ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವ್ಯಕ್ತಿಗೆ ಈಗ ಸಿಕ್ಕಾಪಟ್ಟೆ ಪ್ರಪೋಸಲ್​

ಕುಳ್ಳಗಿರುವ ಕಾರಣಕ್ಕೆ ಇವರ ಮದುವೆಯ ಮನವಿಯನ್ನು ಎಲ್ಲಾ ಹುಡುಗಿಯರೂ ತಿರಸ್ಕರಿದ್ದಾರೆ. ಇದರಿಂದ ಬೇಸತ್ತ ಇವರು ಉತ್ತರಪ್ರದೇಶದ ಶಮ್ಲಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ನನ್ನ ಮದುವೆಗೆ ಸಹಕರಿಸುವಂತೆ ಮಹಿಳಾ ಪೊಲೀಸರ ಹತ್ತಿರ ಕೇಳಿಕೊಂಡಿದ್ದ. ಈ ವಿಡಿಯೋ ವೈರಲ್ ಆಗುತ್ತಿದೆ.

ದೂರು ದಾಖಲಿಸಿದ ವ್ಯಕ್ತಿ

ದೂರು ದಾಖಲಿಸಿದ ವ್ಯಕ್ತಿ

 • Share this:
  ನಾವು ಪೊಲೀಸ್ ಠಾಣೆಗೆ ಕಳ್ಳತನವಾಗಿದೆ ಎಂದೋ, ಯಾರೋ ಮೋಸ ಮಾಡಿದ್ದಾರೆ ಎಂದೋ ಅಥವಾ ಕೊಲೆ ಪ್ರಕರಣಕ್ಕೋ ಒಟ್ಟಿನಲ್ಲಿ ಯಾವುದೋ ಅಪರಾಧಿ ಪ್ರಕರಣಗಳ ಕಾರಣ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ ರಕ್ಷಣೆ ಅಥವಾ ಸಹಾಯ ಕೋರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ವಧು-ವರ ಅನ್ವೇಷಣಾ ವೇದಿಕೆಗೆ ಹೋಗದೆ ನನಗೆ ಸರಿ ಹೊಂದುವಂತಹ ಹುಡುಗಿ (ವಧು) ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಈ ವಿಡಿಯೋ ವೈರಲ್‌ ಆದ ಬಳಿಕ ಈಗ ಆತನಿಗೆ ಹಲವು ಪ್ರಪೋಸಲ್‌ ಬರುತ್ತಿದೆ ಎಂದು ತಿಳಿದುಬಂದಿದೆ.

  ಹೌದು, ಈ ಘಟನೆ ನಡೆದದ್ದು, ಉತ್ತರಪ್ರದೇಶದ ಕೈರಾನಾದಲ್ಲಿ. ಅಜೀಮ್ ಮಂಸೂರಿ ಎಂಬಾತನೇ ವಧುವಿಗಾಗಿ ಪೊಲೀಸ್ ಮೊರೆ ಹೋದ ವ್ಯಕ್ತಿ. ಎರಡು ಅಡಿ ಎತ್ತರವಿರುವ ಈತನಿಗೆ ಮದುವೆಗೆ ಹುಡುಗಿ ಸಿಗುವುದೇ ಸಮಸ್ಯೆಯಾಗಿದೆ.

  ಕಾಸ್ಮೆಟಿಕ್ಸ್ ಮತ್ತು ಬ್ಯೂಟಿ ಪ್ರಾಡಕ್ಟ್ಸ್‌ ಅಂಗಡಿಯ ಮಾಲೀಕನಾದ ಅಜೀಮ್ ಮಂಸೂರಿ ಅವರು ಗಜಿಯಾಬಾದ್, ಬುಲಂದ್‌ಶಾರ್ ದೆಹಲಿ, ಬಿಹಾರ್ ಸೇರಿದಂತೆ ದೇಶಾದ್ಯಂತ ಸಾಕಷ್ಟು ಕಡೆ ಹುಡುಗಿ ಹುಡುಕಿದ್ದಾರೆ. ಕುಳ್ಳಗಿರುವ ಕಾರಣಕ್ಕೆ ಇವರ ಮದುವೆಯ ಮನವಿಯನ್ನು ಎಲ್ಲಾ ಹುಡುಗಿಯರೂ ತಿರಸ್ಕರಿದ್ದಾರೆ. ಇದರಿಂದ ಬೇಸತ್ತ ಇವರು ಉತ್ತರಪ್ರದೇಶದ ಶಮ್ಲಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ನನ್ನ ಮದುವೆ ಸಹಕರಿಸುವಂತೆ ಮಹಿಳಾ ಪೊಲೀಸರ ಹತ್ತಿರ ಕೇಳಿಕೊಂಡಿದ್ದ. ಈ ವಿಡಿಯೋ ವೈರಲ್ ಆಗುತ್ತಿದೆ.

  ಅಜೀಮ್ ಅವರ ಮನವಿಗೆ ಪ್ರತಿಕ್ರಿಯಿಸಿದ್ದ ಪೊಲೀಸ್ ನೀರಜ್ ಚೌಧರಿ ಅವರು, ‘ನಾವು ಯಾರಿಗೂ ಮದುವೆ ಮಾಡಿಸುವುದಿಲ್ಲ. ಹುಡುಗ ಹುಡುಗಿಯ ನಡುವೆ ಏನಾದರೂ ಮನಸ್ತಾಪ ಅಥವಾ ಜಗಳ ನಡೆದರೆ ಇತ್ಯರ್ಥಪಡಿಸುತ್ತೇವೆಯೇ ಹೊರತು ಮದುವೆ ಮಾಡಿಸುವ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದ್ದರು.

  ಬಿಲ್​ಗಳ ಸ್ವಯಂ ಪಾವತಿ ವಿಚಾರ: ಸೆ.30ರವರೆಗೆ ಗಡುವು ವಿಸ್ತರಿಸಿದ ಆರ್​ಬಿಐ

  ಇನ್ನು ಪೊಲೀಸ್ ಅಧಿಕಾರಿ ಸತ್ಪಾಲ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಅಜೀಮ್ ಇವರ ಬಳಿಯೂ ಮದುವೆ ಕುರಿತು ಮಾತನಾಡಿ, ಸಮಾಜ ಸೇವೆ ಮಾಡುವ ನೀವು ನನಗೆ ಹುಡುಗಿ ಹುಡುಕಿ ಕೊಡಿ ಎಂದು ಕೇಳಿದ್ದರು. ಇದಕ್ಕೆ ನಾವು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ, ನಮ್ಮಲ್ಲಿ ಸಾಧ್ಯವಾದರೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದರು.

  ಅಲ್ಲದೇ ಇದೇ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿಯೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳಿಗೂ ಮದುವೆ ಬಗ್ಗೆ ಪ್ರಸ್ತಾಪಿಸಿ ವಿನಂತಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ದುಡಿದ ಹಣವನ್ನೆಲ್ಲಾ ಹುಡುಗಿ ಹುಡುಕುವುದರಲ್ಲೇ ವ್ಯಯಿಸುತ್ತಿದ್ದ ಅಜೀಮ್, ನನ್ನ ಮದುವೆಯನ್ನು ಮನೆಯವರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ದೂರಿದ್ದರು.

  ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಅಜೀಮ್ ಸಹೋದರ ಮಹಮ್ಮದ್ ನಯೀಮ್, ನನ್ನ ಅಣ್ಣ ಎಲ್ಲ ರೀತಿಯ ಕೆಲಸಗಳನ್ನು ಅವರ ಸಾಮರ್ಥ್ಯಕ್ಕನುಗುಣವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಹುಡುಗಿಯರು ಅವರನ್ನು ಮದುವೆಯಾಗಲು ಮುಂದಾಗಬೇಕು, ಈಗಾಗಲೇ ಕೆಲವು ಹುಡುಗಿಯರ ಪ್ರಸ್ತಾಪಗಳು ಬರುತ್ತಿದೆ ಎಂದು ಹೇಳಿದರು.

  ಇದೀಗ ಮುದುವೆಯಾಗುವುದಾಗಿ ಹುಡುಗಿಯರೇ ತಾ ಮುಂದು ನಾ ಮುಂದು ಎಂದು ಬರುತ್ತಿದ್ದಾರೆ. ಇದೀಗ ಯಾವ ಹುಡುಗಿಯನ್ನು ಮದುವೆಯಾಗುವುದು ಎಂಬ ಗೊಂದಲದಲ್ಲಿದ್ದಾರೆ ಅಜೀಮ್.

  ಅಜೀಮ್ ಯಾವ ಹುಡುಗಿಯನ್ನು ಒಪ್ಪಿಕೊಳ್ಳುತ್ತಾನೋ ಆ ಹುಡುಗಿಯೊಟ್ಟಿಗೆ ಮದುವೆ ಮಾಡಿಸುತ್ತೇವೆ ಎನ್ನುತ್ತಾರೆ ಇವರ ಕುಟುಂಬಸ್ಥರು. ಒಟ್ಟಿನಲ್ಲಿ ಮದುವೆಯಾಗುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದ ಅಜೀಮ್ ಮದುವೆಗೆ ಸಿದ್ಧವಾಗುತ್ತಿದ್ದಾರೆ.
  Published by:Latha CG
  First published: