಯುತ್ತಿದೆ. ಹೀಗಾಗಿ ಜನರು ಯೋಚನೆ ಕೂಡ ಮಾಡೋದಕ್ಕೆ ಅಗದೇ ಇರುವ ಕಾಯಿಲೆಗಳು ಅಚಾನಕವಾಗಿ ಹುಟ್ಟಿಕೊಳ್ತಾ ಇದೆ.
ಯಾವುದಕ್ಕೂ ನಮ್ಮ ಲೈಫ್ ಸ್ಟೈಲ್ ನೀಟಾಗಿರಬೇಕು ಎಂದು ಸಂಶೋಧಕರು ತಿಳಿಸುತ್ತಾರೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದೆ. ಅಂದ್ರೆ ವೈದ್ಯಲೋಕಕ್ಕೇ ಅಚ್ಚರಿ ಮೂಡಿಸುವಂತಹ ಆಪರೇಕಷನ್ ಅಂತಲೇ ಹೇಳಬಹುದು.
ನಮ್ಮ ದೇಹದಲ್ಲಿರು ನೀರನ್ನು ಬೆವರಿನ ಮೂಲಕ ಮತ್ತು ಮೂತ್ರವಿಸರ್ಜನೆಯ ಮೂಲಕ ಹೊರ ಹಾಕುತ್ತೇವೆ. ಇನ್ನು ಸಸ್ಯಗಳಲ್ಲಿಈ ಪ್ರಕ್ರಿಯೆಯನ್ನು ಬಾಷ್ಪವಿಸರ್ಜನೆ ಎಂದು ಹೇಳಲಾಗುತ್ತದೆ. ಇದು ನೈಸರ್ಗಿಕವಾಗಿ ನಡೆಯುವಂತಹ ಪ್ರಕ್ರಿಯೆ ಎಂದೇ ಹೇಳಬಹುದು.
ಇದನ್ನೂ ಓದಿ: ಅತಿಲೋಕ ಸುಂದರಿ ಈ ಕೋಳಿ, ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಬ್ಯೂಟಿ!
ಮೂತ್ರವನ್ನು ಯಾವುದೇ ಕಾರಣಕ್ಕು ಜಾಸ್ತಿ ಹೊತ್ತು ತಡೆದುಕೊಂಡೇ ಇರಬಾರದು. ಇದರಿಂದ ಕಿಡ್ನಿಯಲ್ಲಿ ಕಲ್ಲು ಹಾಗೂ ಇನ್ನಿತರ ಖಾಯಿಲೆಗಳು ಆಗುವಂತಹ ಸಂದರ್ಭ ಬರಬಹುದು. ಆದರೆ, ಇಲ್ಲಿ ಒಬ್ಬಾಕೆ ಮೂತ್ರವನ್ನು ಮಾಡದೇ ಒಂದು ವರ್ಷಗಳ ಕಾಲ ಇದ್ದಳಂತೆ.
ಹೌದು, ನಿಮಗೆ ಇದು ಸುಳ್ಳು ಅಂತ ಅನಿಸಿದ್ರೆ, ಸಂಪೂರ್ಣ ವಿವರ ಇಲ್ಲಿದೆ ನೋಡಿ. ಇಂಗ್ಲೆಂಡಿನ 30 ವರ್ಷ ವಯಸ್ಸಿನ ಎಲ್ಲೆ ಆಡಮ್ಸ್ ಎಂಬ ಮಹಿಳೆಯೊಬ್ಬರು ಬರೋಬ್ಬರಿ 14 ತಿಂಗಳುಗಳ ಕಾಲ ಮೂತ್ರ ಮಾಡಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಇದು ಹೇಗೆ ಸಾಧ್ಯ? ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಈ ಮಹಿಳೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನಲಾಗಿದೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಮೂತ್ರ ಮಾಡಲು ಆಗಲಿಲ್ಲವಂತೆ.
ಆ ಬಳಿಕದ ದಿನಗಳಲ್ಲಿ ಮೂತ್ರ ಬರುವ ಅನುಭವವೇ ಆಗದೇ ಹೋಯಿತು ಎಂದು ಆಡಮ್ಸ್ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೇ, ಆಡಮ್ಸ್ ಎಷ್ಟೇ ನೀರು ಇಲ್ಲವೇ ಇತರ ದ್ರವವನ್ನು ಕುಡಿದರೂ ಕೂಡ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿರಲ್ಲಿಲ್ಲವಂತೆ. ಆದರೆ, ಈ ಸಮಸ್ಯೆ ಮುಂದುವರಿದು ಮಹಿಳೆಗೆ 1 ವರೆ ವರ್ಷಕ್ಕೂ ಹೆಚ್ಚು ಕಾಲ ಮೂತ್ರ ವಿಸರ್ಜನೆ ಮಾಡಲು ಆಗದ ಸ್ಥಿತಿ ಸೃಷ್ಠಿಯಾಗಿತ್ತು. ಮಹಿಳೆಯ ಈ ಆರೋಗ್ಯ ಸ್ಥಿತಿಗೆ ಕಾರಣವನ್ನ ಕಂಡುಹಿಡಿಯಲು ಯುನೈಟೆಡ್ ಕಿಂಗ್ಡಮ್ನಲ್ಲಿ ವೈದ್ಯರು ಮುಂದಾಗಿದ್ದಾರೆ.
ಇದನ್ನೂ ಓದಿ: ಹೆತ್ತವರ ವಿರುದ್ಧವೇ ಕೋರ್ಟ್ ಮೊರೆ ಹೋದ ಮಗಳು; ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್
ಎಲ್ಲೆ ಆಡಮ್ಸ್ ಅವರಿಗೆ ಕಂಡು ಬಂದ ಈ ಸಮಸ್ಯೆ ಫೌಲರ್ಸ್ ಸಿಂಡ್ರೋಮ್ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ಕಾಯಿಲೆ ಮೂತ್ರಕೋಶವನ್ನು ಖಾಲಿ ಮಾಡಲಾಗದ ಸಮಸ್ಯೆ ಎನ್ನಲಾಗಿದೆ. ಈ ಸ್ಥಿತಿಯು ಹೆಚ್ಚಾಗಿ ಯುವತಿಯರಲ್ಲಿ ಕಂಡು ಬರುತ್ತದಂತೆ. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಒಳಗೊಂಡಿರುತ್ತದೆ.
View this post on Instagram
ವೈದ್ಯರು ಆಕೆಯ ದೇಹವನ್ನು ಸರಿಯಾಗಿ ಪರಿಶೀಲನೆ ನಡೆಸಿದಾಗ ಉಳಿದವರ ಹಾಗೆ 500 ಮಿಲಿ ಇರುವ ಬದಲಿಗೆ ಆಕೆಯ ಮೂತ್ರಕೋಶದಲ್ಲಿ ಬರೋಬ್ಬರಿ ಒಂದು ಲೀಟರ್ ಮೂತ್ರವಿದೆ ಎಂದು ತಿಳಿದುಬಂದಿತ್ತು. ಹೀಗಾಗಿ ವೈದ್ಯರ ತಂಡ ಕೂಡಲೇ ಟ್ಯೂಬ್ ಮೂಲಕ ಮೂತ್ರವನ್ನು ಹೊರತೆಗೆದಿದ್ದಾರೆ.
ಒಂದು ವಾರದ ಬಳಿಕ ಮೂತ್ರಶಾಸ್ತ್ರ ಕೇಂದ್ರಕ್ಕೆ ಭೇಟಿ ನೀಡಿದ ಆಡಮ್ಸ್ ಅವರಿಗೆ ಸ್ವಯಂ-ಟ್ಯೂಬ್ ಮೂಲಕ ಮೂತ್ರ ತೆಗೆಯುವ ಬಗ್ಗೆ ಮಾಹಿತಿ ನೀಡಿ ಮನೆಗೆ ಕಳುಹಿಸಲಾಗಿದ್ದು, ಆಡಮ್ಸ್ ಸದ್ಯ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ