Marriage Cancel: ವರಮಾಲೆ ಶಾಸ್ತ್ರದ ವೇಳೆ ಹಾರ ಎಸೆದಿದ್ದಕ್ಕೆ ಮದುವೆ ಕ್ಯಾನ್ಸಲ್! ವರನ ಮೇಲೆ ಸಿಟ್ಟಾಗಿ ವಧು ರಂಪಾಟ

ವರ ಹಾರ ಹಾಕುವ ಬದಲು ವರಮಾಲೆಯನ್ನು ವಧುವಿನ ಮೇಲೆ ಎಸೆದು ಬಿಟ್ಟಿದ್ದಾನೆ. ಇದಕ್ಕೆ ಕೋಪಗೊಂಡ ವಧು ಮದುವೆಯೇ ಬೇಡ ಎಂದು ರದ್ದುಗೊಳಿಸಿದ್ದಾಳೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈಗಿನ ಕಾಲದಲ್ಲಿ ಮದುವೆ (Marriage) ಅನ್ನೋ ಪದಕ್ಕೆ ಬೆಲೆನೇ ಇಲ್ಲದಂತಾಗಿದೆ. ಮದ್ವೆ ಆಗಿ ಸ್ವಲ್ಪ ಸಮಯ ಜೊತೆಗಿರ್ತಾರೆ ಆಮೇಲೆ ಏನೂ ಸರಿ ಬರ್ತಿಲ್ಲಾ ಅಂತ ಬಿಟ್ಟು ಬಿಡ್ತಾರೆ. ಇಷ್ಟ ಆದ್ರೆ ಓಕೆ. ಏನೋ ಮನಸ್ತಾಪ ಬಂದಿರಬೇಕು ಅದಕ್ಕೆ ದೂರವಾಗಿದ್ದರೆ ಎನ್ನಬಹುದು. ಆದರೆ ಈಗಿನ ವಿಚಿತ್ರಗಳನ್ನು ನೋಡಿದರೆ ನಿಜಕ್ಕೂ ಶಾಕ್ (Shock) ಆಗುತ್ತೆ. ಮದುವೆ ಆಗಿ 5 ನಿಮಿಷನೂ( 5 minutes)  ಆಗಿರಲ್ಲ. ಆಗ್ಲೇ ಬಿಡುವ ನಿರ್ಧಾರ ಮಾಡಿಬಿಡ್ತಾರೆ. ಇನ್ನೂ ಕೆಲವರು ಸರಿ ಬಂದಿಲ್ಲ ಅಂದ್ರೆ ಮದುವೆಯನ್ನೇ ರದ್ದು(Cancel) ಮಾಡಿಬಿಡ್ತಾರೆ ನೋಡಿ. ಹೀಗೆ ಇತ್ತೀಚಿನ ಭಾರತೀಯ ಮದುವೆ ಮನೆಗಳಲ್ಲಿ ಏನಾದರು ಒಂದು ಸಮಸ್ಯೆ, ಕೀಟಲೆ ಇದ್ದೇ ಇರುತ್ತೆ.

  ಮದುವೆ ಮಂಟಪಗಳಲ್ಲೇ ಮದುವೆ ನಿಲ್ಲೋ ಪ್ರಕರಣಗಳನ್ನು ನಾವು ಕೇಳಿರ್ತೀವಿ. ಮದುವೆ ಯಾಕೆ ರದ್ದಾಗಿದೆ ಅಂತಾ ಕಾರಣ ಕೇಳಿದ್ರೆ ಆಶ್ಚರ್ಯ ಆಗುತ್ತೆ. ಈ ಸಿಲ್ಲಿ ಕಾರಣಕ್ಕೆ ಮದುವೆ ನಿಲ್ಲಿಸಿದ್ರಾ ಅನ್ಸುತ್ತೆ. ವಿಚಿತ್ರ ಆದರೂ ಇವೆಲ್ಲಾ ನೈಜ ಘಟನೆಗಳು. ಈಗೆಲ್ಲಾ ಸಣ್ಣ ಸಣ್ಣ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತವೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲೂ ಇಂತದ್ದೇ ಪ್ರಕರಣ ನಡೆದಿದೆ.  ವಧು, ವರನು ತನ್ನ ಮೇಲೆ ವರಮಾಲೆಯನ್ನು ಎಸೆದ ಎಂಬ ಕಾರಣಕ್ಕೆ ಮದುವೇ ಮರಿದು ಬಿದ್ದಿದೆ.

  ವರಮಾಲೆ ಎಸೆದ ವರ ಮೇಲೆ ಸಿಟ್ಟಾದ ವಧು

  ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿನ ಸ್ಥಳೀಯ ಸಂಪ್ರದಾಯದಂತೆ ವರನು ವಧುವಿನ ಕೊರಳಿಗೆ ವರಮಾಲೆ ಅಂದರೆ ಹಾರವನ್ನು ಹಾಕಬೇಕು. ವರ ಹೀಗೆ ಹಾರ ಹಾಕುವ ಬದಲು ವರಮಾಲೆಯನ್ನು ವಧುವಿನ ಮೇಲೆ ಎಸೆದು ಬಿಟ್ಟಿದ್ದಾನೆ. ಆಮೇಲೆ ಇನ್ನೇನು.. ಕೋಪಗೊಂಡ ವಧು ಮದುವೆಯೇ ಬೇಡ ಎಂದು ರದ್ದುಗೊಳಿಸಿದ್ದಾಳೆ.

  ಮದುವೆ ಕ್ಯಾನ್ಸಲ್​!

  ವರಮಾಲೆ ಸಮಾರಂಭದಲ್ಲಿ ವರನ ನಡೆಯ ಬಗ್ಗೆ ಕಿಡಿಕಾರಿದ ವಧು ಮದುವೆ ನಿಲ್ಲಿಸಿದ್ದಾಳೆ. ಈ ಘಟನೆಯು ಬಿಧುನಾ ಪೊಲೀಸ್ ವೃತ್ತದ ವ್ಯಾಪ್ತಿಯ ನವೀನ್ ಬಸ್ತಿಯಲ್ಲಿ ನಡೆದಿದೆ. ವಧುವನ್ನು ಸಮಾಧಾನ ಮಾಡಿ ಮದುವೆಯ ವಿಧಿವಿಧಾನಗಳನ್ನು ಮುಂದುವರಿಸಲು ಕುಟುಂಬಗಳು ಮನವೊಲಿಸಿದರು. ಆದರೆ ಪಟ್ಟು ಬಿಡದ ಹೆಣ್ಣು ಮದುವೆ ಬೇಡ ಎಂದು  ಹೇಳಿದ್ದಾಳೆ.

  ಇದನ್ನೂ ಓದಿ: ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

  ಎರಡೂ ಕುಟುಂಬಗಳ ನಡುವೆ ಕಿತ್ತಾಟ!

  ವಧು ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ನಡುವೆ ಜಗಳ ಸಹ ನಡೆಯಿತು. ಇನ್ನು ವರನು ವರಮಾಲೆಯನ್ನು ಎಸೆದಿರುವ ಬಗ್ಗೆ ನಿರಾಕರಿಸಿದನು. ಕುಟುಂಬಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿದ್ದು, ಪ್ರಕರಣವನ್ನು ಬಗೆಹರಿಸಲು ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ಎರಡೂ ಕುಟುಂಬಗಳು ಬೇರೆಯಾಗುವ ಮೊದಲು ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು ಹಿಂದಿರುಗಿಸಿದರು.

  ಸಣ್ಣ ಕಾರಣಕ್ಕೆ ಮುರಿದುಬಿದ್ದ ಮದುವೆ

  ಇಂಥ ಪ್ರಕರಣಗಳು ಇದೇ ಮೊದಲೇನಲ್ಲ, ಅದೆಷ್ಟೋ ಮದುವೆಗಳು ಕ್ಷುಲ್ಲಕ ಕಾರಣಕ್ಕೆ ನಿಂತು ಹೋಗುತ್ತವೆ. ಜಾರ್ಖಂಡ್‌ನ ರಾಂಚಿಯಲ್ಲಿ ಸಿಂಧೂರ್ ಸಮಾರಂಭದ ಮೊದಲು ವಧು ಮಂಟಪದಿಂದ ಹೊರನಡೆದರು. ಕಾರಣ ಕೇಳಿದ್ರೆ ವರ ಇಷ್ಟವಿಲ್ಲ ಎಂದು ಸುಮ್ಮನಾದಳು. ವಧು ಮತ್ತು ವರನ ಕುಟುಂಬದವರು ಆಕೆಯ ನಿರ್ಧಾರವನ್ನು ಬದಲಾಯಿಸುವಲ್ಲಿ ವಿಫಲ ಪ್ರಯತ್ನವಾಯಿತು. ಆದರೆ ವರನ ಕಡೆಯವರು ಮದುವೆಗೆ ಖರ್ಚು ಮಾಡಿದ ಹಣವನ್ನು ನೀಡುವಂತೆ ಒತ್ತಾಯಿಸಿದರು. ಇದಕ್ಕೆ ವಧು ಕುಟುಂಬ ಒಪ್ಪಲಿಲ್ಲ.

  ಉತ್ತರ ಪ್ರದೇಶದ ಬಲ್ಲಿಯಾದಲ್ಲೂ ಇಂತದ್ದೇ ಘಟನೆ ನಡೆದಿತ್ತು. ವರ ಗುಟ್ಕಾ ಜಗಿಯುತ್ತಿದ್ದ ಎಂಬ ಕಾರಣಕ್ಕೆ ವಧು ಮದುವೆ ರದ್ದುಗೊಳಿಸಿದ್ದಳು. ಇಲ್ಲೂ ಕೂಡ ಪರಸ್ಪರ ಹಂಚಿಕೊಂಡಿದ್ದ ಉಡುಗೊರೆಗಳನ್ನು ಹಿಂದಿರುಗಿಸಲಾಯಿತು.

  ಇದನ್ನೂ ಓದಿ: Viral Video: ಮದುವೆಗೆ ವರನ ಸ್ನೇಹಿತರು ಕೊಟ್ಟ ಗಿಫ್ಟ್ ಏನು? ಇಲ್ಲಿದೆ ನೋಡಿ ಟ್ವಿಸ್ಟ್

  ತಮಿಳುನಾಡಿನಲ್ಲಿ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ವರ ವಧುವಿಗೆ ಕಪಾಳಮೋಕ್ಷ ಮಾಡಿದ್ದ. ಈ ಘಟನೆ ನಡೆದ ಬಳಿಕ ವಧು ಅದೇ ಮಂಟಪದಲ್ಲಿ ಮೊದಲ ಹುಡುಗನನ್ನು ಬಿಟ್ಟು ಸೋದರ ಸಂಬಂಧಿಯನ್ನು ಮದುವೆಯಾದಳು.

  ಈ ಪ್ರಕರಣಗಳನ್ನು ಕೇಳುವ ನಮಗೆ ಇದು ವಿಚಿತ್ರ ಅನ್ನಿಸಬಹುದು. ಆದರೆ ನಮ್ಮ ನಿಮ್ಮ ಸುತ್ತಮುತ್ತಾನೇ ಈ ಘಟನೆಗಳು ನಡೆಯುತ್ತಿವೆ.
  Published by:Pavana HS
  First published: