ಕಂಪನಿಗಳಲ್ಲಿ (Company) ಕೆಲಸ ಮಾಡುವಾಗ ಯಾವುದಾದ್ರೂ ಹಬ್ಬ ಹರಿದಿನಗಳು ಬಂತು ಅಂದ್ರೆ ಉದ್ಯೋಗಿಗಳಿಗೆ ರಜೆಗಳನ್ನು ಕೊಡ್ತಾರೆ. ಕೆಲವೊಂದು ಕಡೆಗಳಲ್ಲಿ ರಜೆ ಇಲ್ಲ ಅಂದ್ರೆ ಕಾಂಪ್ ಆಫ್ಗಳನ್ನು ನೀಡ್ತಾರೆ. ಅಂದ್ರೆ ಹಾಲಿಡೇ ಇದ್ರೂ ಕೂಡ ಉದ್ಯೋಗಿಗಳು ಆಫೀಸಿಗೆ ಲಾಗ್ ಇನ್ (Log In) ಮಾಡಿದ್ರೆ ಆ ರಜೆಯನ್ನು ಇನ್ನೊಂದು ದಿನ ತೆಗೆದುಕೊಳ್ಳಬಹುದು. ಹೀಗೆ ಒಂದೊಂದು ಕಂಪನಿಗಳಲ್ಲಿ ಒಂದೊಂದು ರೂಲ್ಸ್ಗಳು ಇರುತ್ತದೆ. ಕೆಲವೊಂದಷ್ಟು ಕಂಪನಿಗಳಲ್ಲಿ ಉದ್ಯೋಗಿಗಳಿಗೆ ರಜೆಯೇ ಕೊಡೋದಿಲ್ಲ. ಅವರು ಎಷ್ಟೇ ಕಷ್ಟ ಆದ್ರೂ ಕೂಡ ನಾನು ಈ ಆಫೀಸಿನಲ್ಲಿ (Office) ಕೆಲಸ ಮಾಡಬೇಕು ಎಂಬ ಪಣವನ್ನು ತೊಟ್ಟಿರುತ್ತಾರೆ ಅವರು. ಹೀಗಾಗಿ ಯಾವುದೇ ರಜೆಯನ್ನು ಕೇಳಲು ಇಷ್ಟ ಪಡೋದೇ ಇಲ್ಲ ಆ ಉದ್ಯೋಗಿಗಳು.
ಹೀಗೆ ರಜೆ ಇಲ್ಲದೇ ಕೆಲಸ ಮಾಡುವವರು ರಿಯಲಿ ಗ್ರೇಟ್ ಅಂತಲೇ ಹೇಳಬಹದು. ಪೊಲೀಸರು, ಸೈನಿಕರು ಈ ರೀತಿಯಾಗಿ ಕಾಯಕ ಮಾಡುತ್ತಾರೆ. ಅವರು ತಮ್ಮ ಫ್ಯಾಮಿಲಿಯ ಜೊತೆಗೆ ಟೈಮ್ ಸ್ಪೆಂಡ್ ಮಾಡೋದೇ ಕಡಿಮೆ . ನಿಜಕ್ಕೂ ಗ್ರೇಟ್ ಅಲ್ವಾ?
ಈ ಹಿಂದೆ ಪೊಲೀಸರೊಬ್ಬರ ಸ್ಟೋರಿ ವೈರಲ್ ಆಗಿತ್ತು. ತನ್ನ ಹೆಂಡತಿಯ ಮನೆಗೆ ಹೋಗೋಕೆ ರಜೆ ಕೊಡಿ ಇಲ್ಲಾಂದ್ರೆ ಪಕ್ಕಾ ಡಿವೋರ್ಸ್ ಸಿಗುತ್ತೆ ಅಂತೆಲ್ಲಾ ಲೆಟರ್ ಬರೆದಿದ್ದು ಸಖತ್ ವೈರಲ್ ಆಗಿತ್ತು. ಇದೀಗ ಇಂತಹದ್ದೇ ಇನ್ನೋರ್ವ ಪೊಲೀಸರ ಲೆಟರ್ ವೈರಲ್ ಆಗ್ತಾ ಇದೆ. ಏನು ಅಂತ ತಿಳ್ಕೋಬೇಕಾ? ಈ ಸ್ಟೋರಿ ಫುಲ್ ಓದಿ.
ಇದನ್ನೂ ಓದಿ: ಹೆಚ್ಚಾಗ್ತಾ ಇರುವ ಬಿಸಿಲಿನಿಂದ ನಾಶವಾಗ್ತಿದೆ ಸಾವಿರಾರು ಗಿಡಗಳು, ವರದಿ ಬಿಚ್ಚಿಟ್ಟ ರಹಸ್ಯ ಇದು!
ಮದುವೆಯಾಗಿ 22 ವರ್ಷ ಕಳೆದರೂ ಒಂದು ಬಾರಿ ಹೆಂಡತಿಯ ತವರು ಮನೆಯಲ್ಲಿ ನಡೆಯುವ ಸಂಭ್ರಮದ ಹೋಳಿ ಹಬ್ಬಕ್ಕೆ ಹೋಗೋಕೆ ಆಗಿಲ್ಲ. ಈ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಇನ್ಸ್‌ಪೆಕ್ಟರ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಲೆಟರ್ ಹಿಂದಿ ಭಾಷೆಯಲ್ಲಿದೆ. ಪೋಲೀಸರು ಬರೆದ ಈ ಎಮೋಷ್ನಲ್ ಲೆಟರ್ಗೆ ಕರಗದವರ್ಯಾರು ಎಂಬೆಲ್ಲಾ ಟ್ವಿಟ್ಟರ್ನಲ್ಲಿ ಕಮೆಂಟ್ಗಳು ಬಂದಿವೆ. ಮುಂದೆ ಅವರಿಗೆ ರಜೆ ಸಿಕ್ಕಿತೋ ಇಲ್ವೋ ಎಂಬ ಅಪ್ಡೇಟ್ ಕೂಡ ಸಿಗಲ್ಲಿಲ್ಲ.
ಇದರಿಂದ ಸಿಟ್ಟಿಗೆದ್ದ ಆಕೆ ಈ ಸಲ ತವರಲ್ಲಿ ಗಂಡನ ಜೊತೆ ಹೋಳಿ ಹಬ್ಬದಲ್ಲಿ ಭಾಗವಹಿಸುವಂತೆ ಹಠ ಹಿಡಿದಿದ್ದಾಳೆ. ಅವರ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಇನ್ಸ್ ಪೆಕ್ಟರ್ ಪತ್ರದಲ್ಲಿ ಬರೆದಿದ್ದಾರೆ. ಮಾರ್ಚ್ 4 ರಿಂದ 10 ದಿನಗಳ ಕಾಲ ರಜೆ ನೀಡುವಂತೆ ಇನ್ಸ್‌ಪೆಕ್ಟರ್ ಎಸ್‌ಪಿಗೆ ತಿಳಿಸಿದ್ದಾರೆ.
ಇಷ್ಟು ವರ್ಷಗಳಲ್ಲಿ ಒಂದು ಬಾರಿ ಕೂಡ ಹೆಂಡತಿಯೊಂದಿಗೆ ಹೋಳಿ ಹಬ್ಬದಲ್ಲಿ ಭಾಗವಹಿಸಲು ಆಗಲಿಲ್ಲ, ಈ ವರ್ಷ ಹೋಳಿ ಹಬ್ಬದಂದು ಪತ್ನಿ ತನ್ನ ತಾಯಿಯ ಮನೆಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಆದ್ದರಿಂದ 10 ದಿನ ದಯವಿಟ್ಟು ರಜೆ ನೀಡಿ ಎಂದು ಲೆಟರ್ನಲ್ಲಿ ಬರೆದುಕೊಂಡಿದ್ದಾರೆ. ಪೊಲೀಸರೊಬ್ಬರ ರಜೆಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಾ ಇದೆ.
ಈ ಲೆಟರ್ ಓದಿ ಆದ್ಮೇಲೆ ಬಹುಶಃ ರಜೆ ನೀಡಿರಬಹುದೇನೋ. ಯಾಕೆಂದರೆ ಅಷ್ಟು ಭಾವನಾತ್ಮಕವಾಗಿ ಈ ಲೆಟರ್ ಇದೆ. ಇದು ಸಧ್ಯಕ್ಕೆ ವೈರಲ್ ಆಗಿರೋ ಸ್ಟೋರಿ. ಇನ್ನೂ ಬೆಳಕಿಗೆ ಬಾರದೇ ಇರುವ ಸ್ಟೋರಿ ಸಾಕಷ್ಟು ಇರಬಹುದೇನೋ. ಹೀಗೆ ರಜೆ ಸಿಗದೇ ಪಾಪ ಅದೆಷ್ಟು ಜನರು ಕೆಲಸ ಮಾಡ್ತಾ ಇದ್ದಾರೋ ಗೊತ್ತಿಲ್ಲ ಈ ಸಮಾಜದಲ್ಲಿ. ಇದಂತು ಫುಲ್ ವೈರಲ್ ಆಗ್ತಾ ಇದೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ