ಶುಕ್ರವಾರ ಹೋಳಿ ಹಬ್ಬವನ್ನು (Holi Festival) ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಬಣ್ಣದೋಕುಳಿಯಲ್ಲಿ ಮುಳುಗಿದ್ದ ಜನರು ಸಂಜೆ ವೇಳೆಗಾಗಲೇ ತಮ್ಮ ಫೋಟೋ (Photo) ಮತ್ತು ವಿಡಿಯೋ(Video)ಗಳನ್ನು ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳು ತಿಳಿಸಿದರು. ಹೋಳಿ ಅಂದ್ರೆ ಪರಸ್ಪರ ಬಣ್ಣಗಳನ್ನು (Colors) ವಿನಿಮಯ ಮಾಡಿಕೊಳ್ಳೋದು. ಆದ್ರೆ ಈಗ ಟ್ರೆಂಡ್ ಬದಲಾಗಿದ್ದು, ಬ್ಯಾರೆಲ್ ಗಟ್ಟಲೇ ಬಣ್ಣದ ನೀರಿನಿಂದ (Color mixed Water) ಹಬ್ಬ ಆಚರಿಸುತ್ತಾರೆ. ನಗರದ ಹೃದಯ ಭಾಗದಲ್ಲಿ ಮ್ಯೂಸಿಕ್ (Music) ಹಾಕಿ ಇಡೀ ಊರಿಗೇ ಊರು ಹೆಜ್ಜೆ ಹಾಕುತ್ತಾರೆ. ಒಂದು ರೀತಿ ಬಣ್ಣದ ನೀರಿನಲ್ಲಿ ಸ್ನಾನ ಮಾಡಿದಂತೆ ಆಗುತ್ತೆ. ಇನ್ನು ಹಬ್ಬದ ನಂತರ ಎಷ್ಟೋ ಜನರ ಮುಖಕ್ಕೆ ಮೆತ್ತಿಕೊಂಡಿರುವ ಬಣ್ಣ ಒಂದು ವಾರ ಕಳೆದರೂ ಹೋಗಲ್ಲ.
ಕೆಲವರು ಹೋಳಿ ಹಬ್ಬದ ಸಹವಾಸವೇ ಬೇಡ ಅಂತ ಮನೆ ಸೇರಿಕೊಂಡಿರುತ್ತಾರೆ. ಆದರೆ ಅಂತಹವರನ್ನು ಗೆಳೆಯರು ಮನೆಯಿಂದ ಹೊರ ಎಳೆದು ತಂದು ಬಣ್ಣ ಎರಚುತ್ತಾರೆ. ಇನ್ನೂ ಕೆಲವು ಕಡೆ ತಲೆಯ ಮೇಲೆ ಮೊಟ್ಟೆ, ಟೊಮಾಟೋ ಸಹ ಒಡೆಯುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಹೋಳಿ ದಿನ ತುಂಬಾನೇ ಸ್ಪೆಷಲ್ ಆಗಿರುತ್ತದೆ.
ಇನ್ನೂ ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಹೋಳಿ ವಿಡಿಯೋಗಳು ಹರಿದಾಡುತ್ತಿವೆ. ಬಾಗಲಕೋಟೆಯದ್ದು ಎನ್ನಲಾದ ವಿಡಿಯೋ ಮಿಂಚಿನಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಕೆಲ ಯುವಕರು ಬಣ್ಣದಾಟ ಕಂಡು ನೆಟ್ಟಿಗರು ಶಾಕ್ ಆಗಿದ್ರೆ, ಬಹುತೇಕರು ಆಕ್ರೋಶ ಹೊರ ಹಾಕಿದ್ದಾರೆ.
ಏನಿದು ವೈರಲ್ ವಿಡಿಯೋ?
ಓರ್ವನನ್ನು ಒಂದಿಷ್ಟು ಜನ ಸುತ್ತುವರಿದು, ಆತನಿಗೆ ಬಣ್ಣ ಹಾಕಿದ್ದಾರೆ. ನಂತರ ಆತನ ಕೈ ಕಾಲುಗಳನ್ನು ಹಿಡಿದು ರಸ್ತೆ ಬದಿಯಲ್ಲಿರುವ ದೊಡ್ಡ ಚರಂಡಿಗೆ ಎಸೆದಿದ್ದಾರೆ. ಚರಂಡಿಗೆ ಬಿದ್ದವ ನಿಧಾನಕ್ಕೆ ಮೇಲೆ ಏಳುವದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದೊಂದು ರೀತಿ ಹಲ್ಲೆ ಎಂದು ಖಂಡಿಸಿದ್ದಾರೆ. ಬಲವಂತವಾಗಿ ಯಾರ ಮೇಲೂ ಬಣ್ಣ ಹಾಕಬಾರದು. ಅದರಲ್ಲೂ ಈ ರೀತಿಯ ವರ್ತನೆ ಖಂಡನೀಯ. ಎಷ್ಟು ಎತ್ತರದಿಂದ ಬಿದ್ದ ವ್ಯಕ್ತಿಗೆ ಏನಾದ್ರೂ ಆಗಿದ್ರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.
ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುವುದು ತಿಳಿದು ಬಂದಿಲ್ಲ. ವಾಟ್ಸಪ್ ಗಳಲ್ಲಿ ಬಾಗಲಕೋಟೆಯ ಹೋಳಿಯಾಟ ಎಂಬ ಹೆಸರಿನಲ್ಲಿ ವಿಡಿಯೋ ಶೇರ್ ಮಾಡಲಾಗುತ್ತಿದೆ.
ತನ್ಮೇಲೆ ಬಣ್ಣ ಹಾಕಿದ ಗೆಳೆಯರಿಗೆ ಈ ಬಾಲಕ ಏನ್ ಮಾಡ್ದ ಗೊತ್ತಾ?
ಬಣ್ಣದಾಟ ಬೇಡೆಂದು ಮನೆಯಲ್ಲಿ ಕುಳಿತಿರೋ ಯುವಕರನ್ನು ಅವರ ಗೆಳೆಯರು ಹುಡುಕಿ ಬಣ್ಣದಲ್ಲಿ ಮುಳುಗಿಸುತ್ತಾರೆ. ಇಲ್ಲೊಬ್ಬ ಬಾಲಕ ತನಗೆ ಬಣ್ಣ ಹಚ್ಚಿದ್ದಕ್ಕೆ ಸ್ನೇಹಿತರ ಮೇಲೆ ಚರಂಡಿ ನೀರು ಸಿಂಪಡಿಸಲು ಪ್ರಯತ್ನಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏನಿದು ವೈರಲ್ ವಿಡಿಯೋ?
ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ 'Yourfunzone' ಹೆಸರಿನ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಕ್ಕಳ ಬಣ್ಣದಾಟದಲ್ಲಿ ತೊಡಗಿರೋದನ್ನು ನೋಡಬಹುದು. ಈ ವೇಳೆ ವಾಟರ್ ಗನ್ ಹಿಡಿದ ಬಾಲಕನೋರ್ವ, ಚರಂಡಿ ಹತ್ತಿರ ಬರುತ್ತಾನೆ. ನಂತರ ವಾಟರ್ ಗನ್ ನಿಂದ ಚರಂಡಿ ನೀರನ್ನು ತುಂಬಿಕೊಂಡು ಓಡಿ ಹೋಗಿ ಗೆಳೆಯರ ಮೇಲೆ ಹಾಕಲು ಪ್ರಯತ್ನಿಸುತ್ತಾನೆ. ಬಾಲಕ ಬರುತ್ತಿದ್ದಂತೆ ಆತನ ಗೆಳೆಯರೆಲ್ಲರೂ ಓಡಿ ಹೋಗುತ್ತಾರೆ.
View this post on Instagram
ಕಳೆದ ಎರಡು ವರ್ಷಗಳಿಂದ ಹೋಳಿ ಹಬ್ಬಕ್ಕೆ (Holi Festival) ಕೊರೊನಾ (Corona Virus) ಬ್ರೇಕ್ ಹಾಕಿತ್ತು. ಈ ವರ್ಷ ಕೊರೊನಾ ಪಸರಿಸುವಿಕೆ ಪ್ರಮಾಣ (Corona Positivity Rate) ಕಡಿಮೆ ಇರೋದರಿಂದ ಬಹುತೇಕ ಎಲ್ಲ ನಿರ್ಬಂಧಗಳನ್ನು ಸರ್ಕಾರ ಸಡಿಲಿಕೆ ಮಾಡಿದೆ. ಹಾಗಾಗಿ ಈ ವರ್ಷ ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಣೆ (Holi Celebration) ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ