Viral Photo: ಅನಾರೋಗ್ಯದಿಂದ ತಡವಾಗಿ ಆರ್ಡರ್ ಮಾಡಿದ ಗ್ರಾಹಕ… ಆದ್ರೆ ರೆಸ್ಟೋರೆಂಟ್ ಹೇಗೆ ಪ್ರತಿಕ್ರಿಯಿಸಿದೆ ಗೊತ್ತಾ?

Viral Photo: ಅನಾರೋಗ್ಯದಿಂದ ಬಳಲುತ್ತಿರುವ ಆಸ್ಟ್ರೇಲಿಯದ ನಿವಾಸಿಯೊಬ್ಬ ಮತ್ತು ರೆಸ್ಟೋರೆಂಟ್‌ನಿಂದ ಬಂದಂತಹ ಪ್ರತಿಕ್ರಿಯೆ ಒಳಗೊಂಡ ಹೃದಯಸ್ಪರ್ಶಿ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಆ ಪೋಸ್ಟ್ ಹೇಗೆ ವೈರಲ್ ಆಗಿದೆ ನೋಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಕೆಲವೊಮ್ಮೆ ನಾವು ಹೋಟೆಲ್‌ನಿಂದ (Hotel) ನಮಗೆ ಇಷ್ಟವಿರುವ ಆಹಾರವನ್ನು ಆರ್ಡರ್ (Food Order) ಮಾಡಿ, ಸ್ವಲ್ಪ ತಡವಾಗಿ ಆ ಊಟ ನಮ್ಮ ಕೈಗೆ ಸೇರಿದರೂ ನಾವು ಆ ಡೆಲಿವರಿ ಬಾಯ್ (Delivery Boy) ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು ರೇಗಾಡುತ್ತೇವೆ. ಅದೇ ನಾವು ತಡವಾಗಿ ಹೋಟೆಲ್‌ ಮುಚ್ಚುವ ಸಂದರ್ಭದಲ್ಲಿ ನಾವು ಆರ್ಡರ್ ಮಾಡಿದರೆ ಅವರಿಗೆ ಕೋಪ ಬರಲ್ವಾ? ಇಲ್ನೋಡಿ ಈ ಗ್ರಾಹಕ ಹೋಟೆಲ್‌ ಮುಚ್ಚುವ ಮೊದಲು ತನ್ನ ಆಹಾರ ಆರ್ಡರ್ ಮಾಡಿದ್ದು, ಹೋಟೆಲ್‌ನವರು ಅವರಿಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ನೀವೇ ನೋಡಿ.

    ಅನಾರೋಗ್ಯದಿಂದ ಬಳಲುತ್ತಿರುವ ಆಸ್ಟ್ರೇಲಿಯದ (Australia) ನಿವಾಸಿಯೊಬ್ಬ ಮತ್ತು ರೆಸ್ಟೋರೆಂಟ್‌ನಿಂದ ಬಂದಂತಹ ಪ್ರತಿಕ್ರಿಯೆ ಒಳಗೊಂಡ ಹೃದಯಸ್ಪರ್ಶಿ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಆ ಪೋಸ್ಟ್ ಹೇಗೆ ವೈರಲ್ ಆಗಿದೆ ನೋಡಿ.

    ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಬಹಳ ತಡವಾಗಿ ಆಹಾರವನ್ನು ಆರ್ಡರ್ ಮಾಡಿದ್ದನು ಮತ್ತು ರೆಸ್ಟೋರೆಂಟ್ ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಮುಚ್ಚಲಿತ್ತು. ಗ್ರಾಹಕ ತಾನು ಬರೆದ ಟಿಪ್ಪಣಿಯಲ್ಲಿ ಸಿಬ್ಬಂದಿಗೆ ಆರ್ಡರ್ ರದ್ದುಗೊಳಿಸಬಹುದು ಎಂದು ಹೇಳಿದ್ದರು. ಆದರೆ ಹಾಗೆ ಮಾಡಿದರೆ ಅದು ಅವರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಬರೆದಿದ್ದರು.

    ಆದರೆ ಆಹಾರವನ್ನು ಆರ್ಡರ್ ಮಾಡುವಾಗ ಆ ವ್ಯಕ್ತಿಯ ಚಿಂತನಶೀಲ ಟಿಪ್ಪಣಿಯನ್ನು ರೆಸ್ಟೋರೆಂಟ್ ತುಂಬಾ ದಯೆಯಿಂದ ನೋಡಿದ್ದು, ಅವರು ಅವನು ನೀಡಿದ ಆರ್ಡರ್ ಪಡೆದುಕೊಂಡು ಆಹಾರದ ಒಟ್ಟಿಗೆ ಕೆಲವು ಗಾರ್ಲಿಕ್‌ ಬ್ರೆಡ್ ಅನ್ನು ಸಹ ಉಚಿತವಾಗಿ ನೀಡಿದ್ದಾರೆ.

    ರೆಡ್ಡಿಟ್‌ನಲ್ಲಿನ ಪೋಸ್ಟ್ ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ, ಏಕೆಂದರೆ ನೆಟ್ಟಿಗರು ವ್ಯಕ್ತಿಯ ವಿನಯತೆ ಮತ್ತು ರೆಸ್ಟೋರೆಂಟ್ ಅದಕ್ಕೆ ಪ್ರತಿಕ್ರಿಯಿಸಿದ ರೀತಿಯನ್ನು ತುಂಬಾನೇ ಶ್ಲಾಘಿಸಿದ್ದಾರೆ. ಆ ವ್ಯಕ್ತಿಯು ಆರ್ಡರ್ ನೀಡುವಾಗ "ಕ್ಷಮಿಸಿ, ನಾನು ತುಂಬಾ ತಡವಾಗಿ ಆರ್ಡರ್ ಮಾಡುತ್ತಿದ್ದೇನೆ. ನಾನು ಇದೀಗ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೇನೆ, ನಾನು ಈಗಷ್ಟೇ ಎಚ್ಚರಗೊಂಡಿದ್ದೇನೆ. ನೀವು ಆರ್ಡರ್ ಅನ್ನು ರದ್ದುಗೊಳಿಸಿದರೆ ನನಗೆ ಅರ್ಥವಾಗುತ್ತದೆ, ಏಕೆಂದರೆ ನೀವು ಹೋಟೆಲ್‌ ಮುಚ್ಚುವ ಸಮಯವಾಗಿದೆ" ಎಂದು ಬರೆದಿದ್ದನು.

    ಇದನ್ನು ಓದಿ: Viral Video: ಮಗಳ ಹುಟ್ಟುಹಬ್ಬಕ್ಕೆ ಟ್ಯಾಕ್ಟರ್ ಗಿಫ್ಟ್ ನೀಡಿದ ತಂದೆ! 15 ವರ್ಷದ ಪೋರಿಗೆ ಎಂಥಾ ಖುಷಿ ನೋಡಿ

    ರೆಸ್ಟೋರೆಂಟ್‌ನವರು ಬರೆದು ಕಳುಹಿಸಿದ ಟಿಪ್ಪಣಿಯಲ್ಲಿ "ದಯಾಪರ ಟಿಪ್ಪಣಿಗೆ ಧನ್ಯವಾದಗಳು, ತಡವಾಗಿ ಆರ್ಡರ್ ಮಾಡುವ ಬಗ್ಗೆ ಒತ್ತು ನೀಡಬೇಡಿ, ನಮಗೆ ಅಭ್ಯಂತರವಿಲ್ಲ. ನಿಮಗೆ ಸ್ವಲ್ಪ ಹುಷಾರಾಗಲು ಸಹಾಯವಾಗಲೆಂದು ಉಚಿತವಾದ ಗಾರ್ಲಿಕ್‌ ಬ್ರೆಡ್ ಸಹ ನೀಡಿದ್ದೇವೆ. ನಿಮ್ಮಂತಹವರು ಬರೆಯುವ ಈ ದಯಾಪರ ಸಂದೇಶಗಳು ನಿಜವಾಗಿಯೂ ನಮ್ಮ ದಿನವನ್ನು ಉತ್ತಮಗೊಳಿಸುತ್ತವೆ. ಧನ್ಯವಾದಗಳು" ಎಂದು ಬರೆದಿದ್ದರು.



    ರೆಸ್ಟೋರೆಂಟ್‌ನ ಆನ್‌ಲೈನ್ ವಿಮರ್ಶೆಯಲ್ಲಿ, ಸ್ಪಷ್ಟವಾಗಿ ತೃಪ್ತಿಗೊಂಡ ಗ್ರಾಹಕರು ಸುಂದರವಾದ ಸಂದೇಶವನ್ನು ಬರೆದರು. "ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ನನಗೆ ಗಾರ್ಲಿಕ್‌ ಬ್ರೆಡ್ ನೀಡಿದರು ಮತ್ತು ಡೆಲಿವರಿ ಬಾಕ್ಸ್‌ನಲ್ಲಿ ನನಗೆ ಮುದ್ದಾದ ಚಿಕ್ಕದಾದ ನೋಟ್ ಸಹ ಬರೆದು ಕಳುಹಿಸಿದ್ದಾರೆ ಮತ್ತು ವೈಯಕ್ತಿಕವಾಗಿ ನಾನು ಪ್ರತಿಯೊಬ್ಬ ಉದ್ಯೋಗಿಗೆ ನನ್ನ ಪ್ರೀತಿಯನ್ನು ತಿಳಿಸಲು ಬಯಸುತ್ತೇನೆ, ಧನ್ಯವಾದಗಳು" ಎಂದು ಬರೆದಿದ್ದಾರೆ.

    ಇದನ್ನು ಓದಿ: Facebook ನಿಮ್ಮನ್ನ ಟ್ರ್ಯಾಕ್ ಮಾಡುತ್ತಿದೆಯಾ? ಹಾಗಿದ್ರೆ, ಡೇಟಾ ಸೋರಿಕೆ ತಡೆಯಲು ಈ ಸೆಟ್ಟಿಂಗ್ ಬದಲಿಸಿ

    ಸಾಮಾಜಿಕ ಮಾಧ್ಯಮದ ಒಬ್ಬ ಬಳಕೆದಾರರು "ಈ ಜಗತ್ತಿನಲ್ಲಿ ಒಳ್ಳೆಯದನ್ನು ಹರಡಿದ್ದಕ್ಕಾಗಿ ತುಂಬಾ ಧನ್ಯವಾದಗಳು" ಎಂದು ಬರೆದರೆ, ಇನ್ನೊಬ್ಬರು "ಹೆಚ್ಚಿನ ಜನರು ಅದನ್ನು ಆ ರೀತಿ ನೋಡಬೇಕೆಂದು ನಾನು ಬಯಸುತ್ತೇನೆ! ಸಕಾರಾತ್ಮಕತೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಘಟನೆಗಳನ್ನು ಬದಲಾಯಿಸಬಹುದು" ಎಂದು ಬರೆದಿದ್ದಾರೆ.

    ಇತ್ತೀಚಿನ ರಾಜ್ಯರಾಷ್ಟ್ರೀಯಕೊರೋನಾವೈರಸ್​ಮತ್ತಿತರ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್​ ಮಾಡಿ. ನ್ಯೂಸ್​18 ಕನ್ನಡವನ್ನು ಫೇಸ್​ಬುಕ್​ನಲ್ಲಿ ಫಾಲೋ ಮಾಡಲು ಇಲ್ಲಿ ಕ್ಲಿಕ್​ ಮಾಡಿ, ಟ್ವಿಟ್ಟರ್​ಗಾಗಿ ಇಲ್ಲಿ ಕ್ಲಿಕ್​ ಮಾಡಿ.
    Published by:Harshith AS
    First published: