• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • ತುಂಬಾ ಪ್ರೀತಿಸುತ್ತಾನೆಂದು ಗಂಡನಿಗೆ ಡಿವೋರ್ಸ್ ಕೊಡಲು ಮುಂದಾದ ಹೆಂಡತಿ; ಕೋರ್ಟ್ ತೀರ್ಪು ಕೊಟ್ಟಿದ್ದೇನು ಗೊತ್ತಾ?

ತುಂಬಾ ಪ್ರೀತಿಸುತ್ತಾನೆಂದು ಗಂಡನಿಗೆ ಡಿವೋರ್ಸ್ ಕೊಡಲು ಮುಂದಾದ ಹೆಂಡತಿ; ಕೋರ್ಟ್ ತೀರ್ಪು ಕೊಟ್ಟಿದ್ದೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನನ್ನ ಗಂಡನೊಂದಿಗೆ ಜಗಳ ಆಡಬೇಕು. ಆದರೆ ಆತ ಅತಿಯಾದ ಪ್ರೀತಿಯಿಂದ ಇದಕ್ಕೆ ಅವಕಾಶವನ್ನೇ ಕೊಡುವುದಿಲ್ಲ ಎಂದು ಹೇಳಿ ಮಹಿಳೆಯೊಬ್ಬರು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 • News18
 • 5-MIN READ
 • Last Updated :
 • Share this:

ತುಂಬಾ ಕಿರುಕುಳ ಕೊಡುತ್ತಾರೆ. ಹೊಡೆಯುತ್ತಾರೆ ಬಡಿಯುತ್ತಾರೆ, ಮಾನಸಿಕ ಹಿಂಸೆ ಕೊಡುತ್ತಾರೆ ಎಂದೆಲ್ಲಾ ಕಾರಣಗಳಿಗೆ ಡಿವೋರ್ಸ್ ಕೊಡುವುದು ಸಾಮಾನ್ಯ. ಆದರೆ, ಬಹಳ ಪ್ರೀತಿ ತೋರುವ ಕಾರಣಕ್ಕೆ ವಿಚ್ಛೇದನ ಕೊಡಲು ಮುಂದಾಗಿರುವ ವಿಚಾರ ಕೇಳಿದ್ದೀರಾ? ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ತನ್ನ ಗಂಡ ಅತಿಯಾಗಿ ಪ್ರೀತಿಸುತ್ತಿದ್ದು, ಜಗಳ ಆಡಲು ಅವಕಾಶವನ್ನೇ ಕೊಡದಷ್ಟು ಕನಿಕರ ತೋರುತ್ತಾನೆ ಎಂದು ಉತ್ತರ ಪ್ರದೇಶದ ಮಹಿಳೆಯೊಬ್ಬರು ಶರಿಯಾ ಕೋರ್ಟ್​ನಲ್ಲಿ ತಲಾಖ್​ಗೆ ಮನವಿ ಮಾಡಿದ್ದಾಳೆ ಎಂದು ದ ವೀಕ್ ಪತ್ರಿಕೆಯಲ್ಲಿ ವರದಿಯಾಗಿದೆ.


ಒಂದೂವರೆ ವರ್ಷದ ಹಿಂದಷ್ಟೇ ಈಕೆ ವಿವಾಹವಾಗಿದ್ದು ಇಷ್ಟು ಅಲ್ಪ ಅವಧಿಯಲ್ಲೇ ತನ್ನ ಗಂಡನ ಅತಿಪ್ರೇಮ ಈಕೆಗೆ ಕಿರಿಕಿರಿ ತಂದಿದಂತಿದೆ. “ನಾನು ತಪ್ಪು ಮಾಡಿದಾಗೆಲ್ಲಾ ಅವರು ಕ್ಷಮಿಸಿಬಿಡುತ್ತಾರೆ. ಆದರೆ ನನಗೆ ಅವರೊಂದಿಗೆ ವಾದ ಮಾಡಬೇಕು ಎನಿಸುತ್ತತದೆ. ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಕೆಲವೊಮ್ಮೆ ಅವರೇ ಅಡುಗೆ ಮಾಡುತ್ತಾರೆ. ಮನೆಗೆಲಸವನ್ನೂ ಮಾಡುತ್ತಾರೆ” ಎಂದು ಈ ನವವಿವಾಹಿತೆ ಹೇಳುತ್ತಾಳೆ.


ಆದರೆ, ಈ ಮಹಿಳೆಯ ತಲಾಖ್ ಅರ್ಜಿಯನ್ನು ಷರಿಯಾ ಕೋರ್ಟ್ ತಿರಸ್ಕರಿಸಿತು. ಆದರೂ ಬಿಡದೆ ಈಕೆ ಸ್ಥಳೀಯ ಪಂಚಾಯಿತಿ ಮೆಟ್ಟಿಲೇರುತ್ತಾಳೆ. ಅಲ್ಲಿಯೂ ಯಾವುದೇ ನಿರ್ಣಯ ಬರುವುದಿಲ್ಲ. ದಂಪತಿ ತಮ್ಮೊಳಗೆ ಈ ಸಮಸ್ಯೆ ಬಗೆಹರಿಸಬೇಕೆಂದು ಹಿರಿಯರು ಸಲಹೆ ಕೊಟ್ಟಿರುವುದು ತಿಳಿದುಬಂದಿದೆ.


ಇದನ್ನೂ ಓದಿ: Sex in Video Conference: ವಿಡಿಯೋ ಕಾನ್ಫರೆನ್ಸ್​ನಲ್ಲಿ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಜೋಡಿ: ವಿಡಿಯೋ ವೈರಲ್


ಕಳೆದ ವರ್ಷ ಯುಎಇ ದೇಶದಲ್ಲಿ ಇಂಥದ್ದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿತ್ತು. ತನ್ನ ಗಂಡನ ಅತಿಯಾದ ಪ್ರೀತಿಯಿಂದ ಉಸಿರುಗಟ್ಟುತ್ತಿದೆ ಎಂದು ಹೇಳಿ ಮಹಿಳೆಯೊಬ್ಬರು ತನ್ನ ಗಂಡನಿಂದ ತಲಾಖ್ ಪಡೆದಿದ್ದಳು. ಅವರು ಯಾವತ್ತೂ ನನಗೆ ಬೈದಿಲ್ಲ. ನಿರಾಶೆ ಮಾಡಿಲ್ಲ ಎಂದು ಆರೋಪಿಸಿ ಫುಜೇರಾ ನಗರದ ಷರಿಯಾ ಕೋರ್ಟ್​ನ ಮೊರೆಹೋಗಿದ್ದಳು ಆ ಮಹಿಳೆ.

top videos


  ಅದಕ್ಕೆ ಹಿರಿಯರು ಹೇಳುತ್ತಾರೆ, ದಾಂಪತ್ಯ ಎಂಬುದು ಬೇವು ಬೆಲ್ಲದ ಮಿಶ್ರಣದಂತಿರಬೇಕು ಎಂದು. ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ಇದ್ದರೆ ಸಂಸಾರದ ಹೆಚ್ಚು ಗಟ್ಟಿಯಾಗುತ್ತದೆ ಎಂದು ಅನುಭವಿಗಳು ಹೇಳುತ್ತಾರೆ.

  First published: