PM Modi: ಬೆದರುಬೊಂಬೆಗೆ ಮೋದಿ-ಅಮಿತ್ ಶಾ ಚಿತ್ರ ಅಂಟಿಸಿದ ವ್ಯಕ್ತಿ, ವಾಟ್ಸಪ್ ಸ್ಟೇಟಸ್​ನಿಂದ ನೇರ ಜೈಲಿಗೆ!

Man used Modi-Amit Shah's picture: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಿಡಿಗೇಡಿಗಳು ಮೆಸೆಂಜರ್ ಆ್ಯಪ್ ನಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ನ ಮುಖ್ಯಸ್ಥರಾದ ಮೋಹನ್ ಭಾಗವತ್ ಮತ್ತು ಇತರರ ಮುಖಗಳನ್ನು ಬೆದರು ಬೊಂಬೆಯಲ್ಲಿ ಅಂಟಿಸಿರುವುದನ್ನು ಕಾಣಬಹುದು.

ಮೋದಿ-ಅಮಿತ್ ಶಾ

ಮೋದಿ-ಅಮಿತ್ ಶಾ

  • Share this:
ಉತ್ತರ ಪ್ರದೇಶ: ಇತ್ತೀಚೆಗೆ ದೊಡ್ಡ ದೊಡ್ಡ ರಾಜಕಾರಣಿಗಳ (Political Leaders) ಮತ್ತು ಸರ್ಕಾರದ ಉನ್ನತ ಸ್ಥಾನದಲ್ಲಿರುವ ಜನಪ್ರಿಯ ವ್ಯಕ್ತಿಗಳ ಭಾವಚಿತ್ರವನ್ನು ಕತ್ತರಿಸಿ ಬೇರೆ ಯಾವುದೋ ವ್ಯಕ್ತಿಯ ಶರೀರಕ್ಕೆ ಅಂಟಿಸುವುದು (Morphing) ಮತ್ತು ಹಾಸ್ಯಾಸ್ಪದವಾಗಿ ಅವರನ್ನು ಬಿಂಬಿಸುವಂತೆ ಮಾಡಿ ಈ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಮತ್ತು ಅದರ ಹಿಂದೆ ಮುಂದೆ ವಿಚಾರಿಸದೆ ಹಾಗೆಯೇ ಇನ್ನೊಬ್ಬರಿಗೆ ಕಳುಹಿಸುವುದು (Sharing on Whatsapp), ಇವೆಲ್ಲವೂ ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಇಂತಹ ಕೃತ್ಯಗಳನ್ನು ಮಾಡಿ ಅನೇಕ ಜನರು ಜೈಲಿಗೆ (Jailed) ಹೋಗಿರುವ ಘಟನೆಗಳು ನಡೆದಿವೆ. ಕೇವಲ ಹಾಸ್ಯಾಸ್ಪದವಾಗಿ ಒಬ್ಬರನ್ನು ಆಡಿಕೊಳ್ಳುವ ಒಂದು ಉದ್ದೇಶದಿಂದ ಕಿಡಿಗೇಡಿಗಳು ಹೀಗೆಲ್ಲಾ ಮಾಡಿ ಪೊಲೀಸರ ಅತಿಥಿಯಾಗುವುದನ್ನು ನೋಡಿದ್ದೇವೆ.

ಇಲ್ಲಿಯೂ ಒಬ್ಬ ವ್ಯಕ್ತಿ ಉತ್ತರ ಪ್ರದೇಶದಲ್ಲಿ ಹೀಗೆ ಮಾಡಿ ಜೈಲು ಪಾಲಾಗಿರುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಈ ವ್ಯಕ್ತಿ ಹಾಕಿದ್ದು ಯಾರ ಫೋಟೋ ಗೊತ್ತೇ? ಇವನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಖ್ಯಾತ ವ್ಯಕ್ತಿಗಳ ಭಾವಚಿತ್ರವನ್ನು ಮಾರ್ಫ್ ಮಾಡಿ ವಾಟ್ಸಆ್ಯಪ್‌ ನಲ್ಲಿ ಹಂಚಿಕೊಂಡಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ.

 ಕ್ರಿಯೇಟಿವ್ ಆಗಲು ಹೋದ ಉತ್ತರ ಪ್ರದೇಶದ ವ್ಯಕ್ತಿ

ಉತ್ತರ ಪ್ರದೇಶ ರಾಜ್ಯದಲ್ಲಿರುವ ಚಂದೌಸಿ ಪ್ರದೇಶದ ನಿವಾಸಿಯಾದ ಅಭಿಷೇಕ್ ಗುಪ್ತಾ ಎಂಬುವ ವ್ಯಕ್ತಿಯು ಈ ದೊಡ್ಡ ವ್ಯಕ್ತಿಗಳ ಭಾವಚಿತ್ರವನ್ನು ಸ್ವತಃ ತಾನೇ ಬದಲಾಯಿಸಿ ನಂತರ ತಮ್ಮ ವಾಟ್ಸಆ್ಯಪ್‌ ಸ್ಟೇಟಸ್ ಎಂದು ಹಂಚಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಚಕ್ರೇಶ್ ಮಿಶ್ರಾ ಅವರು ಶನಿವಾರದಂದು ತಿಳಿಸಿದ್ದಾರೆ.

ಇದನ್ನೂ ಓದಿ: Bhabesh Kalita| ಪೆಟ್ರೋಲ್ ಬೆಲೆ 200ಕ್ಕೆ ಏರಿದರೆ ಟ್ರಿಪಲ್ ರೈಡಿಂಗ್​ಗೆ ಅವಕಾಶ; ಅಸ್ಸಾಂ ಬಿಜೆಪಿ ಅಧ್ಯಕ್ಷನ ವಿಲಕ್ಷಣ ಹೇಳಿಕೆ!

ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಿಡಿಗೇಡಿಗಳು ಮೆಸೆಂಜರ್ ಆ್ಯಪ್ ನಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ನ ಮುಖ್ಯಸ್ಥರಾದ ಮೋಹನ್ ಭಾಗವತ್ ಮತ್ತು ಇತರರ ಮುಖಗಳನ್ನು ಬೆದರು ಬೊಂಬೆಯಲ್ಲಿ ಅಂಟಿಸಿರುವುದನ್ನು ಕಾಣಬಹುದು.

ಪ್ರಕರಣ ದಾಖಲು, ಆರೋಪಿ ಬಂಧನ

ಪೊಲೀಸರ ಪ್ರಕಾರ ಇದು ಮಾರ್ಫ್ ಮಾಡಿದ ಛಾಯಾಚಿತ್ರವಾಗಿದೆ. ಟ್ವಿಟ್ಟರ್‌ನಲ್ಲಿ ದೂರು ಪಡೆದ ನಂತರ ಪೊಲೀಸರು ಫೋಟೋಗಳನ್ನು ಹಾಕಿರುವವರ ವಿರುದ್ಧ ಕ್ರಮವನ್ನು ಕೈಗೊಂಡಿದ್ದಾರೆ. ಗುಪ್ತಾ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಈ ಸಂಬಂಧ ಚಂದೌಸಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೀಗೆ ಯಾರದ್ದೋ ಫೋಟೋಗಳನ್ನು ಬದಲಾಯಿಸಿ ಯಾರದ್ದೋ ಶರೀರಕ್ಕೆ ಹಾಸ್ಯಾಸ್ಪದವಾಗಿ ಅಂಟಿಸಿ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಡುವುದು ಮತ್ತು ವಾಟ್ಸಆ್ಯಪ್‌ ಸ್ಟೇಟಸ್ ಆಗಿ ಇರಿಸಿಕೊಳ್ಳುವುದು ಇದೇನೂ ಮೊದಲನೆಯ ಘಟನೆಯಲ್ಲ. ಹಿಂದೆಯೂ ಈ ರೀತಿಯ ಘಟನೆಗಳು ನಡೆದಿದ್ದು ಅನೇಕ ಜನರು ಹೀಗೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕೆ ಜೈಲು ಪಾಲಾಗಿದ್ದಾರೆ.
Published by:Soumya KN
First published: