ಇತ್ತೀಚೆಗಂತೂ ಈ ವಿಮಾನದಲ್ಲಿ (Airplane) ನಡೆದ ಅಹಿತಕರ ಘಟನೆಗಳೇ ಕೇಳುವುದಕ್ಕೆ ಮತ್ತು ನೋಡುವುದಕ್ಕೆ ನಮಗೆ ಹೆಚ್ಚಾಗಿ ಸಿಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ರೈಲಿನಲ್ಲಿ ಹೋದ್ರೆ ಕಿರಿಕಿರಿ ಆಗುತ್ತೆ, ವಿಮಾನದಲ್ಲಿ ಹೋದ್ರೆ ಬೇಗ ಸಹ ಹೋಗ್ತೀವಿ ಮತ್ತು ಕಿರಿಕಿರಿ ಸಹ ಆಗೋದಿಲ್ಲ ಅಂತ ನೀವು ಅಂದ್ಕೊಂಡ್ರೆ ಅದು ಶುದ್ದ ತಪ್ಪು (Fales) ಅಂತ ಹೇಳಲು ಇತ್ತೀಚೆಗೆ ಅನೇಕ ಘಟನೆಗಳೇ ಸಾಕ್ಷಿ ಅಂತ ಹೇಳಬಹುದು. ಹೌದು ಈ ಕಿರಿಕಿರಿ, ತೊಂದರೆ (Problem) ಎನ್ನುವುದು ಯಾವ ಸಾರಿಗೆಯನ್ನು (Travel) ಬಳಸುತ್ತೇವೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಆ ಸಾರಿಗೆ ವ್ಯವಸ್ಥೆಯು (Travel System) ಹೇಗಿದೆ ಎನ್ನುವುದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಅಂತ ಹೇಳಬಹುದು.
ಮೊದಲು ಕುಡಿದ ಅಮಲಿನಲ್ಲಿ ಪ್ರಯಾಣಿಕನೊಬ್ಬ ಬಿಸಿನೆಸ್ ಕ್ಲಾಸ್ ನಲ್ಲಿ ಕುಳಿತ ಮಹಿಳೆಯ ಸೀಟಿನ ಹತ್ತಿರ ಹೋಗಿ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆಯನ್ನು ಹೀಗೆ ಜನರು ಮರೆಯುತ್ತಾರೆ ಎನ್ನುವಷ್ಟರಲ್ಲಿಯೇ ಇನ್ನೊಂದು ವಿಮಾನದ ಘಟನೆ ಬೆಳಕಿಗೆ ಬಂದಿತ್ತು. ಆ ಘಟನೆಯಲ್ಲಿ ಪ್ರಯಾಣಿಕರೊಬ್ಬರಿಗೆ ವಿಮಾನದಲ್ಲಿ ಕೊಟ್ಟ ಪ್ಯಾಕೆಟ್ ಊಟದಲ್ಲಿ ಒಂದು ಕಲ್ಲು ಸಿಕ್ಕಿತ್ತು.
ಹೀಗೆ ಅನೇಕ ರೀತಿಯ ಅಹಿತಕರ ಘಟನೆಗಳು ನಮಗೆ ಇತ್ತೀಚೆಗೆ ನೋಡಲು ಸಿಕ್ಕಿವೆ ಅಂತ ಹೇಳಬಹುದು. ಇದೆಲ್ಲದಕ್ಕೂ ಮುಂಚೆ ಸಹ ಗಗನಸಖಿಯನ್ನು ಪ್ರಯಾಣಿಕರೊಬ್ಬರು ಅವಮಾನಿಸಿದ್ದಕ್ಕಾಗಿ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿತ್ತು.
ಹೀಗೆ ಜನರು ತಮ್ಮ ಪ್ರಯಾಣದ ಸಮಯದಲ್ಲಿ ಕಳೆದುಕೊಳ್ಳುವ ತಾಳ್ಮೆಯಿಂದಾಗಿ ಅಲ್ಲದೆ ವಿಮಾನದಲ್ಲಿ ಆಗುವ ಲೋಪದೋಷಗಳಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಾರೆ ಅಂತ ಹೇಳಬಹುದು.
ವಿಮಾನದ ಕಿಟಕಿ ತೆರೆಯಿರಿ ಅಂತ ಗಗನಸಖಿಯನ್ನ ಕೇಳಿದ್ರಂತೆ
ಇಷ್ಟೇ ಅಲ್ಲದೆ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರಿಗೆ ಮತ್ತು ವಿಮಾನಯಾನ ಸಿಬ್ಬಂದಿಗೆ ಮಧ್ಯದಲ್ಲಿ ತೊಂದರೆ ಉಂಟು ಮಾಡುವ ಹಲವಾರು ಘಟನೆಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಇತ್ತೀಚೆಗೆ ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ ಗುಟ್ಕಾವನ್ನು ಉಗುಳಲು ವಿಮಾನದ ಕಿಟಕಿಯನ್ನು ಮಧ್ಯದಲ್ಲಿ ತೆರೆಯುವಂತೆ ಗಗನಸಖಿಯನ್ನು ಕೇಳುತ್ತಿರುವುದನ್ನು ತೋರಿಸುತ್ತದೆ.
ಗೋವಿಂದ್ ಶರ್ಮಾ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅಪ್ಲೋಡ್ ಮಾಡಿರುವ ಈ ವೀಡಿಯೋ ಈಗ ವೈರಲ್ ಆಗಿದೆ. ಅಪ್ಲೋಡ್ ಮಾಡಿದವರು ಶೀರ್ಷಿಕೆಯಲ್ಲಿ "ತಮ್ಮ ಗುಟ್ಕಾ ಪ್ರೇಮಿ ಸ್ನೇಹಿತನನ್ನು ಟ್ಯಾಗ್ ಮಾಡಿ" ಎಂದು ಜನರನ್ನು ಕೇಳಿದರು.
ಇದನ್ನೂ ಓದಿ:Viral Video: ನೂಡಲ್ಸ್ ಹೀಗೂ ಪ್ರಿಪೇರ್ ಮಾಡಬಹುದು ಅಂತ ತೋರಿಸಿಕೊಟ್ಟಿದ್ದಾರೆ ನೋಡಿ, ವಿಡಿಯೋ ಫುಲ್ ವೈರಲ್!
ಇದಕ್ಕೆ ಗಗನಸಖಿಯ ಪ್ರತಿಕ್ರಿಯೆ ಹೇಗಿತ್ತು ನೋಡಿ
ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ ನೋಡಿ. ಈ ವೀಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೀಟ್ನಲ್ಲಿ ಕುಳಿತಿರುವುದನ್ನು ತೋರಿಸುತ್ತದೆ. ವೀಡಿಯೋದಲ್ಲಿ ಅವನು ಇದ್ದಕ್ಕಿದ್ದಂತೆ ಗಗನಸಖಿಯನ್ನು ಕರೆದು "ಕ್ಷಮಿಸಿ, ಈ ಕಿಟಕಿ ತೆಗಿತೀರಾ ದಯವಿಟ್ಟು, ಗುಟ್ಕಾ ಉಗುಳಬೇಕು" ಅಂತ ಹೇಳುತ್ತಾನೆ.
View this post on Instagram
ಏನಾಗಿತ್ತು ಏರ್ ಇಂಡಿಯಾ ವಿಮಾನದಲ್ಲಿ ಆವತ್ತು?
ನವೆಂಬರ್ 26 ರಂದು ಏರ್ ಇಂಡಿಯಾ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್ ನಲ್ಲಿ ಕುಳಿತ ಮಹಿಳಾ ಪ್ರಯಾಣಿಕರೊಬ್ಬರ ಬಳಿ ಹೋಗಿ ಅವರ ಮೇಲೆ ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜಿಸಿದ್ದಾನೆ ಎಂದು ಮಹಿಳಾ ಪ್ರಯಾಣಿಕರೊಬ್ಬರು ಆರೋಪಿಸಿದ್ದರು.
ವರದಿಗಳ ಪ್ರಕಾರ, ಆ ವ್ಯಕ್ತಿಯನ್ನು ಪ್ರಯಾಣಿಕರು ದೂರ ಹೋಗುವಂತೆ ಹೇಳುವವರೆಗೂ ತನ್ನ ಖಾಸಗಿ ಭಾಗಗಳನ್ನು ಬಹಿರಂಗಪಡಿಸುತ್ತಲೇ ಇದ್ದನು. ವಿಮಾನಯಾನ ಸಿಬ್ಬಂದಿ ಮಹಿಳೆಗೆ ಹೊಸ ಬಟ್ಟೆಗಳು ಮತ್ತು ಚಪ್ಪಲಿ ನೀಡಿ ಸಹಾಯ ಮಾಡಿತು.
ಈ ವಿಷಯವನ್ನು ಪರಿಶೀಲಿಸಲು ಆಂತರಿಕ ಸಮಿತಿಯನ್ನು ರಚಿಸಲಾಯಿತು ಮತ್ತು ಅವರು ಆರೋಪಿಗಳನ್ನು 30 ದಿನಗಳವರೆಗೆ ಪ್ರಯಾಣಿಸದಂತೆ ನಿಷೇಧಿಸಿದರು. ನಂತರ ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಕಳುಹಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ