ಎಸ್‌ಐ ಪರೀಕ್ಷೆ ವೇಳೆ HighTech ಕಾಪಿ ಮಾಡಿ ಸಿಕ್ಕಿ ಬಿದ್ದ ಖದೀಮ...! ಹೇಗೆ ಗೊತ್ತೇ? ವಿಡಿಯೋ ನೋಡಿ

"ಉತ್ತರ ಪ್ರದೇಶದ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ವಂಚಿಸಲು ಯತ್ನಿಸಿದ ವ್ಯಕ್ತಿಯ ಅದ್ಬುತ ಬೇಟೆ" ಎಂದು ಐಪಿಎಸ್ ಅಧಿಕಾರಿ ರುಪಿನ್ ಶರ್ಮ ಪೊಲೀಸರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.

ಹೈಟೆಕ್ ಕಾಪಿ ಮಾಡಿ ಸಿಕ್ಕಿಬಿದ್ದ ಕಳ್ಳ

ಹೈಟೆಕ್ ಕಾಪಿ ಮಾಡಿ ಸಿಕ್ಕಿಬಿದ್ದ ಕಳ್ಳ

  • Share this:
ಸಾಮಾನ್ಯ ಶಿಕ್ಷಣದಲ್ಲಿ ನಕಲು ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ಸಂಗತಿಯಾಗಿ ಬದಲಾಗಿದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ( Competitive examination) ಈ ಪಿಡುಗು ಕೊಂಚ ಕಡಿಮೆ ಎನ್ನಬಹುದು. ಆದರೆ ಕಳ್ಳರು, ವಂಚಕರು, ಸಮಾಜದ್ರೋಹಿಗಳನ್ನು ಶಿಕ್ಷಿಸಬೇಕಾದ ಗುರುತರ ಜವಾಬ್ದಾರಿ ಹೊಂದಿರುವ ಸಬ್ ಇನ್ಸ್‌ಪೆಕ್ಟರ್ (Sub-inspector) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದ ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬ ತನ್ನ ಹೈಟೆಕ್ ( High-tech) ನಕಲುತನದಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಘಟನೆಯ ವಿವರ
ಇತ್ತೀಚೆಗೆ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಾಗಿ ಉತ್ತರ ಪ್ರದೇಶ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಿತ್ತು. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಆಕಾಂಕ್ಷಿಯೊಬ್ಬ ತನ್ನ ವಿಗ್‌ನಲ್ಲಿ ನಿಸ್ತಂತು ಸಾಧನ ಅಡಗಿಸಿಟ್ಟುಕೊಂಡು ಪರೀಕ್ಷೆಯಲ್ಲಿ ನಕಲು ಮಾಡುವ ಪ್ರಯತ್ನದಲ್ಲಿದ್ದಾಗ ತಪಾಸಣಾ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ: Onlineನಲ್ಲಿ ಹೋಮ ಮಾಡ್ಸಿದ್ರೆ ನಿಂಗೆ ದೊಡ್ಡ ಕೆಲಸ ಸಿಗುತ್ತೆ: ಹೀಗೆ ಹೇಳಿ 38 ಲಕ್ಷ ಪಂಗನಾಮ ಹಾಕಿದ ದೇವಮಾನವ!

ಹೈಟೆಕ್ ಬ್ಲೂಟೂತ್ ಸಾಧನ
ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಯು ತನ್ನ ವಿಗ್‌ನಲ್ಲಿ ಹೈಟೆಕ್ ಬ್ಲೂಟೂತ್ ಸಾಧನ ಅಡಗಿಸಿಟ್ಟುಕೊಂಡು ನಕಲು ಮಾಡುವ ಹುನ್ನಾರ ಹೊಂದಿದ್ದ. ಅಭ್ಯರ್ಥಿಯನ್ನು ಲೋಹ ಪರೀಕ್ಷೆಗೆ ಒಳಪಡಿಸುವಾಗ ಪೊಲೀಸ್ ಪೇದೆಯೊಬ್ಬನ ಗಮನಕ್ಕೆ ಈ ಸಂಗತಿ ಬಂದಿದೆ‌. ಆ ಕೂಡಲೇ ಅಭ್ಯರ್ಥಿ ಧರಿಸಿದ್ದ ವಿಗ್ ಕಳಚಿರುವ ಪೊಲೀಸ್ ಪೇದೆ, ವಿಗ್‌ನಲ್ಲಿ ಹೈಟೆಕ್ ಬ್ಲೂಟೂತ್ ಸಾಧನ ಇರುವುದನ್ನು ಪತ್ತೆ ಹಚ್ಚಿದ್ದಾನೆ. ಆ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡುವ ಆತನ ಜಾಣತನ ಕೈಕೊಟ್ಟಿದೆ.

ವಿಡಿಯೋ ನೋಡಿ:

ಅನೇಕರಿಗೆ ಇನ್ನೂ ನಂಬುತ್ತಿಲ್ಲ
ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಅಭ್ಯರ್ಥಿಯು ನಕಲಿಗಾಗಿ ಆಯ್ದುಕೊಂಡಿರುವ ದಾರಿಯನ್ನು ಅನೇಕರಿಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಆದರೆ, ಅಭ್ಯರ್ಥಿಯನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಿರುವ ರಕ್ಷಣಾ ಸಿಬ್ಬಂದಿ ಆತನ ಹೈಟೆಕ್ ವಂಚನೆ ಬಯಲುಗೊಳಿಸಿದ್ದಾರೆ. ಅಭ್ಯರ್ಥಿಯು ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ತಿಳಿಯಲು ತನ್ನ ವಿಗ್‌ನಲ್ಲಿ ತೀರಾ ಪುಟ್ಟದಾದ ಇಯರ್ ಫೋನ್‌ಗಳನ್ನು ತುರುಕಿಕೊಂಡಿದ್ದ. ಅದಕ್ಕಾಗಿ ಹೈಟೆಕ್ ಬ್ಲೂಟೂತ್ ಸಾಧನ ಅಡಗಿಸಿಟ್ಟುಕೊಂಡಿದ್ದ. ಆತನ ತಂತ್ರ ತೀರಾ ವಿನೂತನವಾಗಿದ್ದರೂ, ಇಂತಹ ವಂಚನೆಗಳನ್ನು ಪತ್ತೆ ಹಚ್ಚುವಲ್ಲಿ ತೀರಾ ಪರಿಣತರಂತಿರುವ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳನ್ನು ಯಾಮಾರಿಸುವಲ್ಲಿ ವಿಫಲವಾಗಿದೆ.

ವ್ಯವಸ್ಥೆ ಬುಡಮೇಲು
ಈ ಕುರಿತು ವಿಡಿಯೋವೊಂದನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಅಭ್ಯರ್ಥಿಯು ತನ್ನ ತಲೆಯ ಮೇಲೆ ಧರಿಸಿದ್ದ ವಿಗ್‌ನಲ್ಲಿ ಕೇಳಿಸಿಕೊಳ್ಳಲು ಸಾಧ್ಯವಾಗುವಂತಹ ಇಯರ್ ಫೋನ್‌ಗಳನ್ನು ಪತ್ತೆ ಹಚ್ಚಿದ್ದಾರೆ. ವಿಗ್‌ನಲ್ಲಿ ಅಡಗಿಸಿಡಲಾಗಿದ್ದ ಇಯರ್ ಫೋನ್ ಹೊರತೆಗೆಯುವುದು ಎಷ್ಟು ಕ್ಲಿಷ್ಟಕರವಾಗಿತ್ತು ಎಂಬುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ವ್ಯವಸ್ಥೆಯನ್ನು ಬುಡಮೇಲು ಮಾಡಲು ತೀರಾ ಚಾಣಾಕ್ಷವಾಗಿ ವರ್ತಿಸಿರುವ ಅಭ್ಯರ್ಥಿಯು ತನ್ನ ಕಿವಿಯ ಆಳದಲ್ಲಿ ಹೈಟೆಕ್ ಬ್ಲೂಟೂತ್ ಸಾಧನ ಅಳವಡಿಸಿಕೊಂಡಿದ್ದರು.

ಪೊಲೀಸರು ಹರಸಾಹಸ
ಒಂದು ವೇಳೆ ಅಭ್ಯರ್ಥಿಯು ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದ್ದ ಲೋಹ ತಪಾಸಣೆ ತಪ್ಪಿಸಿಕೊಂಡಿದ್ದರೆ ಆತನ ಹೈಟೆಕ್ ವಂಚನೆ ಬಯಲಾಗುವುದು ಅಸಾಧ್ಯವಾಗಿತ್ತು. ಲೋಹ ತಪಾಸಣಾ ಸಾಧನವು ಅಭ್ಯರ್ಥಿಯ ತಲೆ ಬಳಿ ಹೋಗುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿಗಳಿಗೆ ಅನುಮಾನ ಶುರುವಾಗಿದೆ. ಆಗ ಸಿಕ್ಕಿಬಿದ್ದಿರುವ ಅಭ್ಯರ್ಥಿಯು, ಚಿಪ್‌ಗೆ ಸಂಪರ್ಕ ಹೊಂದಿರುವ ಗ್ಯಾಜೆಟ್ ಅನ್ನು ತನ್ನ ಎರಡೂ ಕಿವಿಗಳಲ್ಲಿ ಅಳವಡಿಸಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಗ್ಯಾಜೆಟ್ ಎಷ್ಟು ಸೂಕ್ಷ್ಮವಾಗಿತ್ತೆಂದರೆ, ಅವುಗಳನ್ನು ಆತನ ಕಿವಿಯಿಂದ ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಶಾದಿ ಡಾಟ್ ಕಾಮ್​​ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’.. ಎಲ್ಲಾ ಕಳೆದುಕೊಂಡು ಪತ್ನಿಯ ಕಣ್ಣೀರು!

ಅದ್ಬುತ ಬೇಟೆ
"ಉತ್ತರ ಪ್ರದೇಶದ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ವಂಚಿಸಲು ಯತ್ನಿಸಿದ ವ್ಯಕ್ತಿಯ ಅದ್ಬುತ ಬೇಟೆ" ಎಂದು ಐಪಿಎಸ್ ಅಧಿಕಾರಿ ರುಪಿನ್ ಶರ್ಮ ಪೊಲೀಸರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಆ ವ್ಯಕ್ತಿಯ ಕಿವಿಯಲ್ಲಿದ್ದ ಸಾಧನವನ್ನು ಹೇಗೆ ಹೊರತೆಗೆದರು ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಆ ವ್ಯಕ್ತಿ ಸರ್ಕಾರಿ ನೌಕರಿ ಪಡೆಯಲು ತೆಗೆದುಕೊಂಡಿರುವ ವಿಪರೀತ ಶ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
Published by:vanithasanjevani vanithasanjevani
First published: